Sanvi Sudeep: ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಬಾಯ್ಫ್ರೆಂಡ್..

Sanvi Sudeep: ನಟ ಕಿಚ್ಚ ಸುದೀಪ್‌ ಹಾಗೂ ಪ್ರಿಯಾ ದಂಪತಿಗೆ ಒಬ್ಬರೇ ಮಗಳು ಸಾನ್ವಿ. ಇವರು ದೊಡ್ಡ ಸ್ಟಾರ್ ನಟನ ಮಗಳಾಗಿದ್ದರೂ ಕೂಡ ಗಾಯಕಿಯಾಗಿ ಹಾಡುಗಳನ್ನು ಹಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರು ಯಾವಾಗಲೂ ಸಾಮಾಜಿಕ ಜಾಲತಾಣದ ಭಾಗವಾದ ಇನ್ಸ್ಟಾದಲ್ಲಿ ಸಕ್ರಿಯರಾಗಿದ್ದು, ಅಪಾರ ಫಾಲೋವರ್ಸ್‌ಗಳನ್ನು ಹೊಂದುದ್ದಾರೆ. ಅಲ್ಲದೆ, ಬಾಯ್‌ಫ್ರೆಂಡ್‌ ಇಲ್ವಾ ಎನ್ನುವ ಪ್ರಶ್ನೆಗಳಿಗೆ ಇದೀಗ ಅವರು ಉತ್ತರ ನೀಡಿದ್ದಾರೆ.

ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಾಹದ ವಿಚಾರಗಳೇ ಜೋರಾಗಿ ಸದ್ದು ಮಾಡುತ್ತಿವೆ. ಈ ನಡುವೆಯೇ ಇದೀಗ ಕಿಚ್ಚ ಸುದೀಪ್‌ ಮಗಳು ಸಾನ್ವಿ ಅವರಿಗೆ ಬಾಯ್‌ಫ್ರೆಂಡ್‌ ಬಾಯ್‌ ಫ್ರೆಂಡ್‌ ಇದ್ದಾರಾ ಎನ್ನುವ ಪ್ರಶ್ನೆಗಳು ಹಲವರಲ್ಲಿ ಕಾಡುತ್ತಲೇ ಇವೆ. ಕೊನೆಗೂ ಇದೀಗ ಅವರೇ ಇದಕ್ಕೆ ಉತ್ತರ ನೀಡಿ ಗಮನ ಸೆಳೆದಿದ್ದಾರೆ.

Actor Kiccha Sudeep s Daughter Sanvi reacts About Her Boyfriend

ಸಾನ್ವಿ ಅವರು ಸ್ಟಾರ್ ನಟ ಸುದೀಪ್‌ ಅವರ ಮಗಳಾಗಿದ್ದರೂ, ಗಾಯನದಲ್ಲಿ ತಮ್ಮದೆ ಛಾಪು ಮೂಡಿಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ 455K ಫಾಲೋವರ್ಸ್‌ ಹೊಂದಿದ್ದಾರೆ. ಫಾಲೋವರ್ಸ್‌ ಜೊತೆಗೆ ಸಾನ್ವಿ ಸುದೀಪ್‌ ಪ್ರಶ್ನೋತ್ತರ ಸೆಷನ್ ಕೂಡ ನಡೆಸಿದ್ದಾರೆ. ಫಾಲೋವರ್ಸ್‌ ಕೇಳಿದ ಪ್ರಶ್ನೆಗಳಿಗೂ ನಿಸ್ಸಂದೇಹವಾಗಿ ಉತ್ತರಿಸುತ್ತಿದ್ದಾರೆ.

ನಿಮ್ಮ ತಂದೆ ಸುದೀಪ್‌ ಸರ್ ಅಂತೆ ನೀವು ಕೂಡ ಎತ್ತರ ಇದ್ದೀರಾ ಅಲ್ವಾ ಮೇಡಂ ಎಂಬ ಪ್ರಶ್ನೆಗೆ ಉತ್ತರಿಸಿ ಸಾನ್ವಿ ತಮ್ಮ ಎತ್ತರ 5.9 ಎಂದಿದ್ದಾರೆ.
ಇನ್ನು ಸಾನ್ವಿ ಸುದೀಪ್ ಅವರ ಹುಟ್ಟುಹಬ್ಬ ಮೇ 20, 2004 ಆಗಿದೆ. ಈ ವರ್ಷ ಇನ್ನೂ ಎರಡು ತಿಂಗಳು ಮಾತ್ರ ಬಾಕಿಯಿವೆ. ಇನ್ನು ಸಾನ್ವಿ ಸುದೀಪ್‌ ಅವರಿಗೆ ಬಾಯ್‌ಫ್ರೆಂಡ್‌ ಇದ್ದಾರಾ ಎಂಬ ಪ್ರಶ್ನೆಗಳನ್ನು ಕೂಡ ಹಲವರು ಮೊದಲಿನಿಂದಲೂ ಕೇಳುತ್ತಲೇ ಇದ್ದಾರೆ. ಇದೀಗ ಇದಕ್ಕೆ ಸಾನ್ವಿ ಸುದೀಪ್‌ ಅವರು ಉತ್ತರಿಸಿದ್ದಾರೆ.

ನಿಮ್ಮ ಬಾಯ್‌ಫ್ರೆಂಟ್‌ ಹೆಸರೇನು ಎಂದು ಓರ್ವ ಫಾಲೋವರ್ ಕೇಳಿದ್ದು, ಇದಕ್ಕೆ ಅದಕ್ಕೆ ಉತ್ತರಿಸಿರುವ ಸಾನ್ವಿ ಸುದೀಪ್ "ನನಗೆ ಬಾಯ್‌ಫ್ರೆಂಡ್‌ ಇಲ್ಲ ಬಾಸ್‌," ಎಂದು ಹೇಳಿದ್ದಾರೆ. ಮತ್ತೊಂದೆಡೆ ಈಗಾಗಲೇ ಬಿಗ್‌ಬಾಸ್ ಶೋಗೆ ಕಿಚ್ಚ ಸುದೀಪ್‌ ಗುಡ್‌ ಬೈ ಹೇಳಿದ್ದಾರೆ. ಮುಂದಿನ ಸೀಸನ್‌ 12ಕ್ಕೆ ಯಾರು ಹೋಸ್ಟ್‌ ಆಗಬಹುದು ಎಂಬ ಚರ್ಚೆಗಳು ನಡೆಯುತ್ತಲಿವೆ. ಈ ನಡುವೆಯೇ ಮುಂದಿನ ಸೀಸನ್‌ಗೆ ನೀವು ಹೋಸ್ಟ್‌ ಆಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಾನ್ವಿ ಅವರು, ನನಗೆ ಅವರಷ್ಟು ತಾಳ್ಮೆ ಇಲ್ಲ ಬಾಸ್‌ ಎಂದು ಹೇಳಿದ್ದಾರೆ. ಅಲ್ಲದೆ, ಇದೇ ವೇಳೆ ಸಾರಿ ಕೂಡ ಕೇಳಿದ್ದಾರೆ.

ಪ್ರಿಯಾ ಮೇಡಂ ಬಗ್ಗೆ ಹೇಳಿ ಎಂದು ಫಾಲೋವರ್‌ವೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅಮ್ಮ ತುಂಬಾ ಬ್ಯೂಟಿಫುಲ್‌, ಸ್ಮಾರ್ಟ್, ಫನ್ನಿ ಮತ್ತು ಲವಿಂಗ್ ಎಂದು ಉತ್ತರಿಸಿದ್ದಾರೆ. ಮೊದಲಿನಿಂದಲೂ ಕೂಡ ಇಬ್ಬರು ಕೂಡ ನನಗೆ ಇಷ್ಟ, ಯಾರನ್ನೂ ಬಿಟ್ಟುಕೊಡಲು ಆಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+