ನಟ ಜಗ್ಗೇಶ್‌ಗೆ ಗೀತಾ ಶಿವರಾಜ್ ಕುಮಾರ್ ವಾಚ್ ಗಿಫ್ಟ್: ಶಿವಣ್ಣನ 40 ವರ್ಷದ ಸ್ನೇಹ ನೆನೆದು ಭಾವುಕ

ಬೆಂಗಳೂರು: 'ನನ್ನ ಪ್ರೀತಿಯ ರಾಜಣ್ಣ (ಡಾ.ರಾಜಕುಮಾರ್) ಅವರ ಸರ್ವಗುಣ ಮಗನಿಗೆ ಧಾರೆ ಎರೆದು ಹೋಗಿದ್ದಾರೆ. ನಾಲ್ಕು ದಶಕಗಳ ಆತ್ಮೀಯ ಭಾವ ಕರಗದೇ ಕಲ್ಪವೃಕ್ಷವಾಗಿ ಹಾಗೆಯೇ ಉಳಿದಿದೆ ಎಂದು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರೊಂದಿಗಿನ ಜರ್ನಿ, ಸ್ನೇಹ ಸಂಬಂಧವನ್ನು ನಟ ನವರಸ ನಾಯಕ ಜಗ್ಗೇಶ್ ಅವರು ಸ್ಮರಿಸಿದ್ದಾರೆ. ಜೊತೆಗೆ ಗೀತಾ ಶಿವರಾಜ್ ಕುಮಾರ್ ಅವರು ನೀಡಿದ ಉಡುಗೊರೆ ಕಂಡು ಜಗ್ಗೇಶ್ ಭಾವುಕರಾಗಿದ್ದಾರೆ.

ನವರಸ ನಾಯಕ ಜಗ್ಗೇಶ್ ಹಾಗೂ ಶಿವರಾಜ್ ಕುಮಾರ್ ಅವರು ಹೆಚ್ಚು ಕಡಿಮೆ ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದಲೂ ಚಿತ್ರರಂಗದಲ್ಲಿದ್ದಾರೆ. ಶಿವಣ್ಣಗೆ ಅಪಾರ ಸ್ನೇಹ ಬಳಗವಿದ್ದು, ಅದರಲ್ಲಿ ಜಗ್ಗೇಶ್ ಅವರು ಒಬ್ಬರು. ಜಗ್ಗೇಶ್ ಅವರು ಶಿವಣ್ಣ ಅವರ ಮನೆಗೆ ತೆರಳಿದ್ದು, ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Actor Jaggesh

ಅಣ್ಣನಿಗೆ ಕೈಗಡಿಯಾರ ಕೊಟ್ಟ ತಂಗಿ ಗೀತಾ ಶಿವರಾಜ್ ಕುಮಾರ್

ನಟ ಜಗ್ಗೇಶ್ ಅವರು ಪೋಸ್ಟ್‌ನಲ್ಲಿ, 'ಇಂದು ನನ್ನ ನಲ್ಮೆಯ ಸಹೋದರ ಶಿವರಾಜ್ ಕುಮಾರ ರವರ ಮನೆಗೆ ನನ್ನ ಆತ್ಮೀಯ ಮಿತ್ರ ಶ್ರೀನಿಧಿ ರವರೊಂದಿಗೆ ತೆರಳಿ ಅರ್ಧಘಂಟೆ ಕಾಲ ಕಳೆದು ಬಂದೆ. 40 ವರ್ಷದ ಆ ಆತ್ಮೀಯ ಭಾವ ಕರಗದೆ ಕಲ್ಪವೃಕ್ಷವಾಗೆ ಉಳಿದಿದೆ. ಅವರ ಶ್ರೀಮತಿ ಗೀತಾ ಅವರು ಮನೆಗೆ ಬಂದ ಅಣ್ಣನಂತೆ ತಮ್ಮ ಮಮತೆಯಿಂದ ನನಗೆ ವ್ಯೆಕ್ತಪಡಿಸಿ ಕೈಗಡಿಯಾರ ಕೊಡಿಸಿದ್ದು ಕಂಡು ಭಾವುಕನಾದೆ' ಎಂದು ಅವರು ಕೈಗಡಿಯಾರ ಮತ್ತು ಶಿವಣ್ಣ ಮನೆ ಭೇಟಿಯ ಚಿತ್ರಗಳನ್ನು ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

ದುಬಾರಿ ಬೆಲೆಯ ವಿಶೇಷ ವಾಚ್‌ ಗಿಫ್ಟ್

ಜಗ್ಗೇಶ್ ಅವರು ರಕ್ಷಾಬಂಧನವನ್ನು ಶಿವಣ್ಣ ಅವರಿಗೆ ಕಟ್ಟಿದ್ದು, ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಕ್ಕ ದಂಪತಿಯು 2.60 ಲಕ್ಷ ರೂಪಾಯಿ ದುಬಾರಿ ಬೆಲೆಯ ವರ್ಸಾಶೆಯ ಗ್ರೆಸಾ ರಿಯಾಕ್ಷನ್ ವಾಚ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಪರೂಪದ ತಂತ್ರಜ್ಞಾನ ಮತ್ತು ಮೌಲ್ಯಯುತ ವಸ್ತುಗಳನ್ನು ಬಳಸಿ ನಿರ್ಮಿಸಿದ ವಾಚ್ ಇದಾಗಿದೆ.

ಮುಂದುವರಿದು ಜಗ್ಗೇಶ್ ಅವರು, 'ನನ್ನ ಪ್ರೀತಿಯ ರಾಜಣ್ಣ ಅವರ ಸರ್ವಗುಣ ಮಗನಿಗೆ ಧಾರೆ ಎರೆದು ಹೋಗಿದ್ದಾರೆ. ರಾಜಣ್ಣನ ಜೊತೆ ಕೂತ ದಿನಗಳು ಮನಸ್ಸಿನಲ್ಲಿ ತರಂಗದಂತೆ ಮರುಕಳಿಸಿದವು. ಅವರ ಕುಟುಂಬಕ್ಕೆ ಸಂತೋಷ ಸಡಗರ ಚಿರಾಸ್ಥಿಯಂತೆ ನಿತ್ಯ ನಿರಂತರ ರಾಯರ ಕೃಪೆಯಿಂದ ಸಿಗಲಿ' ಎಂದು ಜಗ್ಗೇಶ್ ಅವರು ಹರಸಿದ್ದಾರೆ.

ಶಿವಣ್ಣ ಅವರ 'ರಣರಂಗ' ಸಿನಿಮಾದಲ್ಲಿ ನೆಗಟಿವ್ ರೋಲ್ ಮಾಡಿದ್ದರು. ಬಳಿಕ ಒಂದರೆಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಶಿವಣ್ಣ, ಜಗ್ಗೇಶ್ ಅವರು ಸ್ನೇಹಿತರಾಗಿ 'ಜೋಡಿ' ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಿನಿಂದಲೂ ಇವರಿಬ್ಬರು ಆತ್ಮೀಯರಾಗಿದ್ದಾರೆ. ಪರಸ್ಪರ ಸ್ನೇಹಿತರಂತೆ ಕಾಣುತ್ತಾರೆ.

ಮಿ ರಿಯಲ್ ಇನ್ 1980, AI ಅಲ್ಲ: ಜಗ್ಗೇಶ್

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ 1980ನಲ್ಲಿ ಹೇಗೆ ಕಾಣುತ್ತಿದ್ದೇವು ಎಂದು ಎಐಗೆ ಫೋಟೋ ಅಪ್ಲೋಡ್ ಮಾಡಿ ಓಲ್ಡ್ ಫೋಟೋ ಅಪ್ಲೋಡ್ ಟ್ರೆಂಡ್ ಜೋರಾಗಿತ್ತು. ಈ ವೇಳೆ ಬ್ಲಾಕ್ ಆಂಡ್ ವೈಟ್ ಕಾಲದಿಂದಲೂ ಚಿತ್ರರಂಗದಲ್ಲಿರುವ ನಟ ಜಗ್ಗೇಶ್ ಅವರು, ತಾವು 1980ರಲ್ಲಿ ಹೇಗಿದ್ದರು ಎಂಬುದರ ಒರಿಜಿನಲ್ ಫೋಟೋಗಳನ್ನು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದರು. 'ಚಿತ್ರ ಪ್ರವೃತ್ತಿ ಜೋರಾಗಿದೆ ಸಾಮಾಜಿಕ ಜಾಲತಾಣದಲ್ಲಿ. ಮಿ ರಿಯಲ್ ಇನ್ 1980, AI ಅಲ್ಲ' ಎಂದು ಶಿರ್ಷಿಕೆ ನೀಡಿದ್ದರು.

'ನನ್ನ ಅಭಿಮಾನಿಗಳು ಸಾರ್ ನೀವು ನಿಜವಾದ 1980 ಕಂಡವರು ದಯವಿಟ್ಟು AI ಬಳಸಿದರೆ ಮೂಲ ಚಿತ್ರಹಾಕಿ ಎಂದು ಪ್ರೀತಿಯಿಂದ ಕೇಳಲಿಲ್ಲ ಮೂಲ ನಿಮಗಾಗಿ. ಒಂದಲ್ಲಾ ಒಂದು ದಿನ ಆಗುತೀನಿ
ನಾನು, ನಾನು ನಾಡೆಲ್ಲಾ ಮೆಚ್ಚುವಂತ ಹಮ್ಮೀರ' ನೀವು ಜಗಗೆದ್ದು ಮುಂದೆ ನಿಮ್ಮ ಚಿತ್ರ ಹಂಚಿಕೊಳ್ಳುವ ಶಪತ ಇಂದೇ ಮಾಡಿ' ಎಂದು ಫ್ಯಾನ್ಸ್ ಉದ್ದೇಶಿಸಿ ಹೇಳಿದ್ದಾರೆ. ಸುಮಾರು 22 ಸಾವಿರ ಜನ ಅವರ ಫೋಸ್ಟ್ ನೋಡಿದ್ದು, ನೂರಾರು ಲೈಕ್ಸ್‌ಗಳು ಬಂದಿವೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+