ಹಬ್ಬದ ದಿನವೇ ವಿಜಯಲಕ್ಷ್ಮಿ ದರ್ಶನ್ ಕೊಟ್ರು ದೊಡ್ಡ ಸಂದೇಶ, ಏನದು?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲುವಾಸದಲ್ಲಿದ್ದಾರೆ. ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯು ಪದೇ ಪದೇ ಮುಂದೂಡುತ್ತಲೇ ಇದೆ. ಸೋಮವಾರ ದರ್ಶನ್ ಅವರಿಗೆ ಜಾಮೀನು ಸಿಗೋದು ಪಕ್ಕಾ ಎಂತಲೂ ಹೇಳಲಾಗುತ್ತಿದೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದಸರಾ ಹಬ್ಬದ ಹೊತ್ತಲ್ಲೇ ದೊಡ್ಡ ಸಂದೇಶವೊಂದನ್ನು ರವಾನಿಸಿದ್ದಾರೆ.
ಪ್ರತಿ ವರ್ಷ ದಸರಾ ವೇಳೆ ಸಖತ್ ಸದ್ದು ಮಾಡುವ ಸಿನಿಮಾ ನವಗ್ರಹ. ಇದರಲ್ಲಿ ನಟ ದರ್ಶನ್ ಅವರೇ ನಟಿಸಿದ್ದು, ಈ ಬಾರಿ ದಸರಾ ಸಂದರ್ಭದಲ್ಲಿ ರಿರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಖುದ್ದು ಪೋಸ್ಟರ್ ಹಂಚಿಕೊಂಡಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

'ಪ್ರಿಯ ಡಿಬಾಸ್ ಸೆಲೆಬ್ರಿಟಿಗಳೇ... ನಿಮ್ಮೆಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡಿರುವ ನವಗ್ರಹ ಸಿನಿಮಾ ಶೀಘ್ರದಲ್ಲೇ ರೀರಿಲೀಸ್ ಆಗಲಿದೆ. ಈ ಬಾರಿಯ ಸಿನಿಮಾ ವೀಕ್ಷಿಸುವ ಅನುಭವವು ಮತ್ತಷ್ಟು ಸ್ಪೆಷಲ್ ಆಗಿರಲಿದೆ. ನಿಮ್ಮ ಹತ್ತಿರದ ಥಿಯೇಟರ್‌ಗಳಲ್ಲಿ ನವಗ್ರಹ ನೋಡಲು ಅಭಿಮಾನಿಗಳು ಸಜ್ಜಾಗಿ..ಶೀಘ್ರದಲ್ಲೇ ಬಿಡುಗಡೆ ಆಗಲಿದೆ' ಎಂದು ಸಂದೇಶ ರವಾನಿಸಿದ್ದಾರೆ.
'ಕೆಟ್ಟದ್ದು ಕೊನೆಯಲ್ಲಿ ಅಳಿದು ಹೋಗುತ್ತೆ, ಒಳ್ಳೆತನಕ್ಕೆ ಗೆಲುವು ಸಿಕ್ಕೇ ಸಿಗುತ್ತೆ ಎಂದು ನಿಜವಾದ ದಿನವಿದು' ಎಂದು ದಸರಾ ಹಬ್ಬವನ್ನು ಉಲ್ಲೇಖಿಸಿ ವಿಜಯಲಕ್ಷ್ಮಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಇದನ್ನು ಎಲ್ಲರೂ ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ. ಆ ತಾಯಿ ಚಾಮುಂಡೇಶ್ವರಿ ನಿಮಗೂ, ನಿಮ್ಮ ಕುಟುಂಬಸ್ಥರಿಗೂ ಆಶೀರ್ವದಿಸಲಿ..' ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಅನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹಬ್ಬ ಮಾಡುತ್ತಿದ್ದಾರೆ. ಅತ್ತಿಗೆ ಹಬ್ಬದ ದಿನವೇ ದೊಡ್ಡ ಮೆಸೇಜ್ ಕೊಟ್ಟಿದ್ದಾರೆ. ನಮ್ಮ ದೇವ್ರು ಡಿಬಾಸ್ ಜೈಲಿನಿಂದ ಹೊರಗೆ ಬರೋದು ಫಿಕ್ಸ್ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರೆ.

ಇನ್ನು ಸೋಮವಾರದಂದು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಈ ಬಾರಿ ಅವರಿಗೆ ಜಾಮೀನು ಸಿಗುವ ಲಕ್ಷಣಗಳು ದಟ್ಟವಾಗಿವೆ ಎಂದೇ ಹೇಳಲಾಗುತ್ತಿದೆ. ಮೊನ್ನೆ ದರ್ಶನ್ ಅವರನ್ನು ಭೇಟಿಯಾಗಲು ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಹೋಗಿದ್ದರು. ಈ ವೇಳೆ ದರ್ಶನ್ ಅವರೂ ಕೂಡ ನಗುತ್ತಾ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದರು.
ದರ್ಶನ್ ಪರ ವಕೀಲರು ಕೂಡ ಈ ಬಾರಿ ಜಾಮೀನು ಸಿಕ್ಕೇ ಸಿಗುತ್ತೆ ಎನ್ನುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ದರ್ಶನ್ ಕೂಡ ಸ್ಮೈಲ್ ಮಾಡಿದ್ದು, ಈಗ ವಿಜಯಲಕ್ಷ್ಮಿ ಅವರು ಸಂದೇಶ ನೀಡಿರುವುದು ಎಲ್ಲವನ್ನೂ ಗಮನಿಸಿದರೆ, ದರ್ಶನ್ ಜೈಲಿನಿಂದ ಬರುವ ಸಮಯ ಸನ್ನಿಹಿತವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಇನ್ನು ವಿಜಯಲಕ್ಷ್ಮಿ ಅವರು ಈ ಬಾರಿಯ ಸಿನಿಮಾ ವೀಕ್ಷಣೆ ವಿಭಿನ್ನವಾಗಿರಲಿದೆ ಎಂದು ಸಂದೇಶ ರವಾನಿಸಿರುವುದರ ಹಿಂದೆ ದರ್ಶನ್ ಅವರು ಜೈಲಿನಿಂದ ಹೊರಬರುತ್ತಿರುವುದರ ಸೂಚಕ ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ನಟಿಸಿದ್ದ ನವಗ್ರಹ ಸಿನಿಮಾ ಈಗಲೂ ಟ್ರೆಂಡ್ ಸೃಷ್ಟಿಸಿದೆ.

ಸಿನಿಮಾದ ಎಲ್ಲ ಹಾಡುಗಳು ಪ್ರತಿ ವರ್ಷ ದಸರಾ ವೇಳೆ ಪ್ರತಿಧ್ವನಿಸುತ್ತಲೇ ಇರುತ್ತವೆ. ಈ ಬಾರಿಯೂ ನವಗ್ರಹ ಸಿನಿಮಾದ ಹಾಡು, ಡೈಲಾಗ್‌ಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಹೆಚ್ಚಾಗಿ ಮಾಡಿದ್ದಾರೆ. ಕೆಲವರು ಜಗ್ಗು (ದರ್ಶನ್) ಜೈಲಿನಲ್ಲಿರುವುದರಿಂದ ಈ ಬಾರಿ ಅಂಬಾರಿ ಸೇಫ್ ಎಂದು ಸಿನಿಮಾದ ಕಥೆಯನ್ನು ಉಲ್ಲೇಖಿಸಿ, ಮೀಮ್ ಕೂಡ ಮಾಡಿದ್ದಾರೆ.












Click it and Unblock the Notifications