ನಟ ದರ್ಶನ್‌ಗೆ ಅಗ್ರಹಾರದಲ್ಲಿ ನೀಡಿದ್ದ ಖೈದಿ ನಂಬರ್ ಎಕ್ಸ್ಪೆರಿ.?-ಈಗಾಲಾದ್ರೂ ಬುದ್ಧಿ ಕಲಿತಾರಾ ಅಂಧಾಭಿಗಳು.?
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲುಪಾಲಾಗಿದೆ. ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ ಬಳಿಕ ನಟ ದರ್ಶನ್‌ಗೆ 6106 ಖೈದಿ ನಂಬರ್ ಕೊಡಲಾಗಿತ್ತು. ಆದರೆ ಇದೀಗ ಜೈಲಿನಲ್ಲಿ ರಾಜಾತಿಥ್ಯ ಹಿನ್ನೆಲೆ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಅಲ್ಲಿ ಮತ್ತೆ ಖೈದಿ ನಂಬರ್ ಮತ್ತೆ ಬದಲಾವಣೆ ಆಗಲಿದೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ನೀಡಿದ್ದ ಖೈದಿ ನಂಬರ್ ಅನ್ನು ಅಂಧಾಭಿಮಾನಿಗಳು, ಅಚ್ಚೆಗಳನ್ನು ಹಾಕಿಸಿಕೊಂಡಿದ್ದರು. ಹಸುಗೂಸಿನ ಬಟ್ಟೆ ಮೇಲೂ ಸಹ ಈ ನಂಬರ್ ಹಾಕಿಸಿ ಪೇಚಿಗೆ ಸಿಲುಕಿದ ಘಟನೆಯೂ ನಡೆದಿತ್ತು. ಬೈಕ್, ಆಟೋಗಳ ಮೇಲೆಯೂ ಈ ನಂಬರ್ ಹಾಕಿಸಿಕೊಂಡಿದ್ದರು. ಅಲ್ಲದೆ, ಇದೇ 6106 ಖೈದಿ ನಂಬರ್ ಸಿನಿಮಾ ಸಹ ರಿಲೀಸ್ ಆಗಲಿದೆ ಅಂತಲೂ ಅಂಧಾಭಿಮಾನಿಗಳು ಹೇಳಿರುವ ವಿಡಿಯೋಗಳು ವೈರಲ್ ಆಗಿದ್ದವು.

ಆದರೆ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲೇ ರೆಸಾರ್ಟ್‌ನಲ್ಲಿ ಕುಳಿತುಕೊಳ್ಳುವಂತೆ ರೌಡಿ ಶೀಟರ್‌ಗಳ ಜೊತೆ ನಟ ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ದೌಲತ್ತಿನಿಂದ ಕುಳಿತಿರುವ ಫೋಟೋ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಟ ದರ್ಶನ್ ದರ್ಶನ್ ರೌಡಿಗಳ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಬಳಿಕ ಎಚ್ಚೆತ್ತ ಸರ್ಕಾರ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದು, ನಟ ದರ್ಶನ್ & ಗ್ಯಾಂಗ್ ಅನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ನಿರ್ಧರಿಸಿದೆ. ಕೋರ್ಟ್ ಅನುಮತಿ ಮೇರೆಗೆ ಪರಪ್ಪನ ಅಗ್ರಹಾರದಿಂದ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಬಳ್ಳಾರಿ ಜೈಲಿಗೆ ಹೋದ ಬಳಿಕ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ಕೊಟ್ಟಿರುವ ಖೈದಿ ನಂಬರ್ ಬದಲಾವಣೆಯಾಗಲಿದೆ. ಈಗಾಗಲೇ 6106 ಖೈದಿ ನಂಬರ್ ಅಚ್ಚೆ ಹಾಕಿಸಿಕೊಂಡ ಅಂಧಾಭಿಮಾನಿಗಳಿಗೆ ಇದು ಸಂಕಷ್ಟ ತಂದೊಡ್ಡಿದಂತಾಗಿದೆ.
ರಚಿತಾ ರಾಮ್ ಹೇಳಿದ್ದೇನು?: ಜೈಲು ಸೇರಿದ 2 ತಿಂಗಳು ಆದ ಮೇಲೆ ದರ್ಶನ್‌ನನ್ನು ಭೇಟಿಯಾಗಿದ್ದೀರಾ ಯಾಕೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ರಚಿತಾ ರಾಮ್, ರಾಜನನ್ನು ರಾಜನ ರೀತಿ ನೋಡಲು ಚೆನ್ನಾಗಿರುತ್ತದೆ. ಅವರನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಬಂದಿರಲಿಲ್ಲ ಎನ್ನುವ ಲೆಕ್ಕದಲ್ಲಿ ಹಾರಿಕೆ ಉತ್ತರ ನೀಡಿದ್ದಲ್ಲದೆ, ಅವರು ಯಾವಾಗಲೂ ಬಾಸ್ ಅಂತಾ ವರ್ಣನೆ ಮಾಡಿ ನೆಟ್ಟಿಗರ ಆಕ್ರೊಶಕ್ಕೆ ಕಾರಣರಾಗಿದ್ದಾರೆ.
"ದರ್ಶನ್‌ನನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಕುಟುಂಬದವರು ಅವರು ಕೂಡ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ದರ್ಶನ್ ಅಭಿಮಾನಿ. ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ, ದಯವಿಟ್ಟು ಬೇಗ ಬನ್ನಿ ಎಂದು ಹೇಳಿಬಂದಿದ್ದೇನೆ," ಎಂದು ರಚಿತಾ ರಾಮ್ ಹೇಳಿದ್ದಾರೆ.
"ಇನ್ನು ಅವತ್ತಿನ ದಿನ ಒಂದು ಮಾತು ಅವರು ನೋ ಅಂತಾ ಹೇಳಿದ್ದಿದ್ದರೆ, ನಾನು ಈ ಮಟ್ಟಕ್ಕೆ ಬರಲು ಸಾಧ್ಯ ಆಗುತ್ತಿರಲಿಲ್ಲ. ಅವರ ಖುಣ ನನ್ನ ಇಡೀ ಕುಟುಂಬದ ಮೇಲಿದೆ. ಜೈಲಿನಲ್ಲಿ ನೋಡಿ ಭಾವುಕಳಾದಗ ಅವರು ನೀನು ಆರಾಮಾಗಿ ಇರು ಅಂತಾ ಹೇಳಿದರು. ಬಾಸ್ ಯಾವಾಗಿದ್ದರೂ ಬಾಸ್.. ಅವರು ನನಗೆ ಗುರು ಸಮಾನರು. ಆದಷ್ಟು ಬೇಗ ಒಳ್ಳೆ ಸುದ್ದಿ ಸಿಗಲು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಕೈಮುಗಿದು," ಹೇಳಿದ್ದಾರೆ.
"ನನಗೆ ಕಾನೂನಿನ ಮೇಲೆ ನಂಬಿಕೆಯಿದೆ. ಆದಷ್ಟು ಬೇಗ ಹೊರಗಡೆ ಬರುತ್ತೇನೆ ಎಂದು ದರ್ಶನ್ ನನಗೆ ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಇನ್ನೂ ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ, ಈ ರೀತಿ ನೋಡಲು ಮನಸಿಗೆ ತುಂಬಾ ನೋವಾಗುತ್ತಿದೆ," ಎಂದರು.
"ದರ್ಶನ್ ನನ್ನ ಪಾಲಿನ ದೇವರು, ಅವರು ನನಗೆ ಆ ಒಂದು ಅವಕಾಶ ಕೊಡದಿದ್ದರೆ, ನಾನು ಇವತ್ತು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಅವರ ಬ್ಯಾನರ್‌ನಲ್ಲೇ ಅವಕಾಶ ಕೊಟ್ಟು, ನನಗೆ ತುಂಬಾ ಸಹಾಯ ಮಾಡಿದರು. ಆದರೆ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಆಗುವುದಿಲ್ಲ, ರಾಜ ರಾಜನ ರೀತಿ ಇರಬೇಕು," ಎಂದು ದರ್ಶನ್‌ನನ್ನು ಹೊಗಳಿದ್ದಾರೆ.












Click it and Unblock the Notifications