Actor Darshan Bail: ಇಂದಾದ್ರೂ ಕೊಲೆ ಆರೋಪಿ ನಟ ದರ್ಶನ್‌ ಅಭಿಮಾನಿಗಳ 'ಆ' ಕನಸು ನನಸಾಗಲಿದ್ಯಾ?

Actor Darshan Thoogudeepa Bail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇನ್ನು ಇಂದು (ಅಕ್ಟೋಬರ್‌ 08) ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹಾಗಾದರೆ ಇಂದಾದ್ರೂ ದರ್ಶನ್‌ಗೆ ಬೇಲ್‌ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಆಪ್ತರ ಆ ಕನಸ್ಸು ನನಸಾಗಲಿದೆಯಾ ಎನ್ನುವುದೇ ಪ್ರಶ್ನೆಯಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ ಹೊತರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಪತಿ ದರ್ಶನ್‌ಗಾಗಿ ವಿಜಯಲಕ್ಷ್ಮಿ ಅವರು ದೇವಾಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ವ್ರತಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಕೂಡ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಂಧಾಭಿಮಾನಿಗಳ ಅಟ್ಟಹಾಸ ಮುಂದುವರೆದಿದೆ.

Actor Darshan s Bail Application Hearing today in court

ದರ್ಶನ್‌ ಬಳ್ಳಾರಿ ಜೈಲಿಗೆ ಹೋದಾಗಿನಿಂದಲೂ ಹೆಲಿಕಾಪ್ಟರ್‌ ಹಾರಿಸುವ ಶಬ್ಧ ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ದರ್ಶನ್‌ಗೆ ಜಾಮೀನು ಸಿಗುವ ಭರವಸೆಯಲ್ಲಿ ಆಪ್ತರು ಬಳ್ಳಾರಿಯಿಂದ ಹೆಲಿಕಾಪ್ಟರ್‌ ಬುಕ್‌ ಮಾಡಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು. ಹೆಲಿಕಾಪ್ಟರ್‌ ಬುಕ್‌ ಮಾಡಲು ಕಾರಣ ಏನಂತಲೂ ಕೂಡ ಅವರ ಆಪ್ತ ಮೂಲಗಳಿಂದ ತಿಳಿದುಬಂದಿತ್ತು.

ಒಂದು ವೇಳೆ ದರ್ಶನ್‌ಗೆ ಬೇಲ್‌ ಸಿಕ್ಕರೆ ಅಭಿಮಾನಿಗಳ ದಂಡು ನೆರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ರಸ್ತೆಯಲ್ಲಿ ಕರೆದೊಯ್ಯುವಾಗ ಅಭಿಮಾನಿಗಳ ದಟ್ಟಣೆಯಿಂದ ಟ್ರಾಫಿಕ್‌ ಜಾಮ್‌ ಸಂಭವಿಸು ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ದರ್ಶನ್‌ನನ್ನು ಬಳ್ಳಾರಿಯಿಂದ ಕರೆದೊಯ್ಯಲು ಆಪ್ತರು ಹೆಲಿಕಾಪ್ಟರ್‌ ಬುಕ್‌ ಮಾಡಿದ್ದರು ಎಂದು ತಿಳಿದುಬಂದಿತ್ತು.

ಈಗಾಗಲೇ ಹಲವು ಕಾರಣಗಳಿಂದ ದರ್ಶನ್‌ ಜಾಮೀನು ಅರ್ಜಿ ಮುಂದೂಡಿಕೆಯಾಗಿತ್ತು. ಇನ್ನು ಇಂದು (ಅಕ್ಟೋಬರ್‌ 08) ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್‌ಗೆ ಜಾಮೀನು ಸಿಗುವ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಮತ್ತೊಂದೆಡೆ ಜಾಮೀನು ಸಿಕ್ಕರೆ ದರ್ಶನ್‌ ಅವರನ್ನು ಹೆಲಿಕಾಪ್ಟರ್‌ ಹತ್ತಿಸಿಕೊಂಡು ಹೋಗುವ ಆಪ್ತರ ಕನಸು ನನಸಾಗಲಿದ್ಯಾ ಎಂದು ಕಾದುನೋಡಬೇಕಿದೆ.

ಇನ್ನು ನಿನ್ನೆ (ಅಕ್ಟೋಬರ್‌ 07) ಬೆಳಗ್ಗೆ ಬಳ್ಳಾರಿಗೆ ಆಗಮಿಸಿದ ವಿಜಯಲಕ್ಷ್ಮಿ ದರ್ಶನ್‌ ಅವರು ಖಾಸಗಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದು, ಬಳಿಕ ಅಲ್ಲಿನ ಸೆಂಟ್ರಲ್‌ ಜೈಲಿಗೆ ಭೇಟಿ ನೀಡಿ ಕೊಲೆ ಆರೋಪಿಯಾಗಿರುವ ಪತಿ ದರ್ಶನ್‌ ಜೊತೆ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ. ಇನ್ನು ವಿಜಯಲಕ್ಷ್ಮಿ ಜೊತೆ ಆಪ್ತರಾದ ಸುಶಂತ್ ನಾಯ್ಡು, ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಸಹ ದರ್ಶನ್‌ ಭೇಟಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್‌ಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದರು. ಈ ವೇಳೆ ಮಾತುಕತೆ ನಡೆಸಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದ್ದಾರೆ. ಅಲ್ಲದೆ, ದಸರಾ ಮುಗಿಯವುದರೊಳಗೆ ಜಾಮೀನು ಸಿಗಲಿದೆ ಎಂದು ದರ್ಶನ್‌ಹೆ ವಿಜಯಲಕ್ಷ್ಮಿ ಸಂದೇಶ ನೀಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿತ್ತು.

ಈಗಾಗಲೇ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಅವರು ಬಿಡುಗಡೆ ಸಗ ಆಗಿದ್ದಾರೆ. ಎ16 ಕೇಶವಮೂರ್ತಿಗೆ ಹೈಕೋರ್ಟ್‌ ಜಾಮೀನು ನೀಡಿದ್ದು, ಎ17 ನಿಖಿಲ್ ನಾಯಕ್ ಹಾಗೂ ಎ15 ಆರೋಪಿ ಕಾರ್ತಿಕ್‌ಗೆ 57ನೇ ಸಿಸಿಹೆಚ್‌ ಕೋಟ್‌ ಜಾಮೀನು ಮಂಜೂರು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+