Actor Darshan: ಡೆವಿಲ್‌ ಸಿನಿಮಾ ಬರುತ್ತಾ, ಬರಲ್ವಾ? ಇಲ್ಲಿದೆ ಅಪ್ಡೇಟ್‌

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಅವರು ಜೈಲಿನಿಂದ ಹೊರಬಂದು ಈಗಷ್ಟೇ ಸಹಜ ಜೀವನದತ್ತ ಸಾಗಿದ್ದಾರೆ. ಜಾಮೀನು ಸಿಕ್ಕ ಹಿನ್ನೆಲೆ ಅವರ ಆರೋಗ್ಯ ಚೇತರಿಸಿಕೊಂಡಿದೆ. ಮತ್ತೊಂದೆಡೆ ದರ್ಶನ್‌ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎನ್ನುವ ಮೂಲಕ ಫ್ಯಾನ್ಸ್‌ ಶಾಕ್‌ ಕೊಟ್ಟರೂ ತಮ್ಮ ಡೆವಿಲ್‌ ಸಿನಿಮಾ ಬಗ್ಗೆ ಇಂದು ಮಹತ್ವದ ಅಪ್‌ಡೇಟ್‌ ನೀಡಲು ಸಜ್ಜಾಗಿದ್ದಾರೆ.

ಎಲ್ಲ ಅಂದುಕೊಂಡಂತಾಗಿದ್ದರೆ ಕಳೆದ ವರ್ಷವೇ ಡೆವಿಲ್‌ ಸಿನಿಮಾ ತೆರೆಗೆ ಬರಬೇಕಿತ್ತು. ಈ ಸಿನಿಮಾದ ಶೂಟಿಂಗ್‌ ಕೂಡ ಭರ್ಜರಿಯಾಗಿ ನಡೆಯುತ್ತಿತ್ತು. ಇದರ ನಡುವೆಯೇ ದರ್ಶನ್‌ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿಬಿಟ್ಟರು. ಸರಿಸುಮಾರು ಕಳೆದ ವರ್ಷವೆಲ್ಲ ಅವರು ಜೈಲಿನಲ್ಲೇ ಕಳೆದ ಕಾರಣ ಡೆವಿಲ್‌ ಸಿನಿಮಾದ ಶೂಟಿಂಗ್‌ ನಡೆಯಲಿಲ್ಲ, ನಿಗದಿಯಾಗಿದ್ದ ಡೇಟ್‌ಗೆ ಸಿನಿಮಾ ಕೂಡ ರಿಲೀಸ್‌ ಆಗಲಿಲ್ಲ.

Actor Darshan Thoogudeepa s Devil Movie Big Announcement Today

ಜೈಲಿನಲ್ಲಿದ್ದಾಗ ದರ್ಶನ್‌ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆ ಅವರು ಚೇತರಿಸಿಕೊಳ್ಳಲು ಬಹಳಷ್ಟು ಸಮಯ ಬೇಕು. ಇದೆಲ್ಲ ಆದ ಬಳಿಕವೇ ಅವರು ಮತ್ತೆ ಸಿನಿಮಾಗಳತ್ತ ಮುಖ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ, ಜಾಮೀನು ಸಿಕ್ಕ ಕಾರಣ ಸದ್ಯ ಅವರ ಆರೋಗ್ಯ ತುಸು ಸುಧಾರಿಸಿದೆ. ಸಿನಿಮಾಗಳತ್ತಲೂ ಅವರು ಗಮನಹರಿಸುತ್ತಿದ್ದಾರೆ. ಇತ್ತೀಚೆಗೆ ದರ್ಶನ್‌ ಅವರು ವಿಡಿಯೋ ಹಂಚಿಕೊಂಡು ಅಭಿಮಾನಿಗಳೊಂದಿಗೆ ಮಹತ್ವದ ವಿಚಾರ ಹಂಚಿಕೊಂಡಿದ್ದರು.

ಅನಾರೋಗ್ಯದ ಕಾರಣದಿಂದ ಈ ಬಾರಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್‌ ಹಾಕಿದ್ದೇನೆ, ದಯವಿಟ್ಟು ಕ್ಷಮಿಸಿ ಎಂದು ಅಭಿಮಾನಿಗಳಿಗೆ ಮನವಿಯೂ ಮಾಡಿದ್ದರು. ಇದು ಅಭಿಮಾನಿಗಳಿಗೆ ಬೇಸರವೂ ತರಿಸಿತ್ತು. ಅಲ್ಲದೆ ಒಂದೂವರೆ ವರ್ಷದಿಂದ ದರ್ಶನ್‌ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ಮುಖ್ಯವಾಗಿ ಡೆವಿಲ್‌ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇಟ್ಟು ಕಾಯುತ್ತಿದ್ದರು. ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ಡೆವಿಲ್‌ ಸಿನಿಮಾ ಸೆಟ್ಟೇರಲ್ಲ ಎಂದುಕೊಂಡಿದ್ದವರಿಗೆ ಇಂದು ಸಿಹಿಸುದ್ದಿಯೊಂದು ಹೊರಬೀಳಲಿದೆ.

ಹೌದು, ದರ್ಶನ್‌ ಅವರ ಡಿ ಕಂಪನಿ ಅಫೀಶಿಯಲ್‌ ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಡಿ ಸೆಲೆಬ್ರಿಟಿಗಳೇ ಇಂದು ಡೆವಿಲ್ ಚಿತ್ರದ ಪ್ರಮುಖ ಪ್ರಕಟಣೆಯೊಂದು ನಿಮ್ಮ ಮುಂದೆ ಬರಲಿದೆ. ದೊಡ್ಡ ಅನೌನ್ಸ್‌ಮೆಂಟ್‌ ನಿಮಗಾಗಿ ಬರಲಿದೆ. ಎಲ್ಲರೂ ಸೋಶಿಯಲ್‌ ಮೀಡಿಯಾದ ಮೇಲೆ ಕಣ್ಣಿಡಿ ಎಂದು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

Actor Darshan Thoogudeepa s Devil Movie Big Announcement Today

ಹಾಗಾಗಿ ಇಂದೇ ಡೆವಿಲ್‌ ಸಿನಿಮಾದ ಬಗ್ಗೆ ಮಹತ್ವದ ಘೋಷಣೆ ಹೊರಬೀಳಲಿದೆ. ಡೆವಿಲ್‌ ಸಿನಿಮಾದ ರಿಲೀಸ್‌ ಡೇಟ್‌ ಅಥವಾ ಪೋಸ್ಟರ್‌ ರಿಲೀಸ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್‌ ಅಭಿಮಾನಿಗಳು ಈ ವಿಚಾರ ಕೇಳಿ ಫುಲ್‌ ಖುಷ್‌ ಆಗಿದ್ದಾರೆ. ಬಹಳಷ್ಟು ಮಂದಿ ದರ್ಶನ್‌ ಅವರ ಹೊಸ ಲುಕ್‌ ರಿಲೀಸ್‌ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ ದರ್ಶನ್‌ ಅವರು ಇಂದು ಅಭಿಮಾನಿಗಳಿಗೆ ಸರ್‌ಪ್ರೈಸ್‌ ಕೊಡಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+