ನಟ ದರ್ಶನ್‌ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಬಿಗ್‌ ಸರ್‌ಪ್ರೈಸ್‌, ಏನದು?

ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ತೂಗುದೀಪ ಅವರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟ ದರ್ಶನ್‌ ಅವರ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಅಭಿಮಾನಿಗಳು ಹಬ್ಬದಂತೆ ಆಚರಿಸಲು ಸಿದ್ಧವಾಗಿದ್ದಾರೆ. ಇದೇ ವೇಳೆ ದರ್ಶನ್‌ ಅವರು ತಮ್ಮ ಹುಟ್ಟುಹಬ್ಬದಂದೆ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್‌ ನೀಡಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದು ರಿಲೀಫ್‌ ಆಗಿರುವ ನಟ ದರ್ಶನ್‌ ಅವರು ಸಿನಿಮಾಗಳತ್ತ ಗಮನ ಹರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ದರ್ಶನ್‌ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೂಡ ಕಾತರದಿಂದ ಕಾದಿದ್ದಾರೆ. ಇನ್ನು ದರ್ಶನ್‌ ಅವರು ಡಿ ಕಂಪನಿ ಅಫೀಶಿಯಲ್‌ ಪೇಜ್‌ ಕೂಡ ದೊಡ್ಡ ಸರ್‌ಪ್ರೈಸ್‌ ಕೊಡುವ ಸುಳಿವು ನೀಡಿದೆ.

Actor Darshan Thoogudeepa Hints At A Big Surprise For Fans On His Birthday

ದರ್ಶನ್‌ ಅವರ ಹುಟ್ಟುಹಬ್ಬಕ್ಕೆ ಬಾಸ್ ಪರ್ವ, ಸುಲ್ತಾನ್ ಸಂಭ್ರಮ-2025 ಎಂಬ ಹೆಸರಿನ ಪೋಸ್ಟರ್‌ ಹಂಚಿಕೊಂಡಿದೆ. ಹಾಗಾಗಿ ಈ ಬಾರಿ ದರ್ಶನ್‌ ಅವರ ಹುಟ್ಟುಹಬ್ಬ ಅದ್ಧೂರಿಯಾಗಿ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ (ಡಿ ಬಾಸ್) ಅವರ ಹುಟ್ಟುಹಬ್ಬಕ್ಕೆ ಕೇವಲ 15 ದಿನಗಳು ಮಾತ್ರ ಬಾಕಿ ಇವೆ. ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್ ಎನ್ನುವ ಪೋಸ್ಟರ್‌ ಹಂಚಿಕೊಂಡಿದೆ.

ಈ ಸೋಶಿಯಲ್‌ ಮೀಡಿಯಾ ಖಾತೆಯು ದರ್ಶನ್‌ ಅವರದ್ದೇ ಆಗಿರುವುದರಿಂದ ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಕೊಡುವುದು ಫಿಕ್ಸ್‌. ಈ ಪೋಸ್ಟರ್‌ ಮೂಲಕ ದರ್ಶನ್‌ ಅವರು ಸರ್‌ಪ್ರೈಸ್‌ ಸುಳಿವು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಹುಟ್ಟುಹಬ್ಬದ ಆಚರಣೆ ಎಲ್ಲಿ ನಡೆಯಲಿದೆ ಎನ್ನುವ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

Actor Darshan Thoogudeepa Hints At A Big Surprise For Fans On His Birthday

ದರ್ಶನ್‌ ಅವರಿಗೆ ಮೈಸೂರಿಗೆ ತೆರಳಲು ಕೋರ್ಟ್‌ ಮತ್ತೆ ಅನುಮತಿ ನೀಡಿರುವುದರಿಂದ ಅವರು ಈ ಹುಟ್ಟುಹಬ್ಬವನ್ನು ಮೈಸೂರಿನಲ್ಲೇ ಆಚರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದ ಬಳಿಯೇ ದರ್ಶನ್‌ ಅವರು ಪ್ರತಿ ವರ್ಷವೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಹೊರಬಂದ ನಂತರ ಅವರು ಮೈಸೂರಿನಲ್ಲೇ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ.

ರಾಜರಾಜೇಶ್ವರಿ ನಗರಕ್ಕೆ ಬಂದರೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ. ಈ ಕಾರಣದಿಂದ ದರ್ಶನ್‌ ಅವರು ಬೆಂಗಳೂರಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ? ಅಥವಾ ಮೈಸೂರಿಗೆ ಶಿಫ್ಟ್‌ ಆಗ್ತಾರಾ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹುಟ್ಟುಹಬ್ಬದಂದೇ ದರ್ಶನ್‌ ಅವರ ಹೊಸ ಸಿನಿಮಾಗಳು ಘೋಷಣೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಪ್‌ಡೇಟ್‌ ಸಿಗಲಿದೆ..

ಅರ್ಧಕ್ಕೆ ನಿಂತಿರುವ ಡೆವಿಲ್‌ ಸಿನಿಮಾದ ಬಗ್ಗೆಯೂ ಆ ದಿನ ಅಪ್‌ಡೇಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್‌. ಸದ್ಯ ದರ್ಶನ್‌ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಈ ಬಗ್ಗೆ ಕೂಡ ಹುಟ್ಟುಹಬ್ಬದ ದಿನ ಘೋಷಣೆಯಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ ದರ್ಶನ್‌ ಅವರನ್ನು ಹುಟ್ಟುಹಬ್ಬದ ದಿನವಾದರೂ ಶುಭಕೋರಿ ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+