Darshan & Sudeep: ದರ್ಶನ್-ಸುದೀಪ್ ಮತ್ತೆ ಯಾವಾಗ ಒಂದಾಗ್ತಾರೆ? ಅಚ್ಚರಿ ಭವಿಷ್ಯ ನುಡಿದ ಜ್ಯೋತಿಷಿ
ಸ್ಯಾಂಡಲ್‌ವುಡ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದು ಕಾಲದಲ್ಲಿ ಕುಚಿಕುಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಬ್ಬರ ನಡುವೆ ಉತ್ತಮ ಸ್ನೇಹ ಹಾಗೂ ಬಾಂಧವ್ಯವೂ ಇತ್ತು. ಹಲವು ವೇದಿಕೆಗಳಲ್ಲಿ ಅಣ್ಣತಮ್ಮಂದಿರಂತೆ ಇವರು ಮೋಡಿ ಮಾಡಿದ್ದರು. ಬಳಿಕ ಕಾರಣಾಂತರಗಳಿಂದ ಇಬ್ಬರೂ ದೂರವಾಗಿದ್ದರು.
ಆಗ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆಯೂ ಉತ್ತಮ ಸ್ನೇಹವಿತ್ತು. ನಟರ ಮುನಿಸಿನಿಂದಾಗಿ ಅಭಿಮಾನಿಗಳು ಕೂಡ ಬದ್ಧವೈರಿಗಳಾದರು. ಈ ವಾರ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಇದರ ನಡುವೆಯೂ ದರ್ಶನ್ ಹಾಗೂ ಸುದೀಪ್ ಅವರನ್ನು ಮತ್ತೆ ಮೊದಲಿನಂತೆ ಒಟ್ಟಾಗಿ ನೋಡಬೇಕು ಎಂದು ಹಲವರು ತಮ್ಮ ಆಸೆಯನ್ನು ಬಿಚ್ಚಿಡುತ್ತಲೇ ಇದ್ದಾರೆ.

ಆದರೆ, ಇದಕ್ಕೆ ಇಬ್ಬರಿಂದಲೂ ಯಾವುದೇ ಸ್ಪಷ್ಟ ಉತ್ತರ ಬಂದಿರಲಿಲ್ಲ. ಜೊತೆಗೆ ತಮ್ಮಿಬ್ಬರ ನಡುವಿನ ಈ ಅಂತರಕ್ಕೂ ಕಾರಣ ಹೇಳಿರಲಿಲ್ಲ. ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಮಾಡಿದಾಗಲೂ ನಟರು ಮೌನ ಉತ್ತರ ನೀಡಿದ್ದರು. ಸ್ಯಾಂಡಲ್‌ವುಡ್‌ನ ಜೋಡೆತ್ತು ಎಂದೇ ಮನೆಮಾತಾಗಿದ್ದ ಇವರನ್ನು ಮತ್ತೆ ಒಟ್ಟೊಟ್ಟಿಗೆ ನೋಡಬೇಕು ಎಂದು ಹಲವರು ಹರಕೆ ಹೊತ್ತಿರೋದು ಕೂಡ ಸತ್ಯ!
ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದಾಗಲೂ ಸುದೀಪ್ ಅವರ ಮಾತುಗಳು ಅಭಿಮಾನಿಗಳನ್ನು ಕೆರಳಿಸಿತ್ತು. ಈ ಪ್ರಕರಣದ ಬಗ್ಗೆ ಅವರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸುದೀಪ್ ದರ್ಶನ್ ಅವರು ಒಂದಾಗುವ ಕಾಲ ಬಂತು ಎಂದೂ ಮಾತನಾಡಿಕೊಂಡಿದ್ದರು.

ಆದರೆ, ಇವರಿಬ್ಬರೂ ನಾನೊಂದು ತೀರ-ನೀನೊಂದು ತೀರ ಎನ್ನುವಂತೆ ಈಗಲೂ ಇದ್ದಾರೆ. ಇನ್ನು ದರ್ಶನ್ ಹಾಗೂ ಸುದೀಪ್ ಯಾವಾಗ ಒಂದಾಗುತ್ತಾರೆ ಎನ್ನುವ ಯಕ್ಷಪ್ರಶ್ನೆಗೆ ಜ್ಯೋತಿಷಿಯೊಬ್ಬರು ಉತ್ತರ ನೀಡಿದ್ದಾರೆ. ಇವರಿಬ್ಬರೂ ಒಂದಾಗುವ ಸಮಯವದ ಬಗ್ಗೆಯೂ ಇವರು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಹೌದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿನಿ ಎಂಬುವವರು ದರ್ಶನ್ ಹಾಗೂ ಸುದೀಪ್ ಅವರು ಒಂದಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇವರ ಪ್ರಕಾರ ದಚ್ಚು ಹಾಗೂ ಕಿಚ್ಚ 2026ರ ಫೆಬ್ರವರಿ ಬಳಿಕ ಒಂದಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಇಬ್ಬರೂ ಮತ್ತೆ ಯಾವಾಗ ಒಂದಾಗುತ್ತಾರೆ ಎಂದು ಕೇಳುತ್ತಿದ್ದಾರೆ. ಫೆಬ್ರವರಿ 2026ರ ನಂತರ ಇಬ್ಬರೂ ನಟರು ಮತ್ತೆ ಸ್ನೇಹಿತರಾಗುತ್ತಾರೆ ಎಂದು ಜ್ಯೋತಿಷಿ ಪ್ರಶಾಂತ್ ಕಿನಿ ಭವಿಷ್ಯ ನುಡಿದಿದ್ದಾರೆ.

ಜ್ಯೋತಿಷಿ ಪ್ರಶಾಂತ್ ಕಿನಿ ಅವರ ಭವಿಷ್ಯಗಳು ಸಾಕಷ್ಟು ನಿಜವಾಗಿವೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಹಾಗೂ ಸುದೀಪ್ ಅವರು ಒಂದಾಗಲು ಇನ್ನೊಂದು ವರ್ಷ ಬಾಕಿ ಇದೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ. ಇನ್ನೊಂದು ವರ್ಷ ಬೇಗ ಮುಗೀಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ? ಇಲ್ಲವಾ? ಕಾದುನೋಡಬೇಕಿದೆ..












Click it and Unblock the Notifications