ಅಂದು ಟೈಮ್‌ ಇದ್ದಾಗ ಮೆರೆದಿದ್ದಕ್ಕೆ, ಇಂದು ಬಳ್ಳಾರಿಯಲ್ಲಿ ಪಶ್ಚಾತಾಪ: ನಟ ದರ್ಶನ್‌ಗೆ ಜೈಲಿನಲ್ಲಿ ನೆನಪಾಗುತ್ತಿದ್ದೆ ಆ ಕಾಲ್‌

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು & ಪಟಾಲಂ ಗ್ಯಾಂಗ್‌ ಜೈಲು ಸೇರಿದೆ. ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸೆಪ್ಟೆಂಬರ್‌ 19ರಂದು ತನ್ನ ಭೇಟಿಗೆ ಬಂದ ತಾಯಿಯನ್ನು ಕಂಡು ದರ್ಶನ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಾಲ ಹೇಗೆಲ್ಲ ಪಾಠ ಕಲಿಸುತ್ತದೆ ಎನ್ನುವುದುದಕ್ಕೆ ಇದೇ ಸೂಕ್ತ ಉದಾಹರಣೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್‌ ನಾಗನ ಜೊತೆ ಕುಳಿತುಕೊಂಡು ರೆಸಾರ್ಟ್‌ ರೀತಿಯಲ್ಲಿ ಪಾರ್ಟಿ ಮಾಡುವ ಮೂಲಕ ಒಂದು ಕೈಯಲ್ಲಿ ಸಿಗರೇಟ್‌ ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹರಟೆ ಹೊಡೆದಿರುವ ಫೋಟೋ ಹಾಗೂ ವಿಐಪಿ ಸೆಲ್‌ನಿಂದಲೇ ರೌಡಿ ಶೀಟರ್‌ಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದ್ದವು.

Actor Darshan queue to a phone call in Ballari jail

ಬಳಿಕ ಎಚ್ಚತ್ತ ಸರ್ಕಾರ ಪರಪ್ಪನ ಅಗ್ರಹಾರದ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿತ್ತು. ಇನ್ನು ಕೋರ್ಟ್‌ ಆದೇಶದ ಮೇರೆಗೆ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಯಿತು. ಹಾಗೆಯೇ ಇನ್ನುಳಿದ ಆರೋಪಿಗಳನ್ನು ಕೂಡ ಬೇರೆ ಬೇರೆ ಜೈಲಿಗೆ ಶಿಫ್ಟ್‌ ಮಾಡಲಾಗಿದ್ದು, ದರ್ಶನ್‌ ರೆಕ್ಕೆ ಕಳೆದುಕೊಂಡ ಪಕ್ಷಿಯಂತಾಗಿದ್ದಾರೆ. ಅಷ್ಟಾದರೂ ಕೂಡ ಗಂಚಾಲಿ ಮಾತ್ರ ಕಡಿಮೆಯಾಗಿಲ್ಲ.

ಇತ್ತೀಚೆಗಷ್ಟೇ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ ಬಳಿಕ ಮಾಧ್ಯಮದವರಿಗೆ ಮಧ್ಯದ ಬೆಳರು ತೋರಿಸಿ ಸುದ್ದಿಯಾಗಿದ್ದರು. ಇನ್ನೂ ಮೊದಲು ದರ್ಶನ್‌ ಬ್ರಾಂಡೆಡ್‌ ಫೋನ್‌ಗಳನ್ನು ಬಳಕೆ ಮಾಡುತ್ತಾ ಶೋಕಿ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಕುಟುಂಬಸ್ಥರನ್ನೆಲ್ಲ ದೂರ ಮಾಡಿಕೊಂಡು ದೌಲತ್ತಿನಿಂದ ಪುಂಡರ ರೀತಿ ವರ್ತಿಸುತ್ತಿದ್ದ. ಹೆತ್ತ ತಾಯಿ, ತಮ್ಮ ದೂರ ಮಾಡಿಕೊಂಡಿದ್ದ. ಇದೀಗ ಅವರೆಲ್ಲ ನೆನಪಿಗೆ ಬಂದಿದ್ದಾರೆ.

ಆಗ ಒಂದು ಕರೆ ಮಾಡಲು ಸಮಯ ಇದ್ದರೂ ಕೂಡ ಫೋನ್‌ ರಿಸೀವ್‌ ಮಾಡಲು ಅಸಡ್ಡೆ ತೋರುತ್ತಿದ್ದ ಅಸಾಮಿ ಇದೀಗ ಬಳ್ಳಾರಿ ಜೈಲಿನಲ್ಲಿ ಲೈನ್‌ನಲ್ಲಿ ನಿಂತು 15 ನಿಮಿಷ ಮನೆಯವರ ಬಳಿ ಲ್ಯಾಂಡ್‌ ಲೈನ್‌ನನಲ್ಲಿ ಕರೆ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದು ಈ ಅಸಾಮಿ ಬಳಿ ಇದ್ದದ್ದು ಬರೀ ಬ್ರಾಂಡೆಡ್‌ ಫೋನ್‌ಗಳೇ. ಆದರೆ ಮಾಡುತ್ತಿದ್ದದ್ದು ಮಾತ್ರ ಕಚಡ ಕೆಲಸಗಳೇ ಎಂದು ಹಲವರು ಹೇಳುವ ಮಾತಾಗಿದೆ. '

ಅದಕ್ಕೆ ಹೇಳೋದು ಕಾಲ.. ಹೀಗೆ ಇರೋದಿಲ್ಲ ಎಲ್ಲರ ಕಾಲನ್ನು ಎಳೆಯುತ್ತೆ ಅಂತಾ.. ಅದೇ ಗತಿ ಇದೀಗ ದರ್ಶನ್‌ಗೆ ಬಂದಿದೆ. ಹಲವರು ಹೇಳುವ ಪ್ರಕಾರ ಈತ ದುರಹಂಕಾರಿ. ತುಂಬಾ ಮುಂಗೊಪಿತನ. ಇದೇ ಇದೀಗ ಆತನಿಗೆ ಮುಳುವಾಗಿದ್ದೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+