Darshan Updates: ಜೈಲಿನ ಶಿಕ್ಷೆ ಅನುಭವಿಸಲು ಆಗ್ತಿಲ್ಲ, ನನಗೆ ವಿಷ ಕೊಡಿ: ಜಡ್ಜ್ ಮುಂದೆ ದರ್ಶನ್ ಕೋರಿಕೆ

Darshan Thoogudeepa: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದಾದ ಬಳಿಕ ಎರಡನೇ ಬಾರಿಗೆ ಜೈಲು ಸೇರಿರುವ ನಟ, ಆರೋಪಿ ದರ್ಶನ್ ತೂಗುದೀಪ ಕೋರ್ಟ್‌ಗೆ ಎರಡು ಅರ್ಜಿ ಸಲ್ಲಿಸಿದ್ದಾರೆ. ಇವುಗಳ ವಿಚಾರಣೆ ವೇಳೆ ದರ್ಶನ್ ಜಡ್ಜ್ ಮುಂದೆ ಕೆಲವು ಬೇಡಿಕೆ ಇಟ್ಟಿದ್ದಾರೆ. ನನಗೆ ವಿಷಯ ಕೊಡಿ, ನಾನು ಬಿಸಿಲು ನೋಡಿಯೇ ತಿಂಗಳಾಗುತ್ತಾ ಬಂದಿದೆ ಎಂದು ಕೋರಿದ್ದಾರೆ. ಹೇಗಾಯ್ತು ಡಿ.ಬಾಸ್ ದರ್ಶನ್ ಜೀವನ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಪಡೆದ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾಗದೇ ಸುತ್ತಾಡಿಕೊಂಡಿದ್ದರು. ಡಿವಿಲ್ ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದರು. ಬಳಿಕ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸುತ್ತಿದ್ದಂತೆ ಮರಳಿ ಬೆಂಗಳೂರು ಪರಪ್ಪನ ಅಗ್ರಹಾರ ಸೇರಿದರು. ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ, ಆರೋಪಿ ದರ್ಶನ್‌ಗೆ ಜೈಲಿನಲ್ಲಿ ಯಾತನೆ ಅನುಭವಿಸುತ್ತಿದ್ದಾರೆ. ಕತ್ತಲ ಕೋಣೆಯಲ್ಲಿ ನರಳುತ್ತಿದ್ದಾರೆ ಎನ್ನಲಾಗಿದೆ.

Actor Darshan Pleads in Court Can t Bear Jail Give Me Poison

ಹಾಸಿಗೆ, ದಿಂಬು, ಮನೆ ಊಟ ನೀಡದ ಕಾರಣಕ್ಕೆ ಅವುಗಳನ್ನು ನೀಡುವಂತೆ ಕೋರಿ ಕೋರ್ಟ್ ಅರ್ಜಿ ಹಾಕಿದ್ದರು. ಜೊತೆಗೆ ತನ್ನನ್ನು ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ರವಾನಿಸುವಂತೆ ಕೋರಿ ಒಟ್ಟು ಎರಡು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ನಟ ದರ್ಶನ್ ಜೈಲು ಶಿಕ್ಷೆಯಿಂದ ತಾವು ಅನುಭವಿಸುತ್ತಿರುವ ಸಂಕಟ ಹೊರಹಾಕಿದ್ದಾರೆ.

'' ನಾನು ಬಿಸಿಲು ನೋಡಿ ಬಹಳದ ದಿನ ಆಯ್ತು''

'' ಬಟ್ಟೆಗಳು ವಾಸನೆ ಬರುತ್ತಿವೆ... ಕೈಗಳಲ್ಲಿ ಫಂಗಸ್ ಕಂಡು ಬರುತ್ತಿದೆ''

'' ನನಗೆ ಬದುಕಲು ಆಗ್ತಿಲ್ಲ..''

'' ದಯವಿಟ್ಟು ನನಗೆ ಸ್ವಲ್ಪ ವಿಷ ಕೊಟ್ಟುಬಿಡಿ, ನನ್ನೊಬ್ಬನಿಗೆ ಮಾತ್ರ ಕೊಡಿ..ಎಂದು ನಟ ದರ್ಶನ್ ಗೋಗರೆದಿದ್ದಾರೆ. ಮನವಿ ಮಾಡಿಕೊಂಡಿದ್ದಾರೆ.

ವಿಚಾರಣೆ ವೇಳೆ ವಾದ ವಿವಾದ ಆಲಿಸಿದ ಜಡ್ಜ್ ನಟ ದರ್ಶನ್ ಮಾತುಗಳನ್ನು ಕೇಳಿಕೊಂಡಿದ್ದಾರೆ. ಬಳಿಕ ಮಾತನಾಡಿದ ನ್ಯಾಯಾಧೀಶರು, ಹಾಗೆ ಮಾಡಲು ಆಗುವುದಿಲ್ಲ. ದಿಂಬು, ಹಾಸಿಗೆ ಬಗ್ಗೆ ಜೈಲಿನ ಸೂಪರಿಡೆಂಟೆಂಟ್‌ಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಬಳ್ಳಾರಿ ಜೈಲಿಗೆ ರವಾನೆ ಕುರಿತು ಇಂದು ಮಧ್ಯಾಹ್ನ 03 ಗಂಟೆಗೆ ಆದೇಶ ಕಾಯ್ದಿರಿಸಿದ್ದಾಗಿ ತಿಳಿಸಿದ್ದಾರೆ. ಇದಕ್ಕೆ ದರ್ಶನ್ ಆಯ್ತು ಸ್ವಾಮಿ ಎಂದಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು

ದರ್ಶನ್ ಸೇರಿ ಯಾರನ್ನೆಲ್ಲ ಮರಳಿ ಜೈಲಿಗೆ ಸೇರಿಸಲಾಗಿತ್ತು. ಆ ಆರೋಪಿಗಳೆಲ್ಲರು ಇಂದು ವಿಚಾರಣೆಗೆ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಹಾಜರಾಗಿದ್ದರು. ಮಹಿಳೆ ಆಗಿದ್ದರಿಂದ ಪವಿತ್ರಾ ಗೌಡ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಪವಿತ್ರಾ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರುಪಡಿಸಲಾಗಿತ್ತು.

ಜೈಲಿನಲ್ಲಿರುವ ನಟ ದರ್ಶನ್ ತೂಕದಲ್ಲಿ ಇಳಿಕೆ

ಜೈಲಿಗೆ ಹೋಗುವುದಕ್ಕಿಂತ ಮೊದಲು ಸಾಮಾನ್ಯವಾಗಿದ್ದ ನಟ ದರ್ಶನ್ ಜೈಲಿನಿಂದ ಇತ್ತೀಚೆಗೆ ಬಂದ ಬಳಿಕವು ಫಿಟ್ ಆಗಿದ್ದರು. ಇದೀಗ ಜಾಮೀನು ರದ್ದು ಬಳಿಕ ಜೈಲು ಸೇರಿದ್ದು, ಅವರ ತೂಕದಲ್ಲಿ ಭಾರೀ ಇಳಿಕೆ ಆಗಿದೆ. ಮನೆ ಊಟ, ಹಾಸಿಗೆ, ದಿಂಬು ಸಿಕ್ಕಿಲ್ಲ. ಹೀಗಾಗಿ ಚಿಂತೆಗೀಡಾಗಿರುವ ದರ್ಶನ್ ತೂಕ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+