Actor Darshan Bail: ದಸರಾ ಮುಗಿಯುವುದರೊಳಗೆ ಜಾಮೀನು?: ಬಳ್ಳಾರಿಯಲ್ಲಿ ವಿಜಯಲಕ್ಷ್ಮಿ ದರ್ಶನ್‌ಗೆ ಹೇಳಿದ್ದೇನು?
Actor Darshan Bail: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್ ನ್ನು ಇಂದು (ಅಕ್ಟೋಬರ್ 07) ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ದರ್ಶನ್‌ಗೆ ಧೈರ್ಯ ತುಂಬುವುದಲ್ಲದೆ ಜಾಮೀನಿನ ಸುಳಿವು ನೀಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ಬಳ್ಳಾರಿಗೆ ಆಗಮಿಸಿದ ವಿಜಯಲಕ್ಷ್ಮಿ ದರ್ಶನ್ ಅವರು ಖಾಸಗಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದು, ಬಳಿಕ ಅಲ್ಲಿನ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ಕೊಲೆ ಆರೋಪಿಯಾಗಿರುವ ಪತಿ ದರ್ಶನ್ ಜೊತೆ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ. ಇನ್ನು ಪತಿ ವಿಜಯಲಕ್ಷ್ಮಿ ಜೊತೆ ಆಪ್ತರಾದ ಸುಶಂತ್ ನಾಯ್ಡು, ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಸಹ ದರ್ಶನ್ ಭೇಟಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್‌ಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದರು. ಈ ವೇಳೆ ಮಾತುಕತೆ ನಡೆಸಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದ್ದಾರೆ. ಅಲ್ಲದೆ, ದಸರಾ ಮುಗಿಯವುದರೊಳಗೆ ಜಾಮೀನು ಸಿಗಲಿದೆ ಎನ್ನುವ ಸಂದೇಶ ನೀಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಅಕ್ಟೋಬರ್ 4ರಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರ ವಾದ ಆಲಿಸಿದ ಬೆಂಗಳೂರಿನ 57ನೇ ಸಿಸಿಎಸ್ ಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿತ್ತು. ಹಾಗಾದರೆ ನಾಳೆಯೇ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ ಎನ್ನಲಾಗುತ್ತಿದೆ.
ಮೂವರು ಆರೋಪಿಗಳ ಬಿಡುಗಡೆ: ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಬಿಡುಗಡೆಯಾಗಿದ್ದಾರೆ. ತುಮಕೂರು ಜೈಲುಪಾಲಾಗಿದ್ದ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್‌ಗೆ ಜಾಮೀನು ದೊರೆತಿತ್ತು. ಆದರೆ ಬಿಡುಗಡೆಗೆ ಆಗಿದ್ದು ಮಾತ್ರ ಅಕ್ಟೋಬರ್ 2ರಂದು. ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದ ಎ15 ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ಆರೋಪಿ ನಿಖಿಲ್ ನಾಯಕ್ ಜೈಲಿನಿಂದ ಬಿಡುಗಡೆಯಾದವರಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಹಣದ ಆಮಿಷಕ್ಕೊಳಗಾಗು ತಾವೇ ಕೊಲೆ ಮಾಡಿರುವುದಾಗಿ ಈ ಮೂವರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದರು. ಆದರೆ ಪೊಲೀಸ್ ತನಿಖೆ ವೇಳೆ ಮೂವರ ಹೇಳಿಕೆಗಳು ಬೇರೆ ಬೇರೆ ಆಗಿತ್ತು. ಬಳಿ ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು ಅಸಲಿ ಸತ್ಯವನ್ನು ಬಾಯಿಬಿಡಿಸಿದ್ದಾರೆ. ಆಗ ನಟ ದರ್ಶನ್ ಹಾಗೂ ಪವಿತ್ರಾಗೌಡ ಹೆಸರು ಹೊರಗಡೆ ಬಂದಿದೆ.
ಇನ್ನು ಈ ಮೂವರು ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿಲ್ಲವೆಂದು ತಿಳಿದ ಕೋರ್ಟ್ ವಾದ-ವಿವಾದಗಳನ್ನು ಆಲಿಸಿ ಸೆಪ್ಟೆಂಬರ್ 23ರಂದು ಇವರಿಗೆ ಜಾಮೀನು ಮಂಜೂರು ಮಾಡಿತ್ತು. ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ನಿಖಿಲ್ ನಾಯಕ್ ಹಾಗೂ ಕಾರ್ತಿಕ್‌ಗೆ 57ನೇ ಸಿಸಿಹೆಚ್ ಕೋಟ್ ಜಾಮೀನು ಮಂಜೂರು ಮಾಡಿತ್ತು.












Click it and Unblock the Notifications