Actor Darshan Bail: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾವನಾತ್ಮಕ ಪೋಸ್ಟ್
Actor Darshan Bail: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು (ಡಿಸೆಂಬರ್ 13) ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇನ್ನು ಜೈಲು ಸೇರಿದ್ದ ಪತಿ ದರ್ಶನ್ ಅವರನ್ನು ಹೊರಗಡೆ ತರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದೀಗ ಕೊನೆಗೂ ವಿಜಯಲಕ್ಷ್ಮಿ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೇರಿದಾಗಿನಿಂದಲೂ ನಟ ದರ್ಶನ್‌ನನ್ನು ಹೊರಗಡೆ ತರಲು ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟದ ಜೊತೆ ಟೆಂಪಲ್ ರನ್ ಕೂಡ ಮುಂದುವರೆಸಿದ್ದರು. ಇದೆಲ್ಲದ್ದಕ್ಕೂ ಇದೀಗ ಪ್ರತಿಫಲ ಸಿಕ್ಕಂತಾಗಿದೆ. ಇಂದು ಹೈಕೋರ್ಟ್ ಪತಿ ದರ್ಶನ್‌ಗೆ ಜಾಮೀನು ಮಂಜೂರು ಆಗುತ್ತಿದ್ದಂತೆ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇದೀಗ ಈ ಪೋಸ್ಟರ್ ಭಾರೀ ಸದ್ದು ಮಾಡುತ್ತಿದೆ.

ಪತಿ ದರ್ಶನ್‌ಗೆ ಜಾಮೀನೂ ಮಂಜೂರು ಆಗುತ್ತಿದ್ದಂತೆ ವಿಜಯಲಕ್ಷ್ಮಿ ದೇವಸ್ಥಾನದಲ್ಲಿ ದೇವರಿಗೆ ಹೂ ನೀಡುವಂತೆ ಕೈಯಲ್ಲಿ ಹೂ ಹಿಡಿದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದರ ಅರ್ಥ ಇಷ್ಟು ದಿನ ಪಟ್ಟ ಕಷ್ಟಕ್ಕೆ ಪ್ರತಿಫಲ ಎಂಬಂತೆ ಇದೆ. ಸಾಮಾನ್ಯವಾಗಿ ಕಷ್ಟಗಳು ಬಂದಾದ ಭಕ್ತರು ದೇವರ ಮೊರೆ ಹೋಗುವುದನ್ನು ನಾವು ನೋಡಿರುತ್ತೇವೆ.
ಹಾಗೆಯೇ ವಿಜಯಲಕ್ಷ್ಮಿ ಕೂಡ ಪತಿ ದರ್ಶನ್‌ಗಾಗಿ ಪವರ್‌ಫುಲ್ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ವ್ರತಗಳನ್ನು ಮಾಡುತ್ತಾ ಬಂದಿದ್ದರು. ಮತ್ತೊಂದೆಡೆ ಅಭಿಮಾನಿಗಳು ಸಹ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಾ ಬಂದಿದ್ದರು. ಇದಕ್ಕೆ ಇದೀಗ ಪ್ರತಿಫಲವೆಂಬಂತೆ ನಟ ದರ್ಶನ್‌ಗೆ ಜಾಮೀನು ದೊರೆತಿದೆ.
ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಹೂವಿನ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಹೂವುನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಮತ್ತೊಂದೆಡೆ ಸೋನಲ್ ಹಾಗೂ ತರುಣ್ ಕೂಡ ಸಂಭ್ರಮಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಟ ದರ್ಶನ್ ಜೈಲು ಸೇರಿದಾಗಿನಿಂದಲೂ ಪತಿಯನ್ನು ಹೊರತರಲು ವಿಜಯಲಕ್ಷ್ಮಿ ಹೋರಾಟ ಮಾಡುತ್ತಲೇ ಇದ್ದರು. ಮತ್ತೊಂದೆಡೆ ಕುಚುಕು ತರುಣ್ ಕೂಡ ಈ ಮುಂಚೆ ಜೈಲಿನಲ್ಲಿ ನಾನು ಅವರನ್ನು ಭೇಟಿಯಾದಾಗ ಮನಸ್ಸು ಭಾರ ಆಗಿತ್ತು. ಆಗ ಅವರಿಗೆ ಹುಷಾರಿರಲಿಲ್ಲ. ಅವರ ಮನಸ್ಸು ಗಟ್ಟಿಯಾಗಲಿ ಎಂದು ಒಂದಷ್ಟು ಪುಸ್ತಕ ಕೊಟ್ಟು ಬಂದೆ ಎಂದು ಹೇಳಿದರು.
"ಒಬ್ಬ ಕಟುಂಬದ ಸದಸ್ಮೆಂಯ ಜೊತೆಗಿಲ್ಲ ಅಂದ್ರೆ ಎಷ್ಟು ನೋವಾಗುತ್ತದೆಯೋ ಅಷ್ಟೇ ನೋವು ನಮಗೆ ಆಗಿದೆ. ದರ್ಶನ್ ನಮ್ಮ ಕಣ್ಣು ಮುಂದೇನೆ ಇದ್ದಾರೆ. ಅದರೆ ಜೊತೆಗಿಲ್ಲ ಎನ್ನವುದೇ ಬೇಸರ ನಮ್ಮನ್ನು ಕಾಡುತ್ತಿದೆ," ಎಂದು ತರುಣ್ ಸುಧೀರ್ ಹೇಳಿದರು.
ಪತಿ ಪರವಾಗಿ ನಿಂತವರು ವಿಜಯಲಕ್ಷ್ಮಿ
ಇನ್ನು ವಿಜಯಲಕ್ಷ್ಮಿ ಪತಿ ದರ್ಶನ್‌ಗಾಗಾಗಿ ರಾಜ್ಯ ಹಾಗೂ ಹೊರರಾಜ್ಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ದೇವಾಲಯಗಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರು. ವ್ರತ, ಉಪವಾಸ, ಹೋಮ-ಹವನ ಮಾಡಿಸಿ ಪ್ರಾರ್ಥನೆ ಸಹ ಮಾಡಿದ್ದರು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಂತಾಗಿದೆ.












Click it and Unblock the Notifications