ಇವನು ನನ್ನ ಜೊತೆ ಊಟಕ್ಕೆ ಕುತ್ಕೊಳ್ತಾನಾ ಎಂದು ನಿರ್ದೇಶಕನಿಂದ ನಟ ಅಜಯ್ ರಾವ್‌ಗೆ ಅವಮಾನ

ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ಸ್ಟಾರ್ ನಟ ಅಜಯ್ ರಾವ್‌ ಅವರ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇದೇ ಏಪ್ರಿಲ್ 18ರಂದು ನಟ ಅಜಯ್ ರಾವ್ ಅಭಿನಯದ 'ಯುದ್ಧಕಾಂಡ' ಸಿನಿಮಾ ತೆರೆ ಕಾಣಲಿದೆ. ಸಿನಿ ಜರ್ನಿಯಲ್ಲಿ ಹಲವಾರು ಏಳು ಬೀಳುಗಳನ್ನು ಕಂಡ ಅಜಯ್ ರಾವ್ ಕೆಲವೊಂದು ಸಂದರ್ಭದಲ್ಲಿ ಹೊಡೆಸಿಕೊಂಡಿರುವುದುಂಟು ಜೊತೆಗೆ ಅಮಮಾನ ಮಾಡಿಸಿಕೊಂಡಿರುವುದು ಇದೆ. ತಮ್ಮ ಜೀವನದಲ್ಲಿ ನಡೆದ ಕೆಲ ಕಹಿ ಘಟನೆಗಳು ನಂತರ ಸಿಹಿ ಆಗಿದ್ದು ಹೇಗೆ ಅನ್ನೋದನ್ನು ಅಜಯ್ ರಾವ್ ಮುಕ್ತವಾಗಿ ಮಾತನಾಡಿದ್ದಾರೆ.

ರಾಜೇಶ್ ರಿವೀಲ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಅಜಯ್ ರಾವ್‌ ತಮ್ಮ ಜೀವನದಲ್ಲಿ ವಿಶೇಷವಾಗಿ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಡೆದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. 'ಎಕ್ಸಕ್ಯೂಸ್ ಮೀ' ಸಿನಿಮಾ ಅಜಯ್ ರಾವ್ ಅವರಿಗೆ ತುಂಬಾ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ. ಈ ಸಿನಿಮಾದ ಹಾಡುಗಳು ಇಂದಿಗೂ ಹಿಟ್ ಅಂತಲೇ ಹೇಳಬಹುದು. ಆದರೆ ಈ ಸಿನಿಮಾ ನಂತರ ಅಜಯ್ ರಾವ್ ಅವರಿಗೆ ಒಬ್ಬ ಸ್ಟಾರ್ ನಿರ್ದೇಶಕ ಅವಮಾನ ಮಾಡಿದ್ದರಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

actor ajay rao was insulted at shooting spot and costume boy hit ajay rao what happened next

ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಎಲ್ಲರೊಂದಿಗೆ ಅಜಯ್ ಊಟಕ್ಕೆ ಟೇಬಲ್ ಅಲ್ಲಿ ಕುಳಿತಾಗ ನಿರ್ದೇಶಕರೊಬ್ಬರು, 'ಇವನು ಯಾಕೆ ಇಲ್ಲಿ ಕುಳಿತಿದ್ದಾನೆ. ಇಲ್ಲೇನ್ ನಮ್ಮ ಜೊತೆ ಕುತ್ಕೊಳೊದು ಅವನು. ಕಳುಸಿ ಅವನನ್ನು' ಎಂದಿದ್ದರಂತೆ. ಆಗ ಅಜಯ್ ಬೇಸರ ಮಾಡಿಕೊಂಡು ಸಾಲಿನಲ್ಲಿ ನಿಂತು ತಟ್ಟೆಗೆ ಊಟ ಹಾಕಿಸಿಕೊಂಡು ಊಟ ಮಾಡಿದ್ದರಂತೆ.

ಆದರೆ ಕಾಕತಾಳಿಯ ನೋಡಿ ಹೇಗಿದೆ. ಈ ಘಟನೆ ನಡೆದು ವರ್ಷಗಳ ಬಳಿಕ ಅದೇ ನಿರ್ದೇಶಕ ಅಜಯ್ ರಾವ್ ಅವರ ಮನೆಯ ಮುಂದೆ ಕಾದು ನಿಂತಿದ್ದರಂತೆ. ಒಂದೆರೆಡು ಸಿನಿಮಾ ಕತೆ ಕೇಳಿ ಅಜಯ್ ಅವರನ್ನು ನಾನು ಸಿನಿಮಾ ಮಾಡಲ್ಲ ಎಂದು ಹೇಳಿ ಕಳುಹಿಸಿದ್ದರಂತೆ. ಹೀಗೆ ಅಜಯ್ ಅವರಿಗೆ ಅವಮಾನ ಮಾಡಿದ ನಿರ್ದೇಶಕ ಅವರ ಮನೆಯ ಬಾಗಿಲಿಗೆ ಬಂದು ಅಜಯ್ ಅವರಿಗಾಗಿ ಕಾದು ನಿಂತ ಪ್ರಸಂಗವಿದು. 'ಎಕ್ಸಕ್ಯೂಸ್ ಮಿ' ಮಾಡಿ ಹೀರೋ ಆದ ಮೇಲೆ ನಡೆದ ಘಟನೆ ಇದಾಗಿದ್ದು, ಆ ಡೈರೆಕ್ಟರ್ ಹೆಸರು ಅಜಯ್ ರಿವೀಲ್ ಮಾಡಲು ಇಚ್ಚೆ ಪಡಲಿಲ್ಲ.

ಮತ್ತೊಂದು ಘಟನೆಯಲ್ಲಿ ಅಜಯ್ ಸಿನಿಮಾ ಸ್ಪಾಟ್‌ಗೆ ಹೋದಾಗ ಅಲ್ಲೊಂದು ಅತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಶೂಟ್ ಮಾಡಬೇಕಿತ್ತು. ಅಜಯ್ ಆತ್ಮಹತ್ಯೆ ಮಾಡಿಕೊಳ್ಳಲಲು ನೀರಿಗೆ ಹಾರುವ ಪ್ರಸಂಗ. ಸ್ಥಳಕ್ಕೆ ಹೋದಾಗ ನೀರಿಗೆ ಹಾರಿ ಆತ್ಮಹತ್ಯೆ ಮಾಡುವ ಪ್ರಸಂಗ ಮಾಡಿದ ತಕ್ಷಣ ಅಜಯ್ ಅವರ ಬಟ್ಟೆ ಒದ್ದೆಯಾಗಿತ್ತು. ಈ ಶೂಟಿಂಗ್ ಮುಗಿದ ತಕ್ಷಣ ಚಿತ್ರ ತಂಡ ಹತ್ತಿರದಲ್ಲಿ ಇರುವ ಬೇರೊಂದು ಶೂಟಿಂಗ್ ಸ್ಪಾಟ್‌ಗೆ ಹೋಯ್ತು. ಆಗ ಡಿಸೆಂಬರ್ ಚಳಿ. ಬಟ್ಟೆ ಒದ್ದೆಯಾಗಿದ್ದರಿಂದ ಬೇರೊಂದು ಬಟ್ಟೆ ಬದಲಾಯಿಸಲು ಅಲ್ಲೇ ಇದ್ದ ವಾನ್‌fನ ಟ್ರಂಕ್‌ನಲ್ಲಿ ಬಟ್ಟೆ ಹುಡುಕುವಾಗ ಕಳ್ಳನೆಂದು ಭಾವಿಸಿ ಅಜಯ್ ಅವರಿಗೆ ಕಾಸ್ಟ್ಯೂಮ್ ಬಾಯ್ ಹೊಡೆದಿದ್ದನಂತೆ.

ಸುಮಾರು ವರ್ಷಗಳ ನಂತರ ಅಜಯ್ ಅವರ ಮೇಲೆ ಕೈ ಮಾಡಿದ್ದ ಕಾಸ್ಟ್ಯೂಮ್ ಬಾಯ್ ಅಜಯ್ ಅವರ ಕಾಲಿಗೆ ಶೂ ಹಾಕಿಲು ಬಂದರು. ಆದರೆ ನಾನು ಶೂ ಹಾಕುವುದನ್ನು ತಡೆದಿದ್ದೆ. ಆಗ ಕಾಸ್ಟ್ಯೂಮ್ ಬಾಯ್್ಗೆ ನನಗೆ ಹೊಡೆದಿದ್ದು ನೆನಪು ಇರಬಹುದು ಎಂದು ಅಜಯ್ ಹೇಳಿದ್ದಾರೆ.

ಹೀಗೆ ಅಜಯ್ ರಾವ್ ಅವರು ಸಿನಿಮಾ ಮಾಡಬೇಕು ಅಂದುಕೊಂಡು ಬೆಂಗಳೂರಿಗೆ ಬಂದ ಆರಂಭದಲ್ಲಿ ನಡೆದ ಕೆಟ್ಟ ಘಟನೆಗಳನ್ನು ಹಂಚಿಕೊಂಡರು. ಒಟ್ಟಿನಲ್ಲಿ ಆಗ ಅಜಯ್ ಅವರು ಅನುಭವಿಸಿದ ಆ ಕೆಟ್ಟ ಸಂದರ್ಭಗಳು ನಂತರದ ದಿನಗಳಲ್ಲಿ ಅವರಿಗೆ ಅಚ್ಚರಿ ತಂದಿದ್ದು ನಿಜ. ತಾಳ್ಮೆ ಇದ್ದರೆ ದೇವರು ಎಲ್ಲವನ್ನೂ ಬದಲಾಯಿಸಿಬಿಡುತ್ತಾನೆ ಅನ್ನೋದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+