ಡಿವೋರ್ಸ್ ಬಗ್ಗೆ ನಟ ಅಜಯ್ ರಾವ್ ಮೊದಲ ಪ್ರತಿಕ್ರಿಯೆ, ದಿಢೀರ್ ಈ ನಿರ್ಧಾರದ ಬಗ್ಗೆ ಹೇಳಿದ್ದೇನು?
ನಟ ಅಜಯ್ ರಾವ್ ಹಾಗೂ ಸ್ವಪ್ನಾ ರಾವ್ ದಂಪತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. 2014ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಮುದ್ದಾದ ಒಂದು ಹೆಣ್ಣು ಮಗು ಕೂಡ ಇದೆ. ಇತ್ತೀಚೆಗಷ್ಟೇ ಅಜಯ್ ರಾವ್ ಅವರ ನಿರ್ಮಾಣದ ಯುದ್ಧಕಾಂಡ ಸಿನಿಮಾ ಕೂಡ ರಿಲೀಸ್ ಆಗಿತ್ತು. ಇದೀಗ ದಿಢೀರ್ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಟ ಅಜಯ್ ರಾವ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸ್ವಪ್ನಾ ರಾವ್ ಅವರು ಪತಿ ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿ, ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ. ಇಲ್ಲಿವರೆಗೆ ಸಾರ್ವಜನಿಕವಾಗಿ ಮುದ್ದಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಈಗ ಇದ್ದಕ್ಕಿದ್ದಂತೆ ಡಿವೋರ್ಸ್ ಪಡೆಯಲು ನಿರ್ಧರಿಸಿರುವುದು ಏಕೆ? ಎಂದು ಎಲ್ಲರೂ ಶಾಕ್‌ನಲ್ಲಿದ್ದಾರೆ. ಈ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಅಜಯ್ ರಾವ್ ತಮ್ಮ ಡಿವೋರ್ಸ್ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.

'ಇದು ನಮ್ಮ ಪರ್ಸನಲ್ ವಿಷ್ಯ'
'ನನ್ನ ಪತ್ನಿ ಕೋರ್ಟ್‌ಗೆ ಹೋಗಿದ್ದಾಳಾ? ಈ ಬಗ್ಗೆ ನನಗೆ ಗೊತ್ತಿಲ್ಲ, ಚರ್ಚೆ ಮಾಡಿ ಹೇಳ್ತೀನಿ' ಎಂದು ಮೊದಲಿಗೆ ಅಜಯ್ ರಾವ್ ಹೇಳಿದ್ದಾರೆ. 'ಇದು ನಮ್ಮ ಪರ್ಸನಲ್ ವಿಚಾರ. ಇದನ್ನೇ ನಾವೇ ಬಗೆಹರಿಸಿಕೊಳ್ಳುತ್ತೀವಿ. ನಾವು ಗೌರವಯುತವಾಗಿಯೇ ಇದನ್ನು ಪರಿಹಾರ ಮಾಡಿಕೊಳ್ಳುತ್ತೇವೆ. ಈಗ ನಾನು ಪ್ರತಿಕ್ರಿಯಿಸಿ, ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಕನ್ನಡದ 'ಎಕ್ಸ್‌ಕ್ಯೂಸ್‌ಮಿ', 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣಲೀಲಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಜಯ್ ರಾವ್ ಅವರು ಸ್ವಪ್ನಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ 2014ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಕೂಡ ಇದೆ. ಅನ್ಯೋನ್ಯವಾಗಿದ್ದ ಅಜಯ್ ರಾವ್ ದಂಪತಿ ಬದುಕಲ್ಲಿ ಬಿರುಕು ಮೂಡಿದ್ದು, ಪತ್ನಿ ಸ್ವಪ್ನಾ ಅವರೇ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದಾಂಪತ್ಯದಲ್ಲಿ ಬಿರುಕಿಗೆ ಅದೇ ಕಾರಣನಾ?
ನಟ ಅಜಯ್ ರಾವ್ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದರು. ಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರನಲ ನಿರ್ಮಾಣ ಸಂಸ್ಥೆಯನ್ನ ಹೊರತಂದಿದ್ದರು. ಇತ್ತೀಚೆಗೆ ತಮ್ಮ ಯುದ್ಧಕಾಂಡ-2 ಸಿನಿಮಾ ಕೂಡ ಅದೇ ಸಂಸ್ಥೆಯಿಂದ ಹೊರತಂದಿದ್ದರು. ಆದರೆ ಅಜಯ್ ರಾವ್ ಅವರು ನಿರ್ಮಾಣಕ್ಕೆ ಕೈಹಾಕುವುದು ತಮ್ಮ ಪತ್ನಿ ಸ್ವಪ್ನಾ ಅವರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಅವರು ಪ್ರೊಡಕ್ಷನ್‌ಗೆ ಇಳಿಯಬೇಡಿ ಎಂದು ಅಜಯ್ ಅವರಿಗೆ ಹೇಳಿದ್ದರು. ಆದರೂ ಅಜಯ್ ನಿರ್ಮಾಪಕರಾಗಿ ಸಾಹಸಕ್ಕೆ ಕೈಹಾಕಿದ್ದರು.
ಯುದ್ಧಕಾಂಡ-2 ಸಿನಿಮಾ ಮೂಲಕ ನಿರ್ಮಾಣಕ್ಕೆ ಕೈಹಾಕಿದ್ದರು. ಆ ಸಿನಿಮಾಗಾಗಿ ಕೋಟಿಗಟ್ಟಲೆ ಸಾಲ, ತಮ್ಮ ಇಷ್ಟದ ದುಬಾರಿ ಕಾರು ಮಾರಿಕೊಂಡೆ ಎಂದು ಅಜಯ್ ರಾವ್ ಅವರೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಆ ಕಾರು ಮಾರುವುದು ಬೇಡ ಎಂದು ತಮ್ಮ ಪುತ್ರಿ ಅಳುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಸಿನಿಮಾ ನಿರ್ಮಾಣಕ್ಕೆ ಕೈಹಾಕಿ ಅಜಯ್ ರಾವ್ ನಷ್ಟಕ್ಕೆ ಸಿಲುಕಿದ್ದರು ಎಂದು ಹೇಳಲಾಗಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿ ದಿನವೇ ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ ಅವರ ಡಿವೋರ್ಸ್ ವಿಚಾರ ಶಾಕ್ ನೀಡಿರುವುದಂತೂ ಸತ್ಯ.












Click it and Unblock the Notifications