ದರ್ಶನ್‌ ಜೈಲಲ್ಲೂ ಜಾಲಿ, ʼಇದ್ರೆ ನೆಮ್ದಿಯಾಗ್‌ ಇರ್ಬೇಕು..ʼ ಅಂದ್ರೆ ಹೀಗೇನಾ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ಗೊತ್ತೇ ಇದೆ. ಜೈಲಿನಲ್ಲಿ ದರ್ಶನ್‌ ಅವರು ಸಾಮಾನ್ಯ ಕೈದಿಯಂತಿದ್ದಾರೆ. ಜೈಲಿಗೆ ಹೋದ ನಂತರ ಅವರು ಸರಿಯಾಗಿ ಊಟ ಮಾಡದೆ, ಬಹಳ ನೊಂದಿದ್ದಾರೆ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ, ಇಂದು ಲೀಕ್‌ ಆಗಿರುವ ಜೈಲಿನಲ್ಲಿರುವ ದರ್ಶನ್‌ ಫೋಟೋ ಈ ಎಲ್ಲವನ್ನೂ ಸುಳ್ಳು ಮಾಡಿದೆ. ಅಲ್ಲದೇ ಎಲ್ಲರಿಗೂ ಶಾಕ್‌ ಕೂಡ ನೀಡಿದೆ.

ಹೌದು, ದರ್ಶನ್‌ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ ಎಂದುಕೊಂಡಿದ್ದವರಿಗೆ ಶಾಕ್‌ ನೀಡುವಂತಹ ಫೋಟೋ ಲೀಕ್‌ ಆಗಿದ್ದು, ಇದರಲ್ಲಿ ದರ್ಶನ್‌ ʼಇದ್ರೆ ನೆಮ್ದಿಯಾಗ್‌ ಇರ್ಬೇಕುʼ ಅನ್ನೋ ರೀತಿ ಜಾಲಿ ಮೂಡ್‌ನಲ್ಲಿದ್ದಾರೆ. ಕೈಯಲ್ಲಿ ಸ್ಟೈಲಾಗಿ ಕಾಫಿ ಮಗ್‌ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಚ್ಚಿಕೊಂಡು ಥೇಟ್‌ ಓಪನ್‌ ಪಾರ್ಟಿ ಹಾಲ್‌ನಲ್ಲಿರುವಂತೆ ಕುಳಿತು ಎಂಜಾಯ್‌ ಮಾಡ್ತಿದ್ದಾರೆ. ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವುದರಿಂದ ದರ್ಶನ್‌ ಮುಖದಲ್ಲಿ ಸಂಕಟ ಇರುತ್ತೆ ಎಂದೆಲ್ಲ ಹೇಳಲಾಗುತ್ತಿತ್ತು. ಅವರನ್ನು ಇತ್ತೀಚೆಗೆ ಭೇಟಿಯಾಗಿ ಬಂದವರೂ ಇದೇ ಮಾತನ್ನು ಹೇಳಿದ್ದರು. ಆದರೆ ಈ ಫೋಟೋದಲ್ಲಿ ದರ್ಶನ್‌ ನಗುತ್ತಾ ಚಿಲ್‌ ಮಾಡುತ್ತಿದ್ದಾರೆ.

A Photo Of Actor Darshan In a Jolly Mood At Parappana Agrahara Jail is leaked

ಈ ಫೋಟೋ ಸೋಶಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗಿದ್ದು, ಇದಕ್ಕೆ ʼಇದ್ರೆ ನೆಮ್ದಿಯಾಗ್‌ ಇರ್ಬೇಕು...ʼ ಎಂದು ಕಾಮೆಂಟ್‌ ಮಾಡಲಾರಂಭಿಸಿದ್ದಾರೆ. ಯಾಕೆ ಅಂದ್ರೆ, ಹಲವು ವರ್ಷಗಳ ಹಿಂದೆ ದರ್ಶನ್‌ ಅವರದ್ದು ಎನ್ನಲಾದ ಆಡಿಯೋವೊಂದು ಎಲ್ಲೆಡೆ ಹರಿದಾಡಿತ್ತು. ಅದರಲ್ಲಿ ಖುದ್ದು ದರ್ಶನ್ ಅವರಂತಹ ಧ್ವನಿಯಲ್ಲೇ ʼಇದ್ರೆ..ನೆಮ್ದಿಯಾಗ್‌ ಇರ್ಬೇಕುʼ ಎನ್ನುವ ಸಾಲುಗಳಿತ್ತು. ಈಗ ಈ ಫೋಟೋಗೆ ಆ ಡೈಲಾಗ್‌ ಸೇರಿ ಶೇರ್‌ ಮಾಡುತ್ತಿದ್ದಾರೆ.

ಇನ್ನು ದರ್ಶನ್‌ ಮೂರ್ನಾಲ್ಕು ಮಂದಿಯೊಂದಿಗೆ ಕುಳಿತು ಜಾಲಿಯಾಗಿ ಮಾತುಕತೆ ನಡೆಸುತ್ತಿರುವ ಫೋಟೋದಲ್ಲಿ ಬೆಂಗಳೂರಿನ ನಟೋರಿಯಸ್‌ ರೌಡಿ ವಿಲ್ಸನ್‌ ಗಾರ್ಡನ್‌ ನಾಗ ಕೂಡ ಇದ್ದಾನೆ ಎನ್ನಲಾಗಿದೆ. ಸದ್ಯ ಜೈಲು ಸೇರಿದ್ದರೂ ಒಳಗೆ ಆರಾಮದಾಯಕವಾಗಿ ಟೀ ಕುಡಿಯುತ್ತಾ, ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಉದ್ಭವಿಸಿದೆ.

A Photo Of Actor Darshan In a Jolly Mood At Parappana Agrahara Jail is leaked

ಯಾಕಂದ್ರೆ, ನಟ ದರ್ಶನ್ ತೂಗುದೀಪ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಮನೆ ಊಟ ಕೊಡಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಹೇಳಿದ್ದರು. ಅಧಿಕಾರಿಗಳು ಕೂಡ ಕಾನೂನಿಗೆ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರಿಗೂ ಒಂದೇ ನ್ಯಾಯ ಎಂದೆಲ್ಲ ಡೈಲಾಗ್‌ ಹೊಡೆದಿದ್ದರು. ಆದರೆ ಅವರು ಹೇಳಿದ್ದಕ್ಕೂ ಈ ಫೋಟೋದಲ್ಲಿ ನೋಡುತ್ತಿರುವುದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗಿದೆ. ಇನ್ನು ದರ್ಶನ್‌ ಜೈಲಿಗೆ ಹೋದ ಮೇಲೆ ಕೂದಲು ಬೋಳಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಫೋಟೋಗಳು ಲಭ್ಯವಾಗಿರಲಿಲ್ಲ. ಸದ್ಯ ಲೀಕ್‌ ಆಗಿರುವ ಫೋಟೋದಲ್ಲಿ ದರ್ಶನ್‌ ಅವರ ತಲೆ ಬೋಳಿಸಿರುವುದು ನಿಜ ಎನ್ನಲಾಗಿದೆ.

ಫೋಟೊ ಲೀಕ್‌ ಆಗಿದ್ದು ಹೇಗೆ?: ಜೈಲಿನಲ್ಲಿ ದರ್ಶನ್‌ ಹೇಗಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಜೈಲಿನಲ್ಲಿ ದರ್ಶನ್‌ ಮೋಜು ಮಸ್ತಿ ಮಾಡುತ್ತಿರುವುದು ಒಂದೆಡೆ ಶಾಕ್‌ ನೀಡಿದ್ದರೆ, ಈ ಫೋಟೊ ಲೀಕ್‌ ಆಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲಿ ಬಂದು ನಿಂತಿದೆ. ಮೂಲಗಳ ಪ್ರಕಾರ ಜೈಲಿನಲ್ಲಿರುವ ಕೈದಿಯೊಬ್ಬ ಈ ಫೋಟೊ ತೆಗೆದು ತನ್ನ ಹೆಂಡತಿಗೆ ವಾಟ್ಸಾಪ್ ಮಾಡಿದ್ದನಂತೆ. ಬಳಿಕ ಫೋಟೋ ಅಲ್ಲಿಂದಲೇ ಲೀಕ್‌ ಆಗಿದೆ ಎಂದು ಹೇಳಲಾಗುತ್ತಿದೆ. ಅತಿರೇಕ ಅಂದ್ರೆ ಈ ಫೋಟೋ ನೋಡಿದ ದರ್ಶನ್‌ ಅಭಿಮಾನಿಗಳು ʼಸಿಂಹ ಎಲ್ಲಿದ್ರೂ ಸಿಂಹಾನೇ..ʼ ಎಂದೆಲ್ಲ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+