kichcha Sudeep: ಸುದೀಪ್ ಸಿನಿಮಾ ಜರ್ನಿಗೆ 29 ವರ್ಷ: ಮನದ ಮಾತು ಹೇಳಿಕೊಂಡ ಕಿಚ್ಚ
ಕಿಚ್ಚ ಸುದೀಪ್, ಕನ್ನಡ ಚಿತ್ರರಂಗದ ಮಾತ್ರವಲ್ಲ ಭಾರತೀಯ ಚಿತ್ರರಂಗದ ಅಪರೂಪದ ನಟ. ಬಹುಮುಖ ಪ್ರತಿಭೆಯ ಸುದೀಪ್ ಅವರು ಇಂಡಸ್ಟ್ರಿಗೆ ಕಾಲಿಟ್ಟು 29 ವರ್ಷ ಪೂರ್ಣ ಆಗಿದೆ. 29 ವರ್ಷ ಸಿನಿ ಜರ್ನಿಯ ಕುರಿತು ನಟ ಕಿಚ್ಚ ಸುದೀಪ್ ಅವರು ತಮ್ಮ ಮನದ ಮಾತುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂಡಸ್ಟ್ರಿಗೆ ಕಾಲಿಟ್ಟು 29 ವರ್ಷ ಪೂರ್ಣಗೊಂಡಿದ್ದು, ತಾಯವ್ವ ಚಿತ್ರದಿಂದ ಹಿಡಿದು ಮ್ಯಾಕ್ಸ್ ವರೆಗಿನ ಜರ್ನಿಯಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಸಹ ಸುದೀಪ್ ಅವರು ಕಂಡಿದ್ದಾರೆ.

ತಾಯವ್ವ ಚಿತ್ರದಿಂದ ಹಿಡಿದು ಮ್ಯಾಕ್ಸ್ ಸಿನಿಮಾಗಳಲ್ಲಿ ಅದ್ಬುತವಾಗಿ ನಟಿಸಿ, ಕೋಟ್ಯಾಂತರ ಅಭಿಮಾನಿಗಳನ್ನ ಕಿಚ್ಚ ಸುದೀಪ್ ಅವರು ಹೋದಿದ್ದಾರೆ. ಆರಂಭದಿಂದ ಇಲ್ಲಿಯ ವರೆಗೂ ನಟ ಸುದೀಪ್ ಅವರು ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ, ಭಿನ್ನ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಜನರನ್ನು ರಂಜಿಸುತ್ತಲೇ ಬಂದಿರುವ ಸುದೀಪ್ ಅವರ ಸಿನಿಮಾ ಪಯಣಕ್ಕೆ ಇದೀಗ 29 ವರ್ಷ ಪೂರೈಸಿದ್ದು, ಇದೀಗ ಮೂರನೇ ದಶಕಕ್ಕೆ ಕಿಚ್ಚ ಸುದೀಪ್ ಕಾಲಿಟ್ಟಿದ್ದಾರೆ. ಈ ಅಪೂರ್ವ ಸಮಯದಲ್ಲಿ ತಮ್ಮ ಈ ಸಾಧನೆಗೆ ಪ್ರೋತ್ಸಾಹ ನೀಡಿದವರಿಗೆ, ಹಾರೈಸಿದವರಿಗೆ ನಟ ಸುದೀಪ್ ಅವರು ಧನ್ಯವಾದ ಹೇಳಿದ್ದಾರೆ.
ಎಕ್ಸ್ ಖಾತೆಯ ತಮ್ಮ ಪೇಜ್ ನಲ್ಲಿ ಬರೆದುಕೊಂಡಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು, ಇಷ್ಟು ವರ್ಷದ ಸಂಪೂರ್ಣ ಹಾದಿಯಲ್ಲಿ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್ ಹೃದಯದಾಳದಿಂದಲೇ ಧನ್ಯವಾದ ಹೇಳಿದ್ದಾರೆ. ತಮ್ಮ ಪ್ರತಿ ಕೆಲಸಕ್ಕೂ ಸ್ಪೂರ್ತಿಯಾದ ಅಭಿಮಾನಿಗಳಿಗೆ ಮನದುಂಬಿ ಥ್ಯಾಂಕ್ಸ್ ಹೇಳಿದ್ದಾರೆ. ಈ ಅದ್ಭುತವಾದ ಪಯಣವನ್ನು ನಡೆಸುತ್ತಿರುವುದಕ್ಕೆ ನನ್ನಲ್ಲಿ ಕೃತಜ್ಞ ಭಾವನೆ ಇದೆ. ಪ್ರೇಕ್ಷಕರನ್ನು ರಂಜಿಸುವುದು, ಅಸಂಖ್ಯೆ ಜನರನ್ನು ಪ್ರತಿನಿಧಿಸುವ ಕತೆಗಳಿಗೆ ನಾನು ಪಾತ್ರವಾಗುವುದು ನನ್ನ ಪಾಲಿಗೆ ಅತ್ಯಂತ ಗೌರವದ ಕಾರ್ಯ. ನಿಮ್ಮಿಂದ ಸತತವಾಗಿ ಸಿಗುತ್ತಿರುವ ಈ ಅದ್ಭುತ ಪ್ರೀತಿ, ಪ್ರೋತ್ಸಾಹ ನನ್ನಲ್ಲಿ ಸ್ಪೂರ್ತಿ ತುಂಬುತ್ತಲೇ ಬರುತ್ತಿದೆ.
ನನ್ನ ಈ ಕಾರ್ಯಕ್ಕೆ ಸಿಕ್ಕಿರುವ ಅಭಿಮಾನಿಗಳು ನನ್ನ ಪಾಲಿಗೆ ಐಶ್ವರ್ಯ. ನೀವುಗಳು ನೀಡುತ್ತಿರುವ ಈ ಬೆಂಬಲವೇ ವೃತ್ತಿಯಲ್ಲಿನ ಪ್ರತಿ ಸವಾಲನ್ನು ಎದುರಿಸುವ ಹುಮ್ಮಸ್ಸು ನೀಡುತ್ತದೆ. ಇದು ಎಷ್ಟು ಮಹತ್ವವಾದುದು ಎಂಬುದನ್ನು ವಿವರಿಸಲು ಸಹ ಅಸಾಧ್ಯ. ನನ್ನ ಹೃದಯಾಂತರಾಳದಿಂದ ಧನ್ಯವಾದವನ್ನು ಮಾತ್ರ ಹೇಳಬಲ್ಲೆ. ಈ ಅದ್ಭುತವಾದ ಪಯಣದಲ್ಲಿ ಜೊತೆಯಾಗಿದ್ದಕ್ಕೆ ಧನ್ಯವಾದಗಳು ಎಂದು ನಟ ಕಿಚ್ಚ ಸುದೀಪ್ ಅವರು ಮನದ ಮಾತನ್ನ ವ್ಯಕ್ತಪಡಿಸಿದ್ದಾರೆ.
ಕನ್ನಡ ಸೇರಿದಂತೆ ಇತರ ಭಾಷೆಯಲ್ಲೂ ತಮ್ಮ ಸಾಮ್ರಾಜ್ಯ ವಿಸ್ತರಿಸಿರುವ ಕಿಚ್ಚ ಸುದೀಪ್ ಅವರು, ಯಾರೂ ಕೊಡದೇ ಇರೋ ಒಂದು ಬಿರುದನ್ನ ಅಭಿಮಾನಿಗಳು ಕೊಟ್ಟಿದ್ದಾರೆ. ಅದು ಅಭಿನಯ ಚಕ್ರವರ್ತಿ ಅನ್ನೋದೇ ಆಗಿದೆ. ಅದನ್ನ ಅಷ್ಟೆ ಪ್ರೀತಿಯಿಂದಲೇ ಸ್ವೀಕರಿಸಿದ ಸುದೀಪ್, ರಾಜ್ಯ ಪ್ರಶಸ್ತಿಯನ್ನ ಬೇಡ ಅಂತ ಹೇಳಿರೋದು ಗೊತ್ತೇ ಇದೆ. ಸದ್ಯ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ.












Click it and Unblock the Notifications