ಗೆಲ್ಲಲೇ ಬೇಕು ಒಳ್ಳೆತನ: ಅಬ್ಬಬ್ಬಾ.. ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸ್ಪರ್ಧಿ ಇವರೇ ನೋಡಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಶುರುವಾಗಿ 92ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ 10 ಮಂದಿ ಉಳಿದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರ ಕಿಚ್ಚ ಸುದೀಪ್ ಅವರಿಗೆ ಉತ್ತಮವಾಗಿ ಆಟವಾಡಿದ ಸ್ಪರ್ಧಿಗೆ ಚಪ್ಪಾಳೆ ಸಿಗಲಿದೆ.
ಒಟ್ಟು 17 ಸ್ಪರ್ಧಿಗಳು ಬಿಗ್‌ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲು ಕಿಚ್ಚನ ಕಡೆಯಿಂದ ಗಾಯಕ ಹನುಮಂತ ಅವರು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಕಳೆದ ವಾರ ಕಿಚ್ಚನ ಚಪ್ಪಾಳೆಯನ್ನು ಭವ್ಯಾ ಗೌಡ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿರುವ ಪ್ರತಿ ಸ್ಪರ್ಧಿಗಳು ಸಹ ಕಿಚ್ಚನ ಚಪ್ಪಾಳೆಗೆ ಕಾಯುತ್ತಿರುತ್ತಾರೆ. ಇನ್ನೂ ಈ ವಾರ ಯಾವ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು.

ಇನ್ನೂ, ಕಿಚ್ಚ ಸುದೀಪ್ ಅವರು ಸುಖಾ ಸುಮ್ಮನೆ ಚೆಪ್ಪಾಳೆ ತಟ್ಟುವುದಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು. ಈ ಹೊಸ ಅಧ್ಯಾಯದೊಂದಿಗೆ ಬಿಗ್‌ಬಾಸ್ ಮನೆಗೆ ಬಂದಿದ್ದ 17 ಸ್ಪರ್ಧಿಗಳಲ್ಲಿ ಮೊದಲ ವಾರದಿಂದ ಮೂರನೇ ವಾರದವರೆಗೂ ಕಿಚ್ಚ ಸುದೀಪ್ ಯಾರಿಗೂ 'ಕಿಚ್ಚನ ಚಪ್ಪಾಳೆ' ಸಿಕ್ಕಿರಲಿಲ್ಲ. ಇದುವರೆಗೂ ಭವ್ಯ, ಹನುಮಂತ ಹಾಗೂ ಗೋಲ್ಡ್ ಸುರೇಶ್ ಅವರಿಗೆ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಇದೀಗ ಇಡೀ ವಾರದ ಟಾಸ್ಕ್ ನೋಡಿ ಈ ವಾರದ ಕಿಚ್ಚನ ಚಪ್ಪಾಳೆಯನ್ನು ಕಿಚ್ಚ ಸುದೀಪ್ ಅವರು ಧನರಾಜ್ ಆಚಾರ್ಯಗೆ ನೀಡಿದ್ದಾರೆ. ಕಿಚ್ಚ ಚಪ್ಪಾಳೆ ತಟ್ಟುತ್ತಿದ್ದಂತೆ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕಿಚ್ಚನ ಚಪ್ಪಾಳೆಯನ್ನು ಧನರಾಜ್ ಅವರು ತಮ್ಮ ಅಜ್ಜಿಗೆ ಅರ್ಪಿಸಿದ್ದಾರೆ. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್ ಅವರ ಮನ ಗೆದ್ದಿದ್ದಾರೆ.
ಗೊತ್ತಾಗದೆ ಚಿಕನ್ ತಿಂದ ಧನರಾಜ್
ಬಿಗ್‌ಬಾಸ್ ಕನ್ನಡ 11ರಲ್ಲಿ ರೆಸಾರ್ಟ್ ಟಾಸ್ಕ್ ವೇಳೆ ಧನ್‌ರಾಜ್ ಆಕಸ್ಮಿಕವಾಗಿ ಮಾಂಸಾಹಾರ ಸೇವಿಸಿದ ಘಟನೆ ನಡೆದಿದೆ. ಎದುರಾಳಿ ತಂಡಕ್ಕೆ ಅಡುಗೆ ಮಾಡುವಾಗ ಆತುರದಲ್ಲಿ ವೆಜ್ ಮತ್ತು ನಾನ್‌ವೆಜ್ ಸ್ಯಾಂಡ್‌ವಿಚ್‌ಗಳನ್ನು ಗುರುತಿಸದೆ ಚಿಕನ್ ತಿಂದಿದ್ದಾರೆ. ಬಳಿಕ ತಾನು ತಿಂದಿರುವುದು ಚಿಕನ್ ಎಂದು ತಿಳಿದು ತಪ್ಪಿನ ಅರಿವಾಗಿ ದೇವರ ಮುಂದೆ ಕ್ಷಮೆ ಯಾಚಿಸಿದ್ದಾರೆ. ವೆಜಿಟೇರಿಯನ್ ಧನ್‌ರಾಜ್ ಆಚಾರ್ ಎದುರಾಳಿ ತಂಡಕ್ಕೆ ಅಡುಗೆ ಮಾಡಿ ಕೊಡುತ್ತಿದ್ದಾಗ ತಾವು ಕೂಡ ಕದ್ದು ತಿಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಬಳಿಕ ಡೌಟ್ ನಿಂದ ಧನರಾಜ್ ಅವರು ಅಡುಗೆ ಮಾಡುತ್ತಿದ್ದ ಭವ್ಯಾ ಅವರಿಗೆ ಕೇಳಿದ್ದಾರೆ. ಅದು ಚಿಕನ್ ಎಂದು ಪ್ರಶ್ನಿಸಿದ್ದು, ಈ ವೇಳೆ ನಗುತ್ತಾ ಭವ್ಯ ಗೌಡ ಅವರು ಚಿಕನ್ ಎಂದು ಹೇಳಿದರು. ತಕ್ಷಣ ಧನ್‌ರಾಜ್ ಬಾಯಿ ತೊಳೆದುಕೊಂಡು ಹೋಗಿ ದೇವಿಯ ಮುಂದೆ ಹೋಗಿ ಕೈಮುಗಿದು ಕ್ಷಮೆ ಕೇಳಿದ್ದಾರೆ.












Click it and Unblock the Notifications