ಮತದಾರರ ಗುರುತಿನ ಚೀಟಿಯಿಂದ ಹೆಸರು ಡಿಲೀಟ್ ಹೇಗೆ?
ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ರಾಜ್ಯ ಚುನಾವಣಾ ಆಯೋಗ ಭರದಿಂದ ಸಿದ್ಧತೆ ನಡೆಸುತ್ತಿದೆ. ಮತದಾರರ ಗುರುತಿನ ಚೀಟಿ ಪಡೆಯುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಆರಂಭವಾಗುತ್ತಿವೆ.
ಪ್ರತಿ ವರ್ಷದಂತೆ ಈ ವರ್ಷ ಕೂಡಾ ನಕಲಿ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕಬಲ್ಲ ಹೆಸರಿನ ಪಟ್ಟಿ ತಯಾರಿಕೆಯಲ್ಲಿ ಎನ್ಜಿಒಗಳು ನೆರವು ನೀಡುತ್ತಿವೆ. ನಿಮ್ಮ ಮನೆಯವರು, ಸಂಬಂಧಿಕರು ಅಥವಾ ನಿಮ್ಮದೇ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.
ಮತದಾನ ಮಾಡಲು ಅರ್ಹರಾದವರು ರಾಜ್ಯ ಚುನಾವಣಾ ಕಚೇರಿಗೆ ತೆರಳಿ ಫಾರ್ಮ್ 6 ಭರ್ತಿ ಮಾಡಿ ಸುಲಭವಾಗಿ ಮತದಾರರ ಗುರುತಿನ ಚೀಟಿ ಪಡೆಯಬಹುದು. ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿದ್ದರೆ, ಆನ್ ಲೈನ್ ಮೂಲಕ ವಿವರಗಳು ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು. ಆನ್ ಲೈನ್ ನಲ್ಲಿ ತಪ್ಪು ಸರಿಪಡಿಸುವುದು ಹೇಗೆ? ಎಂಬ ಮಾಹಿತಿ ಈ ಹಿಂದಿನ ಲೇಖನದಲ್ಲಿ ತಿಳಿಸಲಾಗಿತ್ತು. ಇದೇ ವಿಧಾನದಲ್ಲಿ ಹೆಸರನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆಸಬಹುದು.

ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ತೆಗೆದು ಹಾಕುವುದು ಹೇಗೆ?
* ಚುನಾವಣಾ ಆಯೋಗದ ವೆಬ್ ಸೈಟ್ (National Voters Services Portal) ಗೆ ಭೇಟಿ ಕೊಡಿ
* ವೆಬ್ ಸೈಟ್ ನ ಮುಖಪುಟದಲ್ಲಿ Correction of entries in electoral roll ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
* ಫಾರ್ಮ್ 7 ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
* ನಿಮ್ಮ ರಾಜ್ಯ ಹಾಗೂ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ
ಸರಿಯಾದ ಆಯ್ಕೆ ಮಾಡಿಕೊಳ್ಳಿ:
* ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿ ನೀಡಿರುವ ವ್ಯಕ್ತಿಯ ಹೆಸರನ್ನು ಸೇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇನೆ.
* ನನ್ನ ಹೆಸರಿನಲ್ಲಿ ಅಥವಾ ಕೆಳಗೆ ನೀಡಿರುವ ದಾಖಲೆಯಲ್ಲಿ ನೀಡಿರುವ ವ್ಯಕ್ತಿಯ ಮಾಹಿತಿಗಳನ್ನು ಡಿಲೀಟ್ ಮಾಡಲು ಬಯಸುತ್ತೇನೆ.
* ನನ್ನ ಹೆಸರಿನಲ್ಲಿ ಇರುವ ಇಲ್ಲಿನ ಮಾಹಿತಿಗಳನ್ನು ಡಿಲೀಟ್ ಮಾಡಲು ಬಯಸುತ್ತೇನೆ
***
ನಿಮ್ಮ ಸ್ವ ವಿವರ:
* ನಿಮ್ಮ ಹೆಸರು(ಮತದಾರರ ಪಟ್ಟಿಯಲ್ಲಿರುವಂತೆ)
* ಪಾರ್ಟ್ ನಂಬರ್ ಹಾಗೂ ಸೀರಿಯಲ್ ನಂಬರ್ ನಮೂದಿಸಿ
* ನಿಮ್ಮ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ
***
ನೀವು ಬದಲಾವಣೆ ಮಾಡಬಯಸುವ ವ್ಯಕ್ತಿಯ ಹೆಸರು ಹಾಗೂ ವಿವರ
* ಏತಕ್ಕಾಗಿ ಈ ಬದಲಾವಣೆ ಬಯಸಿದ್ದೀರಿ?
ವ್ಯಕ್ತಿಯು ಮೃತಪಟ್ಟಿದ್ದರೆ, ವಿಳಾಸದಲ್ಲಿ ಇಲ್ಲದಿದ್ದರೆ, ನಾಪತ್ತೆಯಾಗಿದ್ದರೆ, ಅನರ್ಹರಾಗಿದ್ದರೆ, ನಕಲಿ ನಮೂದು ಆಗಿದೆಯೆ ಎಂಬುದನ್ನು ಸ್ಕ್ರೌನ್ ಡೌನ್ ನಲ್ಲಿ ಆಯ್ಕೆ ಮಾಡಿಕೊಳ್ಳಿ
* ಸ್ಥಳ ಹಾಗೂ ದಿನಾಂಕ ನಮೂದಿಸಿ submit ಮಾಡಿ
* submit ಮಾಡಿದ ಬಳಿಕ ನಿಮಗೆ ಕನ್ಫರ್ಮ್ ಆಗಿರುವ ಸೂಚನೆ ಸಿಗಲಿದೆ.












Click it and Unblock the Notifications