ಬಿಸಿಲನಾಡಿನಲ್ಲಿ ನಡೆಯಲಿಲ್ಲ ಮಳೆ ಹುಡುಗಿ ಜಾದೂ

Raichur
ರಾಯಚೂರು, ಮೇ 14 : ಬಿಸಿಲನಾಡು ರಾಯಚೂರಿನಲ್ಲಿ ಮುಂಗಾರು ಮಳೆ ಹುಡುಗಿ ಜಾದೂ ನಡೆದಿಲ್ಲ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಪೂಜಾಗಾಂಧಿ ರೇವಣಿ ಕಳೆದುಕೊಳ್ಳುವ ಮೂಲಕ ಸೋಲು ಅನುಭವಿಸಿದ್ದಾರೆ.

ಜಿಲ್ಲೆಯಲ್ಲಿ ಏಳು ವಿಧಾಸಭಾ ಕ್ಷೇತ್ರಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಎರಡು ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು ಕೇವಲ ಒಂದು ಸ್ಥಾನಕ್ಕೆ ಪಕ್ಷ ತೃಪಿ ಪಟ್ಟುಕೊಂಡಿತ್ತು.

ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರಿಗೆ ವೇಂಕಟೇಶ್ ನಾಯಕ್ ಸೋಲುಣಿಸಿದ್ದಾರೆ. ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾನಪ್ಪ ವಜ್ಜಲ್ ಲಿಂಗಸುಗೂರು ಕ್ಷೇತ್ರದಿಂದ ಜಯಗಳಿಸಿ ಪಕ್ಷದ ನಾಯಕರ ನಂಬಿಕೆ ಉಳಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಫ್ಯಾನ್ ಗಾಳಿ ಬೀಸುವಂತೆ ಮಾಡಬೇಕು ಎಂಬ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಆಸೆ ಫಲಿಸಲಿಲ್ಲ. ರಾಯಚೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪೂಜಾಗಾಂಧಿ ಕೇವಲ 1815 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಸಿಂಧನೂರು ಕ್ಷೇತ್ರದಲ್ಲೂ ಕೆ.ಕರಿಯಪ್ಪ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.


ರಾಯಚೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ರಾಯಚೂರು ಗ್ರಾಮೀಣ
ತಿಪ್ಪರಾಜು
ಬಿಜೆಪಿ
50,497
ರಾಜಾ ರಾಯಪ್ಪ ನಾಯಕ್
ಕಾಂಗ್ರೆಸ್
47,227
ರಾಯಚೂರು
ಡಾ.ಶಿವರಾಜ್ ಪಾಟೀಲ್
ಜೆಡಿಎಸ್
45,263
ಸೈಯದ್ ಯಾಸೀನ್
ಕಾಂಗ್ರೆಸ್
37,392
ಮಾನ್ವಿ
ಹಂಪಯ್ಯ ನಾಯಕ್
ಕಾಂಗ್ರೆಸ್
50,619
ರಾಜಾವೆಂಕಟಪ್ಪ ನಾಯಕ್
ಜೆಡಿಎಸ್
43,632
ದೇವದುರ್ಗ
ಎ.ವೆಂಕಟೇಶ್ ನಾಯಕ್
ಕಾಂಗ್ರೆಸ್
62,070
ಶಿವನಗೌಡ ನಾಯಕ್
ಬಿಜೆಪಿ
58,370
ಲಿಂಗಸುಗೂರು
ಮಾನಪ್ಪ ವಜ್ಜಲ್
ಜೆಡಿಎಸ್
31,737
ಡಿ.ಎಸ್.ಹುಲಿಗಿರಿ
ಕಾಂಗ್ರೆಸ್
30,451
ಮಸ್ಕಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ 45,552 ಮಹದೇವಪ್ಪ ಗೌಡ ಕೆಜೆಪಿ 26,405
ಸಿಂಧನೂರು ಹಂಪನಗೌಡ ಬಾದರ್ಲಿ ಕಾಂಗ್ರೆಸ್ 49,213 ಕೆ.ಕರಿಯಪ್ಪ ಕೆಜೆಪಿ 36,197
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+