ಬ್ಯಾಟರಾಯನ ಪುರ: ಮತ್ತೆ ಕಾಂಗ್ರೆಸ್ಸಿಗೇ ಮಣೆ?

* ಸಾಧನೆಗಳು: ಮಾಜಿ ಸಚಿವ ಬೈರೇಗೌಡರ ಪುತ್ರ ಎಂಬ ಸದೃಢ ಟ್ಯಾಗ್. ಟೆಕ್-ಸ್ಯಾವಿ ಎಂಬ ಹೆಗ್ಗಳಿಕೆ. 2003ರಲ್ಲಿ ಅಪ್ಪನ ಸ್ಥಾನಕ್ಕೆ ಸ್ಪರ್ಧಿಸಿ ಜೆಡಿಎಸ್ ಪಕ್ಷದಿಂದ ವೇಮಗಲ್ ನಿಂದ ಗೆದ್ದು ಬಂದರು. ನಂತರ ಕಾಂಗ್ರೆಸ್ಸಿನಿಂದ 2004ರಲ್ಲಿ ವೇಮಗಲ್ ನಿಂದ ಮತ್ತು 2008ರಲ್ಲಿ ಬ್ಯಾಟರಾಯನ ಪುರದಿಂದ ಶಾಸಕರಾಗಿ ಆಯ್ಕೆಯಾದರು. ಘೋಷಿತ ಆಸ್ತಿ ಐದೇ ಕೋಟಿ ರೂ. ಮೂಲಸೌಕರ್ಯ, ಟ್ರಾಫಿಕ್, ಪೊಲೀಸ್ ವ್ಯವಸ್ಥೆ ಸುಧಾರಣೆಯತ್ತ ಗಮನಹರಿಸಿಲ್ಲ.
* ಸಮಸ್ಯೆಗಳು: ಕ್ಷೇತ್ರದ ಜನರಿಗೆ ಸಿಗುವುದೇ ಇಲ್ಲ ಎಂಬ ಆರೋಪ. ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅವಕಾಶವಿದ್ದರೂ ಪ್ರತಿಪಕ್ಷದ ಶಾಸಕರಾಗಿರುವುದರಿಂದ ಯಾವುದಕ್ಕೂ ಅವಕಾಶ ಇಲ್ಲವಾಗಿದೆ. ಒಟ್ಟಾರೆ ಸಾಧನೆ ಅಷ್ಟಕ್ಕಷ್ಟೇ.
* ವಾರ್ಡ್: ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ದೊಡ್ಡ ಬೊಮ್ಮಸಂದ್ರ, ಕುವೆಂಪು ನಗರ
* ಮತದಾರರ ಸಂಖ್ಯೆ: 2,66,428. ಕಳೆದ ಬಾರಿ ವೋಟ್ ಮಾಡಿದವರು ಶೇ. 53 ರಷ್ಟು ಮಂದಿ. ಅದರಲ್ಲಿ ಕೃಷ್ಣ ಬೈರೇಗೌಡ ಮತ ಗಳಿಕೆ ಪ್ರಮಾಣ ಶೇ. 43.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications