ಕರ್ನಾಟಕ ಕುರುಕ್ಷೇತ್ರದಲ್ಲಿ ಲಾಲೂ ಪಕ್ಷ ಸ್ಪರ್ಧೆ

ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ಸುಮಾರು 15 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ(ಏ.15) ಪ್ರಕಟಿಸಿದೆ. ಪಟ್ಟಿಯಲ್ಲಿ ಕಂಡು ಬಂದ ಹೆಸರುಗಳು ಇಂತಿದೆ:
* ಬೆಂಗಳೂರಿನ ಕೆ.ಆರ್ ಪುರಂ: ಕೃಪಾಕರನ್
* ಕೋಲಾರ ಜಿಲ್ಲೆ ಮಾಲೂರು: ವಿಜಯ ಕುಮಾರನ್
* ಬಂಗಾರಪೇಟೆ: ರಮೇಶ್
* ರಾಯಚೂರು ಜಿಲ್ಲೆ ಕ್ಷೇತ್ರ ಮಾನ್ವಿ: ವೆಂಕಟೇಶ್
* ಹೊಸಕೋಟೆ: ಲೋಕೇಶ್
ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಜಿ. ಯಾಕೂಬ್ ಬ್ಯಾರಿ ಹೇಳಿದರು.
ವೆಲ್ ಫೇರ್ ಪಾರ್ಟಿ ಪಟ್ಟಿ ಬಿಡುಗಡೆ:
ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ತನ್ನ 16 ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಪಕ್ಷದ ಉಪಾಧ್ಯಕ್ಷೆಯೂ ಆಗಿರುವ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರು ಕಣಕ್ಕಿಳಿಯುತ್ತಿದ್ದಾರೆ. ಸೋಮವಾರ(ಏ.15) ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಅಕ್ಬರ್ ಅಲಿ ಪ್ರಕಟಿಸಿದರು. ಪಟ್ಟಿ ಇಂತಿದೆ:
* ಮಲ್ಲೇಶ್ವರ: ಬಿ.ಟಿ ಲಲಿತಾ ನಾಯಕ್
* ಹೆಬ್ಬಾಳ: ಮಹಮ್ಮದ್ ಇಬ್ರಾಹಿಂ
* ಸರ್ವಜ್ಞ ನಗರ: ಮುಕ್ತಿ ಶಕೀರ್ ಅಲಿ
* ಚಿಕ್ಕನಾಯಕನಹಳ್ಳಿ: ಹನುಮಂತರಾಯ
* ಗುಲ್ಬರ್ಗ ಉತ್ತರ: ಅಬ್ದುಲ್ಲ ಹಮೀದ್ ಫರಾನ್
* ಬಾದಾಮಿ: ತಾಜೂದ್ದೀನ್ ಸಾಬ್
* ಬಾಗಲಕೋಟೆ: ನೀಲನಾಯಕ್
* ನರಸಿಂಹರಾಜ: ಮೊಹಮ್ಮದ್ ತಹೀರ್ ಅಲಿ
* ಬಿಜಾಪುರ ನಗರ: ಅಬಿ ವಿಕಾಸ್ ಪೀರ್ಜಡೆ
* ದೇವರಹಿಪ್ಪರಗಿ: ಸಯ್ಯದ್ ಇರ್ಫಾನ್ ವುಲ್ಲಾ ಮುನ್ಷಿ
* ಬಸವನ ಬಾಗೇವಾಡಿ: ನಜೀರ್ ಮಹಮ್ಮದ್ ಹನೀಫ್ ದುಂಡಸಿ
* ಕಡೂರು : ಕುಮಾರ್ ನಾಯಕ್
* ಬಸವಕಲ್ಯಾಣ: ಸರ್ದಾರ್ ಖಾನ್
* ತುಮಕೂರು : ತಾಜೂದ್ದೀನ್ ಷರೀಫ್
ಬಿಜೆಪಿ, ಕಾಂಗ್ರೆಸ್, ಬಿಎಸ್ ಆರ್ ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಣ್ಣಪುಟ್ಟ ಸಮಾನ ಮನಸ್ಕ ಪಕ್ಷದೊಂದಿಗೆ ಕೈ ಜೋಡಿಸುತ್ತೇವೆ ಎಂದು ಅಕ್ಬರ್ ಅಲಿ ಹೇಳಿದರು.












Click it and Unblock the Notifications