ಪ್ರಮುಖ ಅಂಶಗಳು: ಕೊವಿಡ್-19 ನಿಯಂತ್ರಣ ಸಭೆಯಲ್ಲಿ ಚರ್ಚಿಸಿದ ವಿಷಯ
ಬೆಂಗಳೂರು, ಜನವರಿ 7: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವುದು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
Koo App🔹 ಹಾಸಿಕೆ ನಿರ್ವಹಣೆ ಹಾಗೂ ಹಂಚಿಕೆ. 🔹ಏಕರೂಪ ಚಿಕಿತ್ಸೆ, ಡಿಸ್ಚಾರ್ಜ್ ನೀತಿ ಹಾಗೂ ಕ್ವಾರಂಟೈನ್ ಮಾರ್ಗಸೂಚಿ. 🔹 ಮುನ್ನೆಚ್ಚರಿಕೆಗಳು ಹಾಗೂ ಲಸಿಕೆ ಬಗ್ಗೆ ಅರಿವು ಮೂಡಿಸುವ ಅಭಿಯಾನ. ಆರೋಗ್ಯ & ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. @BBMPCOMM 3/3 - Dr. Sudhakar K (@drsudhakark.official) 7 Jan 2022
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶುಕ್ರವಾರ ನಡೆದ ಕೊವಿಡ್-19 ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು, ಕೊರೊನಾವೈರಸ್ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಕೂ ಮೂಲಕ ಮಾಹಿತಿ ನೀಡಿದ್ದಾರೆ.

ಕೊವಿಡ್-19 ನಿಯಂತ್ರಣ ಸಭೆಯಲ್ಲಿನ ಪ್ರಮುಖ ವಿಷಯಗಳು:
* ಅಂತರರಾಜ್ಯ ಪ್ರಯಾಣಿಕರ ತಪಾಸಣೆ
* ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಲಸಿಕೆ ಪ್ರಮಾಣಪತ್ರ ಕಡ್ಡಾಯ ಮಾಡುವುದು.
* ಕೊವಿಡ್ ಕೇರ್ ಸೆಂಟರ್ ಗಳ ಸ್ಥಾಪನೆ.
* ಆಸ್ಪತ್ರೆ ದಾಖಲಾತಿ ಅಗತ್ಯತೆ ತಿಳಿಯಲು ಭೌತಿಕ ಅಥವಾ ಟೆಲಿ ಟ್ರಯಾಜಿಂಗ್.
* ಕೊವಿಡ್ ಕೇರ್ ಸೆಂಟರ್ ಹಾಗೂ ಟ್ರಯಾಜಿಂಗ್ ಗೆ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸೇವೆ ಬಳಕೆ.
* ಕೊವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಹೋಟೆಲ್ ಗಳ ಜೊತೆ ಒಪ್ಪಂದ.
* ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮೀಸಲಾತಿ.
* ಹಾಸಿಕೆ ನಿರ್ವಹಣೆ ಹಾಗೂ ಹಂಚಿಕೆ.
* ಏಕರೂಪ ಚಿಕಿತ್ಸೆ, ಡಿಸ್ಚಾರ್ಜ್ ನೀತಿ ಹಾಗೂ ಕ್ವಾರಂಟೈನ್ ಮಾರ್ಗಸೂಚಿ.
* ಮುನ್ನೆಚ್ಚರಿಕೆಗಳು ಹಾಗೂ ಲಸಿಕೆ ಬಗ್ಗೆ ಅರಿವು ಮೂಡಿಸುವ ಅಭಿಯಾನ.












Click it and Unblock the Notifications