ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?
ಆಧುನಿಕ ಯುಗದಲ್ಲಿ ಜನರ ನಡುವಣ ಸಂಪರ್ಕದ ಸುಲಭ ಕೊಂಡಿಯಾಗಿರುವ ವಾಟ್ಸಾಪ್, ಸದುಪಯೋಗಕ್ಕಿಂತಲೂ ಅದರ ದುರ್ಬಳಕೆಯೇ ಹೆಚ್ಚುತ್ತಿದೆ.
ಹರಟಲು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಆರೋಗ್ಯಕರ ಚರ್ಚೆ ನಡೆಸಲು, ಮಾಹಿತಿ ವಿನಿಮಯ ಮಾಡಲು, ಸಂಬಂಧಗಳನ್ನು ಬೆಸೆಯಲು ವಾಟ್ಸಾಪ್ ನೆರವಾದದ್ದಿದೆ. ಆದರೆ, ಅದರಿಂದ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಹಾನಿಯೇ ಹೆಚ್ಚು.
ವಾಟ್ಸಾಪ್‌ನಿಂದ ಸುದೀರ್ಘಕಾಲದ ಬಾಂಧವ್ಯಗಳು ಹದಗೆಟ್ಟಿದ್ದಿದೆ, ಕೌಟುಂಬಿಕ ಕಲಹಗಳು ನಡೆದ ಉದಾಹರಣೆಗಳಿವೆ. ವಾಟ್ಸಾಪ್ ಸಂದೇಶಗಳಿಂದ ಅನುಮಾನಗೊಂಡು ಎಷ್ಟೋ ದಂಪತಿಗಳು ದೂರವಾಗಿದ್ದಾರೆ.
ಮಾತ್ರವಲ್ಲ, ಒಂದೇ ಮನೆಯಲ್ಲಿ ಅಕ್ಕಪಕ್ಕ ಕುಳಿತವರೂ ವಾಟ್ಸಾಪ್‌ನಲ್ಲಿಯೇ ಮಾತನಾಡುವ ಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ಪುಸ್ತಕಗಳಿಗಿಂತ ವಾಟ್ಸಾಪ್‌ನಲ್ಲಿಯೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.

ಸಣ್ಣಪುಟ್ಟ ಕಲಹಗಳಾಗಿದ್ದರೆ ಅದರ ಹೊಣೆಗಾರಿಕೆಯನ್ನು ವಾಟ್ಸಾಪ್ ಮೇಲೆ ಹೊರಿಸದೆ ಇರಬಹುದಾಗಿತ್ತು. ಆದರೆ, ಈ ಸಾಮಾಜಿಕ ಮಾಧ್ಯಮದಿಂದಾಗುವ ಅನಾಹುತಗಳು ಒಂದೆರಡಲ್ಲ. ಸಾಮಾಜಿಕ ಕಲಹಗಳು, ಕೋಮು ಗಲಭೆ, ಆತಂಕ ಸೃಷ್ಟಿಸುವ ಅನೇಕ ಸುಳ್ಳು ಸಂದೇಶಗಳು ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ.
ಎಷ್ಟೋ ಅವಮಾನ, ಆತ್ಮಹತ್ಯೆ, ಕೊಲೆಗಳಂತಹ ಘಟನೆಗಳಿಗೆ ವಾಟ್ಸಾಪ್ ಸಂದೇಶಗಳು ಕಾರಣವಾಗುತ್ತಿವೆ. ತಮ್ಮ ವೈಯಕ್ತಿಕ ಅಥವಾ ಗ್ರೂಪ್‌ಗೆ ಬರುವ ಸಂದೇಶಗಳನ್ನು ಓದುವ ಅನೇಕರು ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಗೋಜಿಗೆ ಹೋಗದೆ ಇತರರಿಗೂ ಕಳುಹಿಸುತ್ತಾರೆ.
ಈ ಸಂದೇಶಗಳು ವಾಟ್ಸಾಪ್‌ಗೆ ಮೀಸಲಾಗಿರದೆ ಬಾಯಿಯಿಂದ ಬಾಯಿಗೆ ಹರಡುವ ಮೂಲಕ ಜನರು ಕಾನೂನನ್ನು ಲೆಕ್ಕಿಸದೆ ಅಪರಾಧ ಕೃತ್ಯಗಳಿಗೆ ಮುಂದಾಗುವಂತೆ ಪ್ರಚೋದನೆ ನೀಡುತ್ತಿವೆ.
ಮುಂಬೈನಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರೆಂದು ಐವರನ್ನು ಹೊಡೆದು ಸಾಯಿಸಿದ ಅಮಾನುಷ ಘಟನೆ ಇನ್ನೂ ಹಸಿಯಾಗಿದೆ.
ವಾಟ್ಸಾಪ್ ಒಂದು ಗೀಳಾಗಿಯೂ ಬದಲಾಗಿದೆ. ಹೆಚ್ಚಿನ ಸಮಯವನ್ನು ವಾಟ್ಸಾಪ್‌ನಲ್ಲಿಯೇ ಕಳೆಯುವುದರಿಂದ ಅದನ್ನು ಬಿಟ್ಟಿರಲಾರದ ಮಾನಸಿಕ ಸಮಸ್ಯೆಯೂ ಕಾಡುತ್ತಿದೆ. ಹಿತಮಿತವಾಗಿ ಮತ್ತು ಉಪಯೋಗಕಾರಿಯಾಗಬೇಕಿದ್ದ ವಾಟ್ಸಾಪ್ ಬಳಕೆ, ಈಗ ಅತಿಯಾಗಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಸುಳ್ಳು ಸುದ್ದಿಯನ್ನು ಹರಡುವ ಸಾಧನವಾಗಿರುವ ವಾಟ್ಸಾಪ್ ಸಂದೇಶಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಕೆಲವೆಡೆ ವ್ಯಕ್ತವಾಗುತ್ತಿದೆ. ಅದನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಕೂಗೂ ಕೇಳಿಸುತ್ತಿದೆ.
ತಂತ್ರಜ್ಞಾನ ಮುಂದುವರಿದಿರುವ ಈ ಕಾಲಘಟ್ಟದಲ್ಲಿ ಅಂತರ್ಜಾಲ ಆಧಾರಿತ ವಾಟ್ಸಾಪ್‌ನಂತಹ ಸಾಮಾಜಿಕ ಸಂಪರ್ಕ ಆಪ್‌ಗಳು ಸಾಕಷ್ಟಿವೆ. ವಾಟ್ಸಾಪ್ ನಿಷೇಧವಾದರೆ ಉಳಿದ ಆಪ್‌ಗಳು ಹೆಚ್ಚು ಸಕ್ರಿಯವಾಗುತ್ತವೆ. ಅವುಗಳೆಲ್ಲದರ ಮೇಲೆಯೂ ನಿಷೇಧ ಹೇರುವುದು ಕೂಡ ಕಷ್ಟ.
ಭಾರತದಲ್ಲಿ ತಿಂಗಳಿಗೆ 200 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ಅವರೆಲ್ಲರ ಸಂದೇಶಗಳ ಮೇಲೆ ನಿಯಂತ್ರಣ ಹೇರುವುದು ಸುಲಭವಲ್ಲ.
ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ವಾಟ್ಸಾಪ್‌ಅನ್ನು ನಿಷೇಧಿಸಬೇಕೇ, ಅದರ ಸಂದೇಶಗಳ ಮೇಲೆ ನಿಯಂತ್ರಣ ಹೇರುವ ಕ್ರಮ ತೆಗೆದುಕೊಂಡರೆ ಸಾಕೇ ಅಥವಾ ಸುಳ್ಳು ಸುದ್ದಿ ಹರಡುವಿಕೆ ತಡೆಗೆ ಏನು ಮಾಡಬಹುದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications