ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಸಾಯನ: ಇಂಗ್ಲಿಷ್ ಅಂದಾಕ್ಷಣ ಶಾಪಗ್ರಸ್ತ ಕರ್ಣನ ನೆನಪು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಭಾಷೆ ಅಂತ ಇಲ್ಲಿ ಹೇಳಿದ್ದರೂ ಅದನ್ನು 'ಇಂಗ್ಲಿಷ್' ಎಂದು ಓದಿಕೊಂಡರೆ ಹೆಚ್ಚು ಸೂಕ್ತ ಅಂತ ಅನ್ನಬಹುದು. ತನಗೆ ಆಂಗ್ಲ ಮಾತನಾಡಲಿಕ್ಕೆ ಬರುವುದಿಲ್ಲ, ಸರಿಯಾಗಿ ಓದಲು ಬರುವುದಿಲ್ಲ, ಒಂದು ಸಾಲು ಬರೆದರೂ ನಲವತ್ತು ಬಾರಿ ಓದಿ ಸರಿಯಾಗಿದೆಯೇ ಎಂದು ನೋಡಿದ ಮೇಲೂ ಏನೋ ಅಳುಕು ಎಂಬುದೆಲ್ಲಾ ಸಾಮಾನ್ಯ ಸಮಸ್ಯೆ.

ಒಂದು ವಿಷಯ ನೆನಪಿನಲ್ಲಿ ಇಡಬೇಕು ಎಂದರೆ ಈ ಸಮಸ್ಯೆ ಇಂದು- ನೆನ್ನೆಯದಲ್ಲ. ಆಂಗ್ಲ ಅರಿವಿಲ್ಲದ ಹೆಂಡತಿ, ಆಂಗ್ಲ ಅರಿವಿಲ್ಲದ ಗ್ರಾಮೀಣ ಹುಡುಗ ಎಂಬೆಲ್ಲಾ ಸನ್ನಿವೇಶಗಳನ್ನು ಬಹಳ ಹಿಂದೆಯೇ ಕೇಳಿದ್ದೇವೆ, ಚಲನಚಿತ್ರಗಳಲ್ಲಿ ನೋಡಿದ್ದೇವೆ, ಧಾರಾವಾಹಿಗಳಲ್ಲೂ ನೋಡಿರುತ್ತೇವೆ, ನೋಡುತ್ತಲೂ ಇರುತ್ತೇವೆ.

ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!

ಆಂಗ್ಲ ಗೊತ್ತಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂಡಬೇಕೆ? ಬೇಡ ! ಹಲವಾರು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಗಳು ಕ್ಲಾಸ್ ರೂಮ್ ನಲ್ಲಿ, ಪುಸ್ತಕಗಳಲ್ಲಿ, ಈ ನಡುವೆ Appಗಳಲ್ಲೂ ಲಭ್ಯ. ಯಾವುದೇ ರೀತಿ ಕಲಿತರೂ, ಎಷ್ಟೋ ಸಾರಿ ಒತ್ತಡಕ್ಕೆ ಸಿಕ್ಕಾಗ ಮನಸ್ಸು, ಆ ಸಮಯಕ್ಕೆ ಸರಿಯಾಗಿ ಕಲಿತಿದ್ದೆಲ್ಲಾ ಮರೆತು ಏನೇನೋ ಮಾತನಾಡಬಹುದು ಅಥವಾ ಆಡಬೇಕು ಎಂದುಕೊಂಡಿದ್ದೆಲ್ಲಾ ಗಂಟಲಲ್ಲೇ ಹೂತುಹೋಗಬಹುದು.

Why should we inferior about language skill?

ನಾವೆಲ್ಲಾ ಒಂದಲ್ಲಾ ಒಂದು ರೀತಿ ಪರಶುರಾಮರಿಂದ ಶಾಪಕ್ಕೊಳಗಾದ ಕರ್ಣನ ವಂಶಸ್ಥರೇ ಅನ್ನಿಸುತ್ತದೆ. ಇಂಗ್ಲಿಷ್ ಮಾತನಾಡಲು ಗೊತ್ತಿಲ್ಲ ಎಂದಾದರೆ, ನಿಮ್ಮ ನಿತ್ಯ ಜೀವನದಲ್ಲಿ ಅದರ ಅವಶ್ಯಕತೆ ಇದೆ ಎಂದಾಗ ಅದನ್ನು ಕಲಿಯಬೇಕಾದ್ದು ಆದ್ಯ ಕರ್ತವ್ಯ. ಕಲಿಯಬೇಕು ಎಂದ ಮೇಲೆ ಕೇವಲ ಪುಸ್ತಕದ ಬದನೇಕಾಯಿ ಆಗದೆ ಕಲಿತಿದ್ದನ್ನು ಹಿಂಜರಿಯದೆ ದಿನನಿತ್ಯದಲ್ಲಿ ವ್ಯಾವಹಾರಿಕವಾಗಿ ಅಭ್ಯಾಸವನ್ನೂ ಮಾಡಬೇಕು.

ಹೇಗಿದ್ರೂ ಜನ ಅಂತಾರೆ, ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗಿ. ನಿತ್ಯ ಜೀವನದಲ್ಲಿ ಹೊಟ್ಟೆಪಾಡಿನ ಕೆಲಸಕ್ಕಾಗಿ ಭಾಷೆ ಬೇಕು ಎಂದಾಗ ಕಲಿಯೋದ್ರಲ್ಲಿ ತಪ್ಪೇನಿಲ್ಲ, ಏನಂತೀರಾ?

ಭಾಷೆ ಬರಲಿಲ್ಲ ಎಂದ ಮೇಲೆ ಆಭಾಸಗಳು ಆಗೋದು ಗೊತ್ತಿರುವ ಮಾತೇ ಅಲ್ಲವೇ? ಒಂದೆರಡು ಸ್ಯಾಂಪಲ್ ನೋಡೋಣ ಬನ್ನಿ. ನನ್ನ ಭಾರತೀಯ ಸಹೋದ್ಯೋಗಿಯೊಬ್ಬ ತನ್ನ ಲೀಡ್ (ಅಮೆರಿಕನ್) ಅನ್ನು ಯಾವುದೋ ವಿಷಯಕ್ಕೆ ಸಹಾಯ ಕೇಳಿದ್ದಾನೆ. ಆತನಿಗೆ ಆ ವಿಷಯ ಅರಿವಿಲ್ಲದೆ ಇದ್ದುದರಿಂದ "I would ask Mark" ಅಂದಿದ್ದಾನೆ.

ಅದನ್ನು ಕೇಳಿ ದೇಸಿ ಬಂಧು ಸುಮ್ಮನಾಗಿದ್ದಾನೆ. ಎರಡು ದಿನವಾದ ಮೇಲೆ ಮತ್ತೆ ತನ್ನ ಲೀಡ್ ಬಳಿ ಹೋಗಿ ವಿಚಾರಿಸಿದ ಮೇಲೆ ಅವನಿಗೆ ಅರ್ಥವಾಗಿದ್ದು 'ಮಾರ್ಕ್ ಬಳಿ ನೀನು ಹೋಗಿ ಕೇಳಪ್ಪಾ' ಅಂತ ಅರ್ಥಾತ್ 'ನಿನ್ನ ಜಾಗದಲ್ಲಿ ನಾನಿದ್ರೆ ಮಾರ್ಕ್ ನ ಕೇಳ್ತೀನಿ' ಅಂತ ಅವನು ಹೇಳಿದ್ದು ಅಂತ. ಬಹುಶಃ ಇದು ಖಂಡಿತ ಪುಸ್ತಕದಲ್ಲಿ ಇರಲಾರದು.

Why should we inferior about language skill?

ಮತ್ತೊಬ್ಬ ಸಹೋದ್ಯೋಗಿಯ ಕಥೆ ಕೊಂಚ ಶೋಚನೀಯ. ಲಂಚ್ ಸಮಯದಲ್ಲಿ ಈತ ಊಟಕ್ಕೆ ಅಂತ ಹೊರಗೆ ಹೊರಡುವಾಗ ಅದೇ ಟೀಮಿನ ಹಿರಿಯ (ವಯಸ್ಸಿನಲ್ಲೂ) ಈತನನ್ನು ಏನೋ ಕೇಳಲು ಬಂದವರು "give me a shout after you are back" ಅಂದು ಹೊರಟುಹೋಗಿದ್ದಾರೆ.

ಆತ ಕಿವಿಗೆ ಮೆಷೀನ್ ಹಾಕುತ್ತಾರೆ ಎಂದು ಅರಿವಿದ್ದ ನಮ್ಮ ದೇಸಿ, ಊಟದಿಂದ ಬಂದವನೇ ಹಿರಿಯರ ಕ್ಯಾಬಿನ್'ಗೆ ಹೋಗಿ "hey i am back" ಅಂತ ಜೋರಾಗಿ ಹೇಳಿದ್ದಾನೆ. ಏನೋ ಕೆಲಸ ಮಾಡುತ್ತಿದ್ದ ಆತ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದ ಸದ್ದಿನಿಂದ ಬೆದರಿ ಬೀಳೋದೊಂದು ಬಾಕಿ. shout ಅಂದರೆ ಕರೆ ಮಾಡು ಅಂತಲೂ ಒಂದರ್ಥ ಇದೆ ಅಂತ ಪಾಪ ನಮ್ಮವನಿಗೆ ಗೊತ್ತಿರಲಿಲ್ಲ.

ನಿಮಗೆ ಸುಳ್ಳು ಹೇಳೋಕ್ಕೆ ಬರುತ್ತಾ? ಸುಳ್ಳು ಹೇಳಬೇಡಿ!ನಿಮಗೆ ಸುಳ್ಳು ಹೇಳೋಕ್ಕೆ ಬರುತ್ತಾ? ಸುಳ್ಳು ಹೇಳಬೇಡಿ!

ಹೀಗೊಂದು ಮೀಟಿಂಗ್ ನೀಡೀತಿದೆ. ಬಿಜಿನೆಸ್ ಡಿಪಾರ್ಟ್ಮೆಂಟ್ ನ ದೊಡ್ಡ ಜನರು ಕೂತಿದ್ದಾರೆ. ಟೆಕ್ನಿಕಲ್ ಕಡೆಯಿಂದ ಹೈದರಾಬಾದ್ ನ ಬಾಬು ಕೂಡ ಒಬ್ಬ. ಹೊಸ ಪ್ರಾಜೆಕ್ಟ್ ನ ವಿಷಯ ಹೇಳುತ್ತಾ "this meeting is to give everyone a big picture" ಅಂದಿದ್ದಾರೆ. ತಕ್ಷಣ ಬಾಬು ನನ್ನ ಕಡೆ ನೋಡಿದ. ನಾನು ಆಮೇಲೆ ಹೇಳ್ತೀನಿ ಅಂತ ಸನ್ನೆ ಮಾಡಿ ತಿಳಿಸಿದೆ.

ಆ ನಂತರ ಬಾಬು "ಬಿಗ್ ಪಿಚರ್ ಅಂಟೆ . . . " ಅಂದ . . . ಮುಂದಿನ ಮಾತುಕತೆಗಳಲ್ಲಿ ಅರ್ಥ ಮಾಡಿಕೊಂಡೆ ಅವನ ಪ್ರಾಬ್ಲೆಮ್. ಪುಣ್ಯಕ್ಕೆ ಅವನು "big picture ಅಂದಿದ್ದಕ್ಕೆ ಬಾಹುಬಲಿ ಸಿಡಿ ಕೊಡ್ತೀರಾ?" ಅಂತ ಕೇಳಲಿಲ್ಲ.

ಒಮ್ಮೆ ಹೀಗೇ ಆಯ್ತು. flightನಲ್ಲಿ Frankfurtನಿಂದ ಬೆಂಗಳೂರಿಗೆ ಹೋಗ್ತಿದ್ದೆ. ಮಧ್ಯದ ಸಾಲಿನಲ್ಲಿ ಕೂತಿದ್ದ ಒಬ್ಬ ಸಂಪೂರ್ಣ ಹಸನ್ಮುಖಿ ಭಾರತೀಯ ಯಾವುದೋ ಸಿನಿಮಾ ನೋಡ್ತಾ ನಗ್ತಾ ಇದ್ದ. ಸಿನಿಮಾ ಚೆನ್ನಾಗಿರಬೇಕು ಅಂತ ನಾನೂ ನನ್ನ ಸೀಟಿನಲ್ಲಿ ಅದೇ ಸಿನಿಮಾ ಓಡಿಸಿದೆ. ಏನೂ ಅರ್ಥವಾಗ್ತಿಲ್ಲ ಏಕೆಂದರೆ spanish ಭಾಷೆಯ ಡೈಲಾಗ್ಸ್. ಮತ್ತೆ ಆತನ ಕಡೆ ನೋಡಿದರೆ, ಅವನು ಸಕತ್ ಎಂಜಾಯ್ ಮಾಡ್ತಿದ್ದ.

"ಏಕೆ ಹೀಗಾಯ್ತೋ ನಾನು ಕಾಣೆನು" ಅನ್ನೋ ರೋದನ ನನ್ನಲ್ಲಿ. Spanish ಸಿನಿಮಾ ನೋಡಿ ಅರ್ಥ ಮಾಡಿಕೊಂಡು ನಗೋಷ್ಟು ಭಾಷಾಜ್ಞಾನವೇ ಅಂತ ಸ್ವಲ್ಪ stomach burning ಕೂಡ. ಆಮೇಲೆ ಯೋಚನೆ ಬಂದು ಆಂಗ್ಲ ಭಾಷೆ ಬದಲಿಸಿದೆ ಅನ್ನಿ.

ಭಾಷೆ ಬರುವುದಿಲ್ಲ ಎಂಬ ಕೀಳರಿಮೆ ಬಹುಶಃ ನಮಗೆ ಮಾತ್ರವೇನಾ ಅನ್ನೋ ಅನುಮಾನ ಬಹಳ ಸಾರಿ ಮನಸ್ಸಿಗೆ ಬಂದಿದೆ. ಪರ ಊರಿನಿಂದ ಬಂದವನು ಆರಾಮವಾಗಿ "ಕನ್ನಡ್ ಗೊತ್ತಿಲ್ಲಾ" ಅನ್ನುತ್ತಾನೆ. ಅದೇ ನಾವು ತಮಿಳು ಗೊತ್ತಿಲ್ಲ ಅಂದ್ರೆ ಅರ್ಧಂಬರ್ಧ ಕಲಿತು ಮಾತಾಡ್ತೀವಿ. ಹಿಂದಿಯನ್ನು ಕೊಲೆ ಮಾಡಿಯಾದರೂ ಬಳಸ್ತೀವಿ.

ನಮ್ಮಲ್ಲೊಬ್ಬರಿಗೆ ಕನ್ನಡ ಸಿನಿಮಾ ನೋಡಿದರೆ ಲೆವಲ್ ಕಡಿಮೆಯಾಗುತ್ತೆ ಅಂತ ಹಿಂದಿ ಸಿನಿಮಾ ನೋಡ್ತಿದ್ರು. ಪಾಪ, ಎಲ್ರೂ ನಕ್ಕಾಗ ನಗೋವ್ರು, ಎಲ್ರೂ ಅತ್ತಾಗ ಅಳೋವ್ರು. ಜೊತೆಗೆ ಹಾಡಿನ ಶೋಕಿ ಬೇರೆ. ಮೊದಲೆರಡು ಪದ ಜೋರಾಗಿ ಹೇಳುತ್ತಾ ಮಿಕ್ಕೆಲ್ಲ 'ಲಾ ಲ ಲಾ' ಅಂದುಕೊಂಡು ಮುಂದುವರೆಸೋದು.

ಈ ಆಂಗ್ಲ ಭಾಷಾ ಕೀಳರಿಮೆ ಬರುವುದಾದರೂ ಏತಕ್ಕೆ? ತುಂಬಾ ಸಿಂಪಲ್. ಇದು ಆಂಗ್ಲರು ನಮ್ಮಲ್ಲಿ ಬಿತ್ತಿಹೋಗಿರುವ ವಿಚಾರ. ಆಂಗ್ಲರು ಅಂದ ಮಾತ್ರಕ್ಕೆ ಅವರು ಎಲ್ಲ ಬಲ್ಲವರು ಎಂಬ ಮನಸ್ಥಿತಿ, ಆಂಗ್ಲರು ಎಂದ ಮಾತ್ರಕ್ಕೆ ಅವರು ಸ್ಥಾನಮಾನದಲ್ಲಿ ದೊಡ್ಡವರು ಎಂಬೆಲ್ಲ ಮನಸ್ಸಿನಲ್ಲಿ ಬೇರೂರಿಸಿಕೊಂಡ ನಾವು, ನಮ್ಮವರೇ ಆಂಗ್ಲ ಮಾತನಾಡಲು ಆರಂಭಿಸಿದ ಕೂಡಲೇ ನಾವು ಅವರಿಗಿಂತ ಕಡಿಮೆ ಎಂಬ ಹಿಂಜರಿಕೆ ಉಂಟಾಗಿ ಅಧೀರರಾಗುತ್ತೇವೆ.

ಈ ರೀತಿ ಮನೋಭಾವದಿಂದ ನಾವು ಏನು ಮಾಡ್ತೀವಿ ಅಂದ್ರೆ, ಅವರುಗಳು ನಮ್ಮಂತೆ behavior ತೋರಿದರೆ, ಅವರನ್ನು ಎತ್ತರಕ್ಕೆ ಕೂಡಿಸಿಬಿಡ್ತೀವಿ. ಈಗ ಉದಾಹರಣೆ ಕೊಡುತ್ತೇನೆ. ಅಮೇರಿಕನ್ ಒಬ್ಬ ಹಿಂದೀ ಹಾಡು ಹೇಳುತ್ತಾನೆ ಎಂದು ವಾಟ್ಸಪ್ಪ್ ನಲ್ಲಿ ಎಲ್ಲೆಲ್ಲೂ ವಿಡಿಯೋ ಹಂಚಿಕೊಳ್ಳುತ್ತೇವೆ. ಕನ್ನಡ ಹಾಡು ಹೇಳಿದರೆ ಬಾಯ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ಮತ್ತೊಂದು ಸಂಗೀತ ಗುಂಪಿನವರು "ವೇದ ಮಂತ್ರ" ಹೇಳಿದರೆ ನಮಗಿಂತ ಇವರೇ ಬೆಸ್ಟ್ ಅಂತ ನಮ್ಮನ್ನೇ ಹಳಿದುಕೊಳ್ಳುತ್ತೇವೆ.

ನಮ್ಮ ದೇಶದವರು ಎಂಥಾ ಸೊಗಸಾಗಿ ಪಾಪ್ ಸಂಗೀತ ಹಾಡುತ್ತಾರೆ ಅಂತಾಗಲಿ, ರಾಕ್ ಮ್ಯೂಸಿಕ್ ಪ್ರಾವೀಣ್ಯತೆ ಹೊಂದಿದ್ದಾರೆ ಅಂತಾಗಲಿ ಯಾವ ಆಂಗ್ಲರೂ ವಿಡಿಯೋ ಹಂಚಿದ್ದು ನೋಡಿಲ್ಲ. ಸತ್ಯ ಖಾರ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ !

ಹೋಗೋ ಮುನ್ನ, ಒಂದು ಪುಟ್ಟ ಪ್ರಶ್ನೆ ಕೇಳಲೇ? ನಿಮಗೆ ಜರ್ಮನ್ ಭಾಷೆ ಬರುತ್ತದೆಯೇ? ಸಂಸ್ಕೃತವನ್ನು ಓದಿ- ಬರೆದು ಮಾತನಾಡಿ ಗೊತ್ತೇ ? ಫ್ರೆಂಚ್ ಭಾಷೆಯ ಅರಿವಿದೆಯೇ ? ಇದೆಲ್ಲಾ ಸಮಸ್ಯೆ ಅಲ್ಲದಿದ್ದ ಮೇಲೆ ಇಂಗ್ಲಿಷ್ ಭಾಷೆ ಗೊತ್ತಿಲ್ಲ ಎಂದ ಕೂಡಲೇ ಕೀಳರಿಮೆ ಏಕೆ ?

ನಮಗೆ ಅನಿವಾರ್ಯ ಇದ್ದಲ್ಲಿ ಭಾಷೆ ಕಲಿಯೋಣ. ನಮ್ಮ ಭಾಷಾ ಪ್ರೇಮ ಮೆರೆಯೋಣ. ಪರಿಸ್ಥಿತಿ ಕೈ ಮೀರಿದರೆ ಉದ್ಧಟತನ ತೋರಿದವರಿಗೆ ಪಾಠ ಕಲಿಸೋಣ. ಆದರೆ ಹಿಂಸೆಯಿಂದ ದೂರವಿರೋಣ.

English summary
Why should we inferior about language skill? If we don't know English, It is needed for our job, let's learn. Otherwise we need not to inferior about lack of language skill. So, Here is the beautiful article about language learning by One India Kannada columnist Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X