• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಹೆಸರಿನಲ್ಲೇನಿದೆ ಬಿಡಿ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಒಂದು ಮಾತು ಏನಪ್ಪಾ ಅಂದ್ರೆ, ಈ ವಿಷಯವನ್ನು ಅರ್ಥಾತ್ 'ಹೆಸರಲ್ಲೇನಿದೆ' ಎಂಬ ವೇದಾಂತವನ್ನು ಎಲ್ಲಿ ಬೇಕಾದರೂ ಬಳಸಿ. ಆದರೆ "ನಾಮಕರಣಕ್ಕೆ" ಅಂತ ಕರೆದಾಗ, ಅಲ್ಲಿಗೆ ಹೋಗಿರುವಾಗ, ಅಲ್ಲಿ ಮಾತ್ರ ಆಡಬೇಡಿ. ಹೆಸರಿನಲ್ಲೇ ಎಲ್ಲಾ ಇದೆ ಎಂಬ ಆಶಯ ಹೊತ್ತು ಕೂಸಿಗೆ ಹೆಸರನ್ನು ಇಡುವ ದಿನದಂದೇ ನೀವು "ಏನಿದೆ ಬಿಡಿ ಹೆಸರಲ್ಲಿ" ಅನ್ನೋ ಹಾಗೆ ಮಾತನಾಡಿದರೆ ಅವರಿಗೆ ಏನನ್ನಿಸಬಹುದು?
.
ಸರಿ ಈಗ ಮೊದಲಿನ ಪ್ರಶ್ನೆಗೆ ಬರೋಣ. 'ಹೆಸರಿನಲ್ಲೇನಿದೆ' ಎರಡು ಮತ್ತು ಮೂರನೆಯ ಅಕ್ಷರಗಳನ್ನು ನೋಡಿದರೆ ಗೊತ್ತಾಗುತ್ತೆ "ಸರಿ" ಅಂತ ಇದೆ ಅನ್ನೋದು. ಅಂದ್ರೆ ಹೆಸರು ಯಾವುದೇ ಆದರೂ ಅದು 'ಸರಿ' ಇರುತ್ತೆ. ಆದರೆ ಮನುಷ್ಯ ಸರಿ ಇರದೇ ಹೋದ್ರೆ ನಾವೇನು ಮಾಡೋಕ್ಕಾಗುತ್ತೆ ಹೇಳಿ!

ಶ್ರೀನಾಥ್ ಭಲ್ಲೆ ಅಂಕಣ; ಒಂದೊಂದೂ ಬೆವರ ಹನಿ ಮುತ್ತಾಯ್ತದೋ...ಶ್ರೀನಾಥ್ ಭಲ್ಲೆ ಅಂಕಣ; ಒಂದೊಂದೂ ಬೆವರ ಹನಿ ಮುತ್ತಾಯ್ತದೋ...

'ಹೆಸರಿನಲ್ಲೇನಿದೆ' ಎಂಬ ವಿಚಾರ ಅಥವಾ ಬರಹ ಇಂದು ನೆನ್ನೆಯದಲ್ಲ ಅನ್ನೋದು ನಿಮಗೂ ಗೊತ್ತು. ಊರಿನ ಹೆಸರುಗಳೇ ಆಗಿರಬಹುದು, ವ್ಯಕ್ತಿಯ surname ಅಥವಾ ಲಾಸ್ಟ್ ನೇಮ್ ಗಳು ಹಲವಾರು ಹಾಸ್ಯಬರಹಗಳ ಮತ್ತು ಹಾಸ್ಯ ಉತ್ಸವದ ಸಾಮಾನ್ಯ ಮೆಟೀರಿಯಲ್ ಆಗಿರುತ್ತವೆ.

ಒಂದು ಹೆಸರಿನಲ್ಲೇನಿದೆ ಎಂಬುದು ಕಳೆದ ವಾರದಲ್ಲೇ ಜಗಜ್ಜಾಹೀರಾಗಿದೆ. "ರಾಮ" ಅನ್ನೋ ಹೆಸರು ದೇಶಾದ್ಯಂತ ಒಂದು ಸಂಚಲನೆಯನ್ನೇ ಮೂಡಿಸಿತ್ತು. ಕೊರೊನಾ ಸುದ್ದಿಯನ್ನೂ ಬದಿಗೆ ಹಾಕಿ 'ರಾಮ' ನಾಮ ಜಪ ಮಾಡುವಂತೆ ಮಾಡಿತ್ತು ಆ ಎರಡಕ್ಷರ. "ಮರ ಮರ" ಎಂದೇ ನುಡಿಯುತ್ತಾ ಸಾಗಿದರೆ 'ರಾಮ' ಎಂಬ ಪದ ತಂತಾನೇ ಹೊರಹೊಮ್ಮುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಂಥ ಶಕ್ತಿ ಇದೆ ಒಂದು ಹೆಸರಿಗೆ.

ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ...ಶ್ರೀನಾಥ್ ಭಲ್ಲೆ ಅಂಕಣ; ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ...

ಕೆಲವು ಸಂದರ್ಭಗಳಲ್ಲಿ "ನಾನ್ಯಾರು ಗೊತ್ತಾ?" ಎಂಬ ಮಾತನ್ನು ಕೇಳಿದ್ದೇವೆ. ಒಂದೋ ಅದು ಅವರ ಹೆಸರಿನಿಂದ ಗುರುತಿಸಿಕೊಳ್ಳೋದು ಆಗಿರಬಹುದು ಅಥವಾ ಅವರನ್ನು ಪೋಷಿಸುತ್ತಿರುವವರ ಹೆಸರೂ ಆಗಿರಬಹುದು. ಒಟ್ಟಿನಲ್ಲಿ 'ಹೆಸರಿನಲ್ಲೇನಿದೆ' ಎಂಬುದರ ವಿರುದ್ಧದ ಮಾತಿದು. 'ಮಾಣಿಕಂ' ಒಬ್ಬ ಆಟೋ ಡ್ರೈವರ್ ಆಗಿದ್ದು, ತನ್ನ ತಂಗಿಗೆ ಮೆಡಿಕಲ್ ಕಾಲೇಜಿನಲ್ಲಿ seat ಸಿಗಲಿಲ್ಲ ಎಂದಾಗ ಆತ ನೇರವಾಗಿ ಪ್ರಿನ್ಸಿಪಾಲರ ರೂಮಿಗೆ ಹೋಗಿ ತನ್ನ ಹೆಸರು ಹೇಳುತ್ತಾನೆ 'ಬಾಷಾ' ಅಂತ. ಅಲ್ಲಿಗೆ ಎಲ್ಲವೂ ಸರಿಯಾಗುತ್ತದೆ. ಇಲ್ಲಿ 'ಹೆಸರಿನಲ್ಲೇನಿದೆ' ಎನ್ನಲಾದೀತೆ? ಆ ಎರಡಕ್ಷರದ ಹೆಸರಿನಲ್ಲಿ ಎಲ್ಲವೂ ಇತ್ತು. ಯಾರೋ ಹಿರಿಯರ ಮಕ್ಕಳು ಬೇಕಾಬಿಟ್ಟಿ ಆಡೋದೂ ಆ ದೊಡ್ಡ ಮನುಷ್ಯರಾದವರ ಹೆಸರಿನಿಂದಲೇ !

Article On What Is There In Name And Name Sake

ಕೌರವ ಸಂತಾನದವರ ಹೆಸರುಗಳೆಲ್ಲಾ "ದು"ಕಾರಾತ್ಮಕ... ದುರಾತ್ಮ, ದುರುಳ, ದುಷ್ಟ, ದು:ಖ, ದುಗುಡ, ದುಮ್ಮಾನ, ದುರ್ಬುದ್ದಿ ಎಲ್ಲವೂ ದುಕಾರಾತ್ಮಕ. 'ದು' ಎಂಬ ಅಕ್ಷರದಲ್ಲೇ ಇಷ್ಟೆಲ್ಲಾ ಇರುವುದರಿಂದಲೇ ಕೌರವರೂ ಕೆಡುಕರು ಅಂತ ಒಂದೆಡೆ ಉಲ್ಲೇಖವಿದೆ. ಹಾಗಾಗಿ ವಿಕರ್ಣ ದುಷ್ಟನಲ್ಲವಂತೆ. ಆದರೆ ಅಷ್ಟೆಲ್ಲಾ ಹಿರಿಯರು ಅಲ್ಲಿದ್ದುಗೊಂಡೂ 'ದು'ಕಾರದ ಹೆಸರೇಕೆ ಇಟ್ಟರು ಎಂಬುದೂ ಒಂದು ವಾದ. ಹೆಸರಿನಿಂದ ಕೆಟ್ಟವರಾಗುವುದಾದರೆ 'ಶಕುನಿ'ಯ ಹೆಸರು 'ದು' ಇಂದ ಆರಂಭವಾಗುವುದಿಲ್ಲವಲ್ಲ? ದುರ್ಯೋಧನನಲ್ಲಿ ಒಂದಷ್ಟು ಒಳ್ಳೆಯ ಗುಣಗಳೂ ಇದ್ದಿರಬಹುದು ಎಂದೇ ಅವನನ್ನು ಸುಯೋಧನ ಎಂದೂ ಕರೆದಿರಬಹುದೇ? 'ದು'ಕಾರದ ಹೆಸರಿದ್ದರೂ ದುಶ್ಶಲೆ ಕೆಟ್ಟವಳಾಗಿದ್ದಳು ಎಂದು ಎಲ್ಲಿಯೂ ಓದಿದ ನೆನಪಿಲ್ಲ. 'ಹೆಸರಿನಲ್ಲಿ' ಏನಿದೆ ಎನ್ನುವಿರಾ?

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ ಎಲ್ಲೆಲ್ಲೂ ಈ ಹಿಂದು ಮುಂದುಗಳದ್ದೇ ಸಂತೆ ಅಲ್ಲವೇ?ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ ಎಲ್ಲೆಲ್ಲೂ ಈ ಹಿಂದು ಮುಂದುಗಳದ್ದೇ ಸಂತೆ ಅಲ್ಲವೇ?

.ಈಗ 'ರಾಮ'ನ ವಿಷಯಕ್ಕೆ ಮತ್ತೆ ಬರೋಣ. ಬಾಲರಾಮನು ಒಮ್ಮೆ ಆಟವಾಡುತ್ತಿರಲು ಆಗಸದಲ್ಲಿ ಚಂದ್ರನನ್ನು ನೋಡಿ ತನಗೆ ಆಟಕ್ಕೆ ಬೇಕು ಎನ್ನುತ್ತಾನಂತೆ. ಆಗ ಕೌಸಲ್ಯಾದೇವಿಯು ಒಂದು ಕನ್ನಡಿಯಲ್ಲಿ ಆ ಚಂದ್ರನನ್ನು ತೋರಿಸುತ್ತಾಳೆ ಅಂತ ಕಥೆಯಿದೆ. ಬಾಲರಾಮ ಸಂತಸದಿಂದ ನಗುನಗುತ್ತಾ ಆಡಿದನಂತೆ. ಬಹುಶ: ಈ ಘಟನೆಯಾದ ನಂತರ ರಾಮನಿಗೆ 'ರಾಮಚಂದ್ರ' ಎಂಬ ಹೆಸರೂ ಬಂದಿರಬಹುದು ಎನ್ನೋಣ. ಈ ಕಥೆ ಏಕೆ ಹೇಳಿದೆ ಅಂತ ನೋಡೋಣ ಬನ್ನಿ.

"ಒಮ್ಮೆ 'ರಾಮಚಂದ್ರನು' ಆಟವಾಡುತ್ತಿರಲು ಆಗಸದಲ್ಲಿ... " ಅಂತ ಕಥೆ ಶುರು ಮಾಡಿದ್ದರೆ ಅದು ತಪ್ಪಾಗುತ್ತದೆ ಅಲ್ಲವೇ? ಪುರಾಣ ಕಥೆಗಳಲ್ಲಿ ಪ್ರತೀ ಹೆಸರಿನ ಹಿಂದೆ ಒಂದು ಕಥೆ ಇದೆ ಅಂತಾದರೆ, ಆ ಪುರಾಣಪುರುಷರ ಕಥೆ ಹೇಳುವಾಗ ಯಾವಾಗ ಯಾವ ಹೆಸರಿನ ಬಳಕೆ ಮಾಡಬೇಕು ಎಂಬ ಸೂಕ್ಷ್ಮವೂ ಗೊತ್ತಿರಬೇಕು. "ಸೇತುರಾಮ"ನನ್ನು ಕೈಕೇಯಿಯು ಕಾಡಿಗೆ ಅಟ್ಟಿದ ಮೇಲೆ ದಶರಥನು ದು:ಖ ತಡೆಯಲಾರದೆ ಅಸುನೀಗಿದ ಎಂಬ ಕಥೆ ಕೇಳೋಕ್ಕೆ ಚೆನ್ನ. ಆದರೆ ಇನ್ನೂ ಪೂರ್ತಿ ಕಾಡಿಗೇ ಹೋಗಿಲ್ಲ, ಆಗಲೇ "ಸೇತುರಾಮ" ಹೆಸರಿನ ಬಳಕೆ ತರವಲ್ಲ. 'ಹೆಸರಿನಲ್ಲೇನಿದೆ' ಅಂದ್ರಾ?

ಖ್ಯಾತ ಗಾಯಕ 'ಜೇಸುದಾಸ್' ಅವರ ಹೆಸರನ್ನು ಕೇಳದವರಾರು? Jesudas ಅವರ ಹೆಸರಿನಲ್ಲಿ J ಸೈಲೆಂಟ್ ಅಂತೇ ಹಾಗಾಗಿ ಅವರ ಹೆಸರು ಏಸುದಾಸ್ ಎಂದೂ ಹೇಳುವವರು ಇದ್ದಾರೆ. ನಿಮಗೆ ಗೊತ್ತಾ? ಇರಲಿ ಬಿಡಿ, ನಮಗೆ ಆ ಜೇನು ಅದ್ದಿದ ಕಂಠದ ಗಾಯನ ಮುಖ್ಯ. ಅವರ ಹಾಡುಗಳನ್ನು ಕೇಳುತ್ತಾ ಕಳೆದೇ ಹೋಗುವ ಹಾಗೆ ಆಗುತ್ತದೆ, ಹೆಸರಿನಲ್ಲೇನಿದೆ ಬಿಡಿ...

ಜೇಸುದಾಸ್ ಅವರ ಕಂಠದಲ್ಲಿ 'ಕರ್ಣ' ಹೆಸರಿನ ಕನ್ನಡ ಸಿನಿಮಾದಲ್ಲಿ ಒಂದು ಹಾಡಿದೆ. "ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ" ಎಂದು. ಬಹುಶ: ಅವರ ಮಲಯಾಳಂ/ತಮಿಳು ಉಚ್ಚಾರಣೆಯಿಂದಾಗಿ 'ಕರ್ಣ' ಅಂಬೋದು 'ಕರ್ನ' ಅಂತ ಕೇಳಿಸುತ್ತದೆ. "ಬಾಳೆಂಬ ಆಟದಿ ಚೆಂಡ೦ತೆ ಎಲ್ಲರೂ" ಎಂಬ ಸಾಲುಗಳು "ಬಾಳೆಂಬ ಆಟದಿ ಚಂಡ೦ತೆ ಎಲ್ಲರೂ" ಎಂದು ಕೇಳಿಸುತ್ತದೆ. ಅರ್ಥಾತ್ 'ಚೆಂಡು' ಎಂಬ ಪದ 'ಚಂಡು' ಅಂತ ಕೇಳಿಸುತ್ತದೆ. 'ಹೆಸರಿನಲ್ಲೇನಿದೆ' ಅಂದ್ರಾ?

ರಾಮಾಯಣದ ಮತ್ತೊಂದು ವಿಷಯ ನೋಡೋಣ ಬನ್ನಿ. ರಾವಣ ಲಂಕಾಧೀಶ. ಸೀತೆಯನ್ನು ಎತ್ತಿಕೊಂಡ ಹೋದ ರಕ್ಕಸ. ಅವನ ಅಂತ್ಯ ರಾಮನಿಂದ ಎಂಬುದು ವೇದ್ಯವಾದರೂ, ವಾನರರಿಂದ ಸಂಕಷ್ಟಕ್ಕೆ ಒಳಗಾಗುತ್ತಾನೆ ಅಂತೇನೋ ಶಾಪ ಇತ್ತಂತೆ. ಸೂಕ್ಷವಾಗಿ ನೀವೇ ಗಮನಿಸಿ ನೋಡಿ. ravana ಎಂಬ ಹೆಸರಿನ ಮೊದಲೆರಡು ಅಕ್ಷರಗಳನ್ನು ತೆಗೆದು ಕೊನೆಯಲ್ಲಿ ಹಾಕಿದರೆ vanara ಆಗುತ್ತದೆ ಅಲ್ಲವೇ? ಅರ್ಥಾತ್ ನಮ್ಮ ಹೆಸರುಗಳಲ್ಲೇ ಏನೇನೋ ಅಡಗಿರಬಹುದು. ಕೆಲವಕ್ಕೆ ಅರ್ಥವಿರಬಹುದು ಕೆಲವಕ್ಕೆ ಅರ್ಥ ಇಲ್ಲದೆಯೂ ಇರಬಹುದು.
.
ಮೊದಲಿಗೆ ನನ್ನ ಹೆಸರನ್ನೇ ತೆಗೆದುಕೊಳ್ಳಿ, Srinath ಅಂತ, ಇಲ್ಲಿ rin ಎಂಬ ಸಾಬೂನು ಏನ್ ಮಾಡ್ತಿದೆ? ಒಂಥರಾ ಆಟ ಚೆನ್ನಾಗಿದೆ ಎನಿಸುತ್ತಿದೆ. ಸ್ವಲ್ಪ ತಮಾಷೆಯಾಗಿಯೇ ಕೆಲವು ಸ್ನೇಹಿತರ ಹೆಸರನ್ನು ತೆಗೆದುಕೊಳ್ಳೋಣ ಬನ್ನಿ. Anupama ಹೆಸರನ್ನೇ ತೆಗೆದುಕೊಳ್ಳಿ ಇಲ್ಲಿ upma ಅರ್ಥಾತ್ ಉಪ್ಪಿಟ್ಟಿಗೆ ಏನು ಕೆಲಸ ಅಂತೀನಿ. tippu ಹೆಸರನ್ನೇ ಹಿಂದಿನಿಂದ ಓದಿದರೂ ಇದೇ ಕಾಂಕ್ರೀಟ್ ಅರ್ಥಾತ್ 'uppit'. Ravi ಎಂದರೆ Vira ಎನ್ನಬಹುದೇ? ಈ ಹೆಸರಿನ ನನ್ನೆಲ್ಲಾ ಸ್ನೇಹಿತರೂ ವೀರರೇ ಸರಿ. lata ಹೆಸರಿನವರು ಯಾವ taal ಹಾಕುತ್ತಿರಬಹುದು? ಆದಿ ಅಥವಾ ರೂಪಕ ಇರಬಹುದೇ? ಈ roopaka ಆಯಾ ಸಂದರ್ಭಕ್ಕೆ (pooraka) ಪೂರಕವಾಗಿರಬಹುದು ಅಂತಾನಾ?

ಹೆಸರು - ಹೆಸರುಬೇಳೆ ಅಂತೇನೋ ಆಟ ಆಡ್ತಾ ಇದ್ವಿ, ಆದರೆ ಹೆಸರು ಬೇಳೆಗೆ 'ಹೆಸರು' ಬೇಳೆ ಅಂತಾನೇ ಯಾಕೆ ಹೆಸರು ಬಂತು? ಇದೇ ದಿಶೆಯಲ್ಲಿ ಮತ್ತೊಂದು ಪ್ರಶ್ನೆ. ದಶರಥನ ಮಗ ದಾಶರಥಿ. ವಸುದೇವನ ಮಗ ವಾಸುದೇವ. ಈ ದಾಶರಥಿಯ/ವಾಸುದೇವನ ಮಕ್ಕಳನ್ನು ಏನನ್ನುತ್ತಾರೆ? ರಾಮನ ಮಕ್ಕಳನ್ನು ಈ ರೀತಿ ಹೇಗೆ ಹೆಸರಿಸೋದು? ಇದೇ ಧಾಟಿಯಲ್ಲಿ ನಿಮ್ಮ ಮಕ್ಕಳನ್ನು ಹೇಗೆ ಕರೆಯುತ್ತೀರಾ? ಅಪ್ಪನ ಹೆಸರಿನಿಂದಲೇ ಕರೆಯಬೇಕು ಅಂತಿಲ್ಲ ಅಂತ ಗೊತ್ತಲ್ಲವೇ?

ಹೆಸರಿನಲ್ಲೇನಿದೆ ಬಿಡಿ, ನಿಮ್ಮ ನಿಮ್ಮ ಹೆಸರನ್ನೇ ತೆಗೆದುಕೊಂಡು ಕೊಂಚ ಬಗೆದು ನೋಡಿ, ಏನಾದ್ರೂ ಸಿಗುತ್ತೇನೋ ಅಂತ...್

English summary
Todays topic is Name, Is name is important? or is it name skae? How we usually identified?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X