30946ಶ್ರೀನಿಧಿಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30946ಶ್ರೀನಿಧಿಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30946ಶ್ರೀನಿಧಿರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg30946ಶ್ರೀನಿಧಿಸಿನಿಮಾ ನೋಡುವ ಸುಖದ ಕುರಿತು.../column/shreenidhi/2009/0120-the-joy-of-watching-acclaimed-movies.htmlಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ 34175http://kannada.oneindia.com/img/2009/01/20-seven-pounds1.jpg30946ಶ್ರೀನಿಧಿಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg138839ಕಾಡುಹರಟೆನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg138839ಕಾಡುಹರಟೆಸಿನಿಮಾ ನೋಡುವ ಸುಖದ ಕುರಿತು.../column/shreenidhi/2009/0120-the-joy-of-watching-acclaimed-movies.htmlಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ 34175http://kannada.oneindia.com/img/2009/01/20-seven-pounds1.jpg138839ಕಾಡುಹರಟೆಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg138839ಕಾಡುಹರಟೆಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gif138839ಕಾಡುಹರಟೆಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg97543ಸಣ್ಣಕಥೆನರಕದಲ್ಲಿ ಇಂದು : ಎಲ್ಲೂ ಕೇಳಿರದ ಪ್ರೇಮಕಥೆ/literature/short-story/2008/0905-hell-today-kannada-fiction-guruprasad.htmlಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅನೇಕಾರು ಕಥೆಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ತಮ್ಮ ಅಪ್ರಕಟಿತ ಕಥಾ ಕಣಜಕ್ಕೆ ಅವರು ಇಟ್ಟಿರುವ ಹೆಸರು "ಸಿನಿಮಾ ಮಾಡಲಾಗದ ಕಥೆಗಳು". ಈ ಕಥಾ ಗುಚ್ಛದಿಂದ ಆಯ್ದ ಒಂದು ಮುತ್ತು "ನರಕದಲ್ಲಿ ಇಂದು.." ಈ ಕತೆಯನ್ನು ಸೆಲ್ಯುಲ್ಯಾಡ್ ಗೆ ತರಬಹುದಾ? ಯಾವುದಕ್ಕೂ ನಿರ್ದೇಶಕರಿಗೇ ಎರಡು ಸಾಲು ಬರೆಯಿರಿ. ಕಥೆಗಾರ : ಗುರುಪ್ರಸಾದ್, ಬೆಂಗಳೂರು ಈಗ 976http://kannada.oneindia.com/img/2009/07/21-guruprasad3.jpg97543ಸಣ್ಣಕಥೆಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97543ಸಣ್ಣಕಥೆಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg97543ಸಣ್ಣಕಥೆಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg97543ಸಣ್ಣಕಥೆಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpgnews"> ಕಡಲಕಿನಾರೆಯ ಕಥಾ ಪ್ರಸಂಗಗಳು | Beach is not a fun spot for the fishermen - ಕಡಲಕಿನಾರೆಯ ಕಥಾ ಪ್ರಸಂಗಗಳು - Kannada Oneindia

ಕಡಲಕಿನಾರೆಯ ಕಥಾ ಪ್ರಸಂಗಗಳು

Beach is not a fun spot for the fishermen
ಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?

* ಶ್ರೀನಿಧಿ ಡಿ.ಎಸ್.

ಸೇಸುಗೆ ಎಂದಿನ ಹಾಗೆ 5 ಗಂಟೆಗೇ ಎಚ್ಚರವಾಯ್ತು. ಮೆಲ್ಲನೆದ್ದು ಕಯ್ ಗುಡುವ ಬಾಗಿಲನ್ನ ತೆರೆದು ಹೊರಬಂದಳು. ರಾತ್ರಿಯಿಡಿ ಸರಿಯಾಗಿ ನಿದ್ದೆಯಿಲ್ಲ ಅವಳಿಗೆ. ಏನೋ ಬೆಚ್ಚಿ ಬೀಳಿಸುವ ಕನಸುಗಳು ಕಂಡ ನೆನಪು. ಬೂದಿಗುಡ್ದೆಯಲ್ಲಿ ಮಲಗಿದ್ದ ರಾಜ ಇವಳನ್ನ ಒಮ್ಮೆ ನೋಡಿ, ಮತ್ತೆ ತನ್ನ ಮುಖ ತಿರುಗಿಸಿ ಮಲಗಿದ. ಸುಮಾರು 20 ವರ್ಷಗಳಿಂದ ಸೇಸು ಬೆಳಗ್ಗೆ ಅಷ್ಟೇ ಹೊತ್ತಿಗೆ ಏಳುತ್ತಿದ್ದಾಳೆ. ಕೆಲಬಾರಿ ಇನ್ನೂ ಬೇಗ. ದಿನಾ ಎದ್ದು, ಮನೆಯೆದುರಿನ ಮರಳ ಹಾಸಿನ ಮೇಲೆ ಸ್ವಲ್ಪ ದೂರ ನಡೆದು ಬಂದು ಎದುರಿನ ಅಗಾಧ ನೀರಿನ ರಾಶಿಗೆ ಕೈ ಮುಗಿಯುತ್ತಾಳೆ. ಮನೆ ಒಳಗಿನ ದೇವರಿಗಾದರೊ ಕೈ ಮುಗಿವುದುದು ಮರೆತೀತು ಸೇಸುಗೆ, ಆದರೆ ಸಮುದ್ರಕ್ಕೆ ನಮಸ್ಕರಿಸುವುದು ಎಂದೂ ಮರೆತಿಲ್ಲ.

ಅಂದು ಕೂಡಾ ದಿನದಂತೆ ನಡೆದು ಬಂದು ಕೈ ಮುಗಿದಳು. ಕೈ ಮುಗಿದವಳ ಮುಖದಲ್ಲಿ ಏಕೋ ದುಗುಡವೂ ಇತ್ತು. ಮಳೆಗಾಲದ ಆರಂಭದಲ್ಲಿ ಈ ಚಿಂತೆ ಕಾಣುವಂತಹುದೇ, ಕಳೆದ 5 ವರುಷಗಳಿಂದ. ಆದರೆ ಈ ಬಾರಿ ಅದರ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದ್ದಂತಿತ್ತು. ಮನೆಯ ಕಡೆ ಮೆಲ್ಲನೆ ಕಾಲೆಳೆದುಕೊಂಡು ಹೊರಟಳು. ಅವಳ ಗಂಡ ಅಂಗರ ಎದ್ದು ಕೂತಾಗಿತ್ತು ಆಗಲೇ. ಈಯೊಡೊಂತೆ ಭಂಗ ಉಂಡಾ ಪಂಡ್‌ದ್ ಪೋಡಿಗೆ ಆವೊಂದುಂಡು (ಈ ಬಾರಿ ಸ್ವಲ್ಪ ಕಷ್ಟ ಆಗುತ್ತದೆಯೆನೋ ಅಂತ ಹೆದರಿಕೆ ಆಗುತ್ತಿದೆ) ಅಂದಳು ಸೇಸು. ಈ ಪುಲ್ಯ ಕಾಂಡೆ ಪೊಕ್ಕಡೆ ಮಂಡೆ ಬೆಚ್ಚ ಮಲ್ತೊನೊಚ್ಚಿ , ದಾಲಾ ಆಪುಜ್ಜಿ, ಪೋ ಚಾ ಮಲ್ಪು (ನೀನು ಬೆಳಗ್ಗೆ ಬೆಳಗ್ಗೆ ತಲೆ ಕೆಡಿಸಿಕೊಳ್ಳಬೇಡ, ಏನೂ ಅಗುವುದಿಲ್ಲ, ಈಗ ಹೋಗು, ಚಾ ಮಾಡು) ಅಂದ ಅಂಗರ ಅಲ್ಲಿಂದೆದ್ದು ತಾನೂ ಸಮುದ್ರದ ಕಡೆಗೆ ಹೊರಟ. ಅಂಗರ ಹೆಂಡತಿಯ ಬಾಯಿ ಮುಚ್ಚಿಸಲು ಹಾಗೆ ಹೇಳಿದ್ದರೂ, ಹೆದರಿಕೆ ಅವನಿಗೂ ಇದ್ದೇ ಇತ್ತು. ಆದರೆ ತಾನೂ ನಿನ್ನ ಹಾಗೆ ಹೆದರಿದ್ದೇನೆ ಎಂದು ಹೇಳಿ ಸೇಸುವನ್ನ ಮತ್ತಷ್ಟು ಚಿಂತೆಗೀಡುಮಾಡುವುದು ಬೇಡ ಎಂದು ಸುಮ್ಮನಿದ್ದ. ಸಮುದ್ರ ಹೋದ ಮಳೆಗಾಲಕ್ಕೇ ಹೆಚ್ಚು ಕಡಿಮೆ ಮನೆ ಬಾಗಿಲವರೆಗೆ ಬಂದಿತ್ತು. ಈ ಬಾರಿ ಏನಾಗುವುದೋ ಎಂಬುದೇ ಅವರ ಚಿಂತೆ. ಅನ್ನದ ಏಕೈಕ ಮೂಲವಾದ ಕಡಲೇ, ಜೂನ್ ಜುಲೈ ತಿಂಗಳು ಬಂದ ಕೂಡಲೇ ಪ್ರಾಣಕ್ಕೆ ತಂದಿಡುತ್ತಿತ್ತು.

ಮಂಗಳೂರಿಂದ ಇಪ್ಪತ್ತು ಕಿಲೋಮೀಟರು ದೂರದಲ್ಲಿದೆ ಉಳ್ಳಾಲ. ಪಂಪ್ವೆಲ್ ಸರ್ಕಲ್ಲಿಗೆ ಹೋಗಿ, ಅಲ್ಲಿಂದ ಬಲಕ್ಕೆ ತಿರುಗಿ ಸೀದಾ ಹೋದರೆ ಮೊದಲು ತೊಕ್ಕೊಟ್ಟು , ಅಲ್ಲಿಂದ ಹಾಗೆ ಮುಂದೆ ಒಂದೇ ದಾರಿ ಉಳ್ಳಾಲಕ್ಕೆ. ಉಳ್ಳಾಲ ಸ್ವಲ್ಪ ದೊಡ್ಡ ಊರೇ. ಕಡಲ ತಡಿಯಲ್ಲಿರುವ ಸೋಮೇಶ್ವರ ದೇವಸ್ಥಾನ ಪ್ರಸಿದ್ಧ. ಹಾಗೆಯೇ ಇಲ್ಲಿನ ಮಸೀದಿಯೂ. ಮಂಗಳೂರು ಹತ್ತಿರವಿರುವುದರಿಂದ ವಾಣಿಜ್ಯ ವಹಿವಾಟೂ ಜಾಸ್ತಿ. ಮೀನುಗಾರಿಕೆಯನ್ನ ನಂಬ್ಕೊಂಡು ಬದುಕುವವರ ಸಂಖ್ಯೆಯೂ ಬಹಳವಿದೆ. ಅಂಗರನಂತಹ ಹಲ ಕುಟುಂಬಗಳಿವೆ ಇಲ್ಲಿ.

ಅಂಗರನಿಗೆ ಈಗ ವರುಷ 45. ಮೊದಲು ತಾನೇ ಒಂದು ಪುಟ್ಟ ದೋಣಿ ಇಟ್ಟುಕೊಂಡು, ದೂರ ಕಡಲಿಗೆ ಸಾಗಿ, ಮೀನು ಹಿಡಿದು ತಂದು ಮಾರುವ ಕೆಲಸ ಮಾಡುತ್ತಿದ್ದ. ಆದರೆ ವರ್ಷ ಕಳೆದಂತೆ ಅದು ಆಗು ಹೋಗುವ ಕೆಲಸವಲ್ಲ ಅಂತ ಅನಿಸಿತು ಅವನಿಗೆ. ಕೆಲ ದಿನ ಸಿಕ್ಕಾಪಟ್ಟೆ ಮೀನು ಸಿಕ್ಕಿ , ದುಡ್ಡೋ ದುಡ್ಡು, ಇನ್ನು ಕೆಲವು ದಿನ ನಾಸ್ತಿ. ಈ ಡೋಲಾಯಮಾನ ಬದುಕಿನಿಂದ ಬೇಸತ್ತು ದೋಣಿಯನ್ನು ಹತ್ತು ವರ್ಷದ ಕೆಳಗೇ ಯಾರಿಗೋ ಅರ್ಧ ದುಡ್ಡಿಗೆ ಮಾರಿ, ಅಬ್ದುಲ್ಲ ಬ್ಯಾರಿಯ ಬೋಟಿನಲ್ಲಿ ಸೇರಿಕೊಂಡಿದ್ದ. ಅಬ್ದುಲ್ಲನಿಗೆ 2 ಯಾಂತ್ರಿಕ ಬೋಟುಗಳಿವೆ. ಸಮುದ್ರದಲ್ಲಿ ಬಹಳ ದೂರವರೆಗೆ ಸಾಗಿ ಮೀನುಗಾರಿಕೆ ನಡೆಸುತ್ತದೆ ಅವನ ಬೋಟು. ಅಂಗರ ವಾರೊಪ್ಪತ್ತಿನಲ್ಲಿ ಬಲೆ ಬೀಸಿ ಹಿಡಿಯುಷ್ಟು ಮೀನನ್ನ ಈ ಬೋಟಿನ ಬಲೆ, ದಿನದೊಳಗೆ ಹಿಡಿದು ಬಿಡುತ್ತಿತ್ತು!

ದಿನದ ಊಟ ತಿಂಡಿ - ಸಂಬಳದ ಚಿಂತೆ ಇರಲಿಲ್ಲ ಈ ದುಡಿತದಲ್ಲಿ. ಆದರೆ ವಾರಗಟ್ಟಲೇ ಮನೆಯಿಂದ ಹೊರಗಿರಬೇಕಾಗುತ್ತಿತ್ತು ಹೆಚ್ಚಿನ ಬಾರಿ. ಅದೊಂದೇ ಬೇಜಾರು. ಸೇಸುವನ್ನ, ಮಕ್ಕಳನ್ನ ಬಿಟ್ಟು ಸಮುದ್ರದ ನಡುವೆ ವಾರಗಟ್ಟಲೆ ತೇಲುತ್ತಿರುವುದು ಭಯಂಕರ ಬೇಜಾರು ತರುತ್ತಿತ್ತು ಅಂಗರನಿಗೆ. ಆದರೆ ದಿನಕಳೆದಂತೆ ಅದಕ್ಕೆ ಹೊಂದಿಕೊಂಡು ಬಿಟ್ಟ . ಈಗ ಅಂಗರ ಮದರ್ ಇಂಡಿಯಾಬೋಟಿನ ಹಿರಿಯ ತಲೆ. ಹೊಸ ಹುಡುಗರು ಇವನಿಗೆ ಗೌರವ ಕೊಡುತ್ತಿದ್ದರು, ಸ್ವತಃ ಅಬ್ದುಲ್ಲ ಇವನನ್ನ ಹೊಗಳುತ್ತಿದ್ದ. ಅತ್ಯಂತ ಆರಾಮ, ಈ ವಿಚಾರದಲ್ಲಿ.

ಅಂಗರನ ಮನೆ ಇದ್ದಿದ್ದು, ಸಮುದ್ರದಿಂದ ಸುಮಾರು 200-250 ಅಡಿ ದೂರದಲ್ಲಿ. ಆ ಮಂಗಳೂರು ಹಂಚಿನ ಸಣ್ಣ ಮನೆಯನ್ನ ಅಂಗರ ತಾನು ಬೋಟು ಕೆಲಸಕ್ಕೆ ಸೇರಿ 5 ವರ್ಷಕ್ಕೆ ಕಟ್ಟಿಸಿದ್ದ. ಮೊದಲು ಗುಡಿಸಲಿತ್ತು ಅಲ್ಲಿ. ಮನೆ ಕಟ್ಟಿಯಾಗಿ ವರುಷವಾಗುವುದರೊಳಗೇ ತಲೆಬಿಸಿಯೂ ಶುರುವಾಯಿತು. ಅಷ್ಟು ದಿನ, ಅಂಗರನ ಬದುಕಿನ 40 ವರ್ಷ ಸುಮ್ಮನಿದ್ದ ಕಡಲರಾಜ, ಆ ವರುಷದಿಂದ ಮಾತಾಡಲು ಆರಂಭಿಸಿದ್ದ. ಕಡಲು ಕೊರೆತ ಎಂಬ ಹೊಸ ಸಮಸ್ಯೆ ಹುಟ್ಟಿಕೊಂಡಿತ್ತು ಅಲ್ಲಿ. ಸಮುದ್ರ ಮಳೆಗಾಲ ಜೋರಾಗುತ್ತಿದ್ದ ಹಾಗೆ ತಾನೂ ಜೋರಾಗುತ್ತಿತ್ತು. ಮಳೆಯ ಆರ್ಭಟ ಹೆಚ್ಚುತ್ತಿದ್ದ ಹಾಗೇ ಸಮುದ್ರವೂ ಭೋರ್ಗೆರೆಯಲು ಆರಂಭ. ದೊಡ್ಡ ದೊಡ್ದ ಅಲೆಗಳೊಡನೆ ದಡಕ್ಕೆ ಅಪ್ಪಳಿಸುತ್ತಿದ್ದರೆ, ರಾಶಿ ರಾಶಿ ಮರಳು, ನೀರ ಪಾಲು. ಒಂದಿಷ್ಟು ಸಮಯ ಬಿಟ್ಟು , ಇನ್ನೂ ದೊಡ್ಡ ಅಲೆ, ಮತ್ತೊಂದಿಷ್ಟು ತೆಕ್ಕೆಗೆ ಸಿಕ್ಕಿದ್ದನ್ನ ತೆಗೆದುಕೊಂಡು ವಾಪಸಾಗುತ್ತಿತ್ತು. ಚೂರು ಚೂರೇ ಚೂರು ಚೂರೇ ನೆಲ ನೀರ ಪಾಲಾಗುತ್ತಿತ್ತು.

ಮೊದಲ ವರ್ಷ ಸ್ಟೀವನ್ ಪರ್ಬುಗಳ 20 ತೆಂಗಿನ ಮರವನ್ನ ಮತ್ತು ಪಂಪು ಶೆಡ್ಡನ್ನು ಸಮುದ್ರ ತೆಗೆದುಕೊಂಡು ಹೋಯಿತು. ಅಷ್ಟು ಹೊತ್ತಿಗೆ ಈ ಸುದ್ದಿ ಪೇಪರಿನಲ್ಲಿ ಬಂದು ಟೀವಿಯವರು ಶೂಟಿಂಗು ಮಾಡಿ, ಅವರ ಮನೆ ಸಾಲುಗಳೆದುರಿನ ಕಡಲ ದಂಡೆಗೆ ರಾಶಿ ರಾಶಿ ಮರಳ ಚೀಲಗಳು ಬಂದು ಬಿದ್ದವು. ಅಲ್ಲಿಗೆ ಒಂದು ಮಳೆಗಾಲ ಕಳೆಯಿತು. ಮುಂದಿನ ಮಳೆಗಾಲದಲ್ಲಿ ಅಲೆಗಳ ಆರ್ಭಟ ಮತ್ತೂ ಜಾಸ್ತಿಯಾಗಿ ಪರ್ಬುಗಳು ತಮ್ಮ ಮನೆಯನ್ನ ಖಾಲಿ ಮಾಡಿ, ಮಂಗಳೂರಿನ ತಮ್ಮ ಮಗನ ಮನೆಗೆ ಹೋಗಬೇಕಾಯಿತು. ಅಲೆಗಳ ಹೊಡೆತ ತಾಳಲಾರದೇ ಆ ಮನೆ ಒಂದು ಬೆಳಗ್ಗೆ ಕುಸಿದು ಬಿದ್ದಿತ್ತು. ಜೊತೆಗೆ, ಅಲ್ಲಿನ ಸಾಲು ಮನೆಗಳವರ ಧೈರ್ಯವೂ.

ಮುಂದಿನ ಮಳೆಗಾಲದಲ್ಲಿ ಸಂಜೀವಣ್ಣನ ಮನೆ, ಅಂಗರನ ಜೊತೆಗೆ ಕೆಲಸಕ್ಕೆ ಬರುತ್ತಿದ್ದ ಕೇಶುವಿನ ಗುಡಿಸಲು ಎಲ್ಲ ಸ್ವಾಹಾ. ಅಂಗರನಿಗೆ ತಮ್ಮ ಮನೆ ಬಹಳ ದೂರವಿದೆ, ಏನೂ ಆಗಲಾರದು ಎಂಬ ವಿಶ್ವಾಸ. ಮರು ಬಾರಿಗೆ ಇವನ ಮನೆಯೆದುರಿನ ಮನೆಯೊಂದು ತೊಳೆದು ಹೋದಾಗ ವಿಶ್ವಾಸ ಕುಸಿಯುತ್ತ ಬಂತು. ಉಳಿದ ಕಾಲದಲ್ಲೆಲ್ಲ ತಮ್ಮಿಂದ ಮಾರುಗಟ್ಟಲೇ ದೂರದಲ್ಲಿ ಶಾಂತವಾಗಿ ಬಿದ್ದುಕೊಂಡಿರುವ ಸಾಗರ, ಇನ್ನು ಸ್ವಲ್ಪ ದಿನಕ್ಕೆ ಅದು ಹೇಗೆ ರೌದ್ರವಾಗಿ ಮನೆಯಂಗಳಕ್ಕೇ ಬಂದು ಹೆದರಿಸುತ್ತದೆ. ಛೇ ಅಂದುಕೊಂಡು ತಲೆ ಕೊಡವಿಕೊಂಡ, ಹೋದ ಮಳೆಗಾಲದಲ್ಲಿ ಅರ್ಧ ಕರಗಿ ಉಳಿದುಕೊಂಡಿದ್ದ ಮೋಟುಗೋಡೆಯ ಮೇಲೆ ಕೂತು ಸಮುದ್ರನೋಡುತ್ತಿದ್ದ ಅಂಗರ.

ರೇಡಿಯೋದ ಯಾವುದೋ ಕಾರ್ಯಕ್ರಮ ಚಹ ಕುಡಿಯುವಾಗ ಕಿವಿ ಮೇಲೆ ಬೀಳುತ್ತಿತ್ತು.. ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ.. ದಕ್ಷಿಣ ಮತ್ತು ಉತ್ತರ ಧ್ರುವದ ಹಿಮ ಬಂಡೆಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತದೆ.. ಭೂಮಿಯ ಕರಾವಳಿ ತೀರದ ಪಟ್ಟಣಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ.. ಅಂಗರನಿಗೆ ಅದೆಲ್ಲ ಅರ್ಥವಾಗದೇ ರೇಡಿಯೋವನ್ನ ಪಟ್ ಅಂತ ಬಂದು ಮಾಡಿದ. ಮಗ ಬಹಳ ಆಸಕ್ತಿಯಿಂದ ಆ ಕಾರ್ಯಕ್ರಮ ಕೇಳುತ್ತಿದ್ದ, ಏನೋ ಹೇಳ ಹೊರಟವನು ಅಪ್ಪನ ಅಸಹನೆಯಿಂದ ಕೂಡಿದ ಮುಖ ನೋಡಿ ಸುಮ್ಮನಾದ.

ಜೂನ್ ಮೊದಲ ವಾರದಲ್ಲಿಯೇ ಈ ಸಲ ಮರಳ ಚೀಲ ತುಂಬುವ ಕಾಮಗಾರಿ ಅರಂಭವಾಗಿದ್ದು ನೋಡಿ ಬಹಳ ಆನಂದವಾಯ್ತು ಈ ಕೇರಿಯವರೆಲ್ಲರಿಗೂ. ಹೋದ ಸಲ ಗವರ್ಮೆಂಟು ಈ ಕಾರ್ಯ ಆರಂಭಿಸಿದ್ದು ಒಂದೆರಡು ಮನೆಹೋದ ಮೇಲೆಯೇ ಆಗಿತ್ತು. ಪ್ರತಿ ಬಾರಿಯೂ ಮರಳ ಚೀಲ ಹಾಕುವುದರ ಬದಲು ಅಲ್ಲಿ ಬೊಂಬಾಯಿಯಲ್ಲಿ ಮಾಡಿದ ಹಾಗೆ ಕಲ್ಲು ತಂದು ಹಾಕುವುದಕ್ಕೇನು ರೋಗ ಅಂತ ಎಲ್ಲ ಮಾತಾಡಿಕೊಂಡರು. ಅದನ್ನು ಹೋದ ಬಾರಿ ಬಂದ ಬಿಳಿ ಅಂಗಿಯವರಿಗೆ ಹೇಳಿದ್ದರು ಕೂಡಾ. ಆದರೆ ಅದೇನೂ ಪ್ರಯೋಜನವಾದ ಹಾಗಿಲ್ಲ. ಮಾಡುತ್ತೇವೆ, ನೋಡುವಾ ಅಂತ ಆವತ್ತು ಹೋದವರು ಮತ್ತೆ ಬಂದಿದ್ದು ಇವತ್ತೇ. ಪುಣ್ಯಕ್ಕೆ ಮನೆ ಹೋದವರಿಗೆ ಪರಿಹಾರ ಸಿಕ್ಕಿತ್ತು ಅನ್ನುವುದೇ ಸಮಾಧಾನ.

ವರ್ಷಧಾರೆ ಜೋರಾಯಿತು. ಮರಳ ಚೀಲಗಳ ಸುದ್ದಿಗೆ ಅಲೆಗಳೂ ಬರಲಿಲ್ಲ, ಒಂದು 10-15 ದಿನ. ಸೇಸುವಿನ ಮುಖದ ದುಗುಡವೂ ಮಾಯವಾಗಿತ್ತು. ಅಂಗರ ಮನೆ ಹಂಚು ರಿಪೇರಿ, ಅಂಗಳಕ್ಕೆ ತೆಂಗಿನ ಮಡಲು ಹಾಕುವುದು ಇತ್ಯಾದಿ ಮಾಡುತ್ತಲಿದ್ದ. ಮಳೆಯಾದ್ದರಿಂದ ಬೋಟು ನೀರಿಗಿಳಿದಿರಲ್ಲ. ಮಗ ಶಾಲೆಗೆ ಹೋಗಿ ಬರುವುದಷ್ಟೇ ವೃತ್ತಿ. ಆವತ್ತು ರಾತ್ರೆ ಮಲಗಿದ್ದ ಸೇಸುವಿಗೆ ಒಮ್ಮೆಗೇ ಎಚ್ಚರವಾಯ್ತು. ಕುಂಭದ್ರೋಣ ಮಳೆ ಹೊರಗೆ. ಜೋರು ಶಬ್ದ. ಹಾಗೇ ಕುತೂಹಲಕ್ಕೆ ಬಾಗಿಲು ತೆಗೆದವಳಿಗೆ, ಆ ಕತ್ತಲೆಯಲ್ಲೊ ಸಮುದ್ರ ತಮ್ಮ ಅಂಗಳದಿಂದ ಮಾರು ದೂರದಲ್ಲಿ ಅಪ್ಪಳಿಸುತ್ತಿದೆ ಅನ್ನುವುದು ಗೊತ್ತಾಗಿ ಎದೆ ಧಸಕ್ ಅಂದಿತು. ಗಂಡ ಮಗನನ್ನ ಗಡಬಡಿಸಿ ಎಬ್ಬಿಸಿದಳು. ಮೂರು ಜನವೂ ಹೊರ ಬಂದು ಮಳೆಯಲ್ಲಿ ನೆನೆಯುತ್ತಾ ಸಮುದ್ರದ ಅಲೆಯ ಹೊಡೆತವನ್ನೇ ನೋಡುತ್ತ ನಿಂತರು.

ಹೆಂಡತಿ ಮತ್ತು ಮಗನನ್ನ ಹಿಡಿದುಕೊಂದು ನಿಂತಿದ್ದ ಅಂಗರ , ತಾವು ಸಮುದ್ರದ ಜಾಗದಲ್ಲಿ ಮನೆ ಕಟ್ಟಿದ್ದೆವೋ, ಅಥವಾ, ಸಮುದ್ರಕ್ಕೇ ಈಗ ತಮ್ಮ ಜಾಗ ಹೊಸತಾಗಿ ಬೇಕೋ ಅನ್ನುವುದನ್ನ ಆಲೋಚಿಸುತ್ತಾ ನಿಂತಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+