ಕರ್ನಾಟಕಕ್ಕೆ ಇವತ್ತು ಹಳದಿ ಬಣ್ಣ ಬಳೆದವರಾರು?

ಅಕ್ಟೋಬರ್ ತಿಂಗಳ ಮೊದಲ ವಾರ ನಮ್ಮ ಚೆಲುವ ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೂವು ಸೇವಂತಿಗೆ. ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣದಲ್ಲೂ ಸಹ. ಕೆಲವರ ನಾಲಗೆಯಲ್ಲಿ ಈ ಹೂವು - ಸೇಮಂತಿಗೆ, ಶೇಮಂತಿಗೆ, ಶ್ಯಾಮಂತಿಗೆ ಎಂದಾಗುವುದೂ ಉಂಟು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಗೆ, ಆಯುಧಪೂಜೆಗೆ, ಮುಖ್ಯವಾಗಿ ವಾಹನಗಳ ಅಲಂಕಾರಕ್ಕೆ ತೋಟಗಳಿಂದ ಹೇಳಿ ಮಾಡಿಸಿ ತರಿಸಿದ ಹೂವು ಸೇವಂತಿಗೆ.

ಕರ್ನಾಟಕದ ಎಲ್ಲ ಊರುಗಳಲ್ಲಿ ಕೈಗಾಡಿಗಳಲ್ಲಿ, ಮಾರುಕಟ್ಟೆಯಲ್ಲಿ, ಬೀದಿಬದಿಗಳಲ್ಲಿ ಸೇವಂತಿಯದ್ದೇ ದರ್ಬಾರು. ಊರೆಲ್ಲಾ ಹಳದಿ ಹಳದಿ. ಇವತ್ತಂತೂ Enitre State is Painted with Yellow. ಬೆಂಗಳೂರಿನಲ್ಲಿ ಗುರುವಾರ-ಶುಕ್ರವಾರ ಸೇವಂತಿಯ ಸಾಗಣೆ, ಖರೀದಿ, ಮಾರಾಟ ಜೋರು. ಬಿಡಿ ಹೂವು ಕೆಜಿಗೆ 200 ರೂಪಾಯಿ, ಕಟ್ಟಿದ ಹೂವು ಮೊಳಕ್ಕೆ 30 ರೂಪಾಯಿ. ಉತ್ತಮ ದರ್ಜೆಯದಾದರೆ ಮೊಳಕ್ಕೆ 50 ರೂಪಾಯಿ. ಕೆಆರ್ ಮಾರುಕಟ್ಟೆಗೆ ಹೋದರೆ ಸ್ವಲ್ಪ ಕಡಿಮೆ ಬೆಲೆಗೆ ಸಿಕ್ಕೀತು.

Karnataka painted with yellow flower Crysanthamum, Happy Navaratri

ಆಯುಧ ಪೂಜೆ ಮಾಡಲೇಬೇಕು. ಎಲ್ಲ ಕೊಳೆಗಳನ್ನು ತೊಳೆದುಹಾಕುವ ದಿನ. ಈಗಂತೂ ಎಲ್ಲರ ಮನೆಗಳಲ್ಲೂ ಯಾವುದಾದರೊಂದು ಗಾಡಿ ಇದ್ದೇ ಇರತ್ತೆ. ಕೆಲವರ ಮನೆಗಳಲ್ಲಿ ಆರು ಕಾರು, ಎರಡು ವ್ಯಾನು, ಎರಡೋ ಮೂರೋ ಸ್ಕೂಟರ್ರು. ಹಳ್ಳಿ ಕಡೆ ಆದ್ರೆ ಸೈಕಲ್ ಇರತ್ತೆ. ಅದಕ್ಕೆ ಎರಡು ಬಿಡಿ ಹೂವು ಚುಚ್ಚಿ, ಹ್ಯಾಂಡಲ್ಲಿಗೆ ಬಾಳೆಯೆಲೆ ಕಂದು, ನಾಕು ಬಲೂನು ಕಟ್ಟಿ ಊರೆಲ್ಲ ಟ್ರಿನ್ ಟ್ರಿನ್ ಅನ್ಕೊತಾ, ಹುಡುಗೀರ ಮುಂದೆ ಸ್ಟ್ಯೈಲ್ ಮಾಡ್ಕೋತಾ ಸುತ್ತಿದರೆ ಆಯುಧ ಪೂಜೆ ಆದಂತೆ.

ಬಸ್ಸು, ಲಾರಿಗಳ ಕಥೆ ವರ್ಣಿಸುವುದೇ ಬೇಡ. ಗಾಜಿನ ಮೂಲಕ ರಸ್ತೆಯೇ ಕಾಣದಷ್ಟು ಹೂವಿನ ಹಾರಗಳನ್ನು ಪೇರಿಸಿ ಅಲಂಕಾರ ಮಾಡಲಾಗುತ್ತೆ. ಒಳಗೆ ಟೇಪ್ ರೆಕಾರ್ಡರ್ ಚಾಲೂ ಆಗಿರತ್ತೆ. ಧ್ವನಿವರ್ಧಕದಿಂದ - ಖಾಲಿ ಕ್ವಾರ್ಟರ್ ಬಾಟಲ್ ನಂತೆ ಲೈಫು - ಹಾಡು ತೇಲಿತೇಲಿ ಬರ್ತಿರತ್ತೆ. ಇದನ್ನೆಲ್ಲ ನೋಡದವನು, ಕೇಳದವನು, ಓದದವನೇ ಪಾಪಿ. [ವಿಡಿಯೋ : ಸೇವಂತಿಯೆ ಸೇವಂತಿಯೆ]


ಹೂವು ಹೆಸರೆತ್ತಿದರೆ ಸಾಕು, ಒಬ್ಬೊಬ್ಬರಿಗೆ ಒಂದೊಂದು ನೆನಪಾಗತ್ತೆ. ಶಿವಮೊಗ್ಗದಲ್ಲಿ ಪಿಯೂಸಿ ಓದುವಾಗ ನಮ್ಮ ಮಾವನ ಮನೆಯಲ್ಲಿದ್ದೆ. ಅವರು ಫಾರೆಸ್ಟ್ ರೇಂಜರ್ ಆಗಿದ್ದರು. ಸ್ವಂತ ದುಡಿಮೆಯಿಂದ 60x100 ನಿವೇಶನದಲ್ಲಿ ಎಂಟು ಚದರ ಮನೆ ಕಟ್ಟಿದ್ದರು. ಉಳಿದದ್ದೆಲ್ಲಾ ಕೈತೋಟ. ಅವರೇ ಕೈಯಾಡಿಸುತ್ತಿದ್ದ ತೋಟ. ಸೀಬೇ ಕಾಯಿ ಕಿತ್ತಕ್ಕೆ ಮಾತ್ರ ನಾನು ತೋಟದೊಳಗೆ ನುಗ್ಗುತ್ತಿದ್ದೆ.

ಹಬ್ಬ ಹರಿದಿನ ಬಂದರೆ ನಂಗೆ ಜಾಸ್ತಿ ಕೆಲಸ. ತೋಟದಲ್ಲಿ ಸೇವಂತಿಗೆ, ನಂದಬಟ್ಟಲ, ಗುಲಾಬಿ, ಕನಕಾಂಬರ, ತುಂಬೆ ಏನೇನೋ ಇರ್ತಿತ್ತು. ಅದನ್ನೆಲ್ಲ ಹೌರಗೆ ಬಿಡಿಸಿಕೊಂಡು ಬುಟ್ಟಿಗೆ ಹಾಕಿ ದೇವರ ಮನೆ ಮುಂದಿಟ್ಟರೆ ನಮ್ಮ ಅತ್ತೆ 2 ರೂಪಾಯಿ ಇನಾಮು ಕೊಡುತ್ತಿದ್ದರು. ಆ ದುಡ್ಡಿನಲ್ಲಿ ಹಿಂದಿ ಸಿನಿಮಾ ನೋಡುವ ಖಯ್ಯಾಲಿ. ಅದು ರಾಜೇಶ್ ಖನ್ನಾ ಕಳಾಹೀನನಾಗುವ, ಅಮಿತಾಬ್ ಬಚ್ಚನ್ ಪ್ರಬುದ್ಧಮಾನಕ್ಕೆ ಬರುವ ಕಾಲ.

ನನಗೂ ಹೂವಿಗೂ ಇರುವ ಸಂಬಂಧ ಅಷ್ಟಕ್ಕಷ್ಟೆ. ಹೂವಿಗಿಂತ ಹೂವು ಮಾರುವ ಹುಡುಗಿಯ ಮೇಲೆ ನನಗೆ ಲವ್ ಜಾಸ್ತಿ. ಅಂಥ ಒಬ್ಬ ಹುಡುಗಿ ಆಡ್ರೆ ಹೆಬ್ಬರ್ನ್. ಹಾಲಿವುಡ್ಡಿನ My Fair Lady ಸಿನಿಮಾದಲ್ಲಿ ಅವಳ ಹೆಸರು ಎಲಿಜಾ ಡೂಲಿಟಲ್. ನಿರಕ್ಷಕರ ಕುಕ್ಷಿ. ಹೂವೂ ಅನ್ನೋ ಕಡೆ ಊವೂ ಅನ್ನುವಷ್ಟು ಕೋಮಲೆ. ಅಂಥ ಹುಡುಗಿಗೆ ಇಂಗ್ಲಿಷ್ ಅಕ್ಷರಾಭ್ಯಾಸ ಮಾಡಿಸಿ ಜಾಣ ಮಹಿಳೆಯನ್ನಾಗಿಸಿದ Prof Higgins (Rex Harrison) ಕಂಡರೆ ನನಗೆ ಆಗಾಗ ಕೋಪ ಬರತ್ತೆ.


ನಾನು ಗಾಡಿ ಇಟ್ಕೊಂಡಿಲ್ಲ. ಮನೆಯಲ್ಲಿ ದೇವರ ಪೂಜೆ ಇತ್ಯಾದಿಗಳಿಲ್ಲ. ಹೂವು ಮುಡಿಯುವವರಿಲ್ಲ. ಹೂವು ಖರೀದಿಸುವ ಪ್ರಮೇಯವೇ ಇಲ್ಲ. ಹಾಗಾಗಿ ಈಗಿರೋ ಮನೆ ಮೂಲೆಯಲ್ಲಿ ನಿತ್ಯ ಕಾಣುವ ಹೂವಿನ ಗಾಡಿ ಫೋಟೋ ತೆಗೆಯಲು ಅಡ್ಡಿಯಿಲ್ಲ. ಆಕೆಗೆ ಮೊದಲೇ ಹೇಳಿಬಿಟ್ಟೆ - ನೋಡಮ್ಮಾ ನನಗೆ ಹೂವು ಬೇಡ, ಬರೀ ಫೋಟೋ ತೆಗಿತೀನಿ ಅಂತ.

ತೆಗೀರಣ್ಣಾ, ತಗೀರಿ. ನಾನೂ ಬರ್ತೀನಾ ಅಂದ್ಲು. ಹೌದು ಅಂದೆ. ಟೀವೀಲಿ ಬರತ್ತಾ ಅಂದ್ಲು, ಇಲ್ಲ ಕಣಮ್ಮಾ ಅಂದೆ. ನಿನ್ನ ಹೆಸರೇನು ಅಂದೆ. ಲಕ್ಷ್ಮಿ ಅಂದ್ಲು. ಊರು? ಇದೇ ಊರು, ಬೆಂಗ್ಳೂರು ಅಂದ್ಲು. ನಿಮ್ಮೂರೂ? ಅಂತನೂ ಕೇಳಿಬಿಟ್ಲು. ಬಿಟ್ಬ್ಂದ್ ಊರ ಕಣಮ್ಮೋ ಅಂದಿದ್ದಕ್ಕೆ ಚೆನ್ನಾಗಿ ನಕ್ಲು. ಒಂದು ಕ್ಷಣಕ್ಕೆ ಒಂದು ಮೊಳನಾದರೂ ತೊಗೊಳೊಣಾ ಅನ್ಸುಬಿಡ್ತು. ಮನಸ್ಸು ಬೇಡಾ ಅಂತು. ಫೇಸ್ ಬುಕ್ಕುಗಳಲ್ಲಿ ಎಂದೂ ಬಾಡದ Profile Photo ಫ್ಲವರುಗಳು ಇರೋವಾಗ ಇದೆಲ್ಲ ಯಾಕೆ!

ಹಾಗೆ ನೋಡಿದರೆ ಹೂವು ಹಣ್ಣು ಕುರಿತು ಬರೆಯುವುದೇ ತಪ್ಪು. ಬರೀತಾ ಕೂತ್ರೆ The earth laughs in flowers. [ನಮ್ಮ ಕಚೇರಿಯಲ್ಲಿ ಆಯುಧ ಪೂಜೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+