ಕನ್ನಡ ಕೋಟ್ಯಾಧಿಪತಿಗೆ ನನ್ನ ಲಗೋರಿ

ಏನಾದರೂ ಮಾಡಿ ಕೋಟಿ ರೂಪಾಯಿ ಹೊಡಿಬೇಕು ಅಂತ ಕೌನ್‌ಬನೇಗಾ ಕರೋರ್‌ಪತಿಗೆ ತುಂಬಾ ಪ್ರಯತ್ನಪಟ್ಟಿದ್ದೆ. ನಿಮಿಷಕ್ಕೆ 6 ರೂಪಾಯಿ ಕರೆ ದರಗಳಲ್ಲಿ KBC ನಂಬರ್‌ಗೆ ಕರೆ ಮಾಡಿಮಾಡಿ ಸಾಕಾಯ್ತು. ಫೋನ್ ಚಾರ್ಜ್ ಹೋಯ್ತೇ ವಿನಾ ಕೆಬಿಸಿನವರು ಮುಂಬೈಗೆ ಬಾ ಅಂತ ನನ್ನನ್ನ ಕರೀಲೇ ಇಲ್ಲ. ತುಂಬಾ ಬೇಜಾರುಪಟ್ಟುಕೊಂಡಿದ್ದೆ.
ಇದೇ ದುಃಖದಲ್ಲಿ ಕಾಲ ತಳ್ಳುತ್ತಿರುವಾಗ ತಮಿಳು ವಾಹಿನಿಯೊಂದರಲ್ಲಿ ಕೆಬಿಸಿ ಮಾಡ್ತಾಯಿದಾರೆ, ಅದಕ್ಕೆ ಅಪ್ಲೈ ಮಾಡ್ಕೊ ಅಂತ ಯಾರೋ ಹೇಳಿದ್ರು. ಅಯ್ಯಯ್ಯಪ್ಪ, ನಂಗೆ ತಮಿಳೂ ಬರಲ್ಲ, ಬಂದ್ರೂ ಆ ತಮಿಳರ ದುಡ್ಡುಕಾಸು ಬೇಡ ಅಂತ ಸುಮ್ಮನಾದೆ.
ಹೀಗಿರುವಾಗ ನಮ್ಮ ಕನ್ನಡ ಟಿವಿ ಚಾನಲ್ಲಿನಲ್ಲೇ ಒಂದು ಕೆಬಿಸಿ ಬರ್ತಾಯಿದೆ ಅಂತ ನಮ್ಮ ವರದಿಗಾರರು ದಟ್ಸ್ ಕನ್ನಡದಲ್ಲಿ ಒಂದು ವರದಿ ಹಾಕಿದ್ರು. ಅಪ್ಲೈ ಮಾಡಕ್ಕೆ ಯಾಕೋ ಅಷ್ಟು ಆಸಕ್ತಿ ಬರಲಿಲ್ಲ. ಆದ್ರೆ, ಇವತ್ತು ಸುವರ್ಣ ಚಾನಲ್ಲಿನ ಒಬ್ಬರು ಸಿಕ್ಕು "ನೀವೂ ಹಾಕ್ರಿ ಸಾರ್, ಅದೃಷ್ಟ ಯಾರಪ್ಪನ ಮನೇದು. ಚಾನ್ಸ್ ಸಿಕ್ರೂ ಸಿಗಬಹುದು" ಅಂದ್ರು. ಸರಿ ಅಂತ ಫೋನ್ ತೊಗೊಂಡೆ.
ಸುವರ್ಣ ರಿಯಾಲಿಟಿ ಶೋನಲ್ಲಿ ಗೆದ್ದು ಕನ್ನಡ ಕೋಟ್ಯಾಧಿಪತಿ ಆಗಕ್ಕೆ ಎಸ್ಸೆಂಮೆಸ್‌ನಲ್ಲಿ ಒಂದು ಪರೀಕ್ಷೆ ಬರೀಬೇಕು. ಪ್ರಶ್ನೆ ತುಂಬಾ ಟಫ್ ಇತ್ತು. ಕಷ್ಟಪಟ್ಟು ಉತ್ತರ ಬರೆದು 57827 ಕ್ಕೆ ಕಳಿಸಿದೆ. ಪಾಸೂ ಆದೆ. ಪ್ರಶ್ನೆ: ಕನ್ನಡದ ನಟಸಾರ್ವಭೌಮ ಹೆಸರು ಪಡೆದ ನಟ ಯಾರು? [ವಿಡಿಯೋ]
ಸರಿ ಉತ್ತರ kk (space) C ಬರೆದು 57827 ಕ್ಕೆ ಕಳಿಸಿ ನೊಂದಾಯಿಸಿಕೊಂಡೆ. ತಕ್ಷಣ ಉತ್ತರ ಬಂತು. Thanks! Reply with first letter of your gender (space) age (space) pincode. Eg : M 25 560011. If you are a 25 year old male from Bangalore please respond in 20 minutes. ಇದಕ್ಕೂ ಉತ್ತರ ಬರೆದು ಕಳಿಸಿದೆ.
ಸುವರ್ಣ ಟಿವಿ ವತಿಯಿಂದ ಬಂದ ಇತ್ತೀಚಿನ ಕೊನೆಯ ಮೆಸೇಜ್ ಹೀಗಿದೆ. Thanks! We will inform you if your entry is eligible. For terms and conditions log on to www.facebook.com/kotyadhipathi.
ವಿ.ಸೂ: ಮೇಲೆ ನಮೂದಿಸಿದ್ದು ಕೇವಲ ಉದಾಹರಣೆಯಷ್ಟೆ. ಪ್ರಶ್ತ್ನೆಗಳು ದಿನದಿಂದ ದಿನಕ್ಕೆ ಬದಲಾಗುತ್ತದೆ. ಇಂದು ಕೇಳುವ ಪ್ರಶ್ತ್ನೆಗೆ 24 ಗಂಟೆ ವಾಯಿದೆ ಮಾತ್ರ. ಅಂದರೆ ಪ್ರತಿ ರಾತ್ರಿ 8ಗಂಟೆಗೆ ಪುನೀತ್ ಕೇಳುವ ಪ್ರಶ್ತ್ನೆಗೆ ಮರುದಿನ ರಾತ್ರಿ 7.30ರ ಒಳಗೆ ನಿಮ್ಮ ಉತ್ತರ ಮೆಸೇಜ್ ಮಾಡಬೇಕು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications