ಬೆತ್ತಲೆ ಮೆರವಣಿಗೆ ಯರ್ರಮ್ಮನ ಕೊನೆ ಮೆರವಣಿಗೆ

1999ರ ಲೋಕಸಭಾ ಚುನಾವಣೆಯ ನಂತರ ಬಳ್ಳಾರಿ ತಾಲೂಕಿನ ವಣೇನೂರು ಗ್ರಾಮದಲ್ಲಿ ವಾಲ್ಮೀಕಿ ಹುಡುಗಿ ಮತ್ತು ದಲಿತ ಹುಡುಗನ ನಡುವೆ ಉಂಟಾದ ಪ್ರೇಮ ಪ್ರಕರಣ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿತಳಾಗಿ ಯರ್ರೆಮ್ಮ ಬೆತ್ತಲೆಯಾಗಿ ಮೆರವಣಿಗೆ ಆಗಿದ್ದಳು. 2002ರಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು.
ಆಗಿನ ಎಸ್.ಎಂ. ಕೃಷ್ಣ ನೇತೃತ್ವದ ರಾಜ್ಯ ಸರಕಾರ ಸಂತ್ರಸ್ತಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಡುಗೆ ಸಹಾಯಕಳಾಗಿ ಉದ್ಯೋಗ ಮತ್ತು ಕೋಟೆ ಪ್ರದೇಶದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಿವೇಶನ ನೀಡಿ, ಆಶ್ರಯ ಮನೆಯನ್ನು ನಿರ್ಮಿಸಿಕೊಟ್ಟಿತ್ತು. ಹೇಳುತ್ತಾ ಹೋದರೆ ಕಥೆ ಸಿನೀಮಯವಾಗಿದೆ.
ಶೋಷಿತ ಯರ್ರಮ್ಮನಿಗೆ ದಲಿತ ಸಂಘಟನೆಗಳು, ಜನಪರ ಸಂಘಟನೆಗಳು, ಪ್ರಗತಿಪರ ಚಿಂತಕರ ಬೆಂಬಲವೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ವರ್ಷದ ಮಹಿಳೆಯೂ ಆಗಿ ಅನೇಕರ ಗಮನ ಸೆಳೆದಿದ್ದರು. ಶ್ವಾಸಕೋಶ ಅನಾರೋಗ್ಯದಿಂದ ನರಳುತ್ತಿದ್ದ ಇವರು ನಡುವಯಸ್ಸಿನಲ್ಲೇ ತೀರಿಕೊಂಡರು. ಗುರುವಾರ ಅಂತ್ಯಸಂಸ್ಕಾರ ನಡೆಯಿತು.












Click it and Unblock the Notifications