ಕನ್ನಡ ಪತ್ರಿಕೆಗಳು ಒಂದೇ ಬಳ್ಳಿಯ ಹೂವುಗಳು

India in One Page-Kannada
ಇಂಟರ್ ನೆಟ್ಟಿನಲ್ಲಿ ಕನ್ನಡದ ಬಳಕೆ ವೃದ್ಧಿಸುವಂತೆ ಮಾಳ್ಪುದು ನಮ್ಮ ಅನುದಿನದ ಕಾಯಕ. ನಮ್ಮ ಭಾಷೆ, ನಮ್ಮ ಕನ್ನಡಿಗರ ಚಿಂತನೆ, ನಮ್ಮ ಕಳವಳಗಳನ್ನು ಕೂಗಿ ಹೇಳುವುದಕ್ಕೆ ಎಷ್ಟು ಗಂಟಲುಗಳು ಇದ್ದರೂ ಕಡಿಮೆ ಎನ್ನುವಂಥ ಪರಿಸ್ಥಿತಿ ಲಾಗಾಯ್ತಿನಿಂದ ಇರುವುದು ನಿಮಗೆ ಗೊತ್ತು. ಇದಕ್ಕೆ ಮುಖ್ಯ ಕಾರಣ, ಹಲವು ಹತ್ತು ಹಲವು ನೂರು ಹಲವು ಸಾವಿರ ಮಾಹಿತಿಗಳು ಕನ್ನಡದಲ್ಲಿ ಲಭ್ಯವಿರದಿರುವುದು.

ಹಾಗಂತ ಕೈಕಟ್ಟಿ ಕೂಡದೆ ಏನಾದರೂ ಮಾಡುತಿರು ಮಂಕುತಿಮ್ಮ ಎಂಬ ಮಂತ್ರ ಜಪಿಸುವುದು ಮತ್ತು ಮಂತ್ರಕ್ಕೊಂದು ತಂತ್ರ ಜೋಡಿಸುವುದರಲ್ಲಿ ನಿಮ್ಮ ಮೆಚ್ಚಿನ ದಟ್ಸ್ ಕನ್ನಡ ನಿಸ್ಸೀಮ. ನಮ್ಮ ಈ ಪರಿಯ ಪ್ರೀತಿಯ ಕನ್ನಡ ಸಸ್ಯ ಶ್ಯಾಮಲೆ ಈ ದೀಪಾವಳಿಗೆ ಇನ್ನೊಂದು ಫಲ ಕೊಟ್ಟಿದೆ. ಬನ್ನಿ, ಅಂತರ್ ಜಾಲದಲ್ಲಿ ಕನ್ನಡದ ಹೊಸ ದೀಪವೊಂದು ಹತ್ತಿದೆ. ನೋಡಿ.

ಕನ್ನಡದಲ್ಲಿ ಉಸಿರಾಡುವ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಸಂಜೆವಾಣಿ, ಈ ಸಂಜೆ, ಹೊಸದಿಗಂತ, ಗಲ್ಫ್ ಕನ್ನಡಿಗ, ಸಂಯುಕ್ತ ಕರ್ನಾಟಕ, ಕೆಂಡಸಂಪಿಗೆ ಮುಂತಾದ ತಾಣಗಳ ಜತೆಗೆ ನೂರಾರು ಬ್ಲಾಗುಗಳು ತಮ್ಮತಮ್ಮ ಒಲವು ನಿಲುವಿನ ಕನ್ನಡ ಸರಕುಗಳನ್ನು ನಿತ್ಯ ಅಂತರ್ ಜಾಲದಲ್ಲಿ ತೇಲಿ ಬಿಡುತ್ತವೆ. ಅವುಗಳಲ್ಲಿ ಯಾವುದಾದರೂ ಒಂದೋ ಅಥವಾ ಎರಡನ್ನೋ ನೀವು ನೋಡುತ್ತಿರುತ್ತೀರಿ, ಓದಿರುತ್ತೀರಿ. ತುಂಬ ಸಂತೋಷ.

ಆದರೆ, ಕನ್ನಡದಲ್ಲಿ ಬೆಳಕಾಗುವ ಎಲ್ಲ ತಾಣಗಳನ್ನು ನಿತ್ಯ ಗಮನಿಸಿ ಅವುಗಳಿಂದ ಆರಿಸಿದ ಒದೊಂದು ಸುದ್ದಿ/ ಟಿಪ್ಪಣಿ/ ಅಂಕಣ/ ಲೇಖನಗಳನ್ನು ಒಂದೇ ಪುಟದಲ್ಲಿ ಲೇಪಿಸುವ ಪುಟವೊಂದರ ಕೊರತೆ ಇತ್ತು. ಈ ಕೊರತೆ ತುಂಬುವ ತಾಣದ ಹೆಸರು ಈ ತಾಣ ಸ್ವಂತವಾಗಿ ಏನನ್ನೂ ಬರೆಯುವುದಿಲ್ಲ, ಪ್ರಕಟಿಸುವುದಿಲ್ಲ. ಕೆಲವೊಮ್ಮೆ ಮೂಲ ಪುಟದಲ್ಲಿರುವ ಶೀರ್ಷಿಕೆಯನ್ನು ಬಿಟ್ಟು ತನ್ನದೆ ಆದ ಹೆಡ್ಡಿಂಗ್ ಅನ್ನು ನಮೂದಿಸಬಹುದಷ್ಟೆ.

India in one Page ಕಲ್ಪನೆಯಲ್ಲಿ ಇತ್ತೀಚೆಗೆ ಆರಂಭವಾದ one.in ತಾಣ ಭಾರತದ ಮುಖ್ಯವಾಹಿನಿಯಿಂದ ಆಯ್ದ ಸುದ್ದಿ ಸೂರುಗಳನ್ನು ಜಾಗರೂಕತೆಯಿಂದ ಆಯ್ದು ಪ್ರಕಟಿಸುತ್ತದೆ. ಈ ತಾಣಕ್ಕೆ ಕನ್ನಡವೂ ಸೇರಿಕೊಂಡಿದ್ದು ಕನ್ನಡದಲ್ಲಿ ಸಾಗುವ ವೆಬ್ ಚಟುವಟಿಕೆಗಳನ್ನು ಒಂದೆಡೆ ಕಲೆ ಹಾಕುವಲ್ಲಿ ನೆರವಾಗುತ್ತದೆ.

ಅಲ್ಲಿಂದ ಇಲ್ಲಿಂದ ಆಯ್ದ ಕೊಂಡಿಗಳಿಗೊಂದು window ತೆರೆಯುವ ತಾಣಗಳು ಇಂಗ್ಲಿಷಿನಲ್ಲಿ ಬೇಕಾದಷ್ಟಿವೆ. ಹಾಗೆಂದು ಇವುಗಳೆಲ್ಲ ಅಗ್ರಿಗೇಟರ್ ಎನಿಸಿಕೊಳ್ಳುವುದಿಲ್ಲ. ಅವುಗಳನ್ನು ವಿಷಯ/ದೇಶ ಆಧರಿಸಿ World/Topic/City-in-One-Page-ಎಂದು-ಬಣ್ಣಿಸಬಹುದು.-ಇವತ್ತು-ಜಾಗತಿಕ-ಮಟ್ಟದಲ್ಲಿ-ಸುದ್ದಿ-ಕೊಂಡಿಗಳಿಗೆ-ಅತ್ಯಂತ-ಹೆಸರುವಾಸಿಯಾದ-ತಾಣ-http://drudgereport.com/

ಡ್ರಡ್ಜರ್ ಅನ್ನು ಮಾದರಿಯಾಗಿ ಇಟ್ಟುಕೊಂಡು ಸಾಗುವ ಒನ್. ಇನ್ ಕನ್ನಡಕ್ಕೆ ನಿಮ್ಮ ನೆರವು, ಪ್ರೋತ್ಸಾಹ ಮತ್ತು ಸಹಭಾಗಿತ್ವ ಬೇಕು. ಪ್ರಕಾಶಕರಾಗಲೀ, ಸಂಪಾದಕರಾಗಲೀ ಅಥವಾ ಓದುಗರೇ ಆಗಲಿ ತಾವು ಕಂಡ ಹಾಟ್ ಅಥವಾ ಕೂಲ್ ಕನ್ನಡದ ಕೊಂಡಿಯನ್ನು http://one.in/kannada/ದಲ್ಲಿರುವ ಫೀಡ್ ಬ್ಯಾಕ್ ಕೊಳವೆ ಮುಖಾಂತರ ಸಲ್ಲಿಸಬೇಕು.

ವಿಷಯ, ವೇದಿಕೆ ಅನಗತ್ಯ ಪುನರಾವರ್ತನೆ ಆಗದಂತೆ ಕನ್ನಡದ ಪುಟಗಳಿಗೆ ಸೂಕ್ತವಾಗಿ ಲಿಂಕುಗಳನ್ನು ಕೊಡುವ ಜವಾಬ್ದಾರಿ ಮತ್ತು ಸಂತೋಷ ನಮ್ಮದು. ವಿಸೂ : ವಿಜಯ ಕರ್ನಾಟಕ ಮುಂತಾದ ಸ್ಟಾರ್ ವ್ಯೂಗಳಲ್ಲಿ ಲಭ್ಯವಾಗುವ, ಟ್ರಾಕ್ ಬ್ಯಾಕ್ ಯುಆರ್ ಎಲ್ ಇಲ್ಲದ ತಾಣಗಳಿಂದ ಸುದ್ದಿ ಹೆಕ್ಕುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+