ಬುದ್ದಿವಂತರಿಗೆ ಮಹಿಳೆಯರ ವಿಜಯಮಾಲೆ

How do you chose your man? (Photo by Vasanth KJ)
ದಟ್ಸ್ ಕನ್ನಡ ನಿತ್ಯ ಪ್ರಕಟಿಸುವ ಸಾರ್ವತ್ರಿಕ ಚುನಾವಣೆಗಳ ಮತಗಟ್ಟೆ ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಕರ್ಸರನ್ನು ಮತಗಟ್ಟೆಯವರೆಗೆ ನಡೆಸಿಕೊಂಡು ಬಂದು ದಿನಾದಿನಾ ತಪ್ಪದೆ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವದ ಅಮೂಲ್ಯ ಕೈಂಕರ್ಯವನ್ನು ನೆರವೇರಿಸಿದ ಮತ್ತು ನೆರವೇರಿಸುತ್ತಿರುವ ಓದುಗರಿಗೆ ಹಾರ್ದಿಕ ಅಭಿನಂದನೆಗಳು!

ನಮ್ಮ ಸಮಾಜದ ಆಗುಹೋಗುಗಳ ಬಗೆಗೆ ಪ್ರಜೆಗಳ ನಾಡಿಮಿಡಿತ ಅರಿಯುವುದು ಕಷ್ಟ. ಆದರೂ ಒಂದು ಪ್ರಯತ್ನ ಮಾಡಿನೋಡುವುದೇ ನಮ್ಮ ಪೋಲ್ ವಿಭಾಗದ ಉದ್ದೇಶ. ಇದರಲ್ಲಿ ರಾಜಕೀಯ, ಸಿನಿಮಾ, ಅಪರಾಧ, ಕ್ರೀಡಾಲೋಕ, ಶಿಕ್ಷಣ, ಧರ್ಮ, ಜೀವನಶೈಲಿ, ನ್ಯಾಯ ನೀತಿ ಹಗರಣ ಮುಂತಾದ ಅನುದಿನಗಳ ಸುದ್ದಿ ಹೂರಣವನ್ನು ಆಧರಿಸಿದ ಪ್ರಶ್ನೆಗಳಲ್ಲದೆ ಕುಟುಂಬ ಸೌಖ್ಯ, ಪ್ರೀತಿ, ಮದುವೆ, ಆಹಾರ ಹಾಗೂ ಅನೇಕ ಬಗೆಯ ವೈಯಕ್ತಿಕ ಒಲವು ನಿಲುವುಗಳನ್ನು ಮತ ಎಣಿಕೆಯ ಮೂಲಕ ಸ್ಥೂಲವಾಗಿ ಅರಿಯುವ ಉದ್ದೇಶವನ್ನು ನಮ್ಮ ಸಂಪಾದಕೀಯ ಬಳಗ ಇಟ್ಟುಕೊಂಡಿದೆ.

ಇದು ಮದುವೆ ಸೀಸನ್ ಆಗಿರುವುದರಿಂದ 'ನಿಮ್ಮ ಬಾಳಿನ ಅವನು ಹೇಗಿರಬೇಕು'? ಮತ್ತು ಈಗಾಗಲೇ ಮದುವೆಯಾಗಿರುವವರು ತಮ್ಮ ಬಾಳ ಸಂಗಾತಿ ಹೇಗಿದ್ದರೆ ಚೆನ್ನ ಎಂದು ಬಯಸುತ್ತಾರೆ ಎಂಬ ಅಂಶವನ್ನು ತಿಳಿಯಲು ಮೊನ್ನೆ (8 ಜೂನ್ 2010) ಹೀಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅದು ಹೀಗಿತ್ತು :

ಮಹಿಳಾ ಓದುಗರನ್ನು ಮಾತ್ರ ಗಮನದಲ್ಲಿಟ್ಟು ನಡೆಸಿದ ಈ ಚುನಾವಣೆಯಲ್ಲಿ ಪಾಲ್ಗೊಂಡ ದಟ್ಸ್ ಕನ್ನಡದ ಮಹಿಳಾಮಣಿಗಳಿಗೆ ವಂದನೆಗಳು. ಕಳೆದ 36 ಗಂಟೆಗಳ ಅವಧಿಯಲ್ಲಿ ನಮ್ಮ ಆನ್ ಲೈನ್ ಓಟಿಂಗ್ ಮಿಷಿನ್ ನಲ್ಲಿ ದಾಖಲಾದ ಒಟ್ಟು ಮತಗಳ ಸಂಖ್ಯೆ 740. ಫಲಿತಾಂಶ ಮತ್ತು ಮತಗಳ ಬ್ರೇಕ್ ಅಪ್ ಈ ಕೆಳಕಂಡಂತಿದೆ.

ಬುದ್ದಿವಂತ 442
ಧೈರ್ಯವಂತ 142
ಹಣವಂತ 121
ರೂಪವಂತ 035

ದಟ್ಸ್ ಕನ್ನಡ ಓದುವ ಮಹಿಳೆಯರಿಗೆ ಧೈರ್ಯವಂತನಿಗಿಂತ, ಹಣವಂತನಿಗಿಂತ, ರೂಪವಂತನಿಗಿಂತ ಬುದ್ದಿವಂತನೇ ಇಷ್ಟವಾಗಿದ್ದಾನೆ. ಬುದ್ದಿವಂತರು ಜಯಭೇರಿ ಬಾರಿಸಿದ್ದು ಧೈರ್ಯವಂತರು ಭಾರೀ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ರೂಪವಂತರು ಠೇವಣಿ ಕಳೆದುಕೊಂಡಿದ್ದಾರೆ. ಭಲೇ! ನಿಮಗೆ ಬುದ್ದಿವಂತನಾದ ಗಂಡನೇ ಸಿಗಲಿ, ಈಗಾಗಲೇ ಸಿಕ್ಕಿದ್ದರೆ ಅವನ ಬುದ್ದಿವಂತಿಕೆ ವೃದ್ಧಿಯಾಗಲಿ ಎಂದು ದಟ್ಸ್ ಕನ್ನಡ ಸಂಪಾದಕೀಯ ಬಳಗ ಆಶಿಸುತ್ತದೆ. ನಮ್ಮ ಓದುಗರು ಕೂಡ ಬುದ್ಧಿವಂತರೆಂದುಕೊಂಡು ನಾವೂ ಬೆನ್ನು ತಟ್ಟಿಕೊಳ್ಳುತ್ತೇವೆ.

ಬುದ್ಧಿವಂತ ಒಂದು ಗುಣವಾಚಕ ಪದ. ತುಂಬ ಜನರಲ್ ಆಗಿ ಹೇಳುವುದಾದರೆ ಅವನು knowledgeable ಅಂತಲೋ intelligent ಅಂತಲೋ ಕರೀಬಹುದು. ಇದ ಬಿಟ್ಟು ಬುದ್ಧಿವಂತ ಎಂದರೆ ಏನು? ಯಾರು ಬುದ್ದಿವಂತರು? ಬುದ್ದಿವಂತ ಪದಕ್ಕೆ ಇನ್ಯಾವ ಅರ್ಥಗಳಿವೆ? ಬುದ್ದಿವಂತರನ್ನು ಬಾಳ ಸಂಗಾತಿ ಮಾಡಿಕೊಳ್ಳುವುದರಿಂದ ಏನು ಪ್ರಯೋಜನ? ನೀವು ನಮಗೆ ಮತ್ತು ಜತೆಗಾರ ಓದುಗರಿಗೆ ಈ ವಿಚಾರಗಳನ್ನು ಇನ್ನಷ್ಟು ವಿವರವಾಗಿ ಬರೆದು ತಿಳಿಸಲು ಸ್ವಾಗತ. ಈ ಬುದ್ಧಿವಂತರ ಹರಟೆ ಕಟ್ಟೆಯಲ್ಲಿ ಧೈರ್ಯವಂತರು, ಹಣವಂತರು ಮತ್ತು ರೂಪವಂತರು ಲಿಂಗಬೇಧವಿಲ್ಲದೆ ಭಾಗವಹಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+