ದಟ್ಸ್ ಕನ್ನಡದ ಟ್ವೀಟ್‌ಕನ್ನಡಕ್ಕೆ ಸುಸ್ವಾಗತ

ಇದನ್ನು ಸಾಧ್ಯವಾಗಿಸಿದ್ದು, ದಟ್ಸ್ ಕನ್ನಡದ ಟ್ವೀಟ್‌ಕನ್ನಡದಲ್ಲಿ. ಟ್ವಿಟ್ಟರ್ ಎಂಬ ಸೋಷಿಯಲ್ ನೋಟ್ವರ್ಕಿಂಗ್ ತಾಣ ಬ್ಲಾಗ್ ಲೋಕದಲ್ಲಿ ಹೊಸ ವ್ಯಾಖ್ಯಾನವನ್ನೇ ಬರೆದಿದೆ. ಆ ಬಳಗಕ್ಕೆ ದಟ್ಸ್ ಕನ್ನಡ ಕೂಡ ಸೇರಿರುವುದು ಹೆಮ್ಮೆಯ ಸಂಗತಿ. ದಟ್ಸ್ ಕನ್ನಡ ಟ್ವೀಟ್ ಬಳಗವನ್ನು ಸೇರುವುದು ಕೂಡ ಅಷ್ಟೇ ಸುಲಭವಾದ ಸಂಗತಿ. ಬಳಗಕ್ಕೆ ಸೇರಿದ ನಂತರ ಟ್ವಿಟ್ಟರ್ ಲೋಕದಲ್ಲಿರುವ ನಿಮಗಿಷ್ಟದವರ ಟ್ವಿಟ್ಟರ್ ತಾಣವನ್ನು ನಿಮ್ಮ ಪಟ್ಟಿಗೆ ಸೇರಿಸಿ, ಹರಟೆ ಹೊಡೆಯಲು ಪ್ರಾರಂಭಿಸಿ.
ಸುಲಭ, ಸುಲಭ, ಸುಲಭ : ಟ್ವೀಟ್‌ಕನ್ನಡ ಬಳಗ ಸೇರುವುದು ಅತಿ ಸರಳ ಮತ್ತು ಸುಲಭ. ಇಲ್ಲಿ ಯೂಸರ್ ನೇಮ್, ಪಾರ್ವರ್ಡ್ ಮುಂದಾದವುಗಳ ಕಂತ್ರಾಟವೇ ಇಲ್ಲ. Sign in with Twitter ಕ್ಲಿಕ್ಕಿಸಿ Allow ಎಂಬ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಸಾಕು ನೀವು ಟ್ವೀಟ್‌ಕನ್ನಡ ಬಳಗದ ಸದಸ್ಯರಾಗುತ್ತೀರಿ.
ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ಟ್ವಿಟ್ಟರ್ ಹೆಚ್ಚು ಸದ್ದನ್ನು ಮಾಡದೇ ಜನಪ್ರಿಯತೆಯ ಮಜಲನ್ನು ಏರಿದೆ ಮತ್ತು ಏರುತ್ತಿದೆ. 2008ರ ಮೇ ತಿಂಗಳಲ್ಲಿ ಟ್ವಿಟ್ಟರ್ ನಲ್ಲಿ 13 ಲಕ್ಷ ಬಳಕೆದಾರರಿದ್ದರು. ಆದರೆ, ಈಗ ಬಳಕೆದಾರರ ಸಂಖ್ಯೆ 320 ಲಕ್ಷ ದಾಟಿದೆ. ಟ್ವಿಟ್ಟರ್ ಜನಪ್ರಿಯತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.
ತನ್ನ ಬಗ್ಗೆ ಟಾಂಟಾಂ ಮಾಡಿಕೊಳ್ಳದೇ ಬ್ಲಾಗಿಗರಿಗೆ ಅತ್ಯಂತ ಪ್ರಿಯವಾಗಿರುವ ಟ್ವಿಟ್ಟರ್ ನಲ್ಲಿ ಕಡಿಮೆ ಶಬ್ದಗಳಲ್ಲಿ ಹೆಚ್ಚಿನ ಮಾಹಿತಿಯನ್ನು ರವಾನಿಸುವುದು ಸಾಧ್ಯವಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ನಡೆಸುವ ಬಳಕೆದಾರರೇ ಹೆಚ್ಚಾಗುತ್ತಿರುವುದು ಅಂಕಿಸಂಖ್ಯೆ ಸಾಬೀತುಪಡಿಸಿದೆ. ಭಾರತದಲ್ಲಿ ಇಂಗ್ಲಿಷ್ ಬಳಸುವ ಟ್ವಿಟ್ಟಿಗರ ಸಂಖ್ಯೆ ಶೇ.12ರಷ್ಟು ಮಾತ್ರ ಎಂಬುದನ್ನು ಗಮನಿಸಿದರೆ, ಪ್ರಾದೇಶಿಕ ಭಾಷಾ ಬಳಕೆದಾರರ ವಿಸ್ತಾರದ ಅರಿವಾಗುತ್ತದೆ.
ಟ್ವಿಟ್ಟರ್ ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡವನ್ನು ಪ್ರಥಮ ಬಾರಿಗೆ ಅಳವಡಿಸಿದ ಹೆಮ್ಮೆ ಒನ್ ಇಂಡಿಯಾದ್ದು. ಹಾಗೆಯೇ, ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಕೂಡ ಟ್ವಿಟ್ಟರನ್ನು ಅಳವಡಿಸಿದ ಸಾಧನೆ ಒನ್ ಇಂಡಿಯಾದ್ದಾಗಲಿದೆ. ನೀವು ಇಲ್ಲಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯಬಹುದು. ಟ್ವಿಟ್ಟರ್ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಲೇಖನಗಳು ಬಂದಿವೆ. ಆದರೆ, ಕನ್ನಡದಲ್ಲಿ ಬರೆಯುವುದಕ್ಕೆ ಅವಕಾಶ ನೀಡುವ ಪ್ರಥಮ ಟ್ವಿಟ್ಟರ್ ಅಪ್ಲಿಕೇಷನ್ ಇದಾಗಲಿದೆ ಎಂಬುದು ಕೂಡ ಹೆಮ್ಮೆಯ ಸಂಗತಿ.
ಟ್ವಿಟ್ಟರ್ ನಲ್ಲಿ ಕನ್ನಡ ಬಳಸುವ ಸುಖ, ಸಂತಸ ನಿಮ್ಮದಾಗಲಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications