ಸ ರಘುನಾಥ ಅಂಕಣ; ಹೊಗೆಯಲ್ಲೇ ತಣ್ಣಗಾದ ಮುನೆಕ್ಕನ ಮುನಿಸು
ಇಂತಹ ಸಂದರ್ಭಗಳಲ್ಲಿ ಮುನೆಕ್ಕ ಅಪ್ಪಯ್ಯನ ಮನೆಗೆ ಹೋಗಿಯೇ ತನ್ನ ಮನೆಗೆ ಹೋಗುತ್ತಿದ್ದುದು. ಆದರಿಂದು ಯಾರನ್ನೂ ಮಾತನಾಡಿಸದೆ ಮನೆ ಸೇರಿಕೊಂಡಿದ್ದಳು. ಅಮ್ಮನೊಂದಿಗಿದ್ದ ಸುನಂದಾ ಆ ರಾತ್ರಿ ಅಲ್ಲಿಯೇ ಮಲಗಿದಳು.
Recommended Video
ಬೆಳಗಾಯಿತು. ಮುನೆಕ್ಕನ ಬರುವಿಕೆಗಾಗಿ ಕಾದಿದ್ದವರಲ್ಲಿ ಅಪ್ಪಯ್ಯನ ಹೊರತಾಗಿ ಉಳಿದವರು ನಿರಾಸೆಯೊಂದಿಗೆ ಬೇಸರಗೊಂಡರು. ಸ್ನಾನ ಮುಗಿಸಿದ ಸುನಂದಾ ತನಗೆ ಹಾಗೂ ಮುನೆಕ್ಕನಿಗೆ ತಿಂಡಿ ತೆಗೆದುಕೊಂಡು ಹೋದಳು. ಮುನೆಕ್ಕನ ಮುಖ ದುಮುಗುಡುತ್ತಿತ್ತು. ಅವಳು ತಿಂಡಿ ತಿನ್ನಲಿಲ್ಲವಾಗಿ ಸುನಂದಾ ಹಸಿದ ಹೊಟ್ಟೆಯಲ್ಲೇ ಅಂಗಡಿ ವ್ಯಾಪಾರಕ್ಕೆ ಕುಳಿತಳು.
ಮುನೆಕ್ಕನ ಕರುಳು ಚುರ್ರೆಂದರೂ ಸಹಿಸಿಕೊಂಡಳು. ಮಧ್ಯಾಹ್ನದ ಹೊತ್ತಿಗೆ ಅಪ್ಪಯ್ಯ, ಅಮ್ಮ, ನರಸಿಂಗರಾಯ ಮುನೆಕ್ಕನ ಮನೆಗೆ ಬಂದರು. ತೆರೆದಿಟ್ಟ ಬಟ್ಟಲಿನಲ್ಲಿದ್ದ ಚಿತ್ರಾನ್ನ ಆರಿ ಅಕ್ಷತೆಯಾಗಿತ್ತು. ಮೊಣಕಾಲಿನ ಮೇಲಿಂದ ಕೈಯನ್ನು ಕೆನ್ನೆಗೆ ಊರಿ ಕುಳಿತಿದ್ದ ಮುನೆಕ್ಕನ ಭಂಗಿ ಕೊಂಚವೂ ಬದಲಾಗಲಿಲ್ಲ. ಅಮ್ಮ ಅಡುಗೆ ಮನೆಗೆ ಹೋಗಿ ಕಾಫಿ ಮಾಡಿತಂದು, ಅಂಗಡಿಯಲ್ಲಿ ಸೀಸೆಯಲ್ಲಿದ್ದ ಎರಡು ಬನ್ನುಗಳನ್ನು ತಂದು ಸುನಂದಾಳನ್ನು ಕರೆದಳು. ಅವಳು ಮುನೆಕ್ಕನ ಮುಖವನ್ನೇ ನೋಡುತ್ತ ಕುಳಿತಳು. ಮುನೆಕ್ಕ ಬಾಗಿಲತ್ತಲೇ ನೋಡುತ್ತಿದ್ದಳು.

ಮುನೆಕ್ಕ ಆ ಮಗುನ್ಯಾಕೆ ಉಪವಾಸ ಕೆಡುವುತೀ? ತಗೋ ತಿನ್ನು ಅಂದಳು ಅಮ್ಮ. ಮುನೆಕ್ಕ ಘನಮೌನವನ್ನು ಮುರಿಯಲಿಲ್ಲ. ಇಷ್ಟಕ್ಕೇ ಸಂಬಂಧಾನ ಹರಕೊತೀಯೇನು ಅಂದರೂ ಹರಾಶಿವಾ ಅನ್ನಲಿಲ್ಲ. ನರಸಿಂಗರಾಯ 'ನನ್ನ ಕೆನ್ನೆಗೆರಡು ಬಾರಿಸಿಬಿಡು. ನಾನು ಹೇಳುವುದು ಕೇಳಿದ ಮೇಲೂ ತಪ್ಪು ಅನ್ನಿಸಿದರೆ ಈ ಜನ್ಮದಲ್ಲಿ ನನ್ನನ್ನು ಮಾತಾಡಿಸಬೇಡ. ಸುನಂದಾಳ ಮುಖ ನೋಡಿಯಾದರೂ ಕಾಫಿ ಕುಡಿ' ಎಂದು ಅವಳ ಮುಂದೆ ಕೈಕಟ್ಟಿ ನಿಂತ. ಮುನೆಕ್ಕ ನಕ್ಕಳು. 'ಇದು ಸರಿ ನೋಡು' ಅಂದ ಅಪ್ಪಯ್ಯ.
'ನರಸಿಂಗನ ಮೇಲೆ ನನಗೂ ಕೋಪ ಬಂದಿತ್ತು. ಮನೆಗೆ ಬಂದು ಅವನು ಹೇಳಿದ್ದನ್ನು ಕೇಳಿದ ಮೇಲೆ ಇವನು ಮಾಡಿದ್ದು ಸರಿ ಅನ್ನಿಸಿತು. ಕೆಟ್ಟವರು ಒಳ್ಳೆಯವರಾಗಬೇಕು ಅನ್ನೋಳು ನೀನು. ಅಂತಹ ನೀನೇ ಅರ್ಥಮಾಡಿಕೊಳ್ಳದೆ ಹೋದರೆ ಹೇಗೆ? ನರಸಿಂಗ ಆ ಅವಕಾಶಾನ ಉಮೇಶನಿಗೆ ಕೊಟ್ಟು, ಅವನನ್ನು ಪಶ್ಚಾತ್ತಾಪಕ್ಕೆ ದೂಡಿದ್ದಾನೆ. ಸುನಂದಾ ಇತ್ತ ಬಂದಾಗ ಉಮೇಶ ಮನೆಗೆ ಬಂದಿದ್ದ. ಕೈ ಮುಗಿದು, ನಮ್ಮ ಉಪಕಾರ ಮರೆಯೊಲ್ಲ ಅಂದು, ನರಸಿಂಗನ ಕೈ ಹಿಡಿದು ನಿನ್ನ ಸ್ನೇಹ ಬೇಕು ಅಂದ. ಇದು ಸರಿಯಲ್ಲ ಅನ್ನಿಸಿದರೆ ನಿನ್ನಿಷ್ಟ. ಇನ್ನು ಮುಂದೆ ನಾನೇನು ಹೇಳಲಾರೆ ಅಂದ ಅಪ್ಪಯ್ಯ.
ಮುನೆಕ್ಕ ನರಸಿಂಗರಾಯನ ಕೆನ್ನೆ ತಟ್ಟಿ, ಒಂದೆರಡು ಚೆಂಬು ನೀರು ಹುಯ್ಕೊಂಡು ಬಂದು ಬಿಡುತ್ತೇನೆ. ಅಡುಗೆ ಮಾಡುತ್ತೇನೆ. ಇಲ್ಲೇ ಊಟ ಅಂದಳು. ನೀನು ನಿಧಾನಕ್ಕೆ ಸ್ನಾನ ಮಾಡಿ ಬಾ. ನಾನು ಸುನಂದಾ ಅಡುಗೆ ಮನೆಗೆ ಹೋಗುತ್ತೇವೆ ಅಂದ ಅಮ್ಮ, ಅಡುಗೆ ಮನೆಗೆ ಹೋದಳು. ಸುನಂದಾ ಅವಳನ್ನು ಹಿಂಬಾಲಿಸಿದಳು. ಅಪ್ಪಯ್ಯ ಊಟದ ಹೊತ್ತಿಗೆ ಬರುವುದಾಗಿ ಹೇಳಿ ಮನೆಗೆ ಹೋದ. ನರಸಿಂಗರಾಯ ಅಂಗಡಿಯಲ್ಲಿ ಕುಳಿತ. ಗಿರಾಕಿ ಬಂದಾಗಲೆಲ್ಲ, ಅದು ಎಲ್ಲಿದೆ, ಬೆಲೆ ಎಷ್ಟು ಎಂದು ಸುನಂದಾಳನ್ನು ಕರೆಯುತ್ತಿದ್ದ. ಅಮ್ಮ, 'ಅವನು ವ್ಯಾಪಾರ ಮಾಡೋದ? ನೀನು ಅಲ್ಲೆ ಇರು ಹೋಗು ತಾಯಿ. ಅಡುಗೆ ಕೆಲಸವೇನು ನನಗೆ ಭಾರವಲ್ಲ' ಎಂದು ಸುನಂದಾಳನ್ನು ಕಳುಹಿಸಿದಳು.
ಶೆಟ್ಟಿ, ಆದಿಮೂರ್ತಿಗೆ ಹಾಡು ಬರೆದಾಯ್ತ ಎಂದು ಸುನಂದಾ ಕೇಳಿದಳು. ಇಲ್ಲ ಬರೀಬೇಕು. ಕನ್ನಡದಲ್ಲೊ, ತೆಲುಗಿನಲ್ಲೊ ಎಂದು ಇತ್ಯರ್ಥವಾಗುತ್ತಿಲ್ಲ ಅಂದ. ನೀನು ಮೊರಸುನಾಡು ಭಾಷಾಪ್ರಿಯ ತಾನೆ. ಅದರಲ್ಲೆ ಬರೆದುಬಿಡು ಅಂದಳು. ಆದೀತು. ಆದರೆ ಹಾಸ್ಯಗೀತೆ ಅಂದೆಯಲ್ಲ, ಅದೇ ಸಮಸ್ಯೆ ಆಗಿರೋದು ಅಂದ. ನಿನ್ನ ನೇಸ್ತಗಾರ ಪಿಲ್ಲಣ್ಣ ಹಾಸ್ಯಕ್ಕೆ ಹೆಸರಲ್ಲವ, ಅವನ ಸಹಾಯ ತಗೋ ಎಂದು ಸಲಹೆ ಕೊಟ್ಟಳು. ನೋಡೋಣ ಎಂದ ನರಸಿಂಗರಾಯ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications