ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಗೆ ಸೋಲದ ಸಾಮ್ರಾಟ ಬಾಲೆಗೆ ಸೋತ!

By Staff
|
Google Oneindia Kannada News

Who the changed the heart of Ashoka, the great?
ಕಳಿಂಗದ ಯುದ್ಧದಲ್ಲಿ ಅಶೋಕ ಚಕ್ರವರ್ತಿಯ ಕಣ್ತೆರೆಸಿದ್ದು ರಕ್ತಪಾತ, ಸೈನಿಕರ ಗೋಳಾಟ ಎಂಬುದು ನಿಜ. ಹಾಗೆಯೇ ಅಶೋಕ ಯುದ್ಧದಿಂದ ವಿಮುಖನಾಗುವಂತೆ ಮಾಡಿದ್ದು ಕಳಿಂಗದ ಮಹಾರಾಣಿಯಾಗಿದ್ದ ಏಳು ವರ್ಷದ ಬಾಲೆ ಅಮಿತಾಳ ಮುಗ್ಧ ಮನಸ್ಸು ಎಂಬುದು ಜಾಸ್ತಿ ನಿಜ. ಇಲ್ಲಿ ಅಕ್ಷರಗಳ ಮಾಲೆಯಾಗಿ ಹರಡಿಕೊಂಡಿರುವುದೇ ಆ ಹೃದ್ಯ ಪ್ರಸಂಗದ ವಿವರಣೆ.

* ಎ.ಆರ್. ಮಣಿಕಾಂತ್

ಇಡೀ ಭರತ ಖಂಡದ ಚಕ್ರವರ್ತಿಯಾಗಬೇಕು ಎಂಬ ಆಸೆ ಹೊತ್ತಿದ್ದವನು ಸಾಮ್ರಾಟ್ ಅಶೋಕ. ಈ ಉದ್ದೇಶದಿಂದಲೇ ಆತ ನೆರೆಯ ರಾಜ್ಯವಾದ ಕಳಿಂಗದ ಮೇಲೆ ಯುದ್ಧಕ್ಕೆ ಹೋದ. ಆ ಯುದ್ಧದಲ್ಲಿ ಸಾವಿರಾರು ಮಂದಿ ಸತ್ತರು. ಅದಕ್ಕೂ ಹೆಚ್ಚು ಮಂದಿ ಕೈಕಾಲು ಕಳೆದುಕೊಂಡರು. ಇದನ್ನೆಲ್ಲ ಅಶೋಕ ಪ್ರತ್ಯಕ್ಷ ಕಂಡ. ಆ ಯುದ್ಧದ ಭೀಕರತೆ ಅವನ ಮನಸ್ಸನ್ನೇ ಬದಲಿಸಿತು. ಇದೇ ಕೊನೆ. ಇಂದಿನಿಂದ ನಾನು ಯುದ್ಧ ಮಾಡುವುದಿಲ್ಲ ಎಂದು ಅಂದೇ ಘೋಷಿಸಿದ ಅಶೋಕ-ಮುಂದೆ, ದೇವನಾಂಪ್ರಿಯ, ರಾಜನಾಂಪ್ರಿಯ, ಪ್ರಿಯದರ್ಶಿ (ದೇವತೆಗಳಿಗೂ, ರಾಜರುಗಳಿಗೂ ಪ್ರಿಯನಾದವನು) ಎಂದೇ ಹೆಸರಾದ! ಇದು ನಾವೆಲ್ಲ ಓದಿರುವ ವಿವರಣೆ.

ಆದರೆ, ಕಳಿಂಗದ ಯುದ್ಧದಲ್ಲಿ ಆತನ ಕಣ್ತೆರೆಸಿದ್ದು ರಕ್ತಪಾತ, ಸೈನಿಕರ ಗೋಳಾಟ ಎಂಬುದು ನಿಜ. ಹಾಗೆಯೇ ಅಶೋಕ ಯುದ್ಧದಿಂದ ವಿಮುಖನಾಗುವಂತೆ ಮಾಡಿದ್ದು ಕಳಿಂಗದ ಮಹಾರಾಣಿಯಾಗಿದ್ದ ಏಳು ವರ್ಷದ ಬಾಲೆ ಅಮಿತಾಳ ಮುಗ್ಧ ಮನಸ್ಸು ಎಂಬುದು ಜಾಸ್ತಿ ನಿಜ. ಇಲ್ಲಿ ಅಕ್ಷರಗಳ ಮಾಲೆಯಾಗಿ ಹರಡಿಕೊಂಡಿರುವುದೇ ಆ ಹೃದ್ಯ ಪ್ರಸಂಗದ ವಿವರಣೆ....

ಕರವೇಲ ಮಹಾಪ್ರಭುಗಳು ಇಷ್ಟು ಬೇಗ ತಮ್ಮೆಲ್ಲರನ್ನೂ ಅಗಲುವರೆಂದು ಕಳಿಂಗದ ಮಹಾಜನತೆ ಕನಸಲ್ಲೂ ಯೋಚಿಸಿರಲಿಲ್ಲ. ಮದುವೆಯಾಗಿ ಎಂಟು ವರ್ಷದ ಬಳಿಕ ರಾಜಾಧಿರಾಜ ಕರವೇಲ-ಸಾಮ್ರಾಜ್ಞಿ ನಂದಾರಿಗೆ ಹೆಣ್ಣು ಮಗುವಾಗಿತ್ತು. ಈ ಮಗು ಇತಿಹಾಸದಲ್ಲಿ ದೊಡ್ಡ ಹೆಸರು ಮಾಡುತ್ತಾಳೆ ಎಂದು ಆಸ್ಥಾನ ಜ್ಯೋತಿಷಿಗಳು ಭವಿಷ್ಯ ಹೇಳಿದ್ದರು. ಅವರ ಸಲಹೆಯಂತೆಯೇ ಮಗುವಿಗೆ ಅಮಿತಾ ಎಂದು ಹೆಸರಿಡಲಾಯಿತು. ಆಕೆಯನ್ನು ಯುವರಾಣಿ ಎಂದು ಘೋಷಿಸಿದ್ದೂ ಆಯಿತು. ಈ ಸಂಭ್ರಮಕ್ಕೆ ಕರವೇಲ ಪ್ರಭುಗಳು ನಾಡಿನ ಎಲ್ಲರಿಗೂ ಸಿಹಿ ವಿತರಿಸಿದ್ದರು. ಎಲ್ಲ ದೇವಾಲಯಗಳಿಗೂ ಅಪಾರ ಕಾಣಿಕೆ ಅರ್ಪಿಸಿದ್ದರು. ವಿಶೇಷ ಪೂಜೆಗೆ ಏರ್ಪಾಡು ಮಾಡಿದ್ದರು.

ದೌರ್ಭಾಗ್ಯವೆಂದರೆ, ಮಗಳು ಹುಟ್ಟಿದ ಖುಷಿಯಲ್ಲಿ ಮೈಮರೆತು ಖುಷಿಪಡುವ ಯೋಗ ಕರವೇಲ ಪ್ರಭುಗಳಿಗೆ ಬರಲೇ ಇಲ್ಲ. ಕಳಿಂಗದ ದೊರೆಗಳು ಸಂಭ್ರಮದಲ್ಲಿ ಮೈಮರೆತಿದ್ದಾರೆ ಎಂದು ತಿಳಿದಾಕ್ಷಣ ಸಾಮಂತನೊಬ್ಬ ಯುದ್ಧಕ್ಕೆ ಬಂದ. ಪರಿಣಾಮ ಮಗಳು ಹುಟ್ಟಿದ ದಿನವೇ ಕರವೇಲರು ರಣರಂಗಕ್ಕೆ ಹೋಗಬೇಕಾಗಿ ಬಂತು. ಆ ಯುದ್ಧದಲ್ಲಿ ಕಳಿಂಗಕ್ಕೆ ಜಯ ದೊರಕಿತು ನಿಜ. ಆದರೆ ತೀವ್ರ ಗಾಯಗೊಂಡಿದ್ದ ಮಹಾಪ್ರಭು ಕರವೇಲರು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಕೊನೆಯುಸಿರೆಳೆಯುವುದಕ್ಕೆ ಮೊದಲು, ಮಹಾಮಂತ್ರಿ ಸುಕಂಠ, ಸೇನಾಧಿಪತಿ ಭದ್ರಕೀರ್ತಿಯನ್ನು ಕರೆಸಿ- 'ನನ್ನ ನಂತರ ಕೂಡ ಕಳಿಂಗ ಸಾಮ್ರಾಜ್ಯ ಸುಭಿಕ್ಷದಿಂದಿರುವಂತೆ ನೋಡಿಕೊಳ್ಳಿ. ಪ್ರಜೆಗಳಿಗೆ ಯಾವುದೇ ಸಂದರ್ಭದಲ್ಲೂ ತೊಂದರೆ ಕೊಡಬೇಡಿ" ಎಂದು ವಚನ ಪಡೆದುಕೊಂಡರು. ಕಳಿಂಗ ಸಾಮ್ರಾಜ್ಯಕ್ಕೆ ತುಂಬ ನಿಷ್ಠರಾಗಿ...

***
ಏಳು ವರ್ಷಗಳಷ್ಟು ದೀರ್ಘ ಅವಧಿ ಅದೆಷ್ಟು ಬೇಗ ಮುಗಿದುಹೋಯಿತಲ್ಲ? ಮಹಾರಾಣಿ ನಂದಾ ಕೂತಲ್ಲಿಯೇ ಒಮ್ಮೆ ನಿಟ್ಟುಸಿರುಬಿಟ್ಟಳು. ಒಂದು ಸಂತೋಷವೆಂದರೆ, ರಾಜಕುಮಾರಿ ಅಮಿತಾ, ಕರವೇಲ ಪ್ರಭುಗಳ ಪಡಿಯಚ್ಚಿನಂತೆಯೇ ಕಾಣತೊಡಗಿದ್ದಾಳೆ. ಆಕೆಯ ಮಾತು, ರಾಜಠೀವಿ, ನೊಂದವರು, ಅಸಹಾಯಕರ ಮೇಲಿರುವ ಕರುಣೆಗೆ ಎಣೆಯೇ ಇಲ್ಲ. ಸಾಕುನಾಯಿ ಬಭ್ರುವಂತೂ ಆಕೆಯ ಪಾಲಿನ ಅಂಗರಕ್ಷಕನೇ ಆಗಿ ಹೋಗಿದೆ. ಅದು ಜತೆಗಿರುವವರೆಗೂ ಆಕೆಯ ಕೂದಲು ಕೊಂಕಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ. ಹೀಗೆ, ಕಳಿಂಗದಲ್ಲೇನೋ ಎಲ್ಲವೂ ಸರಿಯಾಗಿದೆ. ಆದರೆ, ಆದರೆ... ಆ ನೀಚ ಅಶೋಕ...

ಏನೋ ಹೇಳಲು ಹೋದ ಮಹಾರಾಣಿ ನಂದಾ, ಉದ್ವೇಗದಿಂದ ಮಾತು ಹೊರಡದೆ ಸುಮ್ಮನಾದಳು. ಮಹಾಮಂತ್ರಿ ಸುಕಂಠ ತಕ್ಷಣವೇ ಹೇಳಿದ: ಮಹಾರಾಣಿಯವರ ಮಾತು ನಿಜ. ಮಗಧದ ಸಾಮ್ರಾಟ ಅಶೋಕ, ಇಡೀ ಭರತಖಂಡವನ್ನೇ ಜಯಿಸಬೇಕೆಂಬ ಮಹದಾಸೆಯಿಂದ ಯುದ್ಧದ ಮೇಲೆ ಯುದ್ಧ ಮಾಡುತ್ತಿರುವುದು ನಿಜ. ಎಲ್ಲ ಯುದ್ಧದಲ್ಲೂ ಗೆದ್ದಿರುವ ಆತ, ಇಷ್ಟರಲ್ಲಿಯೇ ಕಳಿಂಗದ ಮೇಲೆ ದಂಡೆತ್ತಿ ಬರುತ್ತಾನೆ ಎಂಬುದೂ ನಿಜ. ಆ ಯುದ್ಧದಲ್ಲಿ ಕಳಿಂಗದ ಸಾವಿರಾರು ಮಂದಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಲಿದ್ದಾರೆ. ನೀಚ ಅಶೋಕನನ್ನು ಹಿಮ್ಮೆಟ್ಟಿಸಲು ಹರಸಾಹಸ ಮಾಡುತ್ತಾರೆ. ನಮ್ಮ ವಿನಂತಿ ಏನೆಂದರೆ-ಮಹಾರಾಣಿಯವರು ಯುದ್ಧ ಭೂಮಿಗೆ ಬರಬಾರದು. ಅರಮನೆಯಲ್ಲೂ ಇರಬಾರದು. ಒಂದು ವೇಳೆ ಕಳಿಂಗದ ಸೇನೆಗೆ ಸೋಲಾದರೆ, ಮಹಾರಾಣಿ ಹಾಗೂ ಯುವರಾಣಿಯನ್ನು ಬಂಧಿಸಿ ಆಜೀ..

ಇಷ್ಟು ಹೇಳಿ ಮಹಾಮಂತ್ರಿ ಸುಕಂಠ ಮಾತು ನಿಲ್ಲಿಸಿದ. ಆಗ ಮಾತನಾಡಿದ ಸೇನಾಧಿಪತಿ ಭದ್ರಕೀರ್ತಿ-ಮಹಾಮಂತ್ರಿಗಳ ಮಾತಿಗೆ ನನ್ನ ಸಮ್ಮತಿ ಇದೆ. ಮಹಾರಾಣಿಯವರು ಅದನ್ನು ಕೃಪೆಯಿಟ್ಟು ಪಾಲಿಸಬೇಕು" ಅಂದ. ಒಂದು ಕ್ಷಣ ಮೌನ. ನಂತರ ಮಹಾರಾಣಿ ನಂದಾ ಹೀಗೆಂದಳು: 'ಅಮಾತ್ಯರು, ಮಹಾಸೇನಾನಿಗಳು ದಯವಿಟ್ಟು ಕ್ಷಮಿಸಬೇಕು. ವೈರಿಗೆ ಹೆದರಿ ಓಡಿಹೋಗುವುದನ್ನು ಕರವೇಲ ಮಹಾರಾಜರು ಒಪ್ಪುತ್ತಿರಲಿಲ್ಲ. ಅಂತೆಯೇ ಹೇಡಿಯಂತೆ ಓಡಿಹೋಗಲು ನಾನೂ ಒಪ್ಪುವುದಿಲ್ಲ. ಅರಮನೆಯಲ್ಲಿಯೇ ಇರುತ್ತೇನೆ. ಬುದ್ಧ ಭಗವಂತ ಹೇಳಿರುವಂತೆ- ಶಾಂತಿ, ಪ್ರೇಮದ ಮಾತು ಕಟುಕನ ಕಲ್ಲೆದೆಯನ್ನೂ ಕರಗಿಸುತ್ತದೆ ಎಂಬ ಮಾತಿನಲ್ಲಿ ನನಗೆ ದೊಡ್ಡ ನಂಬಿಕೆಯಿದೆ. ಈ ವಿಷಯವಾಗಿಯೇ ಧರ್ಮಗುರುಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನನಗೆ ಅಧಿಕಾರದಲ್ಲಿ ಆಸಕ್ತಿ ಇಲ್ಲ. ಇಂದು ಮಧ್ಯರಾತ್ರಿಯಿಂದ ಅಖಂಡ ಮೂವತ್ತಾರು ಗಂಟೆಗಳ ಕಾಲ ಭಗವಂತನ ಧ್ಯಾನದಲ್ಲಿ ತೊಡಗುವೆ. ಆಗ ನನಗೆ ಯಾರೂ ಭಂಗ ಉಂಟು ಮಾಡಬಾರದು. ನಂತರ ನಾನು ಮಠಕ್ಕೆ ಹೋಗಿಬಿಡುವೆ. ನನ್ನ ಹಿಂದೆ ಯಾರೂ ಬರಕೂಡದು. ಕಳಿಂಗ..

ಇನ್ನು ಮಾತು ಮುಗಿಯಿತು ಎಂಬಂತೆ ಮಹಾರಾಣಿ ನಂದಾ ಎದ್ದು ನಿಂತಾಗ ಮಹಾಮಂತ್ರಿ ಸುಕಂಠ ಕಣ್ತುಂಬಿಕೊಂಡು ಹೇಳಿದ: 'ಅಪ್ಪಣೆ. ಯುವರಾಣಿ ಅಮಿತಾಗೆ ನಾಳೆಯೇ ಪಟ್ಟ ಕಟ್ಟುತ್ತೇವೆ. ಮಹಾರಾಣಿ-ನಂದಾದೇವಿಯವರು ಜಪ-ತಪದಲ್ಲಿ ನಿರತರಾಗಿರುವ ಸುದ್ದಿ ಮಗಧ ಸಾಮ್ರಾಟ ಅಶೋಕನಿಗೆ ಎಂದಿಗೂ ತಿಳಿಯದಂತೆ ಎಚ್ಚರಿಕೆ ವಹಿಸುತ್ತೇವೆ..."

ಮರುದಿನವೇ, ರಾಜಕುಮಾರಿ ಅಮಿತಾಳ ಪಟ್ಟಾಭಿಷೇಕ ತುಂಬ ಗುಟ್ಟಾಗಿ, ಆದರೆ ತುಂಬ ವೈಭವದಿಂದ ನಡೆದು ಹೋಯಿತು. ಕಳಿಂಗದ ರಾಜಬೀದಿಯಲ್ಲಿ ಯುವರಾಣಿ ಅಮಿತಾಳನ್ನು ಅಂಬಾರಿಯ ಮೇಲೆ ಕೂರಿಸಿ ಕರೆತರಲಾಯಿತು. ಏಳು ವರ್ಷದ ಆ ಬಾಲೆಗೆ ಮಹಾರಾಣಿಯವರು ತೀರ್ಥಯಾತ್ರೆಗೆ ಹೋಗಿದ್ದಾರೆ ಎಂದು ನಂಬಿಸಲಾಗಿತ್ತು. ಅಮಿತಾಳ ಮುಗ್ಧ ಮಾತು ಸರಳತೆಗೆ ಮನಸೋತ ಕಳಿಂಗದ ಜನತೆ-ಯುವರಾಣಿಗೆ ಉಘೇ ಉಘೇ ಎಂದ ಕೆಲವೇ ಗಂಟೆಗಳ ನಂತರ ಕರಾಳ ಸುದ್ದಿಯೊಂದು ಕಳಿಂಗವನ್ನು ಮುಟ್ಟಿತು: ಮಗಧ ಸಾಮ್ರಾಟ ಅಶೋಕ ದಂಡಿನ ಸಮೇತ ಯುದ್ಧಕ್ಕೆ ಹೊರಟಿದ್ದ!

ನೋಡ ನೋಡುತ್ತಲೇ ಯುದ್ಧ ಶುರುವಾಗಿಯೇ ಬಿಟ್ಟತು. ಒಂದು ಬಲಿಷ್ಠ ಸೇನೆಯೊಂದಿಗೆ ಸೇನಾಧಿಪತಿ ಭದ್ರಕೀರ್ತಿ, ಅಶೋಕನ ಸೇನೆಗೆ ಮುಖಾಮುಖಿಯಾದ. ಕಳಿಂಗದ ಸೇನೆ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿತು. ಆದರೆ, ಅಶೋಕನ ಮಹಾಸೇನೆಯ ಮುಂದೆ ಕಳಿಂಗದವರ ಹೋರಾಟ ತುಂಬ ಹೊತ್ತು ಸಾಗಲಿಲ್ಲ. ಗೆಲುವು ಸಾಧ್ಯವಿಲ್ಲ ಎಂದು ಗೊತ್ತಾದ ನಂತರವೂ ಕಳಿಂಗದ ದಂಡ ನಾಯಕ ಭದ್ರಕೀರ್ತಿ ಶರಣಾಗತನಾಗಲಿಲ್ಲ. ಹಿಮ್ಮೆಟ್ಟಲೂ ಇಲ್ಲ. ಆನೆಯ ಮೇಲೆ ಕೂತು ಯುದ್ಧದಲ್ಲಿ ತೊಡಗಿದರೆ ಶತ್ರುಗಳನ್ನು ಹಿಮ್ಮೆಟ್ಟಿಸಲು ಅಸಾಧ್ಯ ಅನ್ನಿಸಿದಾಗ ಅಶ್ವಾರೂಢನಾಗಿ ರಣರಂಗದ ಆ ತುದಿಯಿಂದ ಈ ತುದಿಗೆ ಮಿಂಚಿನಂತೆ ಸಂಚರಿಸಿದ. ಹಗಲಿರುಳನ್ನು ಲೆಕ್ಕಿಸದೆ ಹೋರಾಡಿದ. ಕಡೆಗೊಂದು ದಿನ ಸೂರ್ಯಾಸ್ತದ ನಂತರ ಆಯಾಸದಿಂದ ಪ್ರಜ್ಞೆ ತಪ್ಪಿ ಕುದುರೆಯ ಮೇಲಿಂದ ಕೆಳಗೆ ಬಿದ್ದ. ಕೂಡಲೇ ಆತನನ್ನು ಬಂಧಿಸಿದರು. ಭದ್ರಕೀರ್ತಿಗೆ ಪ್ರಜ್ಞೆ ಬಂದಾಗ- ತಾನು ಮಗಧ ಸೇನೆಯ ಮಧ್ಯೆ ಇರುವುದು ಗೊತ್ತಾಯಿತು. ಆನೆಯ ಮೇಲಿನ ಅಂಬಾರಿಯಲ್ಲಿ ಚಿನ್ನದ ಕವಚ, ಶಿರಸ್ತ್ರಾಣ ಧರಿಸಿ ಕುಳಿತಿದ್ದ ಅಶೋಕ, ನೆಟ್ಟ ನೋಟದಿಂದ ಭದ್ರಕೀರ್ತಿಯನ್ನೇ ದಿಟ್ಟಿಸುತ್ತಾ ಹೇಳಿದ: 'ಕಳಿಂಗದ ಸೇನಾನಿಗಳು ಅಲ್ಲಿನ ಸ್ತ್ರೀ ಸಾಮ್ರಾಜ್ಯವನ್ನು ಬಲು ಧೈರ್ಯ-ಶೌರ್ಯದಿಂದ ರಕ್ಷಿಸಿದ್ದೀರಿ. ಆದರೆ ಅಶೋಕನ ಪ್ರಭುತ್ವವನ್ನು ತಿರಸ್ಕರಿಸಿದ್ದಕ್ಕೆ ನಿಮಗೆ ತಕ್ಕ ಶಾಸ್ತಿಯಾಗಿದೆ. ಈಗಲೂ ಹೇಳುತ್ತಿದ್ದೇನೆ: ನಮ್ಮ ಪ್ರಭುತ್ವವನ್ನು ಒಪ್ಪಿಕೊಂಡರೆ, ಕಳಿಂಗದ ಮಹಾರಾಣಿ, ರಾಜ್ಯ ಹಾಗೂ ಪ್ರಜೆಗಳಿಗೆ ಸಂರಕ್ಷಣೆ-ಆಶ್ರಯ ನೀಡುತ್ತೇವೆ. ನೆನಪಿರಲಿ-ಸಾಮ್ರಾಟ್ ಅಶೋಕ ಎಂದೂ ಮಾತಿಗೆ ತಪ್ಪುವವನಲ್ಲ..."

ಭದ್ರಕೀರ್ತಿ ಅದೇ ಗಂಭೀರ ದನಿಯಲ್ಲಿ ಹೀಗೆಂದ: 'ಕಳಿಂಗದ ಸೇನಾನಿ ನಿಮಗೆ ಶರಣಾಗಿಲ್ಲ. ಯುದ್ಧದಲ್ಲಿ ಗಾಯಗೊಂಡಿದ್ದ ಆತನನ್ನು ನೀವು ಮರಾಮೋಸದಿಂದ ಬಂಧಿಸಿದ್ದೀರಿ, ಅಷ್ಟೆ. ಜೀವ ಹೋದರೂ ಸರಿಯೆ, ಭದ್ರಕೀರ್ತಿ ನೀಚ ಅಶೋಕನ ದೊರೆತನವನ್ನು ಎಂದೆಂದಿಗೂ ಒಪ್ಪಲಾರ. ಅಷ್ಟೇ ಅಲ್ಲ, ಮಗಧ ಸಾಮ್ರಾಟನ ಅಧಿಪತ್ಯವನ್ನು ಕಳಿಂಗದ ನರಪಿಳ್ಳೆಯೂ ಒಪ್ಪಲಾರದು. ಇಡೀ ಕಳಿಂಗದ ಜನರೆಲ್ಲ ಸೇರಿ ಹೇಗಾದರೂ ತಮ್ಮ ಮಹಾರಾಣಿಯನ್ನು ಕಾಪಾಡಿಕೊಳ್ಳುತ್ತಾರೆ. ಅಹಮಿಕೆಯ ಮೂರ್ತಿರೂಪದಂತಿರುವ ಕ್ರೂರ ಸಾಮ್ರಾಟನೆ, ನಿನಗೆ ಧಿಕ್ಕಾರವಿರಲಿ..."

ಈ ಮಾತಿನಿಂದ ಅಶೋಕನಿಗೆ ಚೇಳು ಕುಟುಕಿದಂತಾಯಿತು. ಆತ ಕ್ರೋಧದಿಂದ ಹೇಳಿದ: ಸೇನಾಧಿಪತಿಗಳೆ, ಈ ಭದ್ರಕೀರ್ತಿಯನ್ನು ಕಾರಾಗೃಹಕ್ಕೆ ತಳ್ಳಿ. ತಕ್ಷಣವೇ ದೊಡ್ಡ ಸೇನೆಯೊಂದಿಗೆ ನುಗ್ಗಿ ಕಳಿಂಗ ಪಟ್ಟಣವನ್ನು ವಶಪಡಿಸಿಕೊಳ್ಳಿ. ಎದುರು ಬಂದವರನ್ನು ಕೊಚ್ಚಿ ಹಾಕಿ. ಅರಮನೆಯನ್ನು ಸುತ್ತುಗಟ್ಟಿ, ಕಳಿಂಗದ ಮಹಾರಾಣಿಯನ್ನು ಜೀವಂತ ಸೆರೆ ಹಿಡಿಯಿರಿ. ಸಾಮ್ರಾಟ್ ಅಶೋಕನಿಗೆ ತಲೆ ಬಾಗದಿದ್ದರೆ ಅಂಥವರ ಪರಿಸ್ಥಿತಿ ಏನಾಗುತ್ತದೆಂದು ಎಲ್ಲರಿಗೂ ಪ್ರತ್ಯಕ್ಷ ತೋರಿಸೋಣ...

ಮರುದಿನ ಬೆಳಗ್ಗೆ ಕಳಿಂಗ ಪಟ್ಟಣದಲ್ಲಿ ಭಾರೀ ಕೋಲಾಹಲ. ಅಶೋಕನ ಸೇನಾಧಿಪತಿ ಗೋಪಾಲನ ಸಾರಥ್ಯದಲ್ಲಿ ಮಗಧದ ಭಾರೀ ಸೇನೆ ಪ್ರವಾಹದಂತೆ ನುಗ್ಗಿ ಬಂತು. ಇದನ್ನು ನಿರೀಕ್ಷಿಸಿದ್ದ ಕಳಿಂಗದ ಜನತೆ ಜೀವದ ಹಂಗು ತೊರೆದು ಹೋರಾಡಿದರು. ಇಂಥ ಪ್ರಬಲ ಪ್ರತಿರೋಧವನ್ನು ಕಂಡು ಮಗಧದ ಸೇನಾನಿ ಕಿಡಿಕಿಡಿಯಾಗಿ ಆದೇಶ ಹೊರಡಿಸಿಯೇ ಬಿಟ್ಟ: ಎದುರು ಬಂದವರನ್ನು ತರಿದು ಹಾಕಿ. ಮನೆಗಳಿಗೆ ಬೆಂಕಿ ಹಚ್ಚಿ. ಕಳಿಂಗದ ಸೇನೆಯನ್ನು ಬಗ್ಗು ಬಡಿಯಿರಿ...

ಮರುಕ್ಷಣವೇ ಮಗಧದ ಸೇನೆಯಿಂದ ಘನಘೋರ ಹಿಂಸೆ ಆರಂಭವಾಯಿತು. ಅದೆಷ್ಟೋ ಮಹಲುಗಳು ಧಗ್ಗ ಧಗ್ಗನೆ ಹೊತ್ತಿ ಉರಿದವು. ಪ್ರಜೆಗಳ ಚೀರಾಟ ನಾಲ್ಕು ದಿಕ್ಕಿಗೂ ವ್ಯಾಪಿಸಿತು. ಇದನ್ನೆಲ್ಲ ಕಂಡು ಅಸಹಾಯಕತೆಯಿಂದ ಮಹಾಮಂತ್ರಿ ಸುಕಂಠ ಚಡಪಡಿಸುತ್ತಿದ್ದಾಗಲೇ ಅಲ್ಲಿಗೆ ಬಂದ ಅಮಿತಾ ಕೇಳಿದಳು: ಅಮಾತ್ಯರೆ, ಹೊರಗೆ ಅದೇನು ಚೀರಾಟ? ಅಲ್ಲೇನು ನಡೆದಿದೆ? ಮಹಲುಗಳೇಕೆ ಧಗಧಗನೆ ಉರಿಯುತ್ತಿವೆ? ಯಾರಾದರೂ ಬೆಂಕಿ ಆರಿಸಬಾರದೆ?

ರಾಜಕುಮಾರಿಯ ಮುಗ್ಧ ಪ್ರಶ್ನೆಗೆ ಸುಕಂಠ ಹೀಗೆಂದ: 'ರಾಜಕುಮಾರಿ, ಇದೆಲ್ಲಾ ನೀಚ ಅಶೋಕನ ಸೇನೆಯ ಕೆಲಸ. ಇಲ್ಲಿಯೇ ಇದ್ದರೆ ಅವರು ನಿಮ್ಮನ್ನೂ ಬಂಧಿಸುತ್ತಾರೆ. ಬನ್ನಿ. ಸುರಂಗದ ಮೂಲಕ ಹೊರಗೆ ಹೋಗಿ ಕ್ರೂರಿ ಅಶೋಕನ ಸೇನೆಯಿಂದ ತಪ್ಪಿಸಿಕೊಳ್ಳೋಣ..."

ಅಮಿತಾ ತಕ್ಷಣವೇ ಹೀಗೆಂದಳು: 'ಉಹುಂ, ನಾನು ಎಲ್ಲಿಗೂ ಬರುವುದಿಲ್ಲ. ಇಲ್ಲಿಯೇ ಇರುತ್ತೇನೆ. ನಮ್ಮ ಪ್ರಜೆಗಳನ್ನು ಹಿಂಸಿಸುತ್ತಿರುವ ಕ್ರೂರಿ ಅಶೋಕನನ್ನು ನಾನು ಸುಮ್ಮನೆ ಬಿಡುವುದಿಲ್ಲ. ಬಭ್ರುವನ್ನು ಕಟ್ಟಿಹಾಕುವ ಸರಪಳಿಯಿಂದಲೇ ಆತನನ್ನು ಬಂಧಿಸುತ್ತೇನೆ..."

ಹೀಗೆ ಉತ್ತರಿಸಿ- ಅಮಿತಾ, ಸರಪಳಿಯನ್ನು ಕೈಗೆತ್ತಿಕೊಂಡ ಕ್ಷಣದಲ್ಲಿಯೇ ಇತ್ತ ಅರಮನೆಯ ಮಹಾದ್ವಾರದಲ್ಲಿ ಎರಡೂ ಸೇನೆಗಳ ನಡುವೆ ಭಾರೀ ಹಣಾಹಣಿ ನಡೆದಿತ್ತು. ಅಶೋಕನ ಸೈನಿಕರು ಎದುರು ಬಂದವರನ್ನು ನಿರ್ದಯವಾಗಿ ಕತ್ತರಿಸಿ ಹಾಕಿದರು. ಕಳಿಂಗದ ಸೈನಿಕರು ಒಂದೇಟು ಬಿದ್ದರೂ- 'ರಾಜಕುಮಾರಿ ಅಮಿತಾದೇವಿಗೆ ಜಯವಾಗಲಿ" ಎಂದು ಕೂಗಿಯೇ ಹಿಂದೆ ಸರಿಯುತ್ತಿದ್ದರು. ಈ ಬಗೆಯ ಚೀರಾಟಗಳಿಂದ ತತ್ತರಿಸಿ ಹೋದ ಅಮಿತಾ ಸರಸರನೆ ಅರಮನೆಯ ಉಪ್ಪರಿಗೆ ಹತ್ತಿ ಅಲ್ಲಿಂದಲೇ ಗಟ್ಟಿಯಾಗಿ ಕೂಗಿ ಹೇಳಿದಳು: 'ಮಹಾಜನರು ಹೆದರಬೇಕಿಲ್ಲ. ಪರಮಕ್ರೂರಿ ಅಶೋಕನನ್ನು ಇನ್ನು ಕೆಲವೇ ಗಂಟೆಗಳಲ್ಲಿ ಕಳಂಗದ ಮಹಾರಾಣಿ ಸೆರೆಹಿಡಿಯಲಿದ್ದಾಳೆ!" ಆಗಷ್ಟೇ ಅರಮನೆಯ ಪ್ರವೇಶದ್ವಾರ ದಾಟಿ, ಗೆಲುವಿನ ಹಮ್ಮಿನಿಂದ ಅರಮನೆಯೊಳಕ್ಕೆ ನಡೆದು ಬರುತ್ತಿದ್ದ ಮಗಧದ ಸೇನಾನಿ ಗೋಪಾಲ- 'ಕಳಿಂಗದ ಮಹಾರಾಣಿ ನೀಚ ಅಶೆ...

(ಮುಂದಿನ ವಾರಕ್ಕೆ)

ಭಾಗ 2

ಬಾಲೆ ಅಮಿತಾಗೆ ಸೋತ ಸೋಲರಿಯದ ಸಾಮ್ರಾಟಬಾಲೆ ಅಮಿತಾಗೆ ಸೋತ ಸೋಲರಿಯದ ಸಾಮ್ರಾಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X