ಕಾಲಯಂತ್ರದಿ ಕುಳಿತು ಶತರುದ್ರೀಯ ಕವಿ ಪರ್ಣಕುಟಿಗೆ ತೆರಳೋಣ

ಶತರುದ್ರೀಯವನ್ನು ಋಷಿ ಮೊದಲಬಾರಿಗೆ ಮನಗಂಡ ಆ ಕಾಲಕ್ಕೆ ಒಮ್ಮೆ ಹಿನ್ನಡೆದು ಹಾರಿ, ಆ ದ್ರಷ್ಟಾರರ ಸಂವೇದನೆಯ ಹಿನ್ನೆಲೆ ಪರಿಸರಗಳನ್ನು ಅನುಭವಿಸಿ ಬರಲು ಕಾಲಯಂತ್ರದಲ್ಲಿ ಕುಳಿತು ಪಯಣಿಸೋಣ:

ಪ್ರಕೃತಿಯ ಅದಮ್ಯ ಚೈತನ್ಯಗಳ ಅಭಿವ್ಯಕ್ತಿಗೆ ಬೆರಗಾಗಿ ಮಾನವ ಅವನ್ನು ಗೌರವಿಸುತ್ತಿದ್ದ ಕಾಲಕ್ಕೆ ತಲುಪಿದ್ದೇವೆ. ಆ ಮೂಲಭೂತ ತತ್ವಗಳ ಆಳ, ಹರವು, ಶಕ್ತಿ, ಪ್ರಭಾವವನ್ನು ಅರಿಯಲು ಚಿಂತಕ ಹವಣಿಸುತ್ತಿದ್ದ ಸಮಯ. ಈಗ ಅಂಥ ಕವಿಯಾಬ್ಬನಿಗೆ ಗಗನವನ್ನೇ ಬೇಧಿಸಿಕೊಂಡು ಕೆಳಗಿಳಿದ ‘ರುದ್ರ’ ಕಾಣಿಸುತ್ತಾನೆ:

ನಿನ್ನ ನೋಡಿದೆ, ಹೌದು, ಇಳಿವುದನದೂ ಕಂಡೆ,
ಬಾನಿನಿಂದಲೆ ಬುವಿಗಿಳಿವುದನು ಕಣ್ಣಾರೆ ಕಂಡೆ;
ಎರಗಿ ಬಂದಪ್ಪಳಿಸುವ ‘ರುದ್ರ’ ನಿನ್ನನ್ನು ಕಂಡೆ-
ಕರಿ ಕೊರಳ, ಗುಂಗುರು ಕುರುಳುಳ್ಳವನೆ, ನಾ ಬೆದರಿದೆ! ।। 1 ।।

ಇಳಿದ ಬಾಂದಳದಿಂದ, ಎದೆಯೆಲ್ಲ ನಡುಗಿತು, ಝಲ್ಲನೆ;
ಇಳೆಯ ಮೇಲಡಿಯಿಟ್ಟ ತಾ ನಡೆದು ಹೊರಟೇ ಹೊರಟ;
ಅಗೊ ನೋಡಿ, ನನ್ನವರೇ, ಆ ತಾಮ್ರ ವರ್ಣದ ಉರಿಯ
ಕಂಡು ಮರೆಯಾಗುತಿಹ ಕರಿ-ಕೊರಳ ಸೋಜಿಗದ ಪರಿಯ! ।। 2 ।।

ಬಾ ರುದ್ರ, ನೀ ಯಾರ ಹಿಂಸಿಸಲು ಬೇಡ, ಬಾ;
ಎಲ್ಲ ರೋಗಕೆ ಮದ್ದು ನೀನಾಗಿ ಬಾರಾ!
ಕೊಚ್ಚಿ ಕೊಂಡೊಯ್ಯುವ ಬಿರುಗಾಳಿ ನಿದ್ದೆಯನು
ಕದ್ದಿತಲ್ಲ, ಜಾರಿ ಕರಗಲಿ ಅದು ತೀರ ಪೂರ! ।। 3 ।।
(-ನೀಲರುದ್ರ ಉಪನಿಷತ್‌ 1-3)

ಈ ದಿವ್ಯ ದೇವನ ಕೈಯಲ್ಲಿ ಇರುವುದೇನು? ವಜ್ರಾಯುಧ! ಹಾಗಾಗಿ, ಇವನು ವಜ್ರಬಾಹು. ಇವನಿಗೆ ಕಾಡು, ಮಲೆ, ಬೆಟ್ಟದ ಕೋಡು, ಮರದ ತುದಿಗಳೆಂದರೆ ಅಕ್ಕರೆ; ಅದಕ್ಕೇ ಇವನಿಗೆ ‘ಪರಮೇ ವೃಕ್ಷೇ ಆಯುಧಂ ನಿಧಾಯ (=ಇರಿಸಿ), ಕೃತ್ತಿಂ ವಸಾನ ಆ ಚರ’ (ವಾ. ಸಂ. 16.51) ಎಂದು ಕೇಳಿಕೊಳ್ಳುವುದು! ಕೋಪ ಬಂದಾಗ ಪ್ರಾಣಿಗಳನ್ನು ಕೊಂದಾನು, ಮನುಷ್ಯರನ್ನೂ ಸಹ ಹಿಂಸಿಸಿಯಾನು! (ವಾ. ಸಂ. 16.16). ಇವನ ಬೆನ್ನು ಕೆಂಪು, ಹೊಟ್ಟೆ ನೀಲಗಪ್ಪು, (‘ನೀಲಂ ಅಸ್ಯ ಉದರಂ, ಲೋಹಿತಂ ಪೃಷ್ಟಂ’- ಅಥರ್ವ ವೇದ 15. 7); ಹೊಟ್ಟೆ ಕೆಳಗಾಗಿ ಮಲಗೆದ್ದ ಮೇಲೆ ಬಿಟ್ಟ ಗುರುತೆಲ್ಲ ಸುಟ್ಟ ಕಪ್ಪು! ಇವನು ಬಂದು ಹೋದನೆಂದರೆ, ದೈವ ವೈದ್ಯನೊಬ್ಬ ಬಂದು ಔಷಧಿಯಾಂದನ್ನೇನೋ ಚಿಮುಕಿಸಿ ಗಿಡ ಮರ ನೆಲ ಹೊಲಗಳಿಗೆಲ್ಲ ಹೊಸತನ ತುಂಬಿ ಹೋದಂತೆ! (‘ದೈವ್ಯೋ ಭಿಷಕ್‌’ - ವಾ ಸಂ 16.5). ಈಗ ಹೇಳಿ ಈ ಒಗಟಿಗೆ ನಿಮ್ಮ ಉತ್ತರವೇನು! ಈ ‘ರುದ್ರ’ ಬರಸಿಡಿಲಲ್ಲದೆ ಇನ್ನೇನು?

***

ರುದ್ರನಿಗೆ ನೀರಿನಿಂದಲೇ ಏಕೆ ಈ ಅಭಿಷೇಕ ?

ಪರಶಿವನ ಮಹಾ ಮಜ್ಜನಕ್ಕೆ ಮೊದಲು ಒಂದು ಧ್ಯಾನಶ್ಲೋಕದಿಂದ ವೈದಿಕರು ನ್ಯಾಸಮಾಡುತ್ತಾರಲ್ಲ, ಅದು ನಮಗೆ ಸಹಾಯ ಮಾಡುತ್ತದೆ :

ಪಾತಾಳದಿಂದೊಡೆದು ಆಗಸದ ತುದಿ ಮುಟ್ಟಿ
ಈ ಭುವನವೆಲ್ಲವನೂ ಬ್ರಹ್ಮಾಂಡವನೇ ಬೆಳಗುತಿಹ
ಶುದ್ಧ ತೇಜೋಮಯ ಸ್ಫಟಿಕ ಲಿಂಗವ ನೆನೆದು ಹೃದಯದಲ್ಲಿ,
ಪೂರ್ಣಚಂದ್ರನ ಅಮೃತ ಬಿಂದುಗಳು ತೋಯಿಸುವಂತೆ
ಎಡೆ ಬಿಡದೆ ನಾನಿಂತು ಈ ನೀರ ಧಾರೆಯನ್ನೆರೆಯುವೆನು
ರುದ್ರಾನುವಾಕುಗಳ ಜಪಿಸಿ, ಹರಕೆಗಳ ಬಿನ್ನವಿಸಿ, ಶಿವನ ಶಿರದಿ !
‘ಅವನ’ ಗುಣಗಾನ ಮಾಡಬೇಕಾದರೂ ನಮಗೆ ವಿಷಯದ ಬಗ್ಗೆ ಸರಿಯಾದ ತಿಳುವಳಿಕೆ ಬೇಕಲ್ಲ ! ಆ ಕಾರಣಕ್ಕಾಗಿಯೇ, ಶತರುದ್ರೀಯದ ಕವಿ ಮೊಟ್ಟ ಮೊದಲೇ ಅವನನ್ನೇ ಬೇಡಿಕೊಂಡು ಬಿಡುತ್ತಾನೆ : ‘‘ ಹೇ ರುದ್ರ, ನಿನ್ನದು ಅಘರ ಮಂಗಳಕರ ಶರೀರ ; ಪಾಪ ವಿರೋಧೀ ಆತ್ಮ ಜ್ಞಾನವುಂಟು ಮಾಡುವವ ನೀನು; ನಾವಾಡುವ ಮಾತಿನಲ್ಲಿ ಇದ್ದುಕೊಂಡೇ ನಮ್ಮನ್ನು ಜ್ಞಾನಸಂಪನ್ನರನ್ನಾಗಿ ಮಾಡು ! ನಮಗೆ ಸುಖಕರನಾಗು! ’’(‘‘ ಯಾ ತೇ ರುದ್ರ, ಶಿವಾ ತನೂರ್‌ ಅಘೋರಾ, ಅಪಾಪಕಾಶಿನೀ । ತಯಾ ನಸ್‌ ತನುವಾ ಶಂ ತಮಯಾ ಗಿರಿಶಂತ, ಅಭಿಚಾಕಶೀಹಿ।। ’’)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+