• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಂಚಿ ಮೆರೆವ ಶ್ರಾವಣ ಪ್ರತಿಭೆಗಳಿಗೊಂದು ಬೆಳಕಿಂಡಿ!

By ಶಿಕಾರಿಪುರ ಹರಿಹರೇಶ್ವರ
|

ನಾಲ್ಕು ನೂರಕ್ಕೂ ಹೆಚ್ಚು ಸಂಗೀತ ಪ್ರೇಮಿಗಳು ಭಾಗವಹಿಸಿದ್ದ ಹಾಗೂ ಸಮಯಕ್ಕೆ ಸರಿಯಾಗಿ ಆರಂಭಗೊಂಡ ಪುರಂಧರ ಆರಾಧನೆ ಸಂಗೀತ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು. ಧ್ವನಿವರ್ಧಕ ವ್ಯವಸ್ಥೆ (ನಿರ್ವಹಣೆ : ನಂದಕಿಶೋರ್‌, ಪ್ರಶಾಂತ್‌ ಪಡುಬಿದ್ರೆ ಮತ್ತು ಶ್ರೀಕಾಂತ್‌ ಸಂಪಿಗೆತ್ತಾಯ) ಅತ್ಯಂತ ಸಮರ್ಪಕವಾಗಿತ್ತು. ಮಧ್ಯದಲ್ಲಿ ಯಾವುದೇ ಅಡೆತಡೆಗಳಿಲ್ಲದಿರುವುದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

ಹಲವಾರು ವಾರಗಳ ಸುಸಜ್ಜಿತ ಯೋಜನೆ (ಪ್ರಧಾನ ನಿರ್ವಹಣೆ : ಬಿ.ವಿ. ಮುರಳೀಧರ್‌)ಯ ಫಲಶ್ರುತಿಯಾಗಿ ಮತ್ತು ನಿಸ್ಪೃಹರಾಗಿ ದುಡಿದ ಸ್ವಯಂಸೇವಕರ ತಂಡ (ನಿರ್ವಹಣೆ : ಪದ್ಮಜಾ ಮತ್ತು ಕಿಶೋರ್‌ ಕುಮಾರ್‌, ಪರಿಮಳಾ ಮುರಳೀಧರ್‌, ಸಂಧ್ಯಾ ಕೆದ್ಲಾಯ ಮತ್ತು ರಾಮ್‌ ಕೆದ್ಲಾಯ) ಶ್ರಮದ ಫಲವಾಗಿ ಕಾರ್ಯಕ್ರಮ ತುಂಬಾ ಯಶಸ್ವಿಯಾಯಿತು. ಎಲ್ಲರೂ ಸ್ವಯಂಸೇವಕರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

'ಲೋಟಸ್‌’ ಶಾಸ್ತ್ರೀಯ ಸಂಗೀತ ಸಂಸ್ಥೆಯ ಸಹಯೋಗದೊಂದಿಗೆ ಇದನ್ನು ಆಯೋಜಿಸಿದ ಸನಿವೇಲ್‌ ಹಿಂದೂ ಮಂದಿರದ ಪ್ರಧಾನ ಅರ್ಚಕ ಮತ್ತು ಕನ್ನಡ ಬಳಗದ ಅಧ್ಯಕ್ಷ ವಿದ್ವಾನ್‌ ಗಜಾನನ ಜೋಶಿಯವರನ್ನು ಮುಕ್ತಕಂಠದಿಂದ ಸಭಿಕರೆಲ್ಲರೂ ಪ್ರಶಂಸಿಸಿದರು. ಹಲವಾರು ಸಭಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪುರಂದರ ದಾಸರ ಆರಾಧನೆ ಕಾರ್ಯಕ್ರಮದ ಹೆಚ್ಚಿನ ವಿವರಗಳು http://www.svlotus.com

http://www.ragavani.com ವೆಬ್‌ಸೈಟ್‌ಗಳಲ್ಲಿ ಲಭ್ಯ.

English summary
Detailed report of Purandara Aradhane at Sunnyvale, california
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X