ಬೆಂಗಳೂರಿನಲ್ಲೀಗ ಬೊಂಬಾಟ್ ಕನ್ನಡ ಹಾಡುಗಳ ಜ್ವರ!

Bombat Kannada movie songs on Fever 104 FMಬೆಂಗಳೂರಿನ ಫಿವರ್ ಅನ್ನೋ ಹೆಸರಿನ ಎಫ್.ಎಂ ಚಾನಲ್ಲಿನಲ್ಲೀಗ ಬದಲಾವಣೆಯ ಹೊಸ ತಂಗಾಳಿ ಬೀಸಿ ಬರ್ತಿದೆ ಗುರು. ಇತ್ತೀಚಿಗೆ ಕೆಲವು ದಿನಗಳಿಂದ ಇವ್ರು ಬೊಂಬಾಟ್ ಕನ್ನಡ ಹಾಡುಗಳು ಅನ್ನಕ್ ಶುರು ಹಚ್ಕೊಂಡಿದಾರೆ. 104 ಮೆಗಾಹರ್ಟ್ಸ್ ತರಂಗಾಂತರದಲ್ಲಿ ಪ್ರಸಾರ ಆಗ್ತಿರೋ ಈ ವಾಹಿನಿಯೋರು ಮೊದಲಿಗೆ ಹೆಚ್ಚೆಚ್ಚು ಇಂಗ್ಲಿಷ್ ಹಾಡುಗಳ್ನ ಹಾಕ್ತಿದ್ರು. ಆಮೇಲೆ ಹಿಂದಿ ಇಂಗ್ಲಿಷ್ ಅಂತ ಬದಲಾದ್ರು. ಇದೀಗ ಬೊಂಬಾಟ್ ಕನ್ನಡ ಹಾಡುಗಳು ಅಂತ ಸಾಕಷ್ಟು ಕನ್ನಡ ಹಾಡುಗಳ್ನ ಹಾಕಕ್ಕೆ ಶುರುಮಾಡಿದಾರೆ ಗುರು.

ಬೆಂಗಳೂರಿನಲ್ಲಿ ಮಾರುಕಟ್ಟೆ ಗೆಲ್ಲೋ ದಾರಿ!

ಇವತ್ತಿನ ದಿನ ಬೆಂಗಳೂರಿನಲ್ಲಿ ಮಾರುಕಟ್ಟೆ ಮೇಲೆ ಹಿಡಿತಕ್ಕೆ ಅಂತ ಬೇರೆ ಬೇರೆ ಎಫ್.ಎಂ ವಾಹಿನಿಯೋರು ಭರ್ಜರಿ ಪೈಪೋಟಿ ನಡುಸ್ತಾ ಇದಾರೆ ಗುರು. ಸಹಜವಾಗಿ ಇರೋ ಕನ್ನಡ ಮಾರುಕಟ್ಟೆಯನ್ನು ಹೆಚ್ಚಿನವ್ರು ಮೊದಲು ಮೊದಲು ಉಡಾಫೆ ಮಾಡಿ ವಲಸಿಗ್ರನ್ನು ಮೆಚ್ಸೋ ಯತ್ನಕ್ಕೆ ಕೈ ಹಾಕಿದ್ದೂ, ಆಮೇಲೆ ಈ ಸಹಜ ಮಾರುಕಟ್ಟೇನ ಗುರುತ್ಸಿ ಬದಲಾದದ್ದು ನಾವು ನೋಡ್ತಾನೆ ಇದೀವಿ. ರೇಡಿಯೋ ಮಿರ್ಚಿ ಆ ಸಾಲಲ್ಲಿ ಮೊದಲ್ನೇದು. ಇದ್ರಲ್ಲಿ ಕನ್ನಡ ಹಾಡುಗಳು ಶುರುವಾಗಿದ್ದೆ ಆಗಿದ್ದು ಮಾರುಕಟ್ಟೇಲಿ ಮೊದಲ ಸ್ಥಾನಕ್ಕೆ ಜಿಗೀತು.

ಇದರ ಯಶಸ್ಸಿನ ಬೆನ್ನ ಹಿಂದೇನೆ ಇತ್ತೀಚಿಗೆ ರೇಡಿಯೋ ಸಿಟಿ ಸಿಕ್ಕಾಪಟ್ಟೆ ಕನ್ನಡ ಹಾಡುಗಳು ಅನ್ನಕ್ ಶುರು ಹಂಚ್ಕೊಂತು. ಇದೀಗ ಬದಲಾವಣೆಯ ಸರದಿ ರೇಡಿಯೋ "ಎಫ್.ಎಂ 104 - ಫಿವರ್"ದು. ಈ ಬದಲಾವಣೆಗಳು "ಬೆಂಗಳೂರಿನಲ್ಲಿ ಕನ್ನಡ ಇಲ್ಲ, ಇದು ಬಹುಭಾಷಾ ನಗರ, ಇದು ಕನ್ನಡಿಗರದ್ದಲ್ಲ, ಬೆಂಗಳೂರೇ ಬೇರೆ, ಕರ್ನಾಟಕವೇ ಬೇರೆ" ಅಂತೆಲ್ಲಾ ವಟಗುಟ್ಟುತಿರೋರ ಬಾಯಿಗೆ ಬೀಗ ಹಾಕೋದ್ರಲ್ಲಿ ಅನುಮಾನವೇ ಇಲ್ಲ! ಏನಂತೀ ಗುರು?

(ಸ್ನೇಹ ಸೇತು : ಏನ್ ಗುರು?)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+