Get Updates
Get notified of breaking news, exclusive insights, and must-see stories!

ವೃಷಭ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ

ಗುರುಬಲವಿಲ್ಲದೇ ವಿಲಿವಿಲಿ ಒದ್ದಾಡುವಂತಾಗಿರುವ ಪರಿಸ್ಥಿತಿಯಲ್ಲಿರುವ ವೃಷಭ ರಾಶಿಯವರು ಮೊದಲು ಸಹನೆ, ತಾಳ್ಮೆ ಹೆಚ್ಚಿಸಿಕೊಳ್ಳಲು ಈ ವರ್ಷ ಪ್ರಯತ್ನಪಡಬೇಕು. ಆಗಸ್ಟ್ ನಂತರ ಗುರುಬಲ ಬರುವುದರಿಂದ ಸೂಪರ್ ಎನ್ನಿಸುವಂತೆ ಜೀವನಶೈಲಿ ಬದಲಾಗುತ್ತದೆ. ಆಗ ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಅಲ್ಲಿಯವರೆಗೂ ಕಾಯ್ದರೊಳ್ಳೆಯದು.

ಮುಂದೆ ಅಂದರೆ 2017ರಲ್ಲಿ ಅಷ್ಟಮ ಶನಿಕಾಟ ಆರಂಭವಾಗುವುದರಿಂದ ಈಗಿನಿಂದಲೇ ವ್ಯಾಯಾಮ ನಿತ್ಯ ರೂಢಿಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಿಲ್ಲವೆಂದರೆ ಅಷ್ಟಮ ಶನಿಕಾಟ ಬಂದಾಗ ಆಗುವ ನೋವುಗಳನ್ನು ತಡೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇರುವುದಿಲ್ಲ. ನೆನಪಿರಲಿ.

ಹಣಕಾಸಿನ ವಿಷಯದಲ್ಲಿ ಅಷ್ಟೇನೂ ಉಳಿಕೆಯ ವರ್ಷವಿದಲ್ಲವೆನ್ನಬಹುದು. ಆದರೆ ಕೃತ್ತಿಕಾ ನಕ್ಷತ್ರದ ಕೊನೆಯ ಮೂರು ಚರಣದವರಿಗೆ ಮಾತ್ರ ಹಣದನುಕೂಲವಾಗುತ್ತದೆ. ಇನ್ನು ವರ್ಷದ ಮೊದಲ ನಾಲ್ಕು ತಿಂಗಳು ಲಾಭಗಳನ್ನೇ ಕಾಣುವುದರಿಂದ ಸಂತಸವಿರುತ್ತದೆ. ಆದರೆ ಕೊನೆ ಕೊನೆಗೆ ಜೇಬು ಖಾಲಿಯಾಗುವ ಸಂಭವವಿರುವುದರಿಂದ ಈಗಿನಿಂದಲೇ ಜಾಗೃತೆ ವಹಿಸಿಕೊಳ್ಳಬೇಕು. ರೋಹಿಣಿ ನಕ್ಷತ್ರದವರು ಆರಕ್ಕೇರಲ್ಲ ಮೂರಕ್ಕಿಳಿಯಂಗಿಲ್ಲ ಎನ್ನುವ ಸ್ಥಿತಿಯಿಂದ ಗಲಿಬಿಲಿಗೊಳ್ಳುವಂಥಹ ಸಮಯವಿದು. ಆದರೆ ಹೆಚ್ಚೇನೂ ಚಿಂತಿಸುವ ಅಗತ್ಯವಿಲ್ಲ. ಮುಂದಿನ ವರ್ಷ ಇದ್ದೇ ಇದೆ. [ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

Ugadi predictions for Taurus : Rashi Bhavishya

ಮೃಗಶಿರಾ ನಕ್ಷತ್ರದವರಿಗೆ ಲಾಭದಲ್ಲೇನೂ ಕಮ್ಮಿಯಿರಲ್ಲ. ಬಂದ ಲಾಭವನ್ನು ಉಳಿಸಿಕೊಂಡು ಹೆಚ್ಚಿಸಿಕೊಳ್ಳಬೇಕು ತಪ್ಪಿಸದೇ. ಏಕೆಂದರೆ ಮುಂದೆ ಅಷ್ಟಮ ಶನಿಕಾಟದಲ್ಲಿ ಬೇಕಾಗಬಹುದು ಕೂಡಿಟ್ಟ ಗಂಟು. ವರ್ಷದ ಮೊದಲು ಮತ್ತು ಕೊನೆಯ ನಾಲ್ಕು ತಿಂಗಳು ಲಾಭದ ಮುಖ ನೋಡಿಕೊಂಡರೆ ಮಧ್ಯದ ನಾಲ್ಕು ತಿಂಗಳು ಪಿಳಿಪಿಳಿ ಕಣ್ಣು ಬಿಡುತ್ತ ಹೇಗಿದ್ದೇ ಹೇಗಾದೇ ಎನ್ನುವ ಮನೋಭಾವ ಮೂಡಬಹುದು ಮನದಲ್ಲಿ. ಆದ್ದರಿಂದ ಈಗಲೇ ಕಷ್ಟಕ್ಕಾಗುವಷ್ಟು ಹಣವನ್ನು ಬಚ್ಚಿಡಿ. [ಮೃಗಶಿರಾ ನಕ್ಷತ್ರವಿರುವ ವ್ಯಕ್ತಿಗಳ ಗುಣವಿಶೇಷ]

ಗುರುಬಲವಿಲ್ಲದೇ ಈಗಾಗಲೇ ಜೀವನವೇ ಬೇಸರವೆಂದುಕೊಂಡಿರುವ ಈ ರಾಶಿಯವರು ಆಗಸ್ಟ್ ವರೆಗೂ ದಿನದೂಡಿಕೊಳ್ಳಿ. ಆ ನಂತರ ಬರುವ ಗುರುಬಲ ಚೆನ್ನಾಗಿಯೇ ಫಲಗಳನ್ನು ನೀಡಲಾರಂಭಿಸುತ್ತಾನೆ. 2017ರ ಜನವರಿಯಿಂದ ಶನಿಕಾಟದ ಅಬ್ಬರ ಶುರುವಾಗುವುದರಿಂದ ಈಗಿನಿಂದಲೇ ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕು. ಯಾವುದಕ್ಕೂ ಇನ್ನಷ್ಟು ದಿನಗಳನ್ನು ಈಗಿರುವಂತೇಯೂ ದೂಡಿಕೊಂಡು ಹೋಗುತ್ತ ಮುಂಬರುವ ಗುರುಬಲ ಕಾಯುವುದೊಂದೇ ಈ ರಾಶಿಯವರಿಗೆ ಉಳಿದಿರುವ ಏಕೈಕ ಮಾರ್ಗ. [ಸಾಡೇಸಾತಿ ಎಂದರೇನು? ಏನಿದರ ಮರ್ಮ?]

ಆದರೆ, ದೈವಾರಾಧನೆ ಮಾತ್ರ ಬಿಡಂಗಿಲ್ಲ ಎನ್ನುತ್ತಾರೆ ಸಾಮೇರು. ಯಾಕೆಂದರೆ ದೈವಾರಾಧನೆ ಮಾಡದವರಿಗೆ ಗುರು ಕೂಡ ಏನೂ ಮಾಡಂಗಿಲ್ಲ ನೆನಪಿಟ್ಟುಕೊಳ್ಳಿ. ಒಟ್ಟಿನಲ್ಲಿ ಈ ವರ್ಷ ಶೇ. 60ರಷ್ಟು ಅಶುಭ ಫಲವಿದೆ ಈ ರಾಶಿಯವರಿಗೆ. ಈ ಎಲ್ಲ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಜಾಣರ ಲಕ್ಷಣ. [ವೃಷಭ ರಾಶಿಯ 2016 ವರ್ಷದ ಫಲಾಫಲ ಹೀಗಿದೆ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+