ರಾಜಕಾರಣಿಗಳ ಪಕ್ಷಾಂತರ ಪರ್ವಕ್ಕೆ ಕಾರ್ಟೂನ್ ಮೊನಚು!
ಪಕ್ಷಾಂತರ ಎಂಬುದು ರಾಜಕೀಯಕ್ಕೆ ಬೇಕಾದ ಒಂದು ಅರ್ಹತೆ ಎಂಬಂತಾಗಿದೆ! ಸ್ವಾರ್ಥಕ್ಕಾಗಿ ಪಕ್ಷ ಬದಲಿಸಿದರೂ, ಜನರೆದುರು ಹೇಳೋದು ಮಾತ್ರ, 'ಆ ಪಕ್ಷದ ಸಿದ್ಧಾಂತ ಸರಿಬರಲಿಲ್ಲ. ಅದಕ್ಕೇ ಬೇರೆ ಪಕ್ಷ' ಎಂಬ ಸಬೂಬು! ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಭರಾಟೆ ಆರಂಭವಾದಾಗಿನಿಂದ ಇಲ್ಲಿನ ಮತದಾರ ಅದೆಷ್ಟು ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾದನೋ ದೇವರೇ ಬಲ್ಲ.
ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳು ತಮ್ಮ ನಡೆಯನ್ನು ಜನಸಾಮಾನ್ಯನ ಮುಂದೆ ಸಮರ್ಥನೆ ಮಾಡಿಕೊಳ್ಳುವ ರೀತಿಯನ್ನು ಈ ಕಾರ್ಟೂನ್ ಮೂಲಕ ವಿವರಿಸಿದ್ದಾರೆ ಕಾರ್ಟೂನಿಸ್ಟ್ ಎಂ.ಎನ್. ದತ್ತಾತ್ರಿ.













Click it and Unblock the Notifications