ಈ 4 ರಾಶಿಯವರು ಕುಂಭಕರ್ಣನಂತೆ ಮಲಗಬಲ್ಲರು...ನಿಮ್ಮ ರಾಶಿ ಇದೇನಾ?

ನಮಗೆಲ್ಲರಿಗೂ ನಿದ್ರೆ ಅತ್ಯಗತ್ಯ. ಇದು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದೆ. ಒಂದು ಹೊತ್ತು ಊಟ ಮಾಡದೇ ಇದ್ದರೂ ನಿದ್ದೆ ಮಾತ್ರ ಸರಿಯಾಗಿ ಆಗಬೇಕು. ಇಲ್ಲದಿದ್ದರೆ ಅದು ಇಡೀ ದಿನದ ಕೆಲಸವನ್ನು ಹಾಳುಮಾಡುತ್ತದೆ. ಆದರೆ ಕೆಲವರಿಗೆ ನಿದ್ದೆ ಮಾಡುವುದೇ ಜೀವನವಾಗಿರುತ್ತದೆ. ಸದಾ ಮಲಗಿರುವುದನ್ನು ಅವರು ಪ್ರೀತಿಸುತ್ತಾರೆ.

ಇಂಥವರು ಯಾವುದೇ ಕೆಲಸ ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಮಲಗಲು ಮಾತ್ರ ಹೆಚ್ಚು ಇಷ್ಟಪಡುತ್ತಾರೆ. ನಿದ್ರೆಯು ದೇಹಕ್ಕೆ ಮಾತ್ರವಲ್ಲದೆ ಜ್ಯೋತಿಷ್ಯಕ್ಕೂ ಸಂಬಂಧಿಸಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೀರ್ಘ ನಿದ್ರೆ ಮಾಡುವ ಆಸೆಯನ್ನು ಕೆಲವರ ನಕ್ಷತ್ರಗಳಲ್ಲಿ ಬರೆದಿರಬಹುದು. ಹೀಗಾಗಿ ಕೆಲವು ರಾಶಿಯವರು ಕುಂಭಕರ್ಣನಂತೆ ಮಲಗಲು ಇಷ್ಟಪಡುತ್ತಾರೆ. ಹಾಗಾದರೆ ಹೆಚ್ಚು ನಿದ್ದೆ ಮಾಡಲು ಇಷ್ಟಪಡುವವರು ಯಾವ ರಾಶಿಯವರು ಎಂದು ತಿಳಿಯೋಣ.

 zodiac signs who sleeps a lot in kannada

ವೃಷಭ ರಾಶಿ

ವೃಷಭ ರಾಶಿಯವರು ಹೆಚ್ಚು ಸೌಕರ್ಯವುಳ್ಳವರು. ಇವರು ಅದನ್ನು ಹೆಚ್ಚು ಪ್ರೀತಿ ಮಾಡುವುದರಲ್ಲಿ ಕುಖ್ಯಾತರು. ಇದು ಅವರ ಮಲಗುವ ಅಭ್ಯಾಸಕ್ಕೂ ವಿಸ್ತರಿಸುತ್ತದೆ. ಸಂತೋಷದ ಗ್ರಹವಾದ ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯವರು ರಾತ್ರಿಯ ಐಷಾರಾಮಿ ನಿದ್ರೆಯನ್ನು ಆನಂದಿಸುತ್ತಾರೆ. ಆದರೆ ಅವರ ನಿದ್ರೆ ರಾತ್ರಿಗೆ ಮಾತ್ರವಲ್ಲ ಹಗಲಿನಲ್ಲೂ ವಿಸ್ತರಿಸುತ್ತದೆ.

 zodiac signs who sleeps a lot in kannada

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಕನಸುಗಾರರಾಗಿದ್ದಾರೆ. ನಿದ್ದೆ ಮಾಡುವಾಗಲೂ ಅವರ ಮನಸ್ಸು ನಿರಂತರವಾಗಿ ಹಾತೊರಿಯುತ್ತಿರುತ್ತದೆ. ಅಂದರೆ ಕರ್ಕಾಟಕ ರಾಶಿಯವರು ಕನಸುಗಳ ಕ್ಷೇತ್ರದಲ್ಲಿ ಸಮಾಧಾನವನ್ನು ಕಂಡುಕೊಳ್ಳುತ್ತಾರೆ. ಹೀಗಾಗಿ ಅವರ ನಿದ್ರೆ ದೀರ್ಘ ಮತ್ತು ಆಳವಾಗಿರುತ್ತದೆ.

 zodiac signs who sleeps a lot in kannada

ಸಿಂಹ ರಾಶಿ

ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುತ್ತಾರೆ. ಸಿಂಹ ರಾಶಿಯವರು ಹಗಲಿನಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿರುತ್ತಾರೆ. ಹಾಗಾಗಿ ರಾತ್ರಿಯಲ್ಲಿ ಅವರು ನಿದ್ರೆಯನ್ನು ಗೌರವಿಸುತ್ತಾರೆ. ಪ್ರಯಾಣದ ವೇಳೆ ಅವರು ಗಾಢವಾದ ನಿದ್ದೆಗೆ ಜಾರುತ್ತಾರೆ. ಹೀಗಾಗಿ ಅವರು ಹೆಚ್ಚು ನಿದ್ದೆಯನ್ನು ಪ್ರೀತಿಸುತ್ತಾರೆ. ಪ್ರಯಾಣವೇ ಕೆಲಸವಾಗಿರುವಂತಹ ಸಿಂಹ ರಾಶಿಯವರಿಗೆ ನಿದ್ದೆಯಂದರೆ ಬಲೂ ಪ್ರೀತಿ.

 zodiac signs who sleeps a lot in kannada

ಮೀನ ರಾಶಿ

ಮೀನ ಕನಸು ಕಾಣುವ ರಾಶಿ. ಈ ರಾಶಿಯವರು ಫ್ಯಾಂಟಸಿ ಪ್ರಪಂಚದೊಂದಿಗೆ ನೈಸರ್ಗಿಕ ಸಂಬಂಧವನ್ನು ಹೊಂದಿದ್ದಾರೆ. ನಿದ್ರೆ ಅಂದರೆ ಮೀನ ರಾಶಿಯವರಿಗೆ ತುಂಬಾ ಪ್ರೀತಿ. ನೀವು ಮೀನ ರಾಶಿಯವರಾಗಿದ್ದರೆ ಕನಸಿನ ಜಗತ್ತಿನಲ್ಲಿ ದೀರ್ಘಕಾಲ ಉಳಿಯಲು ಇಚ್ಚಿಸುವಿರಿ. ಹೀಗಾಗಿ ನಿದ್ದೆ ಮಾಡಲು ನೀವು ಇಚ್ಚಿಸುವಿರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+