Yearly Horoscope 2025: 2025ರ ವರ್ಷ ಭವಿಷ್ಯ ಕಟಕ ರಾಶಿಯವರಿಗೆ ಹೇಗಿರಲಿದೆ? ಶುಭ ಫಲ ಕೊಡುವರಾ ಶನಿ-ಗುರು?
ಒಂದು ರಾಶಿಯ ವರ್ಷ ಭವಿಷ್ಯವನ್ನು ಗುರು ಮತ್ತು ಶನಿಯ ಸ್ಥಾನದಿಂದ ತಿಳಿದುಕೊಳ್ಳಲಾಗುತ್ತದೆ. ಈ ಎರಡೂ ಗ್ರಹಗಳು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಆ ರಾಶಿಯವರ ಜೀವನ ಉತ್ತಮವಾಗಿರುತ್ತದೆ. ಆದರೆ ಈ ಗ್ರಹಗಳಲ್ಲಿ ಒಂದು ಗ್ರಹ ನಿಮ್ಮ ಜಾತಕದಲ್ಲಿ ದುರ್ಬಲವಾಗಿದ್ದರೆ ಅದು ಅನೇಕ ಸಮಸ್ಯೆಗಳನ್ನು ನೀಡುತ್ತದೆ. ಹಾಗಾದರೆ ಮುಂಬರುವ 2025ರ ವರ್ಷದಲ್ಲಿ ಕಟಕ ರಾಶಿಯವರಿಗೆ ಶನಿ ಹಾಗೂ ಗುರು ಬಲ ಹೇಗಿದೆ ಎಂದು ತಿಳಿಯೋಣ.
ಕಟಕ ರಾಶಿಯವರು ಮುಂದಿನ ವರ್ಷ ಅಷ್ಟಮ ಶನಿಯಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ಗುರು ಬಲವನ್ನು ಕಳೆದುಕೊಳ್ಳುತ್ತಾರೆ. ಮಾರ್ಚ್‌ನಲ್ಲಿ ಶನಿಕಾಟದಿಂದ ಮುಕ್ತಿಯನ್ನು ಅನುಭವಿಸಿ ಒಂದಿಷ್ಟು ಸಂತಸ ಪಡುವಂತಹ ಸಂದರ್ಭದ ಒಳಗಡೆನೇ ನಿಮ್ಮ ಶಷ್ಠಾಧಿಪತಿಯಾಗಿ, ಯೋಗಕಾರಕವಾಗಿರುವ ಗುರು ಹನ್ನೆರಡನೆ ವ್ಯಯ ಸ್ಥಾನಕ್ಕೆ ಬಂದು ತೊಂದರೆಗಳನ್ನು ತರುತ್ತಾನೆ. ಅನಾನುಕೂಲಗಳನ್ನು ಸೃಷ್ಟಿ ಮಾಡಿಕೊಡುವುದಿಲ್ಲ. ಶನಿಯಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುವುದಿಲ್ಲ. ಆದರೆ ನಿಮ್ಮ ಅದೃಷ್ಟಗಳು ಮಂದವಾಗುತ್ತವೆ. ಹಾಗಾದರೆ ಕಟಕ ರಾಶಿಯವರು ಮುಂದಿನ ವರ್ಷ(2025)ದಲ್ಲಿ ಯಾವ ರೀತಿ ಶುಭ ಮತ್ತು ಅಶುಭ ಫಲವನ್ನು ಪಡೆಯಲಿದ್ದಾರೆ ಎಂದು ತಿಳಿಯೋಣ.

ವೃತ್ತಿ ಜೀವನ
2025ರಲ್ಲಿ ಕಟಕ ರಾಶಿಯವರ ವೃತ್ತಿ ಜೀವನ ಉತ್ತಮವಾಗಿರುವುದಿಲ್ಲ. ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಒತ್ತಡ ಹೆಚ್ಚಾಗುತ್ತದೆ. ತುಂಬಾ ಟೆನ್ಶನ್ ಲೈಫ್ ಇರುತ್ತದೆ. ಲಾಭದ ಕೊರತೆಯನ್ನು ವ್ಯಾಪಾರದಲ್ಲಿ ಅನುಭವಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಸಾಲಗಳು ಬಹಳ ತೊಂದರೆ ತಂದು ಕೊಡಲಿದೆ. ಬೇರೆಯವರ ವ್ಯಾಪಾರಕ್ಕೆ ಕೈ ಹಾಕಬೇಡಿ. ಅದು ಕೂಡ ನಿಮಗೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಜಾಗರೂಕರಾಗಿರಿ.
ಆರ್ಥಿಕ ಜೀವನ
2025ರಲ್ಲಿ ಕಟಕ ರಾಶಿಯವರ ಆರ್ಥಿಕ ಜೀವನ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಕಟಕ ರಾಶಿಯಲ್ಲಿ ಶನಿ ಹಾಗೂ ಗುರು ಸಂಚಾರ ಅಷ್ಟೊಂದು ಉತ್ತಮವಾಗಿಲ್ಲ. ಅಷ್ಟಮದಲ್ಲಿ ರಾಹುವಿನ ಪ್ರಭಾವ ಇರುತ್ತದೆ. ರಾಹು ಕೇತು ಸಂಚಾರದಲ್ಲಿ ಸಾಲ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮುಂಬರುವ ವರ್ಷದಲ್ಲಿ ಸಾಲ ಕೊಡೋದು, ಸಾಲ ಮಾಡೋದು ಒಳ್ಳೆಯದಲ್ಲ. ದುಡಿಮೆಯಲ್ಲಿ ನಷ್ಟದಿಂದ ಸಾಲ ಮಾಡಬಹುದು, ಅನಾರೋಗ್ಯದ ಕಾರಣ ಸಾಲ ಮಾಡಬಹುದು, ಬೇರೆಯವರಿಗೋಸ್ಕರ ಸಾಲ ಹೀಗೆ ಈ ಮೂರು ವಿಚಾರದಲ್ಲಿ ಸಾಲ ಮಾಡಬೇಕಾದ ಸಂದರ್ಭ ಬರಬಹುದು. ಇದರಿಂದ ನಿಮಗೆ ಧನ ನಷ್ಟ ಉಂಟಾಗುತ್ತದೆ. ಹೀಗಾಗಿ ಜಾಗರೂಕರಾಗಿರಿ.

ಶೈಕ್ಷಣಿಕ ಜೀವನ
ಶೈಕ್ಷಣಿಕ ಜೀವನದಲ್ಲಿ ಕಟಕ ರಾಶಿಯವರಿಗೆ 2025 ಮುಂದಿನ ವರ್ಷ ಅನುಕೂಲವಾಗಿರುವುದಿಲ್ಲ. ಹೈಯರ್ ಎಜ್ಯುಕೇಶನ್ ಮಾಡುವವರಿಗೆ ತುಂಬಾ ತೊಂದರೆಗಳು ಇರುವುದಿಲ್ಲ. ಆದರೆ ಪ್ರೈಮರಿ ಎಜ್ಯುಕೇಶನ್ ಮಾಡುವವರಿಗೆ ಸಮಸ್ಯೆಗಳು ಕಾಡುತ್ತವೆ. ಕಾರಣ ವಿದ್ಯಾಸ್ಥಾನಕ್ಕೆ ಕೇತುವಿನ ಸಂಚಾರ ಆಗುತ್ತದೆ. ಗುರು ನಿಮ್ಮ ನಾಲ್ಕನೇ ಮನೆಯನ್ನು ವೀಕ್ಷಣೆ ಮಾಡುವುದರಿಂದ ಇದರಿಂದ ಹೈಯರ್ ಸ್ಟಡಿ ಮಾಡುವವರಿಗೆ ಅನಾನುಕೂಲತೆಗಳು ಇವೆ. ಕಾಮರ್ಸ್ ವಿದ್ಯಾರ್ಥಿಗಳಿಗೆ ಏಳಿಗೆ ಇಲ್ಲ. ಹೀಗಾಗಿ ಸಂದರ್ಭವನ್ನು ಸಮವಾಗಿ ಸ್ವೀಕರಿಸಿ.
ಕುಟುಂಬ ಜೀವನ
ರಾಹು ಕೇತುವಿನ ಸಂಕ್ರಮಣದಿಂದಾಗಿ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ವಾಗ್ವಾದಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಸಾಕಷ್ಟು ತೊಂದರೆಗಳಾಗುತ್ತವೆ. ಹೀಗಾಗಿ ಜಾಣ್ಮೆಯಿಂದ ವರ್ತಿಸಿ. ನಿಮ್ಮ ಬುದ್ಧಿವಂತಿಕೆಯಿಂದ ಹಣ ಸಂಪಾದಿಸಬಹುದು. ಶ್ರಮಪಡಿ ಸಂಪತ್ತನ್ನು ಕಾಪಾಡಿಕೊಳ್ಳುವುದು ಬಿಟ್ಟರೆ ನಿಮಗೆ ಬೇರೆ ದಾರಿ ಇಲ್ಲ. ಕುಟುಂಬ ನಿರ್ವಹಣೆ ಕಷ್ಟವಾದರೆ ಸಾಲ ಮಾಡುವುದು, ಇತರರಿಂದ ಹಣ ತೆಗೆದುಕೊಳ್ಳುವುದು ಮಾಡಬೇಡಿ.

ಪ್ರೇಮ ಜೀವನ
ಮುಮದಿನ ವರ್ಷ ನಿಮ್ಮ ಪ್ರೇಮ ಜೀವನ ಅಷ್ಟೊಂದು ಉತ್ತಮವಾಗಿಲ್ಲ. ಅನಾನುಕೂಲತೆಯ ಪರಿಸ್ಥಿತಿ ಅಧಿಕವಾಗಿರುತ್ತದೆ. ಜೂನ್, ಜುಲೈ, ಆಗಸ್ಟ, ಸೆಪ್ಟಂಬರ್ ತಿಂಗಳಲ್ಲಿ ನಿಮ್ಮ ಪ್ರೇಮ ಸಂಬಂಧ ಒಡೆದು ಹೋಗುತ್ತದೆ. ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಾಗ ಮದುವೆ ಮುರಿದು ಬೀಳುತ್ತದೆ. ಜಾಗ್ರತೆಯಾಗಿರಿ. ಧೈರ್ಯಗುಂದಬೇಡಿ. ಸಮಾಧಾನದಿಂದ ವರ್ತಿಸುವುದು ತುಂಬಾ ಮುಖ್ಯವಾಗಿದೆ.
ಆರೋಗ್ಯ ಜೀವನ
2025ರಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಎದೆ, ಭುಜ, ಹೃದಯ ರೋಗದ ಸಮಸ್ಯೆಗಳು ಹೆಚ್ಚಾಗಬಹುದು. ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಆರೋಗ್ಯದ ಕಡೆ ಜಾಗೃತ ವಹಿಸಬೇಕಾಗುತ್ತದೆ. ಸಣ್ಣಪುಟ್ಟ ಕಾಯಿಲೆಗಳು ಬರುವ ಮುಂಚೆ ಬರದಂತೆ ತಡೆಯಲು ನಿರ್ವಹಿಸಬೇಕಾದ ಕ್ರಮಗಳನ್ನು ಅನುಸರಿಸಿ. ಯಾವುದೇ ಸಮಸ್ಯೆಗಳು ಹೆಚ್ಚಾಗದಂತೆ ತಡೆಯಲು ಕೊನೆಯಲ್ಲಿ ಕೆಲ ಸರಳ ಪರಿಹಾರಗಳನ್ನು ನೀಡಲಾಗಿದೆ ಅವುಗಳನ್ನು ಅನುಸರಿಸಿ.
ಪರಿಹಾರ
ದಕ್ಷಣಾ ಮೂರ್ತಿ ದೇವರ ಸ್ತ್ರೋತ್ರವನ್ನು ಪ್ರತಿನಿತ್ಯ ಪಠಣ ಮಾಡುವುದು ತುಂಬಾ ಒಳ್ಳೆಯ ಫಲವನ್ನು ನೀಡುತ್ತದೆ.
ಪ್ರತೀ ಸೋಮವಾರ ನರಸಿಂಹ ದೇವಸ್ಥಾನ ಹಾಗೂ ಹನುಮಂತನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಸ್ವಲ್ಪ ಹೊತ್ತು ಕುಳಿತು ಬನ್ನಿ.
ಸೂರ್ಯೋದಯದ ಸಮಯದಲ್ಲಿ ಆದಿತ್ಯ ಸ್ತ್ರೋತ್ರವನ್ನು ಪಠಣ ಮಾಡಿ.
ಬೇವಿನ ಗಿಡಗಳನ್ನು ನೆಟ್ಟು ಪೋಷಣೆಯನ್ನು ಮಾಡಿ, ಅದು ವೃದ್ಧಿಯಾದ ಹಾಗೆ ನಿಮ್ಮ ಬದುಕು ಕೂಡ ವೃದ್ಧಿಯಾಗುತ್ತದೆ. ಸಂಪತ್ತು ನೆಲೆಸಲಿದೆ.
-
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications