ಧನಸ್ಸಿನಿಂದ ಮೀನದವರ 2014ರ ಸಂಕ್ರಮಣ ಫಲ
ಧನಸ್ಸು : ಮೂಲ, ಪೂರ್ವಾಷಾಢದ ಎಲ್ಲ ನಾಲ್ಕೂ ಹಾಗೂ ಉತ್ತರಾಷಾಢಾ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವರು ಧನು ರಾಶಿಯವರಾಗುತ್ತಾರೆ. ಅಕ್ಕಿ, ಬೆಲ್ಲ ಹಾಗೂ ಕಡಲೆಕಾಳನ್ನು ಇವರು ತಮಗಾದಷ್ಟು ದಾನ ಮಾಡಬಹುದು. ಈ ಸಂಕ್ರಮಣದ ಫಲದಿಂದ ಇವರಿಗೆ ಕೊಂಚ ನೆಮ್ಮದಿಯ ವಾತಾವರಣ ಲಭಿಸುತ್ತದೆ. ಏಕೆಂದರೆ ಇವರು ಬಹಳ ದಿನಗಳ ನಂತರ ಕುಟುಂಬಸ್ಥರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಂತಾಗಿದೆ.
ಹಬ್ಬ-ಹರಿದಿನಗಳಲ್ಲಿ ಇವರನ್ನು ಹುಡುಕಿಕೊಂಡು ಬಂದು ಸ್ನೇಹಿತರಾಗಲಿ, ಪ್ರೀತಿಸಿದವರಾಗಲಿ, ಸಂಬಂಧಿಕರಾಗಲಿ ಇವರಿಗೆ ಹೊಸ ಬಟ್ಟೆ ಕೊಡಿಸಿ ತಾವೇ ಸಂತೋಷ ಪಡುತ್ತಾರೆ. ಇದೊಂದು ಹೊಸ ತರಹದ ಅನುಭವದಂತೆ ಜೀವನದಲ್ಲಿ ಇವರಿಗಾಗುತ್ತದೆ ಎನ್ನಬಹುದು. ಇನ್ನೊಂದು ಮಜವಾದ ವಿಷಯವೆಂದರೆ ಇವರು ಬೇಡವೆಂದರೂ ಕೆಲವೊಮ್ಮೆ ಒತ್ತಾಯದಿಂದ ಇವರು ಶಾಪಿಂಗ್ ಸ್ಥಳಗಳಲ್ಲಿ ಅನಿವಾರ್ಯವಾಗಿ ಬಟ್ಟೆ ಕೊಡಿಸಿಕೊಳ್ಳಬಹುದು.

ಮಕರ : ಉತ್ತರಾಷಾಢ 2, 3, 4, ಶ್ರವಣಾದ ನಾಲ್ಕೂ, ಧನಿಷ್ಠಾ ನಕ್ಷತ್ರದ 1, 2ನೇ ಚರಣದಲ್ಲಿ ಜನಿಸಿದವರು ಮಕರ ರಾಶಿಯವರಾಗುತ್ತಾರೆ. ಅಕ್ಕಿ, ಬೆಲ್ಲ, ಕಡಲೆಕಾಳು ಹಾಗೂ ಕರಿ ಎಳ್ಳನ್ನು ಇವರು ದಾನ ಮಾಡಬಹುದು. ಇನ್ನು ಈ ಸಂಕ್ರಮಣವು ಇವರಿಗೆ ಅಂಥದೇನೂ ಸಂತಸ ತರದಿದ್ದರೂ ನೋವಂತೂ ಕೊಡುವುದಿಲ್ಲ. ಯಾಕೆಂದರೆ ಎಂದಿನಂತೆ ಮಂದಗತಿಯಲ್ಲೇ ಜೀವನ ಸಾಗಿಸುವ ಈ ರಾಶಿಯವರಿಗೆ ಹೆಚ್ಚಿನ ಆಸೆಯೂ ಕೂಡ ಇರುವುದಿಲ್ಲ. ಹೀಗಾಗಿ ಇವರು ಏನೂ ಬಯಸದೇ ಇರುವುದರಿಂದ ಇದ್ದುದರಲ್ಲಿಯೇ ಸಂತಸ ಕಾಣುತ್ತಿರುತ್ತಾರೆ. ಆದರೂ ಇವರಿಗೆ ಸಂಕ್ರಮಣ ಫಲವು ಧನಸ್ಸು ರಾಶಿಯವರಿಗಿರುವಂತೆಯೇ ಇದೆ.
ಕುಂಭ : ಧನಿಷ್ಠಾದ 3, 4, ಶತತಾರಾದ ನಾಲ್ಕೂ ಹಾಗೂ ಪೂರ್ವಭಾದ್ರಪದದ 1, 2, 3ನೇ ಚರಣದಲ್ಲಿ ಜನಿಸಿದವರದು ಕುಂಭ ರಾಶಿ. ಅಕ್ಕಿ, ಬೆಲ್ಲ, ಕಡಲೆಕಾಳು ಹಾಗೂ ಕರಿ ಎಳ್ಳನ್ನು ಇವರು ಬಡವರಿಗೆ ದಾನ ಮಾಡಬಹುದು. ಈ ಸಂಕ್ರಮಣದ ಫಲವು ಇವರಿಗೆ ಅಷ್ಟೊಂದು ಶುಭಕರವಾಗಿಲ್ಲ. ಇದ್ದಬದ್ದ ಹಣವೆಲ್ಲ ಪೋಲಾಗುವ ಸಂಭವವೇ ಹೆಚ್ಚಾಗಿದೆ. ತಮ್ಮದೇನಾದರೂ ವಸ್ತುವಿದ್ದರೆ ಅದನ್ನು ಕಳೆದುಕೊಂಡು ಹಲುಬಬೇಕಾಗುತ್ತದೆ. ಆದ್ದರಿಂದ ಯಾವುದೇ ಪ್ರೀತಿಯ ವಸ್ತುವಿರಲಿ, ವ್ಯಕ್ತಿಗಳಿರಲಿ ಅವರೊಂದಿಗೆ ಅತೀ ಸಲುಗೆ ಹಾಗೂ ಆತ್ಮೀಯತೆ ಬೆಳೆಸಿಕೊಳ್ಳಬಾರದು.
ಏಕೆಂದರೆ ಈ ಸಮಯದಲ್ಲಿ ಗಳಿಸಿದ್ದಷ್ಟೇ ಅಲ್ಲ ಸಾಲಸೋಲ ಮಾಡಿದ್ದ ಹಣವೂ ಕೂಡ ಹೇಳ ಹೆಸರಿಲ್ಲದಂತಾಗುತ್ತದೆ. ಆದ್ದರಿಂದ ಹಣವನ್ನು ಎಲ್ಲಾದರೂ ಕೂಡಿಡುವಾಗ ಒಮ್ಮೆ ಯೋಚಿಸಿ ನಂಬಿಕೆ ಬಂದ ಮೇಲೆಯೆ ಮುಂದುವರಿಯಬೇಕು. ಯಾವುದಕ್ಕೂ ಹಣದ ಬಗ್ಗೆ ಹೆಚ್ಚಿನ ಜಾಗೃತೆ ಮತ್ತು ಎಚ್ಚರಿಕೆ ವಹಿಸಿಕೊಳ್ಳಬೇಕು. ಕಳಕೊಂಡ ಮೇಲೆ ಕೊರಗೋ ಬದಲು, ಮೊದಲೇ ಮುಂಜಾಗೃತೆ ವಹಿಸಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಈಗಂತೂ ನಾಸ್ತಿಕ ಸ್ವಭಾವದ ಜನರು ಹಣ ಸಿಗುತ್ತದೆಯೆಂದರೆ ತಲೆ ಮೇಲೆ ಚಪ್ಪಡಿ ಎಳೆಯಲೂ ಸಿದ್ಧರಾಗಬಹುದು.
ಮೀನ : ಪೂರ್ವಭಾದ್ರಪದದ 4, ಉತ್ತರಭಾದ್ರಪದ ಹಾಗೂ ರೇವತಿ ನಕ್ಷತ್ರದಲ್ಲಿ ಜನಿಸಿದವರು ಮೀನ ರಾಶಿಯವರಾಗುತ್ತಾರೆ. ಅಕ್ಕಿ, ಬೆಲ್ಲ, ಕಡಲೆಕಾಳನ್ನು ಇವರು ಯಾರಿಗಾದರೂ ಕೊಡಬಹುದು. ಇನ್ನು "ಯಾಕ್ ಸಾಮಿ ಕೊಡಬೇಕು ದಾನಾನ್ ನಾನು?" ಎಂದು ದಾನ ಕೊಡದ ಕೇಡು ಮನಸ್ಸಿನಿಂದ ಮಾತನಾಡುವವರಿಗೆ, ನೀವು ಎಲ್ಲೇ ಹೋಗಲಿ ಅಲ್ಲಿ ಅನ್ನಪ್ರಸಾದಕ್ಕೆ ಪಾಳಿ ಹಚ್ಚಬಾರದು. ಜೇಬಿನಿಂದ ದುಡ್ಡು ಖರ್ಚು ಮಾಡಿ ಊಟ ಮಾಡಿ ಬರಬೇಕು. ಕೊಟ್ಟದ್ದನ್ನು ತಿನ್ನೋದು ಗೊತ್ತಾಗುತ್ತದೆ, ಮತ್ತೊಬ್ಬರಿಗೆ ಕೊಡೋದು ಗೊತ್ತಾಗದಿರೋ ಮುಠ್ಠಾಳರೇ ಸರಿ ಎನ್ನಬೇಕಾಗುತ್ತದೆ. ಇಂದಿಗೂ ಇಂಥ ದುರ್ಬುದ್ಧಿಯ ದುಷ್ಟರು ನಮ್ಮ ಸುತ್ತಮುತ್ತಲೇ ಇದ್ದಾರೆ ಎಂಬುದು ಮಾತ್ರ ನಮಗೇನೆ ಅಸಹ್ಯ.
ಇವರಲ್ಲೇನೂ ಕಾಸು ಇಲ್ಲಾ ಅಂತೇನಿಲ್ಲ. ಎಲ್ಲಾ ಇದ್ದೂ ಹಿಂಗೇ ಎಡಸೊಕ್ಕು ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ಇವರಿಗೆ ಎಲ್ಲಾ ಹೊರಗಡೆಯಿಂದಲೇ ಬರಬೇಕು. ಕೈಲಿಂದ ಮಾತ್ರ ಒಂದು ನೈಯಾ ಪೈಸೆನೂ ಖರ್ಚಾಗಬಾರದು. ಇಂಥವರಿಗೆ ಎಲ್ಲಿಂದ ಬರಬೇಕು ದೈವಕೃಪೆ? ಹೀಗಾಗಿಯೇ ಇವರು ಎಷ್ಟು ಪೂಜೆ ಮಾಡಿದರೂ ಅಷ್ಟೇನೇ ಎನ್ನುತ್ತಿರುತ್ತಾರೆ. ಆದರೆ ದೇವರಿಗೆ ಪೂಜೆಗಿಂತ ಜನರ ಸೇವೆ ಮಾಡುವವರನ್ನು ಕಂಡರೆ ಬಹಳಷ್ಟು ಖುಷಿ ಎಂಬುದು ಇವರಿಗೆ ಗೊತ್ತಿರಲ್ಲ.
ಮೀನದವರಿಗೆ ಸಂಕ್ರಮಣದ ಫಲವು ಅತ್ಯುತ್ತಮವಾಗಿದೆ. ಆದರೆ ರೇವತಿ ನಕ್ಷತ್ರದವರಿಗೆ ಮಾತ್ರ ಈ ಲಾಭ ಅನ್ವಯಿಸುತ್ತದೆ. ಪೂರ್ವಭಾದ್ರಪದ ಹಾಗೂ ಉತ್ತರ ಭಾದ್ರಪದ ನಕ್ಷತ್ರದವರಿಗೆ ಕುಂಭ ರಾಶಿಯವರಿಗಿದ್ದಂತೆಯೇ ಫಲವಿದೆ. ಆದರೆ ರೇವತಿ ನಕ್ಷತ್ರದ ಮೀನ ರಾಶಿಯವರು ಸಂತಸದ ಅಲೆಯಲ್ಲಿ ತೇಲುವ ಸಮಯವೆನ್ನಬಹುದು ಈಗ. ಹಲವಾರು ವರ್ಷಗಳಿಂದ ಕಾಯುತ್ತಿದ್ದ ಅನೇಕ ಅವಕಾಶಗಳು ಈಗ ಒಮ್ಮಿಂದೊಮ್ಮೆಲೆ ಬರುತ್ತವೆ. ಯಾವುದನ್ನು ಆಯ್ದುಕೊಳ್ಳಬೇಕು ಎಂಬುದು ಸಹ ಗೊಂದಲವಾಗುವಂತಹ ಸ್ಥಿತಿ ಬರಬಹುದು. ಇದೂ ಅಲ್ಲದೇ ಹಣಕಾಸಿನ ಸಹಾಯ ಹಾಗೂ ಆಸ್ತಿ ಕೊಂಡುಕೊಳ್ಳುವ ಸಮಯ ಇದಾಗಿದೆ.
ಇನ್ನು ಈ ಸಂಕ್ರಮಣದ ಫಲವು ಆರು ತಿಂಗಳವರೆಗೆ ಇರುತ್ತದೆ ಎಂಬುದನ್ನು ಈ ಮೊದಲೇ ವರ್ಷ ಭವಿಷ್ಯದ ಲೇಖನದಲ್ಲಿ ಓದಿದ್ದೀರಿ. ಆದರೂ, ಏನೂ ತಲೆಗೆ ಹೋಗ್ತಾ ಇಲ್ಲಾ ಎನ್ನುವವರು ಇನ್ನೊಮ್ಮೆ ಓದಿಕೊಂಡರೆ ಒಳ್ಳೆಯದು. "ಇಲ್ಲಾ ಸಾಮೆರ ನಂಗೆ ಒಂದೇ ಸಲ ಓದಿದರೂ ಸಾಕು ಅರ್ಥವಾಗುತ್ತೆ" ಎನ್ನುವವರಿಗೆ ಇದು
ಲೇಖಕರ ಮೊಬೈಲ್ : 94815 22011
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications