'ಕೈಬಳೆ ಒಡೆದಾವು': ಆತಂಕ ಮೂಡಿಸಿದ ಬೆಂಕಿ ಬಬಲಾದಿ ಕಾಲಜ್ಞಾನ

ಈ ಹಿಂದೆ ನುಡಿಯಲಾಗಿದ್ದ ಕಾಲಜ್ಞಾನ ಕರಾರುವಕ್ಕಾಗಿ ಹೊರಬಂದಿದ್ದ ಹಿನ್ನಲೆಯಲ್ಲಿ ಮಾರ್ಚ್ ನಾಲ್ಕರ ಶುಕ್ರವಾರ, ಬಬಲಾದಿ ಮಠದ ಸ್ವಾಮೀಜಿ ನುಡಿದ ಭವಿಷ್ಯ ಭಕ್ತರನ್ನು ಆತಂಕಕ್ಕೆ ದೂಡಿದೆ. ಗೂಢಾರ್ಥದ ಭವಿಷ್ಯದಲ್ಲಿ ವಿಶ್ವದಲ್ಲಿ ಅಶಾಂತಿಯ ಮುನ್ಸೂಚನೆಯಿದೆ.

"ರಾಜಕೀಯ ಏರಿಳಿತವಾಗಿದೆ, ಪಕ್ಷಪಕ್ಷದೊಳಗೆ ಅಸೂಹೆ ಮೂಡಲಿದೆ, ಗಾಳಿ ಹೆಚ್ಚಾಗಲಿದೆ, ಮಹಾವ್ಯಾಧಿ ಹುಟ್ಟುತ್ತದೆ, ಆಂಧ್ರ ತೆಲುಗು ರಾಜ್ಯಕ್ಕೆ ಕೇಡಾಗುತ್ತದೆ. ಯುದ್ದದ ಭಯವೂ ಇದೆ, ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಎಂದಿಗೂ ಸುಳ್ಳಾಗುವುದಿಲ್ಲ ಮಕ್ಕಳ್ರಾ"ಎಂದು ಕಳೆದ ಬಾರಿ ಬಬಲಾದಿ ಮಠದಿಂದ ಭವಿಷ್ಯ ಹೊರಬಿದ್ದಿತ್ತು.

500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಸ್ಚಾಮೀಜಿ ಬರೆದಿಟ್ಟಿರುವ ಕಾಲಜ್ಞಾನದ ಕುರಿತು 2021ರ ಶಿವರಾತ್ರಿಯಲ್ಲಿ ನಡೆದಿದ್ದ ಸದಾಶಿವ ಮುತ್ಯಾರ ಜಾತ್ರೆಯಲ್ಲಿ, ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದರು.

ಶುಕ್ರವಾರ ಬಬಲಾದಿ ಮಠದ ಜಾತ್ರಾ ಸಮಯದಲ್ಲಿ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಸ್ವಾಮೀಜಿಯಿಂದ ಕಾಲಜ್ಞಾನದ ಭವಿಷ್ಯವಾಣಿ ಹೊರಬಿದ್ದಿದೆ. ಬಿಳಿಗೋಡೆಯ ಮೇಲೆ ಕಪ್ಪು ಚುಕ್ಕಿಯಂತೆ ಇಲ್ಲಿ ಮಾತನಾಡಿದ್ದು ಹುಸಿಯಾಗದು ಎಂಬುದು ಪ್ರತೀತಿ. ನುಡಿಯಲಾದ ಕಾಲಜ್ಞಾನವೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

 ಬೆಂಕಿ ಬಬಲಾದಿ ಸದಾಶಿವ ಮುತ್ಯಾರ ಮಠದ ಸ್ವಾಮೀಜಿಗಳ ಭವಿಷ್ಯ

ಬೆಂಕಿ ಬಬಲಾದಿ ಸದಾಶಿವ ಮುತ್ಯಾರ ಮಠದ ಸ್ವಾಮೀಜಿಗಳ ಭವಿಷ್ಯ

"ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಹಾಹಾಕಾರ, ಕೆಟ್ಟ ಪರಿಣಾಮ. ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು, ಪಡವಲು ದಿಕ್ಕಿಗೆ ತ್ರಾಸು, ಕೇಡು. ಜೋಳ, ಕಡೆಲೆ ರಸ ವರ್ಗಗಳು ಕೆಂಡಮಂಡಲ. ಉತ್ತರ ದಿಕ್ಕಿನಿಂದ ಮುಂದೆ ಮುರುಕಾದಿತು. ನೀತಿಯಿಂದ ನಿಜರೂಪ ತೋರುತೈತೆ. ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ"ಎಂದು ಬೆಂಕಿ ಬಬಲಾದಿ ಸದಾಶಿವ ಮುತ್ಯಾರ ಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದಾರೆ.

 ಎರಡು ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ನಡೆದ ಜಾತ್ರೆ

ಎರಡು ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ನಡೆದ ಜಾತ್ರೆ

ಎರಡು ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ನಡೆದ ಜಾತ್ರೆಯ ವೇಳೆ ಬಬಲಾದಿ ಸ್ವಾಮೀಜಿಗಳು ಈ ಭವಿಷ್ಯವನ್ನು ನುಡಿದಿದ್ದಾರೆ. ಹಿಂದಿನ ಸಂಪ್ರದಾಯದಂತೆ ಶಿವರಾತ್ರಿಯ ಮೂರನೇ ದಿನ ಕಾಲಜ್ಞಾನ ಭವಿಷ್ಯ ನುಡಿಯಲಾಗುತ್ತದೆ. ಕಾಲಜ್ಞಾನ ಕೇಳಲು ವಿಜಯಪುರ ಜಿಲ್ಲೆಯ ಭಕ್ತರು ಮಾತ್ರವಲ್ಲದೇ, ಸುತ್ತಮುತ್ತಲ ಜಿಲ್ಲೆಗಳ ಮತ್ತು ಅನ್ಯ ರಾಜ್ಯಗಳ ಭಕ್ತರೂ ಭಾರೀ ಸಂಖ್ಯೆಯಲ್ಲಿ ಹಾಜರಾಗಿದ್ದರು. ಹಿಂದಿನ ಜಾತ್ರೆಯ ವೇಳೆ ನುಡಿಯಲಾಗಿದ್ದ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎನ್ನುವುದು ಭಕ್ತರ ನಂಬಿಕೆ.

 ಕಲಿ ಪುರುಷನ ಮುಂದೆ ಆಟ ಕೆಟ್ಟು ಹೋಗಿದೆ

ಕಲಿ ಪುರುಷನ ಮುಂದೆ ಆಟ ಕೆಟ್ಟು ಹೋಗಿದೆ

"ತಂತ್ರ ಅತಂತ್ರ, ಜಗತ್ತಿನಲ್ಲಿ ಅಧಿಕ ಪಾಪ. ಕಲಿ ಪುರುಷನ ಮುಂದೆ ಆಟ ಕೆಟ್ಟು ಹೋಗಿದೆ. ಪಡವಲು ದಿಕ್ಕಿಗೆ ತ್ರಾಸು, ಕೇಡು, ಪಶ್ಚಿಮ ಭಾಗಕ್ಕೆ ಕೆಟ್ಟದ್ದು ಆಗುತ್ತದೆ. ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ ಇದೆ, ಪೀತ ನಾಶವಾಗುವ ಸೂಚನೆ, ಭೂಕಾಂತಿ ನಡುಗೀತು. ಗಾಳಿ‌ ಸುನಾಮಿ‌ ಜಾಸ್ತಿ. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಪಾಪ ಕೈಮೀರಿ ಹೋದಿತು" ಎನ್ನುವ ಭವಿಷ್ಯದ ಮೂಲಕ ಭೂಕಂಪ ಸುನಾಮಿ ಆಗುವ ಎಚ್ಚರಿಕೆಯನ್ನು ಬಬಲಾದಿ ಸ್ವಾಮೀಜಿ ನೀಡಿದ್ದಾರೆ.

 ಅಮೆರಿಕಾ, ಇರಾಕ್, ಇರಾನ್, ರಷ್ಯಾ, ನಾ ಮುಂದು ತಾ ಮುಂದು

ಅಮೆರಿಕಾ, ಇರಾಕ್, ಇರಾನ್, ರಷ್ಯಾ, ನಾ ಮುಂದು ತಾ ಮುಂದು

"ಸೃಷ್ಟಿಯ ಮುಂದೆ ದುಃಖ, ನಷ್ಟ, ಲೋಕಕ್ಕೆ ಕಷ್ಟ. ಐರೋಪ್ಯ ರಾಷ್ಟ್ರ, ಅಮೆರಿಕಾ, ಇರಾಕ್, ಇರಾನ್, ರಷ್ಯಾ, ನಾ ಮುಂದು ತಾ ಮುಂದು ಎಂದು ಸಾಗೀತು, ಅಸೂಹೆ ಕಲಹ ತಾರಕಕ್ಕೇರಿತು ಏಳಾಣೆ ಮಳೆ, ಎಂಟಾಣೆ ಬೆಳೆ " ಎಂದು ಹೇಳುವ ಮೂಲಕ ಬಬಲಾದಿ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಸ್ವಾಮೀಜಿ ಯುದ್ದದ ಮುನ್ಸೂಚನೆ ಕೊಟ್ಟಿದ್ದಾರೆ. ಜೊತೆಗೆ, ಕೃಷಿಕರಿಗೆ ಒಳ್ಳೆಯ ಫಸಲು ಬರುತ್ತದೆ ಎಂದೂ ಸ್ವಾಮೀಜಿ ಹೇಳಿದ್ದಾರೆ.

Recommended Video

      ಕೊಹ್ಲಿ ಔಟಾದ ತಕ್ಷಣ ರೋಹಿತ್ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+