ಏಳರಾಟ ನಮಗ್ಯಾವಾಗ : ಇಮೇಲ್ ಮಾಡಿ ತಿಳಿದುಕೊಳ್ಳಿ
ಶನಿದೇವನ ಏಳರಾಟದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸಾಕಷ್ಟು ಕಡೆ ಚರ್ಚೆಗಳಾಗುತ್ತಿವೆ. ಈ ಮೊದಲು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಏಕೋ ಏನೋ ಮಾಹಿತಿ ಕೊರತೆಯೋ ಅಥವಾ ಗೊತ್ತಿದ್ದವರು ಶನಿದೇವನ ಬಗ್ಗೆ ತುಟಿಬಿಚ್ಚಲು ಒಳಮನಸ್ಸಿನ ಅಪ್ಪಣೆಯಿಲ್ಲದೇ ಸುಮ್ಮನಿರುತ್ತಿದ್ದರು ಎನ್ನಬೇಕಾಗುತ್ತದೆ. ಏಕೆಂದರೆ ಶನಿದೇವನ ಬಗ್ಗೆ ಮಾತನಾಡಲೂ ಕೂಡ ಪ್ರಾಮಾಣಿಕರಿರಬೇಕು.
ಅದೂ ಅಲ್ಲದೇ ಶನಿದೇವನು ತನ್ನ ಪ್ರಭಾವದ ಬಗ್ಗೆ ಜಗತ್ತಿಗೆ ತಿಳಿಸಿಕೊಡಲು ಸೂಕ್ತವಾದ ವ್ಯಕ್ತಿಯನ್ನು ತಾನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಎಲ್ಲರಿಗೂ ಮಹಾನ್ ಶಕ್ತಿಶಾಲಿ ಶನಿಮಹಾತ್ಮನ ಬಗ್ಗೆ ಮಾತನಾಡಲು ಗುಂಡಿಗೆಯಿರಲ್ಲ. ತಪ್ಪೇ ಮಾಡದವರು ಈ ಜಗದಲ್ಲಿ ಯಾರೂ ಇಲ್ಲ. ಆದರೆ ಆಕಳ ಸ್ವಭಾವದಂತೆ ಜಗಕೆ ಕಾಣುತ್ತಾ, ಒಳಗೆ ಮಾತ್ರ ಕ್ರೂರ ಬುದ್ಧಿ ತುಂಬಿಕೊಂಡಂಥವರು ಮಾತನಾಡ್ಲಿ ನೋಡೋಣ ಶನಿದೇವರ ಪ್ರಭಾವದ ಬಗ್ಗೆ? [ಸಾಡೇಸಾತಿ ಎಂದರೇನು, ಏನಿದರ ಮರ್ಮ?]
ಮಹಾತ್ಮನ ಸುದ್ದಿಗೇನೆ ಬರುವುದಿಲ್ಲ ಎಷ್ಟೋ ಜನ. ಅದು ಅವರ ಆತ್ಮಕ್ಕೆ ಗೊತ್ತಿರುತ್ತದೆ ನಾನೆಂಥವನು, ನಾನೆಷ್ಟು ಒಳ್ಳೆಯವನು ಎಂದು. ಏಕೆಂದರೆ ಯಾವುದೇ ದೇವಸ್ಥಾನದಲ್ಲಿ "ಒಳ್ಳೆಯವರಿಗೆ ಮಾತ್ರ ಪ್ರವೇಶ" ಎಂದು ಎಲ್ಲಿಯೂ ಬೋರ್ಡ್ ಹಾಕಿಲ್ಲ. ಶನಿದೇವನ ದೇವಸ್ಥಾನಕ್ಕೆ ಹೋಗಬೇಡಿ ಎಂದು ಹೇಳುವವರು ಶನಿದೇವನ ದೇವಸ್ಥಾನಕ್ಕೆ ಹೋಗಿ ಬರಲಿ. ಗೊತ್ತಾಗತ್ತೆ "ಹೇಳೋದು ಆಚಾರ, ತಿನ್ನೋದು ಬದ್ನೆಕಾಯಿ" ಇವರದು ಎಂದು ಎಲ್ಲರಿಗೂ.

ಇರಲಿ, ಏಳರಾಟ ಯಾವಾಗ ಬರುತ್ತದೆ ಎಂಬುದು ದಿನಾಂಕ ಸಮೇತ ಮೊದಲೇ ಗೊತ್ತಾದರೆ ಇನ್ನೂ ಒಳ್ಳೆಯದಲ್ಲವೇ. ಇಂಥದೊಂದು ಅವಕಾಶ www.indianhoroscope.org ವೆಬ್‌ತಾಣ ನೀಡುತ್ತಿದೆ. ಏಳರಾಟ ತಿಳಿದುಕೊಳ್ಳಲು ಈ ಕೆಳಕಂಡ ಮಾಹಿತಿಗಳನ್ನು ವೆಬತಾಣದ [email protected] ಈ ವಿಳಾಸಕ್ಕೆ ಈಮೇಲ್ ಮಾಡಬಹುದು.
1) ಜನ್ಮದಿನಾಂಕ, ಜನ್ಮಸಮಯ, ಜನ್ಮಸ್ಥಳ.
2) ಸಂಪೂರ್ಣ ಹೆಸರು, ವಿಳಾಸ, ಉದ್ಯೋಗ,
3) ಸಾಡೇಸಾತಿಯೊಂದಿಗೆ ಬೇಕಾದಂಥ ಇತರ ಮಾಹಿತಿ.
ಈ ವಿವರಗಳನ್ನು ಈಮೇಲ್ ಕಳಿಸಿದರೆ ಜನ್ಮಜಾತಕ ರೂಪಿಸಿ ಅದರ ಮೂಲಕ ಏಳರಾಟದ ಮಾಹಿತಿ, ಕುಜದೋಷ ಹಾಗೂ ಕಾಳಸರ್ಪದೋಷದ ಕುರಿತು ಮಾಹಿತಿ ನೀಡಲಾಗುವುದು. ಒಂದು ಈಮೇಲ್‌ನಲ್ಲಿ ಕೇವಲ ಒಬ್ಬರ ಬಗ್ಗೆ ಮಾಹಿತಿ ನೀಡಬೇಕು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications