Weekly Horoscope : ಆರು ರಾಶಿಯವರ ಮೇಲೆ ದುರ್ಗಿಯ ಆಶೀರ್ವಾದ; ಯಾರಿಗೆ ಈ ವಾರ ಅದೃಷ್ಟ? ಯಾರಿಗೆ ಎದುರಾಗುವುದು ಸಮಸ್ಯೆ?
Weekly Horoscope October 12 to 18: ಈ ವಾರ ಕೆಲವು ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರುವುದು. ಆದರೆ ಕೆಲವರಿಗೆ ಸವಾಲಿನಿಂದ ಕೂಡಿರುವುದು. ಈ ವಾರ ಅಂದರೆ ಅಕ್ಟೋಬರ್ 12 ರಿಂದ 18ರವರೆಗೆ ಯಾವ ರಾಶಿಯವರ ಅದೃಷ್ಟ ಹೇಗಿರುತ್ತದೆ ಎನ್ನುವುದನ್ನು ನೋಡೋಣ.
ಮೇಷ ರಾಶಿ (Aries):
ಮೇಷ ರಾಶಿಯವರಿಗೆ ಈ ವಾರ ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಪರೀಕ್ಷೆಯಾಗಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಪಡೆಯುವ ಸಾಧ್ಯತೆಯಿದೆ. ಮೇಲಧಿಕಾರಿಯೊಂದಿಗೆ ಮಾತನಾಡುವಾಗ ಪದ ಬಳಕೆಯ ಬಗ್ಗೆ ಎಚ್ಚರಿಕೆ ಇರಲಿ. ಆತುರದಲ್ಲಿ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಅನಗತ್ಯ ವೆಚ್ಚ ಹೆಚ್ಚಾಗಬಹುದು. ಹಣದ ಯೋಜನೆ ಅಗತ್ಯವಾಗಿರುತ್ತದೆ. ಕುಟುಂಬ ಸದಸ್ಯರ ಬೆಂಬಲ ಇರುವುದು. ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಆರೋಗ್ಯಕ್ಕೆ ಮುಖ್ಯ.

Weekly Horoscope ವೃಷಭ ರಾಶಿ (Taurus):
ಸ್ಥಿರತೆ ಮತ್ತು ಪ್ರಗತಿಯ ದೃಷ್ಟಿಯಿಂದ ಈ ವಾರ ಭರವಸೆಯಿಂದ ಕೂಡಿರುವುದು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನ ಯಶಸ್ವಿಯಾಗಬಹುದು. ಅದರೂ ಹಣ ಖರ್ಚು ಮಾಡುವಾಗ ಸರಿಯಾಗಿ ಯೋಚಿಸಿ. ಪ್ರೇಮ (love) ಸಂಬಂಧಗಳಲ್ಲಿ ಅನ್ಯೋನ್ಯತೆ ಹೆಚ್ಚಾಗುವುದು. ಸಂಗಾತಿಯ ಬೆಂಬಲ ಸಿಗುವುದು. ಕುಟುಂಬದಲ್ಲಿ ಸಂತೋಷ ಮನೆ ಮಾಡುವುದು. ಆರೋಗ್ಯದ ಬಗ್ಗೆ ಜಾಗೃತೆ ಇರಲಿ.
ಮಿಥುನ ರಾಶಿ (Gemini):
ಈ ವಾರ ನಿಮ್ಮ ಪಾಲಿಗೆ ಮಹತ್ವದ್ದಾಗಿರಲಿದೆ. ಉದ್ಯೋಗದಲ್ಲಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಗುವುದು. ಹೊಸ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಎಚ್ಚರಿಕೆಯಿಂದ ಅಧ್ಯಯನ ಮಾಡಿ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಯ್ದುಕೊಳ್ಳಿ. ಕುಟುಂಬ ಜವಾಬ್ದಾರಿ ಹೆಚ್ಚಾಗಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.
ಕರ್ಕಾಟಕ ರಾಶಿ (Cancer):
ಈ ವಾರ ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಕೆಲವು ಕಾರ್ಯಗಳು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಹಳೆಯ ವಹಿವಾಟುಗಳನ್ನು ಪೂರ್ಣ ಮಾಡಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುವ ಸಾಧ್ಯತೆಯಿದೆ. ನೀವೇ ಸರಿ ಎನ್ನುವ ಹಾಗೆ ಯಾವುದೇ ವಿಚಾರದಲ್ಲಿ ಹಠ ಮಾಡಬೇಡಿ. ಸಂಗಾತಿಯ ಭಾವನೆಯನ್ನು ಅರ್ಥಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಎಚ್ಚರ ಇರಲಿ.
ಸಿಂಹ ರಾಶಿ (Leo):
ಈ ವಾರ ಸಿಂಹ ರಾಶಿಯವರು ಆತ್ಮವಿಶ್ವಾಸದಿಂದ ಮುಂದುವರಿಯುವಿರಿ. ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಅವಕಾಶ ಸಿಗುವುದು. ಹೊಸ ಪರಿಚಯ ವ್ಯವಹಾರದ ಪ್ರಗತಿಗೆ ನೆರವಾಗುವುದು. ಆದಾಯ ಹೆಚ್ಚಾಗುವುದು. ಪ್ರತಿಷ್ಠೆಗಾಗಿ ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ವೈವಾಹಿಕ ಜೀವನದಲ್ಲಿ ಪರಸ್ಪರ ಗೌರವ ಇರುವುದು. ಆರೋಗ್ಯದ ದೃಷ್ಟಿಯಿಂದ ಅತಿಯಾಗಿ ಕೆಲಸ ಮಾಡುವುದನ್ನು ತಪ್ಪಿಸಿ.
ಕನ್ಯಾರಾಶಿ (Virgo):
ಅರ್ಧಕ್ಕೆ ನಿಂತು ಹೋಗಿದ್ದ ಕೆಲಸ ಪೂರ್ಣವಾಗುವುದು. ಹಿರಿಯರಿಂದ ನಿರೀಕ್ಷೆಗಳು ಹೆಚ್ಚಾಗಬಹುದು. ನಿಮ್ಮ ಸಮಯವನ್ನು ಸರಿಯಾಗಿ ನಿರ್ವಹಿಸಿ. ವ್ಯವಹಾರದಲ್ಲಿನ ದಾಖಲೆಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಹಣ ಉಳಿಸುವುದು ಸಾಧ್ಯವಾಗುವುದು. ಪ್ರೇಮ ಸಂಬಂಧಗಳಲ್ಲಿ ವಾದಕ್ಕೆ ಅವಕಾಶ ಕೊಡಬೇಡಿ. ಕುಟುಂಬದೊಂದಿಗೆ ಸಂವಹನ ನಡೆಸುವಾಗ ತಾಳ್ಮೆಯಿಂದಿರಿ.
ತುಲಾ ರಾಶಿ (Libra) :
ಈ ವಾರ ತುಲಾ ರಾಶಿಯವರಿಗೆ ಹೊಸ ಅವಕಾಶ ನೀಡಬಹುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಇರಲಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ವಿಶ್ರಾಂತಿಯತ್ತ ಗಮನ ಕೊಡಿ.
ವೃಶ್ಚಿಕ ರಾಶಿ (Scorpio):
ಈ ವಾರ ಆತ್ಮವಿಶ್ವಾಸದಿಂದ ಕೂಡಿರುವುದು. ವೃತ್ತಿಜೀವನದಲ್ಲಿ (career) ಹೊಸ ಜವಾಬ್ದಾರಿ ಸಿಗುವುದು. ವ್ಯವಹಾರದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರ ಪ್ರಯೋಜನಕಾರಿಯಾಗಬಹುದು. ಹಣಕಾಸಿನ ವಹಿವಾಟುಗಳನ್ನು ಮಾಡುವಾಗ ಅವಸರ ಮಾಡಬೇಡಿ. ಹೂಡಿಕೆ ಮಾಡುವ ಮೊದಲು ಸರಿಯಾದ ಮಾಹಿತಿ ಪಡೆಯಿರಿ. ಪ್ರೇಮ ಸಂಬಂಧದಲ್ಲಿ ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ಸಾಕಷ್ಟು ನಿದ್ರೆ ಬಹಳ ಮುಖ್ಯ.
ಧನು ರಾಶಿ (Sagittarius):
ಹೊಸ ವಿಷಯ ಕಲಿಯಲು ಮತ್ತು ಪ್ರಗತಿ ಸಾಧಿಸಲು ಈ ವಾರ ಅವಕಾಶ ಸಿಗುವುದು. ಕೆಲಸ ಹುಡುಕುತ್ತಿರುವವರು ತಮ್ಮ ಪ್ರಯತ್ನ ಮುಂದುವರಿಸಬೇಕು. ಆರ್ಥಿಕ ಸ್ಥಿತಿ ಸುಧಾರಿಸಲು ಖರ್ಚುಗಳನ್ನು ಸರಿಯಾಗಿ ಯೋಜಿಸಿಕೊಳ್ಳಿ. ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಆರೋಗ್ಯದ ಕಾಳಜಿ ಅಗತ್ಯ.
ಮಕರ ರಾಶಿ (Capricorn):
ಈ ವಾರ ಕೆಲಸ ಮತ್ತು ಜವಾಬ್ದಾರಿ ಹೆಚ್ಚಾಗಬಹುದು. ತಾಳ್ಮೆ ಮತ್ತು ಶಿಸ್ತಿನಿಂದ ಕೆಲಸ ಮಾಡಿದರೆ ಉತ್ತಮ ಫಲ ಸಿಗುವುದು. ಉಳಿತಾಯದತ್ತ ಗಮನ ಹರಿಸಿ. ದೊಡ್ಡ ಖರ್ಚು ಮಾಡಲು ಸಮಯ ಯೋಗ್ಯವಲ್ಲ. ಕೌಟುಂಬಿಕ ಜವಾಬ್ದಾರಿ ಪೂರೈಸುವಾಗ ಸಂಗಾತಿಗೆ ಸಮಯ ನೀಡುವುದು ಮುಖ್ಯ. ಕೆಲಸದ ಮಧ್ಯೆ ವಿಶ್ರಾಂತಿಯ ಕಡೆಗೂ ಗಮನ ಇರಲಿ.
ಕುಂಭ ರಾಶಿ (Aquarius):
ಹೊಸ ಆಲೋಚನೆ ವಿಭಿನ್ನ ಅವಕಾಶಗಳ ಬಗ್ಗೆ ಯೋಚಿಸಲು ಈ ವಾರ ಅನುಕೂಲಕರ. ಸಹೋದ್ಯೋಗಿಗಳ ಸಹಾಯದಿಂದ ಕೆಲವು ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕುಟುಂಬ ಮತ್ತು ಸ್ನೇಹಿತರಿಂದ ಭಾವನಾತ್ಮಕ ಬೆಂಬಲ ಸಿಗುವುದು.
ಮೀನ ರಾಶಿ (Pisces):
ಹೊಸ ಕೆಲಸ ಸಿಗಬಹುದು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಅವಸರ ಬೇಡ. ಖರ್ಚುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಂಗಾತಿ ಮತ್ತು ಮಕ್ಕಳೊಂದಿಗೆ (kids) ಉತ್ತಮ ಸಮಯ ಕಳೆಯುವಿರಿ. ಮಕ್ಕಳ ಸಾಧನೆ ತೃಪ್ತಿ ಕೊಡಲಿದೆ.


Click it and Unblock the Notifications
