Weekly Horoscope 2025: ಈ ವಾರ ಈ ರಾಶಿಯವರಿಗೆ ಇಲ್ಲಿಂದ ಶುಭ ಸಮಯ ಶುರು: 12 ರಾಶಿಗಳ ಭವಿಷ್ಯ ಇಲ್ಲಿದೆ

ಮೇ ತಿಂಗಳ ಕೊನೆಯ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.

ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ/ಗ್ರೀಷ್ಮ ಋತು ವೈಶಾಖ ಮಾಸದ ಬಹುಳ ಚತುರ್ದಶಿಯಿಂದ ಜ್ಯೇಷ್ಠ ಶುಕ್ಲಪಕ್ಷದ ಷಷ್ಠಿ ಯವರೆಗೆ ಅಂದರೆ 25.5.25 ರಿಂದ 01.06.25 ರ ವರೆಗೆ ಈ ವಾರದ ಚಂದ್ರನ ಸಂಚಾರ ಭರಣಿ ನಕ್ಷತ್ರದಿಂದ ಆಶ್ಲೆಷಾದ ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

weekly horoscope in kannada from may 25 to June 01 2025

ಮೇಷರಾಶಿ

ಎರಡನೇ ಮನೆಯಲ್ಲಿ ಬುಧ ಸೂರ್ಯ ಇರುವುದರಿಂದ ಧನಲಾಭ ಕುಟುಂಬ ಸೌಖ್ಯ ಇದೆ. ರಾಹು ಕೂಡ ಲಾಭಸ್ಥಾನಕ್ಕೆ ಬಂದಿರುವುದು ಸಾಡೆಸಾತಿ ಸಮಯದಲ್ಲೂ ಕೊಂಚ ಲಾಭಕರವಾಗಿದೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಲಾಭಸ್ಥಾನದ ರಾಹು ಆಪತ್ತುಗಳಿಂದ ರಕ್ಷಿಸುತ್ತಾನೆ.

ವೃಷಭರಾಶಿ

ಇದುವರೆಗೂ ಲಾಭಸ್ಥನದಲ್ಲಿ ಇದ್ದ ರಾಹು ಈಗ ಹತ್ತನೇ ಮನೆಗೆ ಪ್ರವೇಶವಾಗಿದ್ದಾನೆ. ಹತ್ತನೇ ಮನೆ ಕುಂಭರಾಶಿ ರಾಹುವಿಗೆ ಮಿತ್ರಸ್ಥಾನ ಹಾಗಾಗಿ‌ಯಾವುದೇ ತೊಂದರೆ ಇಲ್ಲ. ಲಾಭಸ್ಥಾನದಲ್ಲಿ ಈಗ ಶನಿ ಮತ್ತು ಶುಕ್ರ ಇರುವುದೂ ಕೂಡ ನಿಮಗೆ ಅಧಿಕ‌ ಧನಲಾಭ ಶತ್ರುಗಳಿಂದ ಬಿಡುಗಡೆ ಇದೆ. ಎರಡನೇ ಗುರು ನಿಮಗೆ ಸದಾ ಶುಭ ವನ್ನು ತರುತ್ತಾನೆ.‌ ಒಳ್ಳೆಯ ಹೆಸರು ಗೌರವ ಸಂಪಾದಿದಸುತ್ತೀರಿ.

ಮಿಥುನರಾಶಿ

ಒಂಬತ್ತನೇ ಮನೆಗೆ ರಾಹು‌ ಪ್ರವೇಶವಾಗಿದ್ದರೂ ಮೂರನೇ ಮನೆಗೆ ಕೇತು ಬಂದಿರುವುದರಿಂದ ಧನಲಾಭ ಇದೆ. ದೈಹಿಕ ಶ್ರಮ ನೋವು ಕಡಿಮೆಯಾಗುತ್ತದೆ. ಮಂಡಿ ನೋವು ಕತ್ತು ಭುಜ ನೋವು ಇವೆಲ್ಲ ಕಡಿಮೆಯಾಗುತ್ತದೆ. ಧರ್ಮಕಾರ್ಯಕ್ಕೆ ಖರ್ಚು ಮಾಡುತ್ತೀರಿ.

ಕಟಕರಾಶಿ

ಎಂಟನೇ ಮನೆಗೆ ರಾಹು ಎರಡನೇ ಮನೆಗೆ ಕೇತು ಬಂದಿದ್ದಾರೆ. ಕೊಂಚ ಇರಿಸುಮುರಿಸಿನ‌ ಸಮಯ. 12 ಮನೆ ಗುರು ಜಾಗ ಬದಲಾವಣೆ ತೋರಿಸುತ್ತಾನೆ. ಹತ್ತರಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ಸೂರ್ಯ ಶುಭಫಲಗಳನ್ನು ಕೊಡುತ್ತಾರೆ. ಆದರೂ ಈಗ ನಿಮಗೆ ಅಲ್ಪಲಾಭ. ಮಿಶ್ರಫಲ.

ಸಿಂಹರಾಶಿ

ಏಳನೇ ಮನೆಗೆ ರಾಹು ನಿಮ್ಮ ರಾಶಿಯಲ್ಲೇ ಕೇತು ಇದ್ದಾನೆ. ಗುರು ಲಾಭದಲ್ಲಿ ಇದ್ದರೂ ಶನಿ ಎಂಟನೇ ಮನೆಯಲ್ಲಿ ಇರುವುದರಿಂದ ಸಂಕಷ್ಟಗಳು ಕಾಡಿಸುತ್ತಲೇ ಇರುತ್ತದೆ. ಎಂಟರಲ್ಲಿ ಶುಕ್ರ ಶುಭಫಲ ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.‌ ನೌಕರಿಯಲ್ಲಿ ಬಡ್ತಿ, ಸ್ಥಾನಮಾನ ಪದವಿ ಅಧಿಕಾರ ಪ್ರಾಪ್ತಿ ಇದೆ. ವಿದ್ಯಾರ್ಥಿಗಳಿಗೆ ಶುಭಫಲ ಇದೆ.

ಕನ್ಯಾರಾಶಿ

ನಿಮ್ಮ ರಾಶಿಯಿಂದ ಕೇತು ಸಿಂಹ ಕ್ಕೆ ಚಲಿಸಿದ್ದಾನೆ. ರಾಹು ಆರನೇ ಮನೆಗೆ ಬಂದಿರುವುದು ಲಾಭಕರ. ಧನಲಾಭ. ಶತ್ರುಗಳು ದೂರವಾಗುತ್ತಾರೆ. ಪರಾಕ್ರಮದಿಂದ ಯಾವ ಕೆಲಸಕ್ಕೂ ಜಯ ಲಭಿಸುತ್ತದೆ. ಹನ್ನೊಂದರಲ್ಲಿ ಕುಜ ಕೂಡ ಅಲ್ಪಲಾಭ ಕೊಡುತ್ತಾನೆ. ಏಳರಲ್ಲಿ ಶುಕ್ರ ರಕ್ಷಣೆ ಮಾಡುತ್ತಾನೆ. ಗುರುಬಲ ಇಲ್ಲದಿದ್ದರೂ ಬೇರೆ ಗ್ರಹಬಲಗಳು ಇದೆ.

ತುಲಾರಾಶಿ

ಗುರು ಬಲ ಶನಿಬಲ ಬಂದಿದೆ ಜೀವನ ಹಗುರವಾಗಿ ಸಾಗುತ್ತಿದೆ. ನೆನೆಗುದಿಗೆ ಬಿದ್ದ ಕೆಲಸಗಳೆಲ್ಲ ಚಟುವಟಿಕೆ ಪಡೆದುಕೊಂಡು ಮುಂದೆ ಸಾಗಿದೆ. ಈಗ ಕೇತು ಸಹ ಲಾಭಸ್ಥಾನಕ್ಕೆ ಬಂದು ನಿಮಗೆ ಶುಭಲಾಭ ತಂದುಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ. ಆಸ್ತಿ‌ಖರೀದಿ ಯೋಗ ಇದೆ. ಸುಗ್ರಾಸ ಭೋಜನ ಪ್ರಾಪ್ತಿ‌ಇದೆ. ಮನಸ್ಸಿಗೆ ನೆಮ್ಮದಿ ಇದೆ.

ವೃಶ್ಚಿಕರಾಶಿ

ಏರುಪೇರುಗಳ ಜೀವನ ಆರಂಭವಾಗಿದೆ. ಸರಾಗವಾಗಿ‌ ನಡೆಯುತ್ತಿದ್ದ ಕೆಲಸಗಳಿಗೆ ಅನಿರೀಕ್ಷಿತ ಅಡ್ಡಿ ಆತಂಕಗಳು ತಲೆದೋರುತ್ತದೆ. ನೌಕರಿಯಲ್ಲಿ‌ ಒತ್ತಡ ಮೇಲಧಿಕಾರಿಗಳ ಕಿರುಕುಳ ಇರುತ್ತದೆ. ಟಾರ್ಗೆಟ್ ಮುಟ್ಟಲು ಆಗದೆ ಟೆನ್ಷನ್ ಆಗುತ್ತದೆ. ವೃಥಾ ಅಲೆದಾಟ ಮನಸ್ಸಿಗೆ ಸಮಾಧಾನ‌ ಇಲ್ಲದ ದಿನಗಳು. ತಾಳ್ಮೆ ಇರಲಿ. ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ. ಫಲ ದೇವರಿಗೆ ಬಿಡಿ.

ಧನಸ್ಸುರಾಶಿ

ಏಳನೇ ಮನೆಗೆ ಗುರುವಿನ ಪ್ರವೇಶವಾಗಿದೆ. ಅರ್ಹರು ವಿವಾಹಕ್ಕಾಗಿ ಕಾಯುತ್ತಿರುವವರಿಗೆ ಶುಭಸುದ್ದಿ ಇದೆ. ಹೊಸ ಕೆಲಸ ಸಿಗುವುದು ಬಡ್ತಿ ಸಿಗುವುದು ಎಲ್ಲವೂ ಇದೆ. ಮೂರನೇ ಮನೆಗೆ ರಾಹು ಬಂದಿದ್ದಾನೆ. ಧನಲಾಭ ಇದೆ. ಅನಿರೀಕ್ಷಿತ ಮೂಲಗಳಿಂದ ಧನಪ್ರಾಪ್ತಿ. ಮೆಡಿಕಲ್ ಫೀಲ್ಡಿನವರಿಗೆ ಶುಭ. ಶೇರ್ಸ್ ನಲ್ಲಿ ಹಣ ಹಾಕಿರುವವರಿಗೆ ಲಾಭ ಇದೆ. ಶತ್ರುಗಳು ದೂರವಾಗುತ್ತಾರೆ. ಹೊಸ ಧೈರ್ಯ ಕೆಚ್ಚು ನಿಮ್ಮಲ್ಲಿ ಬರುತ್ತದೆ. ಯಾರನ್ನಾದರೂ ಎದುರಿಸಿ ನಿಮ್ಮ ಕೆಲಸ ಸಫಲ ಮಾಡಿಕೊಳ್ಳುವ ತಾಕತ್ತು ಬರುತ್ತದೆ.

ಮಕರರಾಶಿ

ಈಗ ಶನಿಬಲ ಮಾತ್ರವೇ ಇದೆ ಆದರೂ ಪರವಾಗಿಲ್ಲ‌ಎಷ್ಡೋ ಕೆಲಸಗಳು ನಡೆಯುತ್ತವೆ.‌ ಮೂರನೇ ಮನೆಯಲ್ಲಿ ಶನಿ ಶುಕ್ರ ಇಬ್ಬರಿಂದಲೂ ಒಳ್ಳೆಯ ಫಲಗಳು ಇವೆ. ಐದರಲ್ಲಿ ಬುಧ ಸೂರ್ಯ ಕೂಡ ನಿಮಗೆ ಒಳಿತು ಮಾಡುತ್ತಾರೆ. ‌ಹಣದ ಹರಿವು ಉತ್ತಮವಾಗಿದೆ. ಆರರಲ್ಲಿ ಗುರು‌ ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಮೂರರ ಶನಿ ಒತ್ತಡಗಳನ್ನು ಕಡಿಮೆ ಮಾಡುತ್ತಾನೆ. ‌ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭರಾಶಿ

ಬಹಳ ದಿನಗಳಿಂದ ಕಾಯುತ್ತಿದ್ದ ಗುರುಬಲ ಬಂದಿದೆ. ಬಹಳಷ್ಟು ಒಳ್ಳೆಯ ಬದಲಾವಣೆಗಳನ್ನು ಕಾಣುವಿರಿ. ಒಂದು ಹೊಸ ದಾರಿ ಗೋಚರಿಸುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಅದೃಷ್ಟ ಈಗ ನಿಮ್ಮ ಕೈ ಹಿಡಿಯುತ್ತದೆ. ಆರರಲ್ಲಿ ಕುಜ ಪರಾಕ್ರಮ ಕೊಡುತ್ತಾನೆ. ಮೂರರಲ್ಲಿ ಬುಧ ಎರಡನೇ ಮನೆಯಲ್ಲಿ ಶುಕ್ರ ಅನೇಕ‌ ಶುಭ ಸಂಗತಿಗಳನ್ನು ಅನುಭವಿಸುವಂತೆ ಮಾಡುತ್ತಾರೆ. ರಾಹು ನಿಮ್ಮ ರಾಶಿಗೇ ಬಂದಿದ್ದಾನೆ.‌ರಾಹು ನಿಮ್ಮ ರಾಶಿಗೆ ಒಳ್ಳೆಯವನು. ಕೆಡುಕು ಮಾಡಲಾರ.‌ಹೊಸ ನೌಕರಿ, ವಿವಾಹ, ಬಡ್ತಿ ಮೊದಲಾದ ಶುಭಫಲಗಳು ಸಿಗುತ್ತದೆ.

ಮೀನರಾಶಿ

ಮುಖ್ಯವಾಗಿ ರಾಹು ನಿಮ್ಮ ರಾಶಿ ಬಿಟ್ಟು ಕುಂಭಕ್ಕೆ ಪ್ರವೇಶ ಮಾಡಿದ್ದಾನೆ. ಇದು ನಿಮಗೆ ಬಹುದೊಡ್ಡ ಸಮಸ್ಯೆಗಳನ್ನು ನಿವಾರಿಸುತ್ತದೆ ಆರೋಗ್ಯ ಸುಧಾರಿಸುತ್ತದೆ. ಆರನೇ ಮನೆಯಲ್ಲಿ ಕೇತು ಹಣಕಾಸಿನ ನೆರವು ಕೊಡಿಸುತ್ತಾನೆ. ಮುರನೇ ಮನೆಯ ಬುಧ ಸೂರ್ಯ ಸಹ ನಿಮಗೆ ಶುಭಫಲವನ್ನು ಕೊಡುತ್ತಾರೆ. ಗುರು ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಜಾಗರೂಕತೆಯಿಂದ ನಿಭಾಯಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+