Weekly Horoscope 2025: ಮಾರ್ಚ್ ಎರಡನೇ ವಾರ ಈ ರಾಶಿಯ ವೈಯಕ್ತಿಕ ಜೀವನ ಫುಲ್ ಚೇಂಜ್
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಫಾಲ್ಗುಣ ಶುಕ್ಲ ತದಿಗೆಯಿಂದ ದಶಮಿಯವರೆಗೆ
ಅಂದರೆ 02.03.25 ರಿಂದ 09.03.25 ವರೆಗೆ
ಈ ವಾರದ ಚಂದ್ರನ ಸಂಚಾರ ಉತ್ತರಾಭಾದ್ರ ನಕ್ಷತ್ರದಿಂದ ಪುನರ್ವಸು ವರೆಗೆ

ಮೇಷರಾಶಿ:
ವಾರದ ಮಧ್ಯದಲ್ಲಿ ಎರಡನೇ ಮನೆಯಲ್ಲಿ ಗಜಕೇಸರಿ ಯೋಗದಿಂದ ಸಾಧ್ಯವಿಲ್ಲ ಅಂದುಕೊಂಡ ಕೆಲಸಗಳೂ ಸಾಧ್ಯವಾಗಿಬಿಡುತ್ತದೆ. ಧನಾಗಮನ ಚೆನ್ನಾಗಿ ಇದೆ. ಹನ್ನೊಂದರಲ್ಲಿ ಶನಿ ಸೂರ್ಯಇದ್ದಾರೆ ತಂದೆಯಿಂದ ಲಾಭ ಇದ್ದರೂ ತಂದೆಯ ಆರೋಗ್ಯದ ಮೇಲೂ ಗಮನ ಇರಲಿ. 12 ನೇ ಮನೆಯ ರಾಹು 11 ನೇ ಮನೆಗೆ ಬಂದಾಗ ಇನ್ನೂ ಪರಿಸ್ಥಿತಿ ಸುಧಾರಿಸುತ್ತದೆ.

ವೃಷಭರಾಶಿ:
ನಿಮ್ಮ ರಾಶಿಯಲ್ಲೇ ವಾರದ ಮಧ್ಯಭಾಗದಲ್ಲಿ ಗಜಕೇಸರಿ ಯೋಗ ಆಗಿ ಮೈಮನಸ್ಸಿಗೆ ಶಕ್ತಿ ಬರುತ್ತದೆ. ಜಟಿಲ ಸಮಸ್ಯೆಗಳು ಹಗುರ ಎನಿಸುತ್ತದೆ. ಹನ್ನೊಂದನೇ ಮನೆಯಲ್ಲಿ ಬುಧ ಶುಕ್ರ ರಾಹೂ ಮೂರೂ ಗ್ರಹಗಳೂ ಮಿತ್ರರು ನಿಮಗೆ ಬಹಳ ಒಳ್ಳೆಯ ಫಲ ನೀಡುತ್ತಾರೆ. ಬುಧ ಮೀನರಾಶಿ ಯಲ್ಲಿ ನೀಚನಾದರೂ ಶುಕ್ರ ಜೊತೆಗಿದ್ದು ನೀಚಭಂಗ ಆಗಿದೆ. ಶುಭಫಲಗಳು ಸಿಗುತ್ತದೆ. ಧನಲಾಭ ಇದೆ.

ಮಿಥುನರಾಶಿ:
ಹತ್ತನೇ ಮನೆಯಲ್ಲಿ ರಾಹು, ಬುಧ, ಶುಕ್ರ ಇರುವುದು ವೃತ್ತಿಗೆ ಸಂಬಂಧಿಸಿದಂತೆ ಲಾಭ ಇದೆ. ಒಂಬತ್ತನೇ ಮನೆಯಲ್ಲಿ ಶನಿ ಸೂರ್ಯ ಇರುವುದು ತಂದೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ತಂದೆಯ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಕೇತು ನಾಲ್ಕನೇ ಮನೆಯಲ್ಲಿ ಇರುವುದರಿಂದ ವೃಥಾ ತಿರುಗಾಟ, ಕಾಲು ನೋವು, ಮಂಡಿನೋವು ಮುಂತಾದ ಸಮಸ್ಯೆಗಳು ಇರುತ್ತದೆ. ಕೊಂಚ ಕಿರಿಕಿರಿ ಅನುಭವಿಸುತ್ತೀರಿ. ನಿಧಾನ ಪ್ರಗತಿ ಯಿಂದ ನಿಮಗೆ ನಿರಾಶೆಯಾಗುತ್ತದೆ.

ಕಟಕರಾಶಿ:
ಅಷ್ಟಮದಲ್ಲಿ ಸೂರ್ಯ ಶನಿ ಅಷ್ಟು ಶುಭಕಾರಕರಲ್ಲ. ಮೈಗ್ರೇನ್ ಕಾಡಿಸಬಹುದು ಅಥವಾ ಮಂಡಿನೋವು ಬರಬಹುದು. ಅಷ್ಠಮ ಶನಿ ಕೊನೆಯ ಹಂತದಲ್ಲಿ ಇದೆ. ಕೆಲವೇ ದಿನಗಳಲ್ಲಿ ಅಷ್ಠಮಶನಿಯಿಂದ ಬಿಡುಗಡೆ ಸಿಗುತ್ತದೆ. ಲಾಭಸ್ಥಾನದಲ್ಲಿ ಗುರು ಚಂದ್ರ ಈ ವಾರದ ಮಧ್ಯಭಾಗದಲ್ಲಿ ಗಜಕೇಸರಿ ಯೋಗ ಉಂಟುಮಾಡುತ್ತಾರೆ. ಇದರಿಂದ ಅನೇಕ ಪ್ರಯೋಜನಗಳು ಧನಲಾಭ ಇದೆ.

ಸಿಂಹರಾಶಿ:
ಹತ್ತನೇ ಮನೆಯಲ್ಲಿ ಗಜಕೇಸರಿ ಯೋಗ ವೃತ್ತಿಯಲ್ಲಿ ಥಟ್ಟನೆ ಎದುರಾದ ಸಂಕಟಗಳು ತಾತ್ಕಾಲಿಕವಾಗಿ ದೂರವಾದಾವು. ಬೀಸೋದೊಣ್ಣೆ ತಪ್ಪಿದರೆ ಸಾವಿರ ವರ್ಷಗಳ ಆಯಸ್ಸು ಅಂದಹಾಗೆ. ಹನ್ನೊಂದನೇ ಮನೆಯಲ್ಲಿ ಕುಜ ಇದ್ದಾನೆ ಧನಲಾಭ ಇದೆ. ಸುಮಾರು ದಿನಗಳಿಂದ ಲಾಭಸ್ಥಾನದ ಕುಜ ನಿಮ್ಮನ್ನು ಪೊರೆಯುತ್ತಲೇ ಇದ್ದಾನೆ. ಏಳನೇ ಮನೆಯಲ್ಲಿನ ಸೂರ್ಯ ಶನಿ ಕೊಂಚ ಕಿರಿಕಿರಿ ಕೊಡಬಹುದು. ಕೆಲವೇ ತಿಂಗಳಲ್ಲಿ ಗುರುಬಲ ಬರುವುದರಿಂದ ನಿಮ್ಮ ಸಮಸ್ಯೆಗಳು ತಾತ್ಕಾಲಿಕ. ಒಳ್ಳೆಯ ದಿನಗಳ ನಿರೀಕ್ಷೆ ಇರಲಿ.

ಕನ್ಯಾರಾಶಿ:
ಒಂಬತ್ತನೇ ಮನೆಯಲ್ಲಿ ಗುರು ಏಳನೇ ಮನೆಯಲ್ಲಿ ಶುಕ್ರ ಬುಧ ರಾಹು ಸಮಯ ಚೆನ್ನಾಗಿ ಇದೆ. ನಿಮ್ಮ ರಾಶಿಯಲ್ಲೇ ಕೇತು ಇರುವುದರಿಂದ ಆರೋಗ್ಯ ಸಮಸ್ಯೆ ಇರುತ್ತದೆ. ಶುಕ್ರ ಬುಧನ ದೃಷ್ಟಿ ನಿಮ್ಮ ರಾಶಿಯ ಮೇಲೆ ಬೀಳುವುದರಿಂದ ಕೊಂಚ ಮಟ್ಟಿನ ಪರಿಹಾರವೂ ದೊರೆಯುತ್ತದೆ ವಿಕೋಪಕ್ಕೆ ಹೋಗದಂತೆ ಕಾಪಾಡುತ್ತದೆ. ಆರನೇ ಮನೆಯಲ್ಲಿ ಸೂರ್ಯ ಶನಿ ಇದ್ದು ಶತ್ರುಗಳು ದೂರವಾಗುತ್ತಾರೆ. ಧನಲಾಭ ಇದೆ.

ತುಲಾರಾಶಿ:
ಪಂಚಮಶನಿಯ ಪ್ರಭಾವ ಮುಗಿಯುತ್ತ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಶನಿ ಆರನೇ ಮನೆಗೆ ಬರುತ್ತಾನೆ. ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಮುಂದೆ ಗುರುಬಲವೂ ಒಟ್ಟಾದಾಗ ನಿಮಗೆ ಬಹಳಷ್ಟು ಶುಭಫಲಗಳು ದೊರೆಯುತ್ತದೆ. ಇದುವರೆಗೂ ಅನುಭವಿಸಿದ ಕಷ್ಟಗಳಿಗೆ ಒಂದು ತೆರೆ ಬೀಳುತ್ತದೆ. ಸಿಕ್ಕುಗಳಿಂದ ಬಿಡುಗಡೆ ದೊರೆಯುತ್ತದೆ. ಈಗ ಆರನೇ ಮನೆಯಲ್ಲಿ ಬುಧ ಶುಕ್ರ ರಾಹು ಇರುವುದು ಕೂಡ ನಿಮಗೆ ಒಳ್ಳೆಯ ಫಲಗಳನ್ನು ನೀಡುತ್ತಿದೆ.

ವೃಶ್ಚಿಕರಾಶಿ:
ಈಗ ಗುರುಬಲ ಇದೆ. ನಿಮ್ಮ ಕೆಲಸಗಳೆಲ್ಲ ಸಲೀಸಾಗಿ ನಡೆಯುತ್ತದೆ. ವೃತ್ತಿಯಲ್ಲಿ ಪ್ರಗತಿಇದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಐದನೇ ಮನೆಯಲ್ಲಿ ಶುಕ್ರ ಬುಧ ರಾಹು ಇರುವುದು ರಾಹುವಿನ ದೋಷ ಕಡಿಮೆಯಾಗಿದೆ. ಹನ್ನೊಂದನೇ ಮನೆಯಲ್ಲಿ ಕೇತು ನಿಮಗೆ ಧನಲಾಭ ಹಾಗು ಶತ್ರುನಾಶವನ್ನು ತೋರಿಸುತ್ತಾನೆ. ಇನ್ನು ಕೆಲವು ದಿನಗಳಲ್ಲಿ ಪಂಚಮ ಶನಿಯ ಪ್ರಭಾವಕ್ಕೆ ಸಿಲುಕುತ್ತೀರಿ. ಈಗಿನಿಂದಲೇ ಜಾಗ್ರತೆ ವಹಿಸಿ. ಹೆಚ್ಚು ಒತ್ತಡಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.

ಧನಸ್ಸುರಾಶಿ:
ಗುರುಬಲ ಇಲ್ಲದೆ ಬಹಳ ತ್ರಾಸ ಅನುಭವಿಸುತ್ತಿದ್ದೀರಿ. ಮುಟ್ಡಿದ್ದೆಲ್ಲ ಮಣ್ಣು ಎಂಬಂತೆ ಆಗಿದೆ. ಇನ್ನು ಕೆಲವು ದಿನಗಳಲ್ಲಿ ಗುರುಬಲ ರಾಹುಬಲ ಎರಡೂ ಒಟ್ಟಾಗುತ್ತದೆ. ಆನಂತರ ಯಾವುದೇ ಗೋಜಲು ಸಮಸ್ಯೆಗಳು ಇರುವುದಿಲ್ಲ. ಎಲ್ಲ ಕಷ್ಟಗಳಿಗೂ ಪರಿಹಾರಮಾರ್ಗ ಕಾಣುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಈಗಲೂ ಮೂರರ ಶನಿ ಸೂರ್ಯ ಈಗಲೂ ನಿಮ್ಮ ಬೆಂಬಲಕ್ಕೆ ಇದ್ದಾರೆ. ನಾಲ್ಕರಲ್ಲಿ ಶುಕ್ರ ವಾಹನದಿಂದ ಲಾಭ ಕೊಡಿಸುತ್ತಾನೆ. ಹೊಸ ಆಸ್ತಿ ಮನೆ ವಾಹನ ಖರೀದಿ ಯೋಗ ಇದೆ.

ಮಕರರಾಶಿ:
ಗುರು ಐದನೇ ಮನೆಯಲ್ಲಿ, ರಾಹು ಮೂರನೇ ಮನೆಯಲ್ಲಿ ಬಲಿಷ್ಠರಾಗಿ ಇದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಾಡೆಸಾತಿಯೂ ಮುಗಿದು ನೀವು ನಿರಾಳರಾಗುತ್ತೀರಿ. ಈಗ ಹೊಸ ನೌಕರಿ ಹೊಸ ಪ್ರಾಜೆಕ್ಟ್ ಸಿಗುವ ಸಮಯ. ಒಳ್ಳೆಯ ಗಳಿಗೆಗಳು ಬರುತ್ತಿವೆ. ಬಹಳ ಕಷ್ಟ ಪಟ್ಟಿದ್ದೀರಿ. ಇನ್ನುಮುಂದೆ ನೆಮ್ಮದಿಯ ದಿನಗಳನ್ನು ಕಾಣುತ್ತೀರಿ. ಆರರಲ್ಲಿ ಕುಜ, ಮೂರರಲ್ಲಿ ಶುಕ್ರ ಬುಧ ಎಲ್ಲರೂ ಈಗ ನಿಮ್ಮ ನೆರವಿಗೆ ಇದ್ದಾರೆ. ಭಾಗ್ಯೋದಯವಾಗುವಂಥ ಸಮಯ.

ಕುಂಭರಾಶಿ:
ನಿಮ್ಮ ರಾಶಿಯಲ್ಲೇ ಶನಿ ಸೂರ್ಯ ಒಳ್ಳೆಯದಲ್ಲ. ಆತ್ಮೀಯರೊಂದಿಗೆ ಜಗಳಗಳು ಆಗಬಹುದು. ನಿಮ್ಮ ದೇಹಕ್ಕೇ ಕಿರಿಕಿರಿ ಆಗಬಹುದು. ಮೈಗ್ರೇನ್ ಇದ್ದರೆ ಉಲ್ಬಣಿಸಬಹುದು. ಜಾಗರೂಕತೆಯಿಂದ ಇರಿ. ಎರಡನೇ ಮನೆಯಲ್ಲಿ ಶುಕ್ರ ಬುಧ ರಾಹು ಇರುವುದು ಸಮಯ ತಕ್ಕಮಟ್ಟಿಗೆ ಚೆನ್ನಾಗಿ ಇದೆ. ನಾಲ್ಕರ ಗುರುವಿನಿಂದ ಕೊಂಚ ಕಿರಿಕಿರಿ. ಯಾವು ಯಾವುದೋ ತಕಾರುಗಳು ಮೇಲೇಳಬಹುದು. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಕೆಲವು ತಿಂಗಳ ಬಳಿಕ ಗುರುಬಲ ಬಂದ ಮೇಲೆ ಪರಿಸ್ಥಿತಿ ಗಳು ತಿಳಿಯಾಗುತ್ತದೆ.

ಮೀನರಾಶಿ:
ನಿಮ್ಮ ರಾಶಿಯಲ್ಲೇ ಬುಧ ಶುಕ್ರ ರಾಹು ಮೊದಲಾದ ವೈರಿ ಗ್ರಹಗಳು ಸೇರಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಎಲ್ಲ ಸರಿಯಿದ್ದರೂ ಏನೋ ಸರಿಇಲ್ಕ ಎಂಬ ಕೊರಗು ಇರುತ್ತದೆ. ಹಳೆಯ ಕಾಯಿಲೆಗಳು ಇದ್ದರೆ ಉಲ್ಬಣಿಸಬಹುದು. ಸಾಡೆಸಾತಿ ಯ ಪ್ರಾರಂಭ ಭಾಗದಲ್ಲಿ ಇರುವುದರಿಂದ ಹಣಕಾಸು ನಷ್ಟ, ಬಂಧುಬಳಗದ ನಡುವೆ ವೈಮನಸ್ದು ಮುಂತಾದ ಹಿನ್ನಡೆಗಳುಇರುತ್ತದೆ. ಈ ರೀತಿಯ ಪರಿಸ್ಥಿತಿ ಇನ್ನೂ ನಾಲ್ಕು ವರ್ಷ ಅನುಭವಿಸಬೇಕು ಆದರೆ ಕೆಲವು ತಿಂಗಳ ನಂತರ ರಾಹು ಆರನೇ ಮನೆಗೆ ಬಂದು ನಿಮಗೆ ಕೊಂಚ ಮಟ್ಟಿಗೆ ನಿರಾಳವಾಗುತ್ತದೆ.
ಶುಭಮಸ್ತು












Click it and Unblock the Notifications