Weekly Horoscope 2025: ಈ ವಾರ ನಿಮ್ಮ ಭವಿಷ್ಯ ಹೇಗಿರುತ್ತೆ? ಯಾವ ರಾಶಿಯವರು ಅದೃಷ್ಟವಂತರು: ನೀವೇ ನೋಡಿ

ಜೂನ್‌ ತಿಂಗಳ ಎರಡನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ ದ್ವಾದಶಿ ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.

ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಶುಕ್ಲಪಕ್ಷದ ದ್ವಾದಶಿಯಿಂದ ಕೃಷ್ಣಪಕ್ಷದ ಚತುರ್ಥಿಯವರೆಗೆ ಅಂದರೆ 08.06.25 ರಿಂದ 15.06.25 ರ ವರೆಗೆ ಈ ವಾರದ ಚಂದ್ರನ ಸಂಚಾರ ಸ್ವಾತಿ ನಕ್ಷತ್ರದಿಂದ ಶ್ರವಣಾದವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

weekly horoscope in kannada from June 08 to June 15 2025

ಮೇಷ ರಾಶಿ

ರಾಶಿಯಲ್ಲಿ ಶುಕ್ರ ಎರಡನೇ ಮನೆಯಲ್ಲಿ ಸೂರ್ಯ ಮೂರರಲ್ಲಿ ಬುಧ,-ಗುರು, ನಾಲ್ಕರಲ್ಲಿ ಕುಜ ಹನ್ನೊಂದರಲ್ಲಿ ರಾಹು ಈ ವಾರ ಮಿಶ್ರಫಲ ನಿಮಗೆ. ಆದರೆ ರಾಶಿಯಲ್ಲೇ ಶುಕ್ರ ಮೂರನೇ ಮನೆಯಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ರಾಹು ಶುಭಫಲಗಳನ್ನು ಧನಲಾಭವನ್ನೂ ಕೊಡುತ್ತಾರೆ. ಶನಿ ಖರ್ಚುಗಳನ್ನು ಕೊಡುತ್ತಾನೆ. ಒತ್ತಡಗಳು ಇವೆ. ಸಾಡೆಸಾತಿ ನಡೆಯುತ್ತಿರುವುದರಿಂದ ಎಚ್ಚರಿಕೆ ಅಗತ್ಯ.

ವೃಷಭ ರಾಶಿ

ಎರಡನೇ ಮನೆಯಲ್ಲಿ ಗುರು ಲಾಭಸ್ಥಾನದಲ್ಲಿ ಶನಿ ನಿಮಗೆ ಭಾಗ್ಯದ ಬಾಗಿಲನ್ನು ತೆರೆಸುತ್ತದೆ. ನೀವು ಮನಸ್ಸಿನಲ್ಲಿ ಎಣಿಸಿದ ನಿಮ್ಮ‌ ನಿರೀಕ್ಷೆ ಕನಸು ಸಫಲವಾಗುತ್ತದೆ. ಧನಾಗಮನ ಉತ್ತಮವಾಗಿದೆ. ನಿಮಗೆ ಯಾರೂ ಎದುರಿಲ್ಲ. ನಿಮ್ಮ ಮಾತಿಗೆ ಬೆಲೆ ಇದೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುತ್ತೀರಿ. ಈ ರಾಶಿಯ ರಾಜಕಾರಣಿಗಳಿಗೆ ಅಧಿಕಾರ ಲಾಭ ಇದೆ. ಕಲಾವಿದರಿಗೆ ಗೌರವ ಮನ್ನಣೆಗಳು ಸಿಗುತ್ತದೆ. ಅರ್ಹರಿಗೆ ವಿವಾಹವಾಗುತ್ತದೆ.

ಮಿಥುನ ರಾಶಿ

ಮೂರನೇ ಮನೆಯ ಕೇತು ನಿಮಗೆ ಈಗ ದೇಹಬಲ, ಮಾನಸಿಕಬಲಕ್ಕೆ ಕಾರಣನಾಗುತ್ತಾನೆ. ಧನಾಗಮನ ಉತ್ತಮವಾಗಿದೆ. ನಿಮ್ಮ ನಿರೀಕ್ಷೆಗಳು ಹತ್ತಿರಕ್ಕೆ ಬರುತ್ತಿವೆ. ಕನಸು ನನಸಾಗಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತೀರಿ. ಉದ್ಯೋಗ ದಲ್ಲಿ ಯಶಸ್ಸು, ಲಾಭ ಇದೆ. ಈ ವಾರದಲ್ಲಿ ಬುಧ ನಿಮ್ಮ ರಾಶಿಯಲ್ಲೇ ಇರುವುದು ನಿಮಗೆ ರಕ್ಷಣೆ ಹಾಗೂ ಲಾಭಕರ.

ಕಟಕ ರಾಶಿ

ಸಧ್ಯಕ್ಕೆ ಯಾವುದೇ ಗ್ರಹಬಲಗಳು ಕಾಣುತ್ತಿಲ್ಲ. ನೀವು ಸದಾ ಎಚ್ಚರಿಕೆಯಿಂದ ಇರಬೇಕು. ನೀವು ಏನೋ ಯೋಚಿಸಿ ಮಾಡುವ ಕೆಲಸ ಕೊನೆ ಗಳಿಗೆಯಲ್ಲಿ ಕೈಕೊಡಬಹುದು. ಖರ್ಚುಗಳು ಇರುತ್ತದೆ. ಕೌಟುಂಬಿಕ ಹಾಗೂ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ಸಿಂಹ ರಾಶಿ

ಅಷ್ಟಮ ಶನಿಯ ಪ್ರಭಾವದಿಂದ ಖರ್ಚುಗಳು ಅಡೆತಡೆಗಳು ಇರುತ್ತದೆ. ಆದರೂ ಗುರುಬಲ ಇದೆ. ಗುರು ಹಾಗೂ ಬುಧ ಹನ್ನೊಂದನೇ ಮನೆಯಲ್ಲಿ ನಿಮಗೆ ಬೆಂಬಲವಾಗಿ ಇದ್ದಾರೆ. ಹಣದ ಹರಿವು ಉತ್ತಮವಾಗಿದೆ ಆದರೆ ಹಣ ನೀವು ಎಣಿಸಿದ್ದಕ್ಕಿಂತ ಹೆಚ್ಚು ಖರ್ಚಾಗುತ್ತದೆ. ದೇವರ ಹಾಗೂ ಧರ್ಮದ ಕೆಲಸಗಳಲ್ಲಿ ಆಸಕ್ತಿ ವಹಿಸುತ್ತೀರಿ. ಆತಂಕಕಾರಿ ಕ್ಷಣಗಳು ಎದುರಾದರೂ ಗುರುವಿನ ಕೃಪೆಯಿಂದ ಎಲ್ಲವನ್ನೂ ಜಯಿಸಿ‌ ಮುಂದೆ ಸಾಗುತ್ತೀರಿ. ಅಷ್ಠಮಶನಿಯ ಪ್ರಭಾವ ಕಡಿಮೆಯಾಗಲು ಹನುಮಂತನ ಜಪ ಮಾಡಿ.

ಕನ್ಯಾ ರಾಶಿ

ರಾಹು ಆರನೇ ಮನೆಯಲ್ಲಿ ಧನಲಾಭ ಯಶಸ್ಸು ಮುನ್ನುಗ್ಗುವ ಛಾತಿ ಕೊಟ್ಟು ಕಾಪಾಡುತ್ತಾನೆ. ಎಂಟನೇ ಮನೆಯಲ್ಲಿ ಶುಕ್ರ ಹತ್ತನೇ ಮನೆಯಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ಕುಜ ನಿಮಗೆ ಬೆಂಬಲವಾಗಿದ್ದಾರೆ. ಕೇತು 12 ನೇ ಮನೆಯಲ್ಲಿದ್ದು ಆಧ್ಯಾತ್ಮಿಕ ಜ್ಞಾನವನ್ನು ಕೊಡುತ್ತಾನೆ. ಸಾಧು ಸಂತರಿಗೆ ದಾನಧರ್ಮ ಮಾಡಿ. ಸಾಧುಸಂತರ ಆಶೀರ್ವಾದ ಪಡೆದುಕೊಳ್ಳಿ. ಧನಾಗಮನ ಉತ್ತಮವಾಗಿದೆ.

ತುಲಾ ರಾಶಿ

ಇದುವರೆಗೂ ರಾಹು ಆರನೇ ಮನೆಯಲ್ಲಿ ಇದ್ದು ನಿಮಗೆ ಬೆಂಬಲವಾಗಿದ್ದ. ಈಗ ಶನಿ ಆರನೇ ಮನೆಯಲ್ಲಿ ನಿಮಗೆ ಬೆಂಬಲವಾಗಿ‌ಇದ್ದಾನೆ. ಪರಾಕ್ರಮ ಶೌರ್ಯ ಸಾಹಸ ಕೊಡುತ್ತಾನೆ. ‌ಗುರು ಒಂಬತ್ತನೇ ಮನೆಯಲ್ಲಿ ಇದ್ದು ನಿಮಗೆ ಶುಭಫಲಗಳನ್ನು ಕೊಡುತ್ತಾನೆ. ಕೇತು ಸಹ ಲಾಭಸ್ಥಾನದಲ್ಲಿ ಇದ್ದು ಧನಲಾಭ ಕೊಡುತ್ತಾನೆ. ಈಗ ನಿಮಗೆ ಒಳ್ಳೆಯ ಸಮಯ. ಕಳೆದುಕೊಂಡದ್ದು‌ ಮತ್ತೆ ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ

ಯಾವ ಗ್ರಹಬಲವೂ ಇಲ್ಲದ್ದರಿಂದ ಕೊಂಚ ಜಾಗ್ರತೆಯಿಂದ ಇರಿ. ವೃಥಾ ಅಲೆದಾಟ ನೆಮ್ಮದಿ ವಿಶ್ರಾಂತಿ ಇಲ್ಲದ ದಿನಗಳು ಈಗ. ಸಹನೆ ಕಳೆದುಕೊಳ್ಳಬೇಡಿ. ಧೃತಿಗೆಡಿಸುವಂತ ಪ್ರಸಂಗಗಳು ಎದುರಾಗುತ್ತದೆ. ತಾಳ್ಮೆಯಿಂದ ಎದುರಿಸಿ. ಹಣಕಾಸು ಸ್ಥಿತಿ ಅಷ್ಟೇನೂ ಉತ್ತಮವಾಗಿ ಇಲ್ಲ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಗಮನವಹಿಸಿ. ನೌಕರಿಯಲ್ಲಿ ಸಹ ಒತ್ತಡ ಇರುತ್ತದೆ. ಜಾಣ್ಮೆಯಿಂದ ನಿಭಾಯಿಸಿ. ಸವಾಲುಗಳು ಎದುರಾಗುತ್ತದೆ.

ಧನಸ್ಸು ರಾಶಿ

ಈಗ ನಿಮಗೆ ಭಾಗ್ಯೋದಯದ ಸಮಯ. ಕಳೆದ ವರ್ಷ ಬಹಳ ಕಷ್ಟ ಪಟ್ಡಿದ್ದೀರಿ. ಈಗ ಖುಷಿಯ ಕ್ಷಣಗಳನ್ನು ಅನುಭವಿಸುವ ಕಾಲ. ಮೂರನೇ ಮನೆಯಲ್ಲಿ ರಾಹು ಧನಾಗಮನವನ್ನು ಉತ್ತಮಪಡಿಸಿದರೆ ಏಳನೇ ಮನೆಯಲ್ಲಿರುವ ಗುರು ಶುಭಕಾರ್ಯಗಳನ್ನು ಮಾಡಿಸುತ್ತಾನೆ. ಬದುಕು ಕಟ್ಟಿ ಕೊಡುತ್ತಾನೆ. ಅರ್ಹರಿಗೆ ವಿವಾಹ ಸಾಧ್ಯತೆ ಇದೆ. ಆಸ್ತಿ ಕೊಳ್ಳುವ ಯೋಗ ಇದೆ. ಶತ್ರುಗಳು ದೂರವಾಗುತ್ತಾರೆ. ನೆಮ್ಮದಿಯ ದಿನಗಳು.

ಮಕರ ರಾಶಿ

ಗುರು ಆರನೇ ಮನೆಯಲ್ಲಿ ಕೊಂಚ ಚಂಚಲ ಮನಸ್ಸನ್ನು ಕೊಡುತ್ತಾನೆ. ಯಾವುದೇ ನಿರ್ಧಾರ ಮಾಡಬೇಕಾದರೆ ಹಲವಾರು ಬಾರಿ ಯೋಚಿಸುತ್ತೀರಿ‌. ಮೂರನೇ ಮನೆಯ ಶನಿಯ ಬಲ ನಿಮಗೆ ಇದೆ. ಆದ್ದರಿಂದ ಅಪಾಯಗಳಾಗುವುದು ತಪ್ಪುತ್ತದೆ. ಈಗ ಬದಲಾವಣೆಗಳ ಕಾಲ. ಬದಲಾವಣೆಗಳನ್ನು ಸಕಾರಾತ್ಮಕವಾಗಿ ಮಾಡಿಕೊಳ್ಳಿ. ಹಣದ ಹರಿವು ಸಾಧಾರಣವಾಗಿದೆ. ನಾಲ್ಕರಲ್ಲಿ ಶುಕ್ರ ವಾಹನದಿಂದ ಲಾಭ ಮಾಡಿಸುತ್ತಾನೆ. ಸುಖ ಭೋಜನ ನೆಮ್ಮದಿ ಇದೆ.

ಕುಂಭ ರಾಶಿ

ಸಾಡೆಸಾತಿ ಶನಿಯ ಕೊನೆಯ ಭಾಗದಲ್ಲಿ‌ಇದ್ದೀರಿ. ಆದರೂ ಈಗ ಗುರುಬಲ ಇದೆ. ನೀವು ಮಾಡುವ ಕೆಲಸಗಳಿಗೆ ದೈವಬಲ ದೈವಸಹಾಯ ಒದಗಿಬರುತ್ತದೆ. ಆರರಲ್ಲಿ ಕುಜ ಧೈರ್ಯವನ್ನು ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ರಾಹು ಇದ್ದಾನೆ ಅಲರ್ಜಿ‌ ಇನ್ಫೆಕ್ಷನ್ ಆಗಬಹುದು ಜಾಗ್ರತೆ ಇರಲಿ. ಐದನೇ ಮನೆಯಲ್ಲಿ ಗುರು ಬುಧ ಇಬ್ಬರೂ ನಿಮಗೆ ಸಹಾಯಕರಾಗಿದ್ದಾರೆ. ಅರ್ಹರಿಗೆ ವಿವಾಹ ಭಾಗ್ಯ ಇದೆ. ನೌಕರಿಯಲ್ಲಿ ಯಶಸ್ಸು ಇದೆ. ವಿದೇಶ ಪ್ರವಾಸ ಯೋಗ ಇದೆ.

ಮೀನ ರಾಶಿ

ಗುರುಬಲ ಇಲ್ಲದ ನೀವು‌ ಈಗ ಸಾಕಷ್ಟು ಸವಾಲುಗಳನ್ನು ಅವಮಾನಗಳನ್ನೂ ಎದುರಿಸುತ್ತಿದ್ದೀರಿ. ಆರೋಗ್ಯವೂ ಕೈಕೊಡುತ್ತಿದೆ. ನೀವು ಅಂದುಕೊಂಡ ಯೋಜನೆಗಳು ನಿಮಗೆ ವಿರೋಧವಾಗಿ ಬದಲಾಗುತ್ತಿದೆ. ಆದಷ್ಟು ಜನರೊಂದಿಗೆ ವಿನಯದಿಂದ ವರ್ತಿಸಿ. ವಾದವಿವಾದಗಳಿಂದ ದೂರವಿರಿ. ಆರನೇ ಮನೆಯ ಕೇತು‌ ಅಲ್ಪಸ್ವಲ್ಪ ಸಹಾಯ ಮಾಡುತ್ತಾನೆ. ಮೂರನೇ ಮನೆಯ ಸೂರ್ಯ ಶಕ್ತಿ ಕೊಡುತ್ತಾನೆ. ಒಳ್ಳೆಯ ದಿನಗಳಿಗಾಗಿ‌ಇನ್ನೂ ನೀವು ಕಾಯಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+