Weekly Horoscope 2025: ಫೆಬ್ರವರಿ ಮೂರನೇ ವಾರ ಈ ರಾಶಿಯವರ ಪ್ರೇಮ ಜೀವನ ಅದ್ಭುತ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಶುದ್ಧ ದ್ವಾದಶಿಯಿಂದ ಬಹುಳ ಚೌತಿಯವರೆಗೆ

ಅಂದರೆ 09.02.25 ರಿಂದ 16.02.25 ವರೆಗೆ

ಈ ವಾರದ ಚಂದ್ರನ ಸಂಚಾರ ಆರಿದ್ರ ನಕ್ಷತ್ರದಿಂದ ಹಸ್ತಾ ವರೆಗೆ.

ಮೇಷರಾಶಿ:

ಗುರು ವಕ್ರತ್ಯಾಗ ಮಾಡಿದ್ದಾನೆ. ಎರಡನೇ ಮನೆಯ ಗುರುಬಲದ ಸಂಪೂರ್ಣ ಫಲ ನಿಮಗೆ ಸಿಗುತ್ತದೆ. ಮೂರರಲ್ಲಿ ಮಂಗಳ ಲಾಭಸ್ಥಾನದಲ್ಲಿ ಶನಿ ಇದ್ದು ನಿಂತು ಹೋಗಿದ್ದ ಕೆಲಸಗಳೆಲ್ಲ ಈಗ ಚುರುಕಾಗುತ್ತದೆ. ಹೊಸ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಅದು ಈಗ ನಿಮಗೆ ಮತ್ತೆ ಕರೆ ಬರುತ್ತದೆ. ಹಣದ ಹರಿವು ಉತ್ತಮವಾಗಿದೆ. ಲಾಭದಲ್ಲಿ ಸೂರ್ಯ ಹಾಗೂ ಬುಧ ಕೂಡ ನಿಮಗೆ ಸಹಕಾರಿ ಆಗಿದ್ದಾರೆ. ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ.

Weekly Horoscope In Kannada From February 09 To February 16 2025

ವೃಷಭರಾಶಿ:

ಲಾಭದಲ್ಲಿ ನಿಮ್ಮ ರಾಶಿಯ ಅಧಿಪತಿ ಶುಕ್ರ ಹಾಗೂ ರಾಹು ಇದ್ದಾರೆ. ಹಣದ ಹರಿವು ಉತ್ತಮವಾಗಿದೆ. ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ವೃತ್ತಿ ಸ್ಥಾನದಲ್ಲಿ ಕೇಂದ್ರ ತ್ರಿಕೋಣಾಧಿಪತಿ ಯೋಗ ಆಗಿದ್ದು ವೃತ್ತಿಯಲ್ಲಿ ಯಶಸ್ಸು ಏಳ್ಗೆ ಇದೆ. ಅರ್ಹರು ತಮ್ಮ ವೃತ್ತಿಗೆ ಸಂಬಂಧಿಸಿದ ಶುಭಸುದ್ದಿಗಳನ್ನು ಕೇಳುತ್ತೀರಿ. ಮೇಲಧಿಕಸರಿಗಳಿಂದ ಹೊಗಳಿಕೆ ಇದೆ. ಸಮರ್ಥ ಕೆಲಸಗಾರರೆಂದು ಪ್ರಶಂಸೆ ಸಿಗುತ್ತದೆ. ವಿಹಾರ ಸಮಾರಂಭಗಳ ಭೇಟಿಯಿಂದ ಮನಸ್ಸಿಗೆ ಖುಷಿ‌ಇದೆ.

ಮಿಥುನರಾಶಿ:

ಯಾವ ಗ್ರಹಬಲವೂ ಇಲ್ಲದಿದ್ದರೂ ಅಪಾಯವೂ ಇಲ್ಲ. ಒಂಬತ್ತನೇ ಮನೆಯಲ್ಲಿ ನಿಮ್ಮ ರಾಶಿಯ ಅಧಿಪತಿ‌ ಬುಧ ಇದ್ದಾನೆ. ಇದು ಕೊಂಚ ನಿಮಗೆ ಸಹಾಯ ಮಾಡುತ್ತದೆ. ಕೆಲವು ಸಮಯದ ನಂತರ ಕೇತು ಮೂರನೇ ಮನೆಗೆ ಬಂದಾಗ ನಿಮಗೆ ಸ್ವಲ್ಪಮಟ್ಟಿಗೆ ಅಡ್ಡಿ ಆತಂಕಗಳು ದೂರವಾಗುತ್ತದೆ. ಅಂದುಕೊಂಡ ಕೆಲಸಗಳು ಸರಾಗವಾಗಿ ಆಗುವುದಿಲ್ಲ ನಿಂತು ನಿಂತು‌ಮುಂದೆ ಸಾಗುತ್ತದೆ.‌ ಬೇಸರ ಬೇಡ. ನಿಮಗೂ‌ ಒಳ್ಳೆಯ ಕಾಲ ಬಂದೇ ಬರುತ್ತದೆ. ಕಾಯಬೇಕು.

ಕಟಕರಾಶಿ:

ಹನ್ನೊಂದನೇ ಮನೆಯ ಗುರು ತನ್ನ ವಕ್ರತೆಯನ್ನು ಕಳೆದುಕೊಂಡು ನೇರ ಮಾರ್ಗದಲ್ಲಿ ಸಂಚರಿಸುತ್ತ ನಿಮಗೆ ಲಾಭ ತಂದು ಕೊಡುತ್ತಾನೆ. ಅಷ್ಠಮ ಶನಿಯ ಪ್ರಭಾವವೂ ಮುಗಿಯುತ್ತ ಬಂದಿದೆ. ಈಗ ಗುರುಬಲ ಇದೆ. ಒಳ್ಳೆಯ ಕೆಲಸಗಳು ಸರಾಗವಾಗಿ ಆಗುತ್ತದೆ. ವೈಯುಕ್ತಿಕ ಅಭಿವೃದ್ಧಿ ಇದೆ. ಹಣದ ಹರಿವು ಸರಾಗವಾಗಿದೆ. ಸಜ್ಜನರ ಸಹವಾಸದಿಂದ ಮನಸ್ಸಿಗೆ ಶಾಂತಿ‌ತೃಪ್ತಿ‌ ಸಿಗುತ್ತದೆ.

ಸಿಂಹರಾಶಿ:

ಗುರುಬಲ ಸಿಗಲು ಇನ್ನು ಕೆಲವೇ ದಿನಗಳು ಇವೆ. ಅಲ್ಲಿಯವರೆಗೂ ಸಹಿಸಲೇ ಬೇಕು. ರಾಹು ಎಂಟನೇ ಮನೆಯಲ್ಲಿ ಇರುವುದರಿಂದ ಉಸಿರಾಟದ ತೊಂದರೆ, ಅಲರ್ಜಿ, ವಿಷಾಹಾರ ಸೇವಿಸಿ ತಮದರೆಗೊಳಗಾಗುವುದು, ಕಣ್ಣು ಕಿವಿ ಗಂಟಲ ತೊಂದರೆ ಅಸಿಡಿಟಿ ಇಂತಹ ತೊಂದರೆಗಳು ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರು ಆಗಬಹುದು. ಜಾಗ್ರತೆಯಾಗಿರಿ. ಹಣಕಾಸಿನ ಸಮಸ್ಯೆ, ಕೊಂಚ ಮಾನಸಿಕ ಕಿರಿಕಿರಿ ಇರುತ್ತದೆ. ನಿಭಾಯಿಸಿ ಕೊಳ್ಳಬೇಕು.

ಕನ್ಯಾರಾಶಿ:

ಗುರುವಕ್ರತೆಯನ್ನು ತ್ಯಜಿಸಿರುವುದರಿಂದ ಈಗ ನಿಮಗೆ ಗುರುಬಲದ ಪಾಸಿಟಿವ್ ಶಕ್ತಿಯ ಅನುಭವವಾಗುತ್ತದೆ. ಕೆಲಸಕಾರ್ಯಗಳು ವೇಗದಿಂದ ಸಾಗುತ್ತದೆ. ಅಡೆತಡೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆರರಲ್ಲಿ ಸೂರ್ಯ ಶನಿ ಇಬ್ಬರಿಂದಲೂ ಲಾಭ ಇದೆ. ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಶುಭಫಲಗಳು‌ಇವೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.

ತುಲಾರಾಶಿ:

ಕೆಲವೇ ದಿನಗಳಲ್ಲಿ ಶನಿ ಆರನೇ ಮನೆಗೆ, ಗುರು ಒಂಬತ್ತನೇ ಮನೆಗೆ, ಕೇತು ಲಾಭಸ್ಥಾನಕ್ಕೆ ಬರುತ್ತಾರೆ. ಮೂರು ಗ್ರಹಗಳ ಬಲ ಸಿಗುತ್ತದೆ. ಒಳ್ಳೆಯ ಅವಕಾಶಗಳು ನಿಮ್ಮ ಬಳಿ ಹರಿದು ಬರುತ್ತದೆ. ಹೊಸ ಉದ್ಯೋಗ, ಮನೆಕೊಳ್ಳುವುದು, ಅವಿವಾಹಿತರಿಗೆ ವಿವಾಹ, ವಿದೇಶ ಪ್ರಯಾಣ, ವೃತ್ತಿಯಲ್ಲಿ ಯಶಸ್ಸು, ಬಡ್ತಿ, ಹೀಗೆ ಎಷ್ಟೋ ವಿಷಯಗಳಲ್ಲಿ ಅಭಿವೃದ್ಧಿ ಯ ಸಂಗತಿಗಳು‌ಇವೆ. ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸುತ್ತೀರಿ.‌ ಕಿರುಕುಳಗಳು‌ ಕಡಿಮೆಯಾಗಲಿದೆ. ಶತ್ರುಗಳ ಕಾಟ ಇರುವುದಿಲ್ಲ. ಕಾಯುತ್ತಿರುವ ಶುಭ ಘಳಿಗೆ ಹತ್ತಿರದಲ್ಲೇ ಇದೆ.

ವೃಶ್ಚಿಕರಾಶಿ:

ಈಗ ಗುರುಬಲ ಸಂಪೂರ್ಣವಾಗಿ ಸಿಗಲಿದೆ. ಲಾಭಸ್ಥಾನದ ಕೇತುವಿನಿಂದ ಧನಲಾಭ ಇದೆ. ಮನೆಯಲ್ಲಿ ಶುಭಕಾರ್ಯಗಳು ನಡೆದು ಮನಸ್ಸಿಗೆ ಖುಷಿ ಸಂತೃಪ್ತಿ‌ಸಿಗುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ.‌ ನೀವಂದುಕೊಂಡ ಯೋಜನೆಗಳಲ್ಲಿ ಯಶಸ್ಸು‌ಸಾಧಿಸಿ ಮೇಲಧಿಕಾರಿಗಳ‌ ಪ್ರಶಂಸೆಗೆ ಪಾತ್ರರಾಗುತ್ತೀರಿ. ಅರ್ಹರಿಗೆ ವಿವಾಹಯೋಗಗಳಿವೆ. ಮನಸ್ಸಿಗೆ ಖುಷಿ ಕೊಡುವ ಸಂಗತಿಗಳು ನಡೆಯಲಿದೆ.

ಧನಸ್ಸುರಾಶಿ:

ಈಗ ಗುರು ಆರನೇ ಮನೆಯಲ್ಲಿ ಇರುವುದರಿಂದ ಮಾನಸಿಕ ಕಿರಿಕಿರಿ ಹಾಗೂ ಆರೋಗ್ಯದಲ್ಲಿ ಏರುಪೇರು ಇರುತ್ತದೆ. ವೃಥಾ ಟೆನ್ಷನ್ ಆಗುವ ಸಂದರ್ಭಗಳು ಇವೆ. ಭಯಪಡಬೇಡಿ. ಇವೆಲ್ಲವೂ ತಾತ್ಕಾಲಿಕ. ಸಧ್ಯದಲ್ಲೇ ಗುರು ಏಳನೇ ಮನೆಗ ಬರುತ್ತಾನೆ, ಸಂಪೂರ್ಣ ಗುರುಬಲಕ್ಕೆ ಪಾತ್ರರಾಗುತ್ತೀರಿ. ರಾಹು ಮೂರನೇ ಮನೆಗೆ ಪ್ರವೇಶಮಾಡಿ ನಿಮ್ಮ ಪರಾಕ್ರವನ್ನು ಹೆಚ್ಚಿಸುತ್ತಾನೆ. ಧನಲಾಭ ಕೊಡುತ್ತಾನೆ. ಗುರು ಜೀವನ ಸಫಲ ಗಳಿಗೆಗಳನ್ನು ಕೊಡುತ್ತಾನೆ. ಕುಟುಂಬ ಸೌಖ್ಯ ಸಂತೋಷ ನೆಮ್ಮದಿ ನಿಮ್ಮದಾಗಲಿದೆ.

ಮಕರ ರಾಶಿ:

ಈಗ ಗುರುಬಲ ಇದ್ದು ರಾಹುಬಲವೂ ಜೊತೆಗೂಡಿ ನಿಮ್ಮ ಪ್ರಯತ್ನಗಳೆಲ್ಲ ಸಫಲವಾಗಲಿದೆ. ಹಣದ ಹರಿವು ಉತ್ತಮವಾಗುತ್ತದೆ. ಅವಕಾಶಗಳು ಹುಡುಕಿ ಬರುತ್ತದೆ. ಮನೆಯಲ್ಲಿ ಮನದಲ್ಲಿ ಸಂತೋಷ ಸಮಾಧಾನ ನೆಲೆಸುತ್ತದೆ. ಸಾಲಗಳು ತೀರಿಸುವ ಅವಕಾಶ ಒದಗಿಬರುತ್ತದೆ. ಹೊಸ ಉದ್ಯೋಗ ಸಿಗಲಿದೆ. ಇರುವ ಉದ್ಯೋಗದಲ್ಲಿ ಬಡ್ತಿ ಯಶಸ್ಸು ನಿರೀಕ್ಷಿಸಬಹುದು. ‌

ಕುಂಭರಾಶಿ:

ಇನ್ನೇನು ಕೆಲವೇ ದಿನಗಳಲ್ಲಿ ಗುರುಬಲ ಬರಲಿದೆ ಆದರೂ‌ಇನ್ನೂ ಸಾಡೆಸಾತಿ ಶನಿಯ ಪ್ರಭಾವ ಮುಗಿದಿಲ್ಲವಾದ್ದರಿಂದ. ಸ್ವಲ್ಪ ಎಚ್ಚರಿಕೆ ಅಗತ್ಯ. ನೀವು ಸುಮ್ಮನಿದ್ದರೂ ವಿವಾದ ತಪ್ಪಿದ್ದಲ್ಲ ಇನ್ನು ನೀವು ಕೊಂಚ ವಿವಾದಾತ್ಮಕ ವಾಗಿ ಮಾತನಾಡಿದರೆ ಮುಗಿದೇ ಹೋಯಿತು. ಜನ ನಿಮ್ಮನ್ನು ಜಾಲಾಡಿ ಬಿಡುತ್ತಾರೆ. ಆದರೂ ಕೆಲವು ಸಂದಿಗ್ಧ ಪರಿಸ್ಥಿತಿ ಗಳಲ್ಲಿ ನಿಮಗೆ ಅಗೋಚರ ಸಹಾಯ ಒದಗಿ ಬಂದು ಮನಸ್ಸಿಗೆ ನಿರಾಳವಾಗುತ್ತದೆ.‌ ಹಾಗೆಂದು ಮೈಮಮರೆಯಬೇಡಿ. ಎಚ್ಚರಿಕೆ ಮಾತು ಮತ್ತು‌ಕೃತಿಯಲ್ಲಿ ಸದಾ ಇರಲಿ.‌ ಮುಂಬರುವ ದಿನಗಳು ಒಳ್ಳೆಯದಿದೆ.

ಮೀನರಾಶಿ:

ನಿಮಗೆ ಈಗ ಯಾವ ಗ್ರಹಬಲ ಇಲ್ಲ. ಸಾಡೆಸಾತಿ ಶನಿಯ ಪ್ರಭಾವ ಸಹ‌ಇದೆ. ಹೀಗಾಗಿ ಖರ್ಚುಗಳು ಮಾನಸಿಕ ಕಿರಿಕಿರಿ ಅನಾರೋಗ್ಯ ಇಂಥ ವಿಷಮ‌ಪರಿಸ್ಥಿತಿಗಳು ಎದುರಾಗುತ್ತದೆ. ನೀವು ನಂಬಿದ ದೇವರು ಗುರುಗಳನ್ನು ಮೊರೆ ಹೋಗಿ. ಆದಷ್ಟು ಧೈರ್ಯಗೆಡದೆ ವಿವೇಚನೆಯಿಂದ ಪರಿಸ್ಥಿತಿ ಯನ್ನು ನಿಭಾಯಿಸಿ. ಹಣಕಾಸಿನ ಅಭಾವ ತೋರಿಬರುತ್ತದೆ. ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಿ.

ಶುಭಮಸ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+