Weekly Horoscope: ಆಗಸ್ಟ್ ಮೊದಲ ವಾರ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ, ದುಡ್ಡಿನ ಸಮಸ್ಯೆಯಿಂದ ಮುಕ್ತಿ
ಗ್ರಹಗಳ ಚಲನೆಯಿಂದಾಗಿ, ಆಗಸ್ಟ್ ತಿಂಗಳ ಮೊದಲ ವಾರ ಬಹಳ ಮುಖ್ಯವಾಗಿರುತ್ತದೆ. ಗ್ರಹಗಳ ಸಂಚಾರಕ್ಕೆ ಅನುಸಾರವಾಗಿ ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದಾಯಕವಾಗಿರುತ್ತದೆ. ಆದರೆ ಇನ್ನು ಕೆಲವು ರಾಶಿಯವರಿಗೆ ಸವಾಲಿನಿಂದ ಕೂಡಿರಬಹುದು. ಹೊಸ ವಾರವು ಯಾವ ರಾಶಿಯವರ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿದೆ ನೋಡೋಣ.
ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಆಗಸ್ಟ್ ಮೊದಲ ವಾರವು ಪ್ರಯೋಜನಕಾರಿಯಾಗಲಿದೆ. ಈ ವಾರ ನಿಮ್ಮ ವ್ಯವಹಾರದಲ್ಲಿ ಲಾಭ ಚೆನ್ನಾಗಿಯೇ ಆಗಲಿದೆ. ಕೆಲಸದ ಮೇಲೆ ಬೇರೆ ಊರಿಗೆ ಪ್ರಯಾಣ ಬೇಳೆಸಬೇಕಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಒಟ್ಟಾರೆ ಹೇಳಬೇಕಾದರೆ ಈ ವಾರದ ಆರಂಭವು ನಿಮ್ಮ ಪಾಲಿಗೆ ಸಂತೋಷವನ್ನೇ ತರಲಿದೆ. ಹಣವನ್ನು ಹೂಡಿಕೆ ಮಾಡುವ ಯೋಚನೆ ಇದ್ದರೆ ಸರಿಯಾದ ಸಮಯ. ಧಾರ್ಮಿಕ ಕೆಲಸಗಳಲ್ಲಿಯೂ ಭಾಗಿಯಾಗುವಿರಿ.

ವೃಷಭ ರಾಶಿ (Taurus)
ಆಗಸ್ಟ್ ಮೊದಲ ವಾರ ವೃಷಭ ರಾಶಿಯವರಿಗೆ ಶುಭವಾಗಿರುತ್ತದೆ. ಈ ಅವಧಿಯಲ್ಲಿ, ಧೈರ್ಯದಿಂದ ಎಲ್ಲಾ ಕೆಲಸ ಮಾಡುವಿರಿ. ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಾಗುವುದು. ಸಕಾರಾತ್ಮಕತೆಯಿಂದಲೇ ಎಲ್ಲಾ ಕೆಸಲ ಮಾಡಿ ಮುಗಿಸುವಿರಿ. ಹಣಕಾಸಿನ ವಿಷಯಗಳಲ್ಲಿ ಅಜಾಗರೂಕತೆ ಒಳ್ಳೆಯದಲ್ಲ. ನಿಮ್ಮ ಸಣ್ಣ ತಪ್ಪು ಕೂಡಾ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ವಾರದ ಆರಂಭವು ಸಕಾರಾತ್ಮಕವಾಗಿರುವುದು. ವೇತನ ಹೆಚ್ಚಾಳವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಬೆಂಬಲ ಸಿಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ಸಿಗುವುದು.
ಕರ್ಕಾಟಕ ರಾಶಿ (Cancer)
ಈ ವಾರ ಕರ್ಕಾಟಕ ರಾಶಿಯವರಿಗೆ ಸ್ವಲ್ಪ ಸಾಮಾನ್ಯವಾಗಿರುತ್ತದೆ. ಈ ವಾರ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದೇ ಒಳ್ಳೆಯದು. ಹಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾರಿಂದಲೂ ಹಣವನ್ನು ಕೇಳಬೇಡಿ, ಸಾಲ ಪಡೆಯಬೇಡಿ. ಈ ವಾರ ವಿದ್ಯಾರ್ಥಿಗಳಿಗೂ ಸವಾಲಿನದ್ದಾಗಿರುತ್ತದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ವಾರದ ಆರಂಭವು ತುಂಬಾ ಒಳ್ಳೆಯದಾಗಿರುತ್ತದೆ. ವಾರದ ಅಂತ್ಯದ ವೇಳೆಗೆ ದುಡ್ಡಿನ ಸಮಸ್ಯೆ ಬರಬಹುದು.ಈ ಸಮಯದಲ್ಲಿ ಭಾವನೆಗಳ ಮೇಲೆ ಹಿಡಿತ ಇರಲಿ. ಹೊಸ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳಿ. ಕೆಲವು ಹೊಸ ಜನರನ್ನು ಭೇಟಿಯಾಗುವಿರಿ. ಹಣವನ್ನು ಖರ್ಚು ಮಾಡುವಾಗ ಜಾಗರೂಕರಾಗಿರಬೇಕು.
ಕನ್ಯಾ ರಾಶಿ (Virgo)
ಈ ವಾರ ಕನ್ಯಾ ರಾಶಿಯವರಿಗೆ ಪ್ರಗತಿಯ ಸಮಯವಾಗಿರುತ್ತದೆ. ವ್ಯವಹಾರದ ವಿಸ್ತರಣೆಗೆ ಸರಿಯಾದ ಕಾಲ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ವ್ಯವಹಾರದಲ್ಲಿ ಅನೇಕ ಹೊಸ ಆರ್ಡರ್‌ಗಳು ಸಿಗಬಹುದು. ದೂರದ ಊರಿಗೆ ಪ್ರಯಾಣ ಬೆಳೆಸುವ ಅವಕಾಶ ಸಿಗುವುದು. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು.
ತುಲಾ ರಾಶಿ (Libra)
ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಅಭಿಪ್ರಾಯ ಮುಖ್ಯವಾಗಿರುತ್ತದೆ. ವ್ಯವಹಾರದಲ್ಲಿ ವಿಸ್ತರಣೆ ಮಾಡುವ ಯೋಜನೆ ಯಶಸ್ವಿಯಾಗುತ್ತದೆ. ಸಂಗಾತಿ ಪ್ರತಿ ಹಂತದಲ್ಲಿಯೂ ನಿಮ್ಮ ಜೊತೆಗೆ ನಿಲ್ಲುತ್ತಾರೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ.
ವೃಶ್ಚಿಕ ರಾಶಿ (Scorpio)
ಈ ವಾರ ಆತುರದಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಈ ವಾರ ನಿಮಗೆ ಸ್ವಲ್ಪ ಹಿನ್ನೆಡೆಯಾಗಬಹುದು. ಯಾರೊಂದಿಗೂ ಮನಸ್ತಾಪ ತಂದುಕೊಳ್ಳಬೇಡಿ. ವಾದಕ್ಕೆ ಇಳಿದರೆ ನೀವೇ ಸೋಲುವುದು. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ಸಣ್ಣಪುಟ್ಟ ಆರೋಗ್ಯ ದೂರುಗಳನ್ನು ನಿರ್ಲಕ್ಷಿಸಬೇಡಿ.
ಧನು ರಾಶಿ (Sagitarius)
ಹೊಸ ಆರಂಭಗಳಿಗೆ ಈ ವಾರ ಸಾಕ್ಷಿಯಾಗುವುದು. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಸಕಾರಾತ್ಮಕ ಬೆಳವಣಿಗೆಗಳಾಗುವುದು. ವ್ಯವಹಾರದಲ್ಲಿ ಲಾಭ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೂ ಈ ವಾರ ಅನುಕೂಲಕರವಾಗಿರಲಿದೆ. ನಿಮ್ಮ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ.
ಮಕರ ರಾಶಿ (capricorn)
ಈ ವಾರ ಮಕರ ರಾಶಿಯವರಿಗೆ ಕೆಲಸದ ಹೊರೆ ಹೆಚ್ಚಾಗಲಿದೆ. ಆದರೂ ನಿಮ್ಮ ಕೆಲಸವನ್ನು ಸಮರ್ಥವಾಗಿ ಮಾಡಿ ಮುಗಿಸುವಿರಿ. ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು.
ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೆ ಈ ವಾರ ವೃತ್ತಿಯಲ್ಲಿ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವ್ಯವಹಾರದಲ್ಲಿ ಹೊಸ ಗ್ರಾಹಕರನ್ನು ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಸ್ನೇಹಿತರ ಸಹಾಯದಿಂದ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರೇಮ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಆರೋಗ್ಯವು ಚೆನ್ನಾಗಿರುವುದು.
ಮೀನ ರಾಶಿ (Pisces)
ಹಣಕಾಸಿನ ವಿಷಯದಲ್ಲಿ ಈ ವಾರ ಪ್ರಯೋಜನಕಾರಿಯಾಗಲಿದೆ. ಹೊಸ ಜವಾಬ್ದಾರಿಗಳು ಸಿಗಬಹುದು. ವ್ಯವಹಾರ ವಿಸ್ತರಣೆಗೆ ಅನುಕೂಲಕರ ವಾತಾವರಣವಿರುವುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿನ ವಾತಾವರಣವು ಸಂತೋಷದಿಂದ ಕೂಡಿರುತ್ತದೆ.


Click it and Unblock the Notifications
